ಸ್ನೇಹಿತರೆ ಭಾರತ ವೈಶಿಷ್ಟಗಳ ನಾಡು. ವೈಶಿಷ್ಟಗಳ ನಡುವೆ ಇಲ್ಲಿರುವ ನಂಬಿಕೆಗಳು ಕೂಡ ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡಿಸುತ್ತದೆ. ಈ ನೆಲದಲ್ಲಿ ಕಲ್ಲುಗಳನ್ನು ಕೂಡ ದೇವತೆಯ ರೂಪಗಳನ್ನು ಮಾಡಿ ಅವುಗಳನ್ನು ಪೂಜಿಸಲಾಗುತ್ತದೆ.
ಅದನ್ನೇ ಭಗವಂತ ಎಂದು ಆರಾಧಿಸಿ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ. ಇದು ಕೇವಲ ಆ ದೇವತೆಗಳ ನಾಡು ಅಷ್ಟೇ ಅಲ್ಲ ಮಹಾಜ್ಞಾನಿಗಳು ಹಾಗೂ ಋಷಿ-ಮುನಿಗಳು ಹಾಗುವ ಕಾಲಜ್ಞಾನಿಗಳು ಹುಟ್ಟಿದಂತಹ ನಮ್ಮ ಕರುನಾಡು.
ಅವರು ಯಾವತ್ತೂ ಹೇಳಿಹೋದ ಭವಿಷ್ಯ ಇವತ್ತಿಗೂ ನಿಜವಾಗುವುದ ನಾವು ನೋಡಬಹುದು. ಮುಂದೆ ಕೂಡ ಆಗಬಹುದು ಎಂಬ ನಂಬಿಕೆಯಲ್ಲಿ ನಾವಿದ್ದೇವೆ. ಅಂತಹಾ ನಂಬಿಕೆಯಲ್ಲಿ ಒಂದು ನಂಬಿಕೆ ಇರುವುದು ಇರುವಂತಹ ಒಂದು ಬಸವ .
ಸ್ನೇಹಿತರೆ ಈ ಬಸವ ಎದ್ದು ನಿಂತರೆ ಕಲಿಯುಗ ಅಂತ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಎಷ್ಟು ನಿಜ ಕಲ್ಲಿನ ಬಸವ ಎದ್ದು ನಿಲ್ಲಲು ಉಂಟಾ ಎಂಬ ಭಾವನೆ ನಮಗೆ ಮೂಡುತ್ತದೆ. ಈ ಬಸವ ಎದ್ದು ನಿಂತರೆ ಪ್ರಳಯ ಆಗುತ್ತದೆ ಎಂದು ಹೇಳಿದ್ದು ಯಾರು ಎನ್ನುವುದನ್ನು ನಾನು ಈ ಮಾಹಿತಿಯಲ್ಲಿ ಹೇಳುತ್ತೇನೆ ಸ್ನೇಹಿತರೆ
ಸ್ನೇಹಿತರೆ ದೇಶದ ಅಂತ್ಯಕ್ಕೂ ಹಾಗೂ ಕಲ್ಲಿನ ಬಸವ ಏನು ಸಂಬಂಧ ಇದೆ. ಇವರ್ಯಾಕೆ ಇಂತಹ ಹುಚ್ಚು ಮಾಹಿತಿಗಳನ್ನು ಕೊಡುತ್ತಿದ್ದಾರೆ ಎಂದು ಅಂದುಕೊಳ್ಳಬೇಡಿ.
ಈ ನೆಲದಲ್ಲಿ ಹುಟ್ಟಿ ಅನೇಕ ಭವಿಷ್ಯವನ್ನು ನಡೆದಿರುವ ಒಬ್ಬರು ಕಾಲಜ್ಞಾನಿ ಅವರು ಹೇಳಿದ್ದಾರೆ. ಅವರ ಕಾಲಜ್ಞಾನದ ನಂಬಿಕೆಯಲ್ಲಿ ಹುಟ್ಟಿಕೊಂಡ ನಂಬಿಕೆ ಇದು. ಅವರ ಮಾತುಗಳು ಈವರೆಗೆ ಅದೆಷ್ಟೋ ಮಾತುಗಳು ಸತ್ಯವಾಗಿವೆ ಎಂದು ಲಕ್ಷಾಂತರ ಜನರು ಇದನ್ನು ನಂಬುತ್ತಾರೆ.
ದೇಶ ಪ್ರಳಯ ಆಗುತ್ತೆ ಎಂದು ಈ ಹಿಂದೆ ಡಿಸೆಂಬರ್ 2012ರಲ್ಲಿ ಆಗುತ್ತೆ ಎಂದು ಅನೇಕರು ಹೇಳಿದ್ದರು. ಆದರೆ ಆ ದಿನ ಕಳೆದು ಆರು ವರ್ಷಗಳಾದರೂ ನಾವೇನು ಬದುಕಿದ್ದೇವೆ. ಸಾವಿರಾರು ವರ್ಷಗಳಿಂದಲೂ ಅಂಥದ್ದೊಂದು ನಂಬಿಕೆ ನಮ್ಮಲ್ಲಿದೆ.
ಜಗತ್ತು ಅಂತ್ಯವಾಗಬೇಕು ಹಾಗೂ ಅಂತ್ಯವಾಗಬೇಕು ಎಂದರೆ ಜಗತ್ತಿನಲ್ಲಿ ಒಂದು ಪ್ರಳಯ ಸಂಭವಿಸಬೇಕು. ಎಂದು ನಾವು ನಂಬಿದ್ದೇವೆ.ಹಾಗಂತ ನಮ್ಮ ಕೆಲವು ಪುರಾಣ ಗ್ರಂಥಗಳಲ್ಲಿ ಕೂಡ ಹೇಳಲಾಗಿದೆ.
ಈ ಜಗತ್ತಿನಲ್ಲಿ ಪಾಪಕರ್ಮಗಳು ಜಾಸ್ತಿಯಾದಾಗ ಜಗತ್ತಿನ ಅಂತ್ಯವಾಗಲಿದೆ ಎಂದು ಸಾಕಷ್ಟು ಕಾಲಜ್ಞಾನಿಗಳು ಕೂಡ ಹೇಳಿದ್ದಾರೆ. ಭವಿಷ್ಯಕಾರರ ಕಾಲಜ್ಞಾನದ ಗ್ರಂಥಗಳಲ್ಲಿ, ಈ ಬಸವಣ್ಣನ ವಿಗ್ರಹವನ್ನು ಉಲ್ಲೇಖ ಮಾಡಲಾಗಿದೆ.
ಈ ಬಸವಣ್ಣ ದಿನದಿಂದಲೂ ದಿನಕ್ಕೆ ಬೆಳೆಯುತ್ತಲೇ ಇದೆ. ಇಲ್ಲಿಗೆ ಬರುವ ಜನ ಹಾಗೂ ಭಕ್ತರು ಹೇಳುವ ಪ್ರಕಾರ ಐವತ್ತು ಅರವತ್ತು ವರ್ಷಗಳ ಹಿಂದೆ ಬಸವಣ್ಣ ಚಿಕ್ಕದಾಗಿ ಇತ್ತು ಎಂದು. ಆದರೆ ಈಗ ಸಾಕಷ್ಟು ದೊಡ್ಡದಾಗಿ ಬೆಳೆದು ನಿಂತಿದೆ.
ಇನ್ನು ಮುಂದೆ ಈ ಬಸವಣ್ಣ ಬೆಳೆದು ದೊಡ್ಡದಾಗಿ ಕಾಲಜ್ಞಾನಿ ಹೇಳಿದಹಾಗೆ ಜಗತ್ತು ಅಂತ್ಯವಾಗುವುದು ಎಂಬ ನಂಬಿಕೆ ಇದೆ. ಅಂದಹಾಗೆ ಈ ಬಸವ ಇರೋದಾದ್ರೂ ಎಲ್ಲಿ ಈ ಮಾಹಿತಿಯನ್ನು ನಿಮಗೆ ಯಾರು ತಿಳಿಸಿಕೊಡುತ್ತೇನೆ.
ಬಸವನ ಕಥೆಯನ್ನು ಹುಡುಕುತ್ತಾ ಹೋದರೆ ನಮಗೊಬ್ಬರು ಮಹಾಪುರುಷರ ಹೆಸರು ಕೇಳಿ ಬರುತ್ತದೆ, ಅವರೇ ವೀರ ಬ್ರಹ್ಮೇಂದ್ರ ಕಾಲಜ್ಞಾನಿ.ಹಾಗೆಯೇ ಈಗ ನಡೆಯುತ್ತಿರುವ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಆ ಕಾಲಜ್ಞಾನಿಗಳು ಸಾವಿರಾರು ವರ್ಷಗಳ ಹಿಂದೆಯೇ ಭವಿಷ್ಯವನ್ನು ಊಹಿಸಿ ತಾಳೆಗರಿಯಲ್ಲಿ ಬರೆದಿದ್ದಾರೆ.
ಕಾಲಜ್ಞಾನದ ಮೇಲೆ ಜನಗಳು ಬಸವಣ್ಣನ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ. ಅಂದಹಾಗೆ ಈ ಬಸವ ಇರುವುದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಯಾಗಂಟಿ ಯಲ್ಲಿ. ಈ ಬಸವನ ಕುರಿತು ವೀರಬ್ರಹ್ಮೇಂದ್ರರ ಹೇಳಿರುವ ಮಾತುಗಳನ್ನು ಗೊತ್ತಾ.
ಕಲಿಯುಗ ಅಂತ್ಯವಾಗುವ ಸಂದರ್ಭದಲ್ಲಿ ಈ ಕಲ್ಲಿನ ಬಸವ ಸ್ವಲ್ಪಸ್ವಲ್ಪವೇ ಬೆಳೆದು ಅಂತ್ಯ ಕಾಲದಲ್ಲಿ ಎದ್ದು ನಿಂತು ಕೊಳ್ಳುತ್ತಾನೆ. ಆಗ ಜಗತ್ತು ಪ್ರಳಯಕ್ಕೆ ಗೊತ್ತಾಗುತ್ತೆ ಎಂದು ಅದರಲ್ಲಿ ಬರೆದಿಟ್ಟಿದ್ದಾರೆ.
ತಪ್ಪು ಮಾಡದೇ ಇರುವವರು ಕೆಲವೇ ಕೆಲವರು ಮಾತ್ರ ಈ ಭೂಮಿ ಮೇಲೆ ಉಳಿಯಲು ಸಾಧ್ಯ ಎಂದು ಅದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಉಳಿದ ಹಾಗೆ ಭೂಮಿಯ ಹೆಚ್ಚು ಭಾಗ ಪ್ರಳಯಕ್ಕೆ ತುತ್ತಾಗುತ್ತದೆ ಅಂತೆ.
ಹೀಗೊಂದು ಅರ್ಥ ಬರುವ ರೀತಿಯಲ್ಲಿ ವೀರಬ್ರಹ್ಮೇಂದ್ರರ ಕಾಲಜ್ಞಾನ ದಲ್ಲಿ ಬರೆದಿಟ್ಟಿದ್ದಾರೆ. ಯಾಗಂಟಿ ಕ್ಷೇತ್ರದಲ್ಲಿ ಈ ಬಸವಣ್ಣ ವಿಗ್ರಹವನ್ನು ನಾವು ಕಾಣಬಹುದು. ನೋಡಿದ್ರಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯನ್ನು ಲೈಕ್ ಮಾಡಿ ಧನ್ಯವಾದ ಶುಭದಿನ.