ಪ್ರಿಯ ವೀಕ್ಷಕರೇ ಕಷ್ಟ ಬಂದಾಗ ವೆಂಕಟರಮಣ ಎಂಬ ಗಾದೆ ಮಾತನ್ನು ನೀವೆಲ್ಲರೂ ಕೇಳಿರುತ್ತೀರಿ ಮತ್ತು ಕಷ್ಟ ಎಂದಾಗ ದೇವರ ಕಡೆ ಮುಖ ಮಾಡುವ ಮನುಷ್ಯನು ಇನ್ನೂ ಕಷ್ಟ ಎಂದು ಬಂದಾಗ ದೇವರು ತನ್ನ ಭಕ್ತಾದಿಗಳ ಕಷ್ಟಗಳನ್ನು ಕೇಳಿ ಅವನ ಕಷ್ಟಗಳಿಗೆ ಪರಿಹಾರವನ್ನು ಸಹ ನೀಡುತ್ತಾನೆ . ಸ್ನೇಹಿತರೇ ನಿಮಗೆಲ್ಲರಿಗೂ ಒಂದು ಪದ್ಧತಿಯ ಬಗ್ಗೆ ತಿಳಿದಿದೆ ಅದೇನೆಂದರೆ ನಮ್ಮಲ್ಲಿ ಕಷ್ಟಗಳು ಹೆಚ್ಚಾದಾಗ ಅಥವಾ ನಮ್ಮ ಕಾರ್ಯಗಳು ನೆರವೇರಬೇಕಾದರೆ ನಾವು ದೇವರಲ್ಲಿ ಹೋಗಿ ದೇವರಲ್ಲಿ ಹಲವಾರು ಪ್ರಾರ್ಥನೆಯನ್ನು ನೀಡಿ ಆ ಕೆಲಸ ನೆರವೇರಲಿ ಬೇಗ ಎಂದು ದೇವರಲ್ಲಿ ಹರಕೆ ಕಟ್ಟಿ ಬರುತ್ತೇವೆ .ಇನ್ನೂ ಈ ಪದ್ಧತಿ ನಮ್ಮ ಪೂರ್ವಜರ ಕಾಲದಿಂದಲೂ ಸಹ ನಡೆಯುತ್ತಲೇ ಬಂದಿದೆ.
ಈಗಲೂ ಸಹ ಹಳ್ಳಿಗಳಲ್ಲಿ ಕೆಲವು ದೇವಾಲಯಗಳಲ್ಲಿ ಈ ಪದ್ಧತಿಯು ಇನ್ನೂ ಇದೆ ಇದನ್ನು ಜನರು ಅಪಾರ ನಂಬಿಕೆಯಿಂದ ನಂಬುತ್ತಾರೆ ಮತ್ತು ದೇವರು ಸಹ ಆ ಭಕ್ತಾದಿಗಳ ಕೆಲಸ ನೆರವೇರುತ್ತದೆ ಎಂದರೆ ಅವನ ತಲೆ ಮೇಲಿರುವ ಹೂವನ್ನು ಬಲಗಡೆ ಕೊಡುತ್ತಾನೆ ಇಲ್ಲ ಆ ಕೆಲಸ ನೆರವೇರುವುದಿಲ್ಲ ಎನ್ನುವುದಾದರೆ ಹೂವನ್ನು ಎಡಗಡೆ ನೀಡುತ್ತಾನೆ ಹೌದು ಸ್ನೇಹಿತರೆ ಇದು ಜನರು ಅಪಾರವಾಗಿ ನಂಬಿರುವ ನಂಬಿಕೆಗಳು .ಸ್ನೇಹಿತರೇ ಅಂತಹದ್ದೇ ಒಂದು ಪದ್ಧತಿಯ ಬಗ್ಗೆ ನಾನು ಇಂದು ನಿಮಗೆ ತಿಳಿಸಿಕೊಡಲು ಬಂದಿದ್ದೇನೆ. ಅದೇನೆಂದರೆ ಚಿತ್ತಾಪುರ ತಾಲ್ಲೂಕಿನ ಏರಗು ಎಂಬ ಗ್ರಾಮದಲ್ಲಿ ಒಂದು ಅಚ್ಚರಿಯಾದ ಪದ್ಧತಿಯನ್ನು ಈ ಗ್ರಾಮಸ್ಥರು ನಡೆಸಿಕೊಂಡು ಬಂದಿದ್ದಾರೆ. ಸ್ನೇಹಿತರೇ ಅದೇನೆಂದರೆ ಈ ಗ್ರಾಮದಲ್ಲಿ ಇರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ಬಾವಿಯಿದೆ ಆ ಬಾವಿಯಿಂದ ನೀರನ್ನು ಸೇದಿ ಅದರಿಂದ ಮಡಿಯನ್ನು ಮಾಡಿಕೊಂಡು ಆ ಬಾವಿಯಿಂದಲೇ ಸ್ವಚ್ಛ ನೀರನ್ನು ಮಡಿಯಿ೦ದ ತೆಗೆದುಕೊಂಡು ಹೋಗಿ ಆಂಜನೇಯಸ್ವಾಮಿ ದೇವಾಲಯದಲ್ಲಿ ನೀರು ತುಂಬಿದ ಮಡಿಕೆಯನ್ನು ಜೋಳದ ಮೇಲೆ ಇಟ್ಟು ಇದನ್ನು ದೇವರ ಗರ್ಭಗುಡಿಯ ಮುಂದೆ ಇಡುತ್ತಾರೆ.
ವಿಡಿಯೋ ಕೆಳಗೆ ಇದೆ ….
ಇನ್ನೂ ಗ್ರಾಮಸ್ಥರು ಸೇರಿ ದೇವರಲ್ಲಿ ಬೇಡಿಕೆಯನ್ನು ಇಟ್ಟು ಈ ಗ್ರಾಮಸ್ಥರು ಈಗ ಮಳೆ ಬರುತ್ತದೋ ಇಲ್ಲವೋ ಎಂದು ದೇವರಲ್ಲಿ ಅಪ್ಪಣೆ ಕೇಳುತ್ತಾ ಇದ್ದಾರೆ ಸ್ನೇಹಿತರೇ ಇದರ ಬಗ್ಗೆ ನೀವು ಸಹ ಈ ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ತಿಳಿಯುತ್ತದೆ .ಇನ್ನು ಭಕ್ತಾದಿಗಳ ಬೇಡಿಕೆ ಈಡೇರುತ್ತದೆ ಎನ್ನುವುದಾದರೆ ಮಳೆ ಆಗುತ್ತದೆ ಎನ್ನುವುದಾದರೆ ಜೋಳದ ಮೇಲೆ ನೀರು ತುಂಬಿ ಇಟ್ಟಿರುವ ಮಡಿಕೆಯ ತಿರುಗುವುದ೦ತೆ ಆದರೆ ಮಳೆಯಾಗುವುದಿಲ್ಲ ಎನ್ನುವುದಾದರೆ ಆ ಮಡಿಕೆ ತಿರುಗುವುದಿಲ್ಲ ವಂತೆ ಸ್ನೇಹಿತರೇ . ಇದು ನಿಜಕ್ಕೂ ನೋಡಲು ಅಚ್ಚರಿ ಅನಿಸುತ್ತದೆ ಬಿಡುವನ್ನು ನೋಡಿದ ನಂತರ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ಒಂದು ಮೆಚ್ಚುಗೆಯನ್ನು ಕಿಂಗ್ ಪವಾಡಕ್ಕೆ ನೀಡಿ ಧನ್ಯವಾದಗಳು ಶುಭದಿನ ಶುಭವಾಗಲಿ .