ಎಲ್ಲರಿಗೂ ನಮಸ್ಕಾರಗಳು ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಹೇಗೆ ಹೋಟೆಲ್ಗಳಲ್ಲಿ ಇಡ್ಲಿಯನ್ನು ಮೃದುವಾಗಿ ಮಾಡುತ್ತಾರೋ ಅದೇ ರೀತಿಯಲ್ಲಿ ಮನೆಯಲ್ಲಿ ಹೇಗೆ ತಯಾರಿಸಿಕೊಳ್ಳಬಹುದು ಅನ್ನೋದನ್ನ.
ಹೌದು ಮನೆಯ ಸದಸ್ಯರು ಮನೆಯಲ್ಲಿ ಮಾಡಿದ ಇಡ್ಲಿಯನ್ನು ತಿನ್ನಲು ಇಷ್ಟಪಡುವುದಿಲ್ಲ ಆದರೆ ಹೋಟೆಲ್ ನಲ್ಲಿ ಸಿಗುವ ಇಡ್ಲಿಯನ್ನು ತಿನ್ನುತ್ತಾರೆ ಯಾಕೆ ಅಂದರೆ ಹೋಟೆಲ್ ನಲ್ಲಿ ಮಾಡಿದ ಇಡ್ಲಿ ಮೃದುವಾಗಿ ಇರುತ್ತದೆ ಆದರೆ ಮನೆಯಲ್ಲಿ ಮಾಡಿದ ಇಡ್ಲಿ ಕೆಲವೊಮ್ಮೆ ಗಟ್ಟಿಯಾಗಿರುತ್ತದೆ ಈ ಇಡ್ಲಿಯನ್ನು ತಿನ್ನುವುದಕ್ಕೆ ಬೇಸರವೂ ಕೂಡ ಆಗಿರುತ್ತದೆ.
ಹಾಗಾದರೆ ಹೋಟೆಲ್ನ ಹಾಗೆ ಮನೆಯಲ್ಲಿಯೇ ಇಡ್ಲಿಯನ್ನು ಹೇಗೆ ಮಾಡಬಹುದು ಜೊತೆಗೆ ಸಾಮಾನ್ಯವಾಗಿ ಇಡ್ಲಿಯನ್ನು ಕೆಲವರು ಇಡ್ಲಿಯನ್ನು ಮಾಡುವ ಅಕ್ಕಿಯನ್ನೇ ಬಳಸಿ ಮಾಡುತ್ತಾರೆ ಆದರೆ ರೇಷನ್ ಅಕ್ಕಿಯನ್ನು ಬಳಸಿಯೂ ಕೂಡಾ ಮೃದುವಾಗಿ ಇಡ್ಲಿ ಅನ್ನು ತಯಾರಿಸಿಕೊಳ್ಳಬಹುದು,
ಹೇಗೆ ಅನ್ನೋದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ ನೀವು ಕೂಡ ಈ ರೀತಿಯ ಇಡ್ಲಿಯನ್ನು ಮಾಡುವ ವಿಧಾನವನ್ನು ತಿಳಿದುಕೊಂಡು ನಾಳೆಯ ದಿನ ಈ ರೀತಿಯ ಮೃದುವಾದ ಇಡ್ಲಿಯನ್ನು ಮಾಡಿ.
ಸಾಮಾನ್ಯವಾಗಿಯೇ ತಿಳಿದಿರುವ ಒಂದು ವಿಚಾರ ಅಂದರೆ ಇಲ್ಲಿನ ಮಾಡುವುದಕ್ಕೆ ಇಂದಿನ ದಿನವೇ ಅಕ್ಕಿಯನ್ನು ನೆನಸಿರುತ್ತಾರೆ, ಎರಡು ಲೋಟ ಅಕ್ಕಿಗೆ ಒಂದು ಲೋಟ ಉದ್ದಿನ ಬೇಳೆಯನ್ನು ಬಳಸಬೇಕು.
ಇದೀಗ ಎರಡು ಲೋಟ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ನೆನೆಸಿಡಿ ಇದಕ್ಕೆ ಅರ್ಧ ಲೋಟ ಸಬ್ಬಕ್ಕಿಯನ್ನು ಹಾಕಿ ಅದನ್ನು ಕೂಡ ಅಕ್ಕಿಯೊಂದಿಗೆ ನೆನೆಸಿಡಬೇಕು, ಉದ್ದಿನ ಬೇಳೆಯನ್ನು ಬೇರೆ ಪಾತ್ರೆಯಲ್ಲಿ ನೆನೆಸಿಡಿ, ಮೂರ್ನಾಲ್ಕು ಗಂಟೆ ಅಕ್ಕಿ ಮತ್ತು ಉದ್ದಿನ ಬೇಳೆ ನೆನೆದ ನಂತರ ಇದನ್ನು ಬೇರೆ ಬೇರೆಯಾಗಿ ರುಬ್ಬಿಕೊಳ್ಳಬೇಕು.
ಅಕ್ಕಿಯನ್ನು ಇನ್ನೇನು ರುಬ್ಬಬೇಕು ಅನ್ನುವ ಇಪ್ಪತ್ತು ನಿಮಿಷಗಳ ಮೊದಲು ಒಂದು ಕಪ್ ಅವಲಕ್ಕಿಯನ್ನು ನೆನೆಸಿಡಿ ನೀವು ಅವಲಕ್ಕಿಯ ಬದಲು ಅನ್ನವನ್ನೂ ಬಳಸಬಹುದು ಈ ಅವಲಕ್ಕಿ ಅಥವಾ ಅನ್ನವನ್ನು ಬೆಳೆಸುವುದರಿಂದ ಇಡ್ಲಿ ಮೃದುವಾಗಿ ಬರುತ್ತದೆ ಎಂದು ಅವಲಕ್ಕಿ ಅಥವಾ ಅನ್ನವನ್ನು ಬಳಸಲಾಗುತ್ತದೆ.
ಅಕ್ಕಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು ನಂತರ ಅವಲಕ್ಕಿ ಮತ್ತು ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದೀಗ ಅಕ್ಕಿ ಉದ್ದಿನ ಬೇಳೆ ಮತ್ತು ಅವಲಕ್ಕಿಯನ್ನು ಚೆನ್ನಾಗಿ ಮಿಶ್ರಿತ ಮಾಡಿಕೊಳ್ಳಬೇಕು.
ಇಷ್ಟು ಮಾಡಿದ ಬಳಿಕ ಚಿಟಕಿ ಅಡುಗೆ ಸೋಡವನ್ನು ಹಾಕಿಕೊಳ್ಳಬೇಕು ನೀವು ಹಿಟ್ಟನ್ನು ಮಾಡಿದ ಕೂಡಲೇ ಅಡುಗೆ ಸೋಡವನ್ನು ಹಾಕಬಹುದು ಅಥವಾ ಬೆಳಿಗ್ಗೆ ಆದರೂ ಅಕ್ಕಿ ಹಿಟ್ಟಿಗೆ ಸೋಡಾ ಪುಡಿಯನ್ನು ಹಾಕಿಕೊಳ್ಳಬಹುದು.
ಬೆಳಿಗ್ಗೆ ಅಷ್ಟರಲ್ಲಿ ಇಡ್ಲಿ ಹಿಟ್ಟು ಉಬ್ಬಿರಬೇಕು ಅಂದರೆ ಈ ಇಡ್ಲಿ ಹಿಟ್ಟನ್ನು ಚೆನ್ನಾಗಿ ಮಿಶ್ರಿತ ಮಾಡಿರಬೇಕು, ನಂತರ ಬೆಳಗ್ಗೆ ಇಡ್ಲಿ ಹಿಟ್ಟನ್ನು ಇಡ್ಲಿ ತಟ್ಟೆಗೆ ಹಾಕುವಾಗ ಇಡ್ಲಿ ತಟ್ಟೆಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಹಚ್ಚಿ ನಂತರ ಹಿಟ್ಟನ್ನು ಹಾಕಿ ಬೇಯಿಸಬೇಕು. ಈ ರೀತಿ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆಯನ್ನು ಸವರಿ ಇಡ್ಲಿ ಯನ್ನು ಮಾಡುವುದರಿಂದ ಇಡ್ಲಿ ಬೆಂದ ಮೇಲೆ ಆರಾಮವಾಗಿ ಇಡ್ಲಿಯನ್ನು ಇಡ್ಲಿ ತಟ್ಟೆಯಿಂದ ತೆಗೆಯಬಹುದು.
ಈ ರೀತಿಯ ಇಡ್ಲಿಯನ್ನು ನೀವು ಕೂಡ ನಿಮ್ಮ ಮನೆಯಲ್ಲಿ ಪ್ರಯತ್ನಿಸಿ ಹಾಗೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ ಶುಭ ದಿನ.