ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸಬೇಕೆಂದರೆ ಅಥವಾ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕುಂಠಿತವಾಗಿ ದ್ದರೆ ಅದನ್ನು ಆಯುರ್ವೇದದಲ್ಲಿ ಹೇಳಿರುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ ಇವತ್ತಿನ ಲೇಖನದಲ್ಲಿ ತಿಳಿಯೋಣ.

ಜ್ಞಾಪಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಅಂತ ಜೊತೆಗೆ ಇದೊಂದು ಆಯುರ್ವೇದ ಸಲಹೆ ಯಾಗಿರುವ ಕಾರಣದಿಂದಾಗಿ ಯಾವುದೇ ಅಡ್ಡ ಪರಿಣಾಮಗಳು ಮಕ್ಕಳ ಮೇಲೆ ಆಗುವುದಿಲ್ಲ .

ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದರೆ ಅಥವಾ ಮಕ್ಕಳಲ್ಲಿ ಹೆಚ್ಚು ಜ್ಞಾಪಕ ಶಕ್ತಿ ಇಲ್ಲವಾದರೆ ಆಯುರ್ವೇದದಲ್ಲಿ ಅದಕ್ಕೆ ಸುಲಭ ಮನೆಮದ್ದುಗಳನ್ನು ನಾವು ಕಾಣಬಹುದಾಗಿದೆ .

ನಾವು ಈ ದಿನ ತಿಳಿಸುವಂತಹ ಆಯುರ್ವೇದದ ಮನೆ ಮದ್ದು ನಿಮಗೆ ಮಾರುಕಟ್ಟೆಯಲ್ಲಿ ದೊರೆಯದಿದ್ದರೆ ಗ್ರಂಥಿಕೆ ಅಂಗಡಿಯಲ್ಲಿ ನೀವು ಈ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದಾಗಿದೆ . ಮೊದಲಿಗೆ ರೋಸ್ಮೇರಿ ಎಲೆಗಳು ಹೌದು ಈ ರೋಸ್ಮರಿ ಎಲೆಗಳು ನಿಮಗೆ ಗ್ರಂಥಿಕೆ ಅಂಗಡಿಯಲ್ಲಿ ಅಥವಾ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಹಾಗೆಯೇ ಆನ್ಲೈನ್ನಲ್ಲಿಯೂ ಇದನ್ನು ಪರ್ಚೇಸ್ ಮಾಡಬಹುದಾಗಿದೆ .

ಈ ಎಲೆಯ ಪುಡಿಯನ್ನು ಮಕ್ಕಳಿಗೆ ನೀಡುವುದರಿಂದ ಇದರಲ್ಲಿ ಇರುವಂತಹ ರೋಸ್ಮೇರಿನಿಕ್ ಕಾರ್ಸೊನಿಖ್ ಆಮ್ಲವು ಅಸಿಟೇಟ್ ಕೋಲಿನ್ ಅನ್ನು ಹೆಚ್ಚಿಸುತ್ತದೆ ಇದರಿಂದ ಜ್ಞಾಪಕ ಶಕ್ತಿ ಕೂಡ ಮಕ್ಕಳಲ್ಲಿ ಹೆಚ್ಚುತ್ತದೆ . ಈ ಎಲೆಯು ನರಸಣ್ಣೆಯನ್ನು ಸರಿಪಡಿಸಿ ಮೆದುಳಿನ ನರಗಳನ್ನು ಆಕ್ಟಿವ್ ಗೊಳಿಸಿ ಜ್ಞಾಪಕ ಶಕ್ತಿ ಹೆಚ್ಚಾಗುವಂತೆ ಮಾಡಲು ಸಹಕರಿಸುತ್ತದೆ .

ಎರಡನೆಯದ್ದು ಅಶ್ವಗಂಧ ಈ ಅಶ್ವಗಂಧವನ್ನು ಕೂಡ ನೀವು ಗ್ರಂಥಿಕೆ ಅಂಗಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ ಅಥವಾ ಆನ್ ಲೈನ್ ನಲ್ಲಿಯೂ ಕೂಡ ನೀವು ಅಶ್ವಗಂಧವನ್ನು ಪರ್ಚೇಸ್ ಮಾಡಬಹುದಾಗಿದ್ದು ಅಶ್ವಗಂಧದ ಪುಡಿಯನ್ನು ಮಕ್ಕಳಿಗೆ ಕೊಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚುವುದರ ಜೊತೆಗೆ ಆರೋಗ್ಯ ಕೂಡ ವೃದ್ಧಿಸುತ್ತದೆ ಜೊತೆಗೆ ಮಕ್ಕಳು ಆ್ಯಕ್ಟಿವ್ ಆಗಿರಲು ಇದು ಸಹಕರಿಸುತ್ತದೆ .
ಅಶ್ವಗಂಧ ಬೀಟಾ ಅಮಿಲೈಯ್ಡ್ ಪ್ರೋಟೀನ್ ಅನ್ನು ಒಡೆಯುವ ಕ್ರಿಯೆಗೆ ನೆರವಾಗುತ್ತದೆ ಹಾಗೆಯೇ ಇದು ಜ್ಞಾಪಕ ಶಕ್ತಿ ಹೆಚ್ಚಿಸುವುದರಲ್ಲಿ ಸಹಕರಿಸುತ್ತದೆ .

ಇದರಲ್ಲಿ ಇರುವಂತಹ ಅಂಶವೂ ಸಂಯುಕ್ತವಾಗಿ ಮೆದುಳಿನಲ್ಲಿ ಫ್ಲೇಕ್ ಅನ್ನು ಉಂಟು ಮಾಡುತ್ತದೆ ಜೊತೆಗೆ ದೃಶ್ಯ ರೂಪಕ ಜ್ಞಾಪಕವನ್ನು ಸುಧಾರಿಸುವಲ್ಲಿ ಅಶ್ವಗಂಧ ಹೆಚ್ಚು ಸಹಾಯ ಮಾಡುತ್ತದೆ ಹಾಗೂ ಆ್ಯಕ್ಸಿಡೆಂಟ್ ಆದಾಗ ಹೋದಂತಹ ನೆನಪನ್ನು ಕೂಡ ಮರುಕಳಿಸಲು ಅಶ್ವಗಂಧ ಹೆಚ್ಚು ಸಹಕಾರಿಯಾಗಿದೆ .

ಬ್ರಾಹ್ಮಿ ಎಲೆ ಈ ಹೆಸರನ್ನು ನೀವು ಕೇಳಿರುತ್ತೀರಿ ಬ್ರಾಹ್ಮಿ ಎಲೆಗಳನ್ನು ಪುಡಿ ಮಾಡಿ ಅದನ್ನು ಮಕ್ಕಳಿಗೆ ನೀಡುವುದರಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಜೊತೆಗೆ ಏಕಾಗ್ರತೆಯನ್ನು ಕೂಡ ಹೆಚ್ಚಿಸುವುದರಲ್ಲಿ ಇದು ತುಂಬಾನೇ ಉಪಯುಕ್ತವಾಗಿದೆ .
ಕೊನೆಯದ್ದು ಸಾಲ್ವಿ ತುಳಸಿ ಇದನ್ನು ಮಕ್ಕಳಿಗೆ ನೀಡುವುದರಿಂದ ಮೆದುಳಿನ ಸಾಮರ್ಥ್ಯವನ್ನು ಇದು ಹೆಚ್ಚಿಸುವುದರ ಜೊತೆಗೆ ಜ್ಞಾಪಕ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ ಹಾಗೂ ಈ ತುಳಸಿ ದಳಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಕೂಡ ದೂರವಾಗುತ್ತದೆ .

ಈ ಮೇಲೆ ತಿಳಿಸಿದಂತಹ ಯಾವುದಾದರೂ ಒಂದು ಆಯುರ್ವೇದದ ಮದ್ದನ್ನು ನೀವು ಮನೆಯಲ್ಲಿ ಮಕ್ಕಳಿಗೆ ಪಾಲಿಸುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ ಮಕ್ಕಳ ಏಕಾಗ್ರತೆ ಕೂಡ ಹೆಚ್ಚುತ್ತದೆ ಹಾಗೂ ಮಕ್ಕಳು ದಿನವಿಡೀ ಉತ್ಸಾಹದಿಂದ ಚೈತನ್ಯದಿಂದ ಇರಲು ಇದು ಸಹಕರಿಸುತ್ತದೆ .

ಮಕ್ಕಳು ದಿನವೆಲ್ಲಾ ಚೈತನ್ಯವನ್ನು ಕಳೆದುಕೊಂಡು ಉತ್ಸಾಹವಿಲ್ಲದೆ ಓದಿನ ಮೇಲೆ ಕಾನ್ಸಂಟ್ರೇಷನ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲವಾದರೆ ಅಂಥವರಿಗೆ ಈ ಆಯುರ್ವೇದದ ಸಲಹೆಯನ್ನು ಪ್ರಯತ್ನಿಸಿ ನೋಡಿ ನಿಜಕ್ಕೂ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದರ ಜೊತೆಗೆ ಮಕ್ಕಳು ಚೈತನ್ಯಗೊಳ್ಳುತ್ತಾರೆ ಹಾಗು ಅವರ ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here