ಮನೆಯ ಮುಂಭಾಗದಲ್ಲಿ ಚಪ್ಪಲಿಯನ್ನು ಯಾವ ಸ್ಥಳದಲ್ಲಿ ಬಿಡಬೇಕು.. ಈ ಸ್ಥಳದಲ್ಲಿ ಇಟ್ಟರೆ ನಿಮಗೆ ಕಷ್ಟಗಳು ಎದುರಾಗುತ್ತವೆ !!!

16

ಮನೆಯಲ್ಲಿ ಚಪ್ಪಲಿಗಳನ್ನು ಈ ಜಾಗದಲ್ಲಿ ಎಂದಿಗೂ ಬಿಡಲೇಬಾರದು ಯಾಕೆ ಅಂತ ಹೇಳ್ತೀನಿ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಫ್ರೆಂಡ್ಸ್ ನಮ್ಮ ಹಿರಿಯರು ಏನೇ ಒಂದು ಶಾಸ್ತ್ರ ಸಂಪ್ರದಾಯವನ್ನು ಕೈಗೊಂಡಿದ್ದಾರೆ ಅಂದರೆ ಶಾಸ್ತ್ರ ಸಂಪ್ರದಾಯವನ್ನು ಜಾರಿಗೆ ತಂದಿದ್ದಾರೆ.

ಅಂದರೆ ಅದರ ಹಿಂದೆ ಕಾರಣಗಳು ಕೂಡ ಇರುತ್ತವೆ ಉದಾಹರಣೆಗೆ ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸುವುದು ಮತ್ತು ಅದನ್ನು ಪೂಜಿಸುವುದು. ತುಳಸಿ ಗಿಡವನ್ನು ಮನೆ ಮುಂದೆ ಬೆಳೆಸುವುದರಿಂದ ಇದು ಮನೆಗೆ ಹೆಚ್ಚು ಪ್ರಮಾಣದ ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಇಂಥಹದ್ದೇ ಇನ್ನೂ ಅನೇಕ ಶಾಸ್ತ್ರ ಸಂಪ್ರದಾಯಗಳು ನಮ್ಮ ನಡುವೆಯೇ ಇದೆ ಆದರೆ ನಾವು ಅದನ್ನು ಅರ್ಥ ಮಾಡಿಕೊಂಡಿಲ್ಲ ಅಷ್ಟೇ ಇಂತಹದ್ದೇ ಒಂದು ಪದ್ಧತಿಗಳಲ್ಲಿ ಮನೆಯ ಈ ದಿಕ್ಕಿನಲ್ಲಿ ಯಾವತ್ತಿಗೂ ಕೂಡ ಚಪ್ಪಲಿಗಳನ್ನು ಬಿಡಬಾರದು.

ಹಾಗೆ ಮನೆಯ ಮುಂದೆ ಎಲ್ಲೆಂದರೆ ಅಲ್ಲಿ ಚಪ್ಪಲಿಗಳನ್ನು ಕೂಡ ಬಿಡಬಾರದು ಯಾಕೆ ಅಂದರೆ ಚಪ್ಪಲಿಗಳನ್ನ ಧರಿಸಿ ನಾವು ಧೂಳು ಇರುವ ವಾತಾವರಣಗಳಲ್ಲಿ ಎಲ್ಲಾ ಓಡಾಡುತ್ತೇವೆ .

ಅಲ್ಲಿ ಕೂತ ಧೂಳು ಬ್ಯಾಕ್ಟೀರಿಯಾ ಕೀಟಾಣುಗಳು ಎಲ್ಲವೂ ಚಪ್ಪಲಿಯಲ್ಲಿ ರುತ್ತದೆ ಇದನ್ನು ಎಲ್ಲೆಂದರೆ ಅಲ್ಲಿ ಬಿಡುವುದರಿಂದ ಆ ಧೂಳನ್ನೇ ತುಳಿದು ನಾವು ಮನೆಯೊಳಗೆ ಹೋಗುತ್ತವೆ ಈ ಕಾರಣದಿಂದಾಗಿ ಮನೆಯ ಎಲ್ಲೆಂದರೆ ಅಲ್ಲಿ ಚಪ್ಪಲಿಗಳನ್ನು ಬಿಡಬಾರದು.

ವಾಸ್ತು ಶಾಸ್ತ್ರವು ತಿಳಿಸುವ ಹಾಗೆ ಮನೆಯ ಈ ದಿಕ್ಕಿನಲ್ಲಿ ಚಪ್ಪಲಿಗಳನ್ನು ಬಿಡ ಬಾರದಂತೆ ಆ ಜಾಗ ಯಾವುದು ಅಂದರೆ ಆ ದಿಕ್ಕು ಯಾವುದು ಅಂದರೆ ಈಶಾನ್ಯ ಮೂಲೆ .

ಹೌದು ಈ ಈಶಾನ್ಯ ಮೂಲೆಯಲ್ಲಿ ಚಪ್ಪಲಿಗಳನ್ನು ಬಿಡಬಾರದು ಈಶಾನ್ಯ ಮೂಲೆಯಲ್ಲಿ ಯಾವುದಾದರೂ ಶುಭಕರವಾದ ವಸ್ತುಗಳನ್ನು ಇಡಬಹುದು, ಆದರೆ ಇಂತಹ ಚಪ್ಪಲಿಗಳನ್ನು ಇಡುವುದು ಅಷ್ಟೊಂದು ಶ್ರೇಷ್ಠವಲ್ಲ ಇದರಿಂದ ಮನೆಯ ವಾಸ್ತು ಸಮತೋಲನದಲ್ಲಿ ಇರುವುದಿಲ್ಲ ಅಂತ ಹೇಳ್ತಾರೆ ವಾಸ್ತು ಶಾಸ್ತ್ರಜ್ಞರು.

ಹೌದು ಯಾವತ್ತಿಗೂ ಮನೆಯ ವಾಸ್ತು ಸಮತೋಲನದಲ್ಲಿ ಇರಬೇಕು ಹಾಗೆ ಮನೆಯಲ್ಲಿ ಯಾವ ವಸ್ತುಗಳು ಎಲ್ಲಿ ಇಡಬೇಕು ಅಲ್ಲಿಯೇ ಇಡಬೇಕು.

ಹಾಗೆ ಅಗ್ನಿಯ ಮೂಲೆ ಅಂದರೆ ಅಲ್ಲಿ ಮನೆಯ ಅಡುಗೆ ಮನೆ ಇರಬೇಕು ಮನೆಯಲ್ಲಿ ಅಗ್ನಿ ಮೂಲೆಯಲ್ಲಿ ಒಲೆಯನ್ನು ಇಟ್ಟು ಅಡುಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ ಅಂತೆಲ್ಲಾ ಹೇಳ್ತಾರೆ ಇದರ ಹಿಂದೆ ಕೂಡ ಕೆಲವೊಂದು ಕಾರಣಗಳು ಇರಬಹುದು.

ಇದೇ ರೀತಿಯಲ್ಲಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಯಾವತ್ತಿಗೂ ಚಪ್ಪಲಿಗಳನ್ನು ಬಿಡಬೇಡಿ ಮತ್ತು ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಮುಂದೆ ಕೂಡ ಚಪ್ಪಲಿಗಳನ್ನು ಬಿಡಬೇಡಿ.

ಈ ಚಪ್ಪಲಿಗಳನ್ನು ದಾಟಿ ಮನೆಯೊಳಗೆ ಬರಬಾರದು. ಆದ ಕಾರಣ ಮನೆಯ ಒಂದು ಮೂಲೆಯಲ್ಲಿ ಈಶಾನ್ಯ ಮೂಲೆಯನ್ನು ಹೊರತುಪಡಿಸಿ ಚಪ್ಪಲಿ ಸ್ಟ್ಯಾಂಡ್ ಅನ್ನು ಇಟ್ಟು ಅದರ ಮೇಲೆ ಚಪ್ಪಲಿಗಳನ್ನು ಜೋಡಿಸಿಡುವುದು ಒಳ್ಳೆಯದು.

ನಾನು ಈ ದಿನ ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಹಾಗೆ ನಿಮಗೂ ಕೂಡ ಈ ಒಂದು ಮಾಹಿತಿ ಉಪಯುಕ್ತವಾಗಿದೆ ಇಷ್ಟ ಆಗಿದೆ ಅಂದಲ್ಲಿ ತಪ್ಪದೇ ಮಾಹಿತಿಗೆ ಒಂದು ಮೆಚ್ಚುಗೆಯನ್ನು ನೀಡಿ .

ಹಾಗೆ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಮತ್ತು ಫ್ರೆಂಡ್ಸ್ ಇನ್ನೂ ಅನೇಕ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದ ಶುಭ ದಿನ.

LEAVE A REPLY

Please enter your comment!
Please enter your name here