Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನೆಯ ಮುಂದೆ ಈ ಗಿಡಗಳು ಇದ್ದರೆ ,ನಿಮ್ಮ ಜೀವನದ್ಲಲಿ ಕಷ್ಟಗಳು ಮಾಯವಾಗುತ್ತವೆ …ಅವು ಯಾವ ಯಾವ ಗಿಡಗಳು ಎಂದು ತಿಳಿದುಕೊಳ್ಳಿ !!!!

ಮನೆಯ ಮುಂದೆ ಇಂತಹ ಗಿಡಗಳನ್ನು ಬೆಳೆಸುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಹೌದು ಆ ಗಿಡಗಳು ಯಾವುವು ಅದನ್ನು ಬೆಳೆಸುವುದರಿಂದ ಯಾವೆಲ್ಲ ಪ್ರಯೋಜನವಾಗುತ್ತದೆ ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ .

ಈ ಒಂದು ಉಪಯುಕ್ತ ಮಾಹಿತಿಯನ್ನು ಫ್ರೆಂಡ್ಸ್ ತಪ್ಪದೇ ತಿಳಿಯಿರಿ ಹಾಗೂ ನೀವು ಕೂಡ ಈ ಮಾಹಿತಿಯನ್ನು ತಿಳಿದ ನಂತರ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಹಂಚಿಕೊಳ್ಳಿ.

ಮಾಹಿತಿ ತಿಳಿದ ನಂತರ ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ಮತ್ತು ಮಾಹಿತಿಗೆ ಒಂದು ಮೆಚ್ಚುಗೆಯನ್ನು ನೀಡಿ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಗಿಡಗಳನ್ನ ದೇವರ ಸಮಾನವಾಗಿ ಕಾಣಲಾಗುತ್ತದೆ ದೇವರ ಪೂಜೆಯನ್ನು ಮಾಡುವ ಹಾಗೆ ಕೆಲವೊಂದು ಔಷಧೀಯ ಗುಣವಿರುವ ಗಿಡಗಳನ್ನು ದೇವರ ಸಮಾನವಾಗಿ ಪೂಜಿಸುತ್ತಾರೆ.

ಹಾಗೆ ಈ ಒಂದು ಗಿಡಗಳನ್ನು ಪೂಜಿಸುವುದರಿಂದ ವೈಜ್ಞಾನಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿಯೂ ಕೂಡ ಲಾಭಗಳು ಇವೆ.

ಬಾಳೆ ಗಿಡ :
ಹೌದು ಹಿಂದೂ ಸಂಪ್ರದಾಯದಲ್ಲಿ ಬಾಳೆ ಗಿಡಕ್ಕೆ ವೈಶಿಷ್ಟ್ಯವಾದ ಸ್ಥಾನಮಾನವನ್ನು ನೀಡಲಾಗಿದೆ ವಿಶೇಷ ಸಂದರ್ಭಗಳಲ್ಲಿ ಮದುವೆಯ ಸಮಾರಂಭಗಳಲ್ಲಿ ಬಾಳೆ ಗಿಡಗಳನ್ನು ಮನೆಗೆ ಮನೆಯ ಮುಂದೆ ಕಟ್ಟಲಾಗುತ್ತದೆ,

ದೇವರ ಪೂಜೆಯಲ್ಲಿಯೂ ಬಾಳೆಗಿಡಗಳನ್ನು ಬಳಸಲಾಗಿದ್ದು ಯಾರ ಜೀವನದಲ್ಲಿ ಮದುವೆಯ ಕಂಕಣ ಭಾಗ್ಯ ಒಲಿದು ಬರುವುದಿಲ್ಲವೋ ಅಂತಹವರು ಬಾಳೆಗಿಡವನ್ನು ಪೂಜಿಸುವುದಾಗಿ ಹೇಳುತ್ತಾರೆ.

ಮನೆಯ ಹಿಂದೆ ಈ ಬಾಳೆ ಗಿಡವನ್ನು ಬೆಳೆಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಅಂದರೆ ನಾವು ಮನೆಯಲ್ಲಿ ನೀರನ್ನು ಬಳಸಿದಾಗ ನೀರು ವ್ಯರ್ಥವಾಗಿ ಹೋಗುವುದನ್ನು ಬಳಸಿಕೊಂಡು ಕಡಿಮೆ ಗೊಬ್ಬರ ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವ ಬಾಳೆ ಗಿಡದ ಅಂಶವೂ ಅಗಾಧವಾದದ್ದು.

ಹಾಗೆ ಈ ಬಾಳೆ ಹಣ್ಣು ಆರೋಗ್ಯಕ್ಕೆ ಉತ್ತಮಕಾರಿ, ಆದ್ದರಿಂದ ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚೇ ಇಲ್ಲದೆ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಬಹುದು ಈ ಒಂದು ಬಾಳೆ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ.

ತುಳಸಿ ಗಿಡ :
ತುಳಸಿ ಗಿಡವನ್ನು ಕೂಡ ಮನೆಯ ಮುಂದೆ ಬೆಳೆಸಿ ಪೂಜೆ ಮಾಡಬೇಕು ಅಂತ ಹಿರಿಯರು ಹೇಳ್ತಾರೆ ಹಾಗೆ ಈ ತುಳಸಿ ಗಿಡದ ಅಂಶವು ಉಸಿರಾಟದ ಸಮಸ್ಯೆಯನ್ನು ದೂರ ಮಾಡುತ್ತದೆ ಹಾಗೂ ಕೆಮ್ಮು ಶೀತ ಕಫ ಸಮಸ್ಯೆ ಬಂದಾಗ ತುಳಸಿ ಎಲೆಗಳ ಕಷಾಯ ಕುಡಿಯುವುದುರಿಂದ ಉತ್ತಮ ಫಲಿತಾಂಶ ನೀಡುತ್ತದೆ.

ಶಮಿವೃಕ್ಷ :
ಇದನ್ನು ಮನೆಯ ಮುಂದೆ ಬೆಳೆಸುವುದರಿಂದ ಶನಿಯ ಕೆಟ್ಟ ದೃಷ್ಟಿ ಮನೆಯ ಮೇಲೆ ಪ್ರಭಾವ ಬೀರುವುದಿಲ್ಲ ಇದು ವಿಜಯದ ಸಂಕೇತವಾಗಿದೆ ಜೀವನದಲ್ಲಿ ಸಕ್ಸಸ್ ಕಾಣಲು ಈ ಮರವನ್ನು ಮನೆಯ ಮುಂದೆ ಬೆಳೆಸಬೇಕು ಅಂತ ಹೇಳಲಾಗುತ್ತದೆ.

ದಾಸವಾಳ ಗಿಡ:
ಮಂಗಳನ ಕೆಟ್ಟ ಪ್ರಭಾವ ನಿಮ್ಮ ಜೀವನದ ಮೇಲೆ ಆಗಬಾರದೆಂದರೆ ದಾಸವಾಳದ ಹೂವನ್ನು ಆಂಜನೇಯ ಸ್ವಾಮಿಗೆ ಅರ್ಪಿಸಬೇಕು ಇದರಿಂದ ಜೀವನದಲ್ಲಿ ಒಳ್ಳೆಯದಾಗಲಿದೆ ಎಂದು ಹೇಳಲಾಗುತ್ತದೆ.

ದಾಳಿಂಬೆ ಗಿಡ :
ಹೌದು ರಾಹು ಕೇತುವಿನ ಕೆಟ್ಟ ಪ್ರಭಾವ ನಿಮ್ಮ ಮೇಲೆ ಬರಬಾರದೆಂದರೆ ದಾಳಿಂಬೆ ಗಿಡವನ್ನು ಮನೆಯ ಮುಂದೆ ಬೆಳೆಸಬೇಕು ಇದರಿಂದ ನಿಮಗೆ ಒಳ್ಳೆಯದಾಗುವುದು.

ಎಕ್ಕದ ಗಿಡ :
ಶಿವ ಪಾರ್ವತಿಯ ನೆಲೆಯಾಗಿರುವ ಎಕ್ಕದ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಅದರಲ್ಲಿಯೂ ನಿಮ್ಮ ಮನೆಗೆ ಕೆಟ್ಟ ಶಕ್ತಿಯ ಪ್ರಭಾವವಾದರೆ ಈ ಗಿಡವು ಒಣಗಿ ಹೋಗಿ ನಿಮಗೆ ಸೂಚನೆಯನ್ನು ಕೂಡ ನೀಡುತ್ತದೆ.

ಇಂತಹ ಗಿಡಗಳನ್ನು ಮನೆಯ ಅಂಗಳದಲ್ಲಿ ಬೆಳೆಸಿ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಿ ಹಾಗೆ ನಾನು ಈ ಮೊದಲೇ ಹೇಳಿದ ಹಾಗೆ ವೈಜ್ಞಾನಿಕವಾಗಿಯೂ ಆಧ್ಯಾತ್ಮಿಕವಾಗಿಯೂ ನಿಮಗೆ ನಿಮ್ಮ ಜೀವನದಲ್ಲಿ ಒಳ್ಳೆಯದನ್ನೇ ಮಾಡುತ್ತದೆ ಈ ಗಿಡ ಮರಗಳು.

Leave a Reply

Your email address will not be published. Required fields are marked *