ಕೆಲವರಿಗೆ ಜೀವನದಲ್ಲಿ ಆ ಒಂದು ಆಸೆ ಇರುತ್ತದೆ ತಾವು ಆಚೆ ಹೋದಂತಹ ಕೆಲಸ ಕಾರ್ಯಗಳು ನಿರ್ವಿಘ್ನ ವಿಲ್ಲದೆ ಯಾವುದೇ ಅಡೆತಡೆಗಳಿಲ್ಲದೆ ಆ ಒಂದು ಕೆಲಸ ಪರಿಪೂರ್ಣವಾಗಬೇಕು ಅಂತ ಪ್ರತಿಯೊಬ್ಬರೂ ಕೂಡ ಹೀಗೆ ಅಂದುಕೊಳ್ತಾರೆ.
ಅಷ್ಟೇ ಅಲ್ಲದೆ ನಾವು ಮಾಡುವ ಪ್ರತಿ ಕೆಲಸದಲ್ಲಿಯೂ ಕೂಡ ನಮಗೆ ಯಶಸ್ಸು ಸಿಗಬೇಕು ಅಂತ ಎಲ್ಲರೂ ಮನಸ್ಸಿನಲ್ಲಿ ಅಂದುಕೊಂಡು ಹೋಗ್ತಾರೆ, ಆದರೆ ಮನೆಯಿಂದ ಹೋಗುವಾಗ ಇದ್ದಂತಹ ಹುಮ್ಮಸ್ಸು ಚೈತನ್ಯ ಉತ್ಸಾಹ ಮನೆಗೆ ಹಿಂದಿರುಗುವಾಗ ಇರುವುದಿಲ್ಲ,
ಯಾಕೆ ಈ ರೀತಿ ಆಗುತ್ತದೆ ಅಂತ ಹೇಳುವುದಾದರೆ, ಇದಕ್ಕೆ ಕೆಲವೊಮ್ಮೆ ನಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ದೈವಬಲ ಇಲ್ಲದಿದ್ದರೂ ಕೂಡ ಇಂತಹ ಸಮಸ್ಯೆಗಳು ಆಗುತ್ತದೆ.
ನಿಮ್ಮ ಪೂರ್ವಜರು ನಿಮಗೆ ಕೆಲವೊಂದು ಬಾರಿ ಈ ಮಾತನ್ನು ಹೇಳಿರುತ್ತಾರೆ ಅದೇನೆಂದರೆ ಇವತ್ತಿನ ಕೆಲಸ ಸಂಪೂರ್ಣವಾಗಿ ಆಗಲೆ ಇಲ್ಲ ಅಂದರೆ, ಆಗ ಪೂರ್ವಜರು ನೀನು ಮಾಡುತ್ತಿರುವಂತಹ ಕೆಲಸ ಕಾರ್ಯಗಳಲ್ಲಿ ದೈವಬಲ ಇಲ್ಲವೇನೋ
ಆದ ಕಾರಣ ಒಮ್ಮೆಯಾದರೂ ಮನೆ ದೇವರಿಗೆ ಹೋಗಿ ಬಾ ಅಥವಾ ಊರಿನಲ್ಲಿ ಇರುವ ಗ್ರಾಮ ದೇವತೆಗೆ ಪೂಜೆ ಮಾಡಿಸಿಕೊಂಡು ಬಾ ಅಂತ ಹೇಳಿರುತ್ತಾರೆ, ಈ ಮಾತನ್ನು ನೀವು ಕೂಡ ಕೇಳಿದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ನೀವು ತಿಳಿಯಲೇಬೇಕು.
ಹಾಗಾದರೆ ಈ ರೀತಿ ನಮ್ಮ ಕೆಲಸ ಸಂಪೂರ್ಣವಾಗಿ ಆಗದೇ ಇರುವುದಕ್ಕೆ, ನಿಮಗೆ ದೈವಬಲ ಇಲ್ಲದಿದ್ದರೂ ಈ ಸಮಸ್ಯೆ ಆಗುತ್ತದೆ ಈ ತೊಂದರೆಯಾಗುತ್ತದೆಯೋ ಅಂತ ನೀವು ಕೂಡ ಅಂದುಕೊಳ್ಳುವುದಾದರೆ ಆ ಒಂದು ವಿಚಾರ ನಿಜ.
ನಾವು ಯಾವುದೆ ಒಂದು ಕೆಲಸ ಮಾಡಬೇಕು ಅಂದರೂ ಕೂಡ ದೇವರ ಅನುಗ್ರಹ ಇರಲೇಬೇಕು ಈ ಭೂಮಿ ಮೇಲೆ ಒಂದು ಹುಲ್ಲು ಅಲ್ಲು ಗಾಡ ಬೇಕು ಅಂದರೂ ದೇವರ ಅನುಗ್ರಹ ಇದ್ದರೆ ಮಾತ್ರ ಅದು ಸಾಧ್ಯ ಅಂತ ಒಂದು ಮಾತಿದೆ,
ಇಂತಹ ಒಂದು ಸಂದರ್ಭದಲ್ಲಿ ನಾವು ಈ ಮಾತನ್ನೇ ಪರಿಗಣನೆಗೆ ತೆಗೆದುಕೊಳ್ಳುವುದಾದರೆ ನಿಮ್ಮ ಕೆಲಸದಲ್ಲಿಯೂ ಕೂಡ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ದೇವರ ಅನುಗ್ರಹ ಇರಲೇಬೇಕಾಗುತ್ತದೆ.
ಆದಕಾರಣ ನೀವು ಆಚೆ ಹೋಗಿ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಿಮಗೆ ಸಿದ್ಧಿ ಸಿಗಬೇಕಾದರೆ ನೀವು ಹೋದ ಕೆಲಸಗಳು ಪೂರ್ಣ ಆಗಬೇಕಾದರೆ ಈ ಒಂದು ಪರಿಹಾರವನ್ನು ಮಾಡಿ ಸಾಕು,
ಅದೇನೆಂದರೆ ನೀವು ಆಚೆ ಹೋಗುವ ಮುನ್ನ ಈ ದೇವರುಗಳ ನಾಮ ಸ್ಮರಣೆಯನ್ನು ಮಾಡಿಕೊಂಡು ಈ ದೇವರುಗಳನ್ನು ನೆನೆಸಿಕೊಂಡು ಹೋಗಿ ಆಗ ನೀವು ಹೋಗುವ ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಅಡೆತಡೆಗಳು ಎದುರಾಗುವುದಿಲ್ಲ.
ನೀವು ಆಚೆ ಹೋಗುತ್ತಿದ್ದೀರಾ ಅಂದರೆ ಮೊದಲಿಗೆ ನಿಮ್ಮ ಮನೆಯ ದೇವರನ್ನು ನೆನಪಿಸಿಕೊಂಡು ನಮಸ್ಕರಿಸಿ ಕೊಂಡು ನಂತರ ಗ್ರಾಮದೇವತೆ ಅನ್ನು ನೀವು ನೆನೆಸಿಕೊಳ್ಳಬೇಕಾಗುತ್ತದೆ,
ಹೌದು ಒಂದು ಊರು ಅಂದ ಮೇಲೆ ಅಲ್ಲಿ ಒಂದು ಗ್ರಾಮದೇವತೆಯನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ. ಆ ದೇವತೆಯನ್ನು ನೆನೆದುಕೊಂಡು ನಂತರ ಕೊನೆಯಲ್ಲಿ ಶ್ರೀರಾಮನನ್ನು ನೆನಪಿಸಿಕೊಳ್ಳಿ ಹೌದು ಶ್ರೀರಾಮ ನಾಮ ಸ್ಮರಣೆಯನ್ನು ಮಾಡುತ್ತ ನೀವು ಮನೆಯನ್ನು ಬಿಟ್ಟರೆ ಇದರಿಂದ ರಾಮನ ಅನುಗ್ರಹದೊಂದಿಗೆ ಆಂಜನೇಯನ ಆಶೀರ್ವಾದವನ್ನು ಕೂಡ ನೀವು ಪಡೆದುಕೊಳ್ಳಬಹುದು
ಇದರಿಂದ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತದೆ ನೀವು ಹೋದಂತಹ ಕೆಲಸಗಳು ಸಂಪೂರ್ಣವಾಗಿ ಸಾಗುತ್ತದೆ ಅಂತ ಹೇಳಲಾಗುತ್ತದೆ. ಹಾಗಾದರೆ ಇನ್ನು ಮುಂದಿನ ದಿನಗಳಲ್ಲಿ ನೀವು ಆಚೆ ಹೊರಟಾಗ ನಿಮ್ಮ ಮನಸ್ಸಿನಲ್ಲಿ, ಈ ದೇವರುಗಳ ನಾಮಸ್ಮರಣೆಯನ್ನು ಮಾಡಿಕೊಂಡು ನಂತರ ಮನೆಯನ್ನು ಬಿಡಿ, ಇದರಿಂದ ನಿಮ್ಮಲ್ಲಿ ಕೂಡ ಒಂದು ಸಕಾರಾತ್ಮಕತೆ ಹೆಚ್ಚುತ್ತದೆ, ನೀವು ಹೋಗುವ ಕೆಲಸ ಕಾರ್ಯಗಳು ನಿರ್ವಿಘ್ನ ಇಲ್ಲದೆ ಸಾಗುತ್ತವೆ.