ಮನೆಯಲ್ಲಿ ಹೆಣುಮಕ್ಕಳು ಈ ರೀತಿಯಾಗಿ ಇದ್ದರೆ ಅಂತಹ ಮನೆಗೆ ಐಶ್ವರ್ಯ ಎನ್ನುವುದು ಪ್ರಾಪ್ತಿಯಾಗುತ್ತದೆ !!!!

20

ಮನೆಯಲ್ಲಿ ಮದುವೆಯಾದ ಸ್ತ್ರೀಯರು ಹೌದು ಮದುವೆಯಾದ ಹೆಣ್ಣು ಮಕ್ಕಳು ಈ ಒಂದು ಪದ್ಧತಿಯನ್ನು ಮನೆಯಲ್ಲಿ ಪಾಲಿಸಲೇಬೇಕಾಗುತ್ತದೆ. ಮನೆಯಲ್ಲಿ ಮದುವೆಯಾದ ಹೆಣ್ಣು ಮಕ್ಕಳಿದ್ದರೆ ಆ ಮನೆಗೆ ಅವರು ಲಕ್ಷ್ಮೀದೇವಿ ಅಂತ ಲಕ್ಷ್ಮೀದೇವಿಯ ಸ್ವರೂಪ ಅಂತ ಹೇಳ್ತಾರೆ

ಇಂತಹ ಹೆಣ್ಣುಮಕ್ಕಳು ಅಂದರೆ ಸುಮಂಗಲಿಯರು ಪಾಲಿಸ ಬೇಕಾಗಿರುವಂತಹ ಕೆಲವೊಂದು ವಿಚಾರಗಳು ಈ ಆಚಾರ ವಿಚಾರಗಳನ್ನು ಹೆಣ್ಣು ಮಕ್ಕಳು ಪಾಲಿಸುತ್ತಾ ಬರುವುದರಿಂದ ಆ ಮನೆಗೆ ಏಳಿಗೆಯಾಗುತ್ತದೆ ಆ ಮನೆಗೆ ಶ್ರೇಷ್ಠ ಅಂತ ಹೇಳಲಾಗಿದೆ.

ಹಾಗಾದರೆ ಹೆಣ್ಣು ಮಕ್ಕಳು ಪಾಲಿಸ ಬೇಕಾಗಿರುವ ಆ ಕೆಲವೊಂದು ವಿಚಾರಗಳೇನು ಆಚಾರ ವಿಚಾರಗಳ ಪದ್ಧತಿಯನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು,

ಇನ್ನು ಮುಂದಿನ ದಿನಗಳಲ್ಲಿ ನೀವು ಮಾಡುತ್ತಿರುವಂತಹ ತಪ್ಪುಗಳನ್ನು ಅರಿತು, ಈ ಒಂದು ವಿಚಾರಗಳನ್ನು ಪಾಲಿಸಿಕೊಂಡು ಬನ್ನಿ ಸಾಕು ನಿಮ್ಮ ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪಕಟಾಕ್ಷ ಲಕ್ಷ್ಮಿದೇವಿ ಅನುಗ್ರಹ ಆಗಲಿದೆ.

ಮೊದಲನೆಯದಾಗಿ ಮನೆಯಲ್ಲಿ ಮದುವೆಯಂತಹ ಸ್ತ್ರೀಯರು ಅಂದರೆ ಸುಮಂಗಲಿಯರು ಹಣೆಗೆ ಬೊಟ್ಟನ್ನು ಇಡಲೇಬೇಕು, ಹೌದು ಯಾಕೆ ಅಂದರೆ ಮನೆಯ ಲಕ್ಷ್ಮಿ ಸ್ವರೂಪವಾದ ಹೆಣ್ಣು ಮಕ್ಕಳು ಯಾವಾಗಲೂ ಹಣೆಗೆ ಕುಂಕುಮವನ್ನು ಇಟ್ಟುಕೊಂಡಿರಬೇಕು, ಸ್ಟಿಕ್ಕರ್ ಅನ್ನು ಇಡುತ್ತಾರೆ ಇದರೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಆದರೂ ಕುಂಕುಮವನ್ನು ಹಣೆಗೆ ಇಟ್ಟಿರುವುದು ಶ್ರೇಷ್ಠವಾಗಿದೆ.

ಎರಡನೆಯದಾಗಿ ತಾಳಿ ಹೌದು ಮದುವೆಯಾದ ಸುಮಂಗಲಿಯರಿಗೆ ಆಸ್ತಿ ಅಂದರೆ, ಈ ತಾಳಿ ಅಂತಾನೇ ಹೇಳ್ತಾರೆ, ಗಂಡನ ಏಳಿಗೆಗಾಗಿ ಗಂಡನ ಸೌಭಾಗ್ಯಕ್ಕಾಗಿ ಹೆಣ್ಣು ಮಕ್ಕಳು ಈ ಮಾಂಗಲ್ಯವನ್ನು ಯಾವಾಗಲೂ ಧರಿಸಿರಲೇಬೇಕು

ಮತ್ತು ಮುತ್ತೈದೆಗೆ ಮುತ್ತುಗಳಾದ ಆ ಐದು ವಸ್ತುಗಳು, ಮದುವೆಯಾದ ಹೆಣ್ಣುಮಕ್ಕಳು ಧರಿಸಲೆ ಬೇಕು, ಅವುಗಳು ಕುಂಕುಮ ಅರಿಶಿಣ ಬಳೆಗಳು ಮಾಂಗಲ್ಯ ಹಣೆಗೆ ಬೊಟ್ಟು ಮೂಗಿಗೆ ಮೂಗು ಬಟ್ಟು ಮತ್ತು ಕಾಲಿಗೆ ಗೆಜ್ಜೆ ಇವುಗಳನ್ನು ಧರಿಸಲೇ ಬೇಕು ಅಂತ ಶಾಸ್ತ್ರಗಳು ಹೇಳುತ್ತದೆ.

ಹೆಣ್ಣು ಮಕ್ಕಳು ಅದರಲ್ಲಿಯೂ ಮದುವೆಯಾದ ಹೆಣ್ಣು ಮಕ್ಕಳು ಬಳೆಗಳನ್ನು ತೊಟ್ಟು ಕೊಳ್ಳುವುದರಿಂದ ಅವರು ಯಾವಾಗಲೂ ಉತ್ಸಾಹದಿಂದ ಇರುತ್ತಾರೆ ಅಂತ ಹೇಳ್ತಾರೆ ಆದ ಕಾರಣ ಮದುವೆಯಾದ ಹೆಣ್ಣುಮಕ್ಕಳು ಬಳೆಗಳನ್ನು ಇಟ್ಟುಕೊಳ್ಳಲೇಬೇಕು ಮತ್ತು ಕಾಲಿಗೆ ಗೆಜ್ಜೆಯನ್ನು ಹಾಕಬೇಕು.

ಈ ಸ್ತ್ರೀಯರು ತಮ್ಮ ದೇಹದ ಮೇಲೆ ಒಂದು ಚಿನ್ನದ ಒಡವೆಯನ್ನು ಹಾಕಿಕೊಂಡಿರಬೇಕು ಯಾಕೆಂದರೆ ಒಡವೆಯನ್ನು ಲಕ್ಷ್ಮೀ ಸ್ವರೂಪ ಅಂತ ಹೇಳ್ತಾರೆ ಈ ಒಡವೆಯನ್ನು ಮದುವೆಯಾದ ಸ್ತ್ರೀಯರು ಉಂಗುರವಾಗಿ ಅಥವಾ ಕಿವಿಗೆ ಓಲೆ ಮಾಂಗಲ್ಯ ಅಥವಾ ಮೂಗು ಬಟ್ಟು ಯಾವುದೆ ವಸ್ತುಗಳನ್ನಾಗಲಿ ಒಂದು ಚಿನ್ನದ ಒಡವೆಯನ್ನು ಮೈಮೇಲೆ ಹಾಕಿಕೊಂಡಿರಬೇಕು.

ಕೆಲವರು ಚಿನ್ನದಿಂದ ಮಾಡಿರುವಂತಹ ಗೆಜ್ಜೆಯನ್ನು ಮತ್ತು ಕಾಲುಂಗುರವನ್ನು ಧರಿಸುತ್ತಾರೆ ಆದರೆ ಶಾಸ್ತ್ರವೂ ಹೇಳುವ ಹಾಗೆ ನಮ್ಮ ಸೊಂಟದಿಂದ ಕೆಳಗೆ ಯಾವುದೇ ಕಾರಣಕ್ಕೂ ಚಿನ್ನದ ಲೋಹವನ್ನು ಬಳಸಿ ಒಡವೆಯನ್ನು ಹಾಕಿಕೊಳ್ಳಬಾರದು ಇದು ಶ್ರೇಷ್ಠವಲ್ಲ

ಲಕ್ಷ್ಮಿದೇವಿಗೆ ಅಗೌರವ ಸೂಚಿಸಿದಂತೆ ಮತ್ತು ಈ ಹೊಕ್ಕಳ ಬಳ್ಳಿ, ಹೊಕ್ಕಳ ಬಳ್ಳಿ ಒಂದು ಜೀವಿಗೆ ಜೀವವನ್ನು ನೀಡುವುದರಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ, ಈ ಹೊಕ್ಕಳು ಬಳ್ಳಿಯನ್ನು ಕಾಣಿಸಿಕೊಳ್ಳುವ ಹಾಗೆ ಬಟ್ಟೆಯನ್ನು ಧರಿಸಬಾರದು, ಈ ಹೊಕ್ಕಳ ಬಳ್ಳಿ ಮುಚ್ಚುವ ರೀತಿಯಲ್ಲಿ ಬಟ್ಟೆಯನ್ನು ಧರಿಸಬೇಕು.

ಈ ರೀತಿಯಾಗಿ ಮದುವೆಯಾದ ಹೆಣ್ಣು ಮಕ್ಕಳು ಮನೆಯಲ್ಲಿ ಪಾಲಿಸ ಬೇಕಾಗಿರುವಂತಹ ಕೆಲವೊಂದು ವಿಚಾರಗಳ ಗಿದ್ದು ಮತ್ತೊಂದು ವಿಚಾರ ಇದೆ ಅದೇನೆಂದರೆ ಮನೆಯಲ್ಲಿ ಹೆಣ್ಣುಮಕ್ಕಳು ಅಂತ ಅಲ್ಲ ಯಾರೆ ಆಗಿರಲಿ ನೆಲವನ್ನು ಉಜ್ಜಿಕೊಂಡು ಓಡಾಡಬಾರದು, ಕಾಲುಗಳನ್ನು ಎತ್ತಿ ನಡೆಯಬೇಕು ಇಲ್ಲವಾದಲ್ಲಿ ಆ ಮನೆಯಲ್ಲಿ ಸಾಲಬಾಧೆ ಹೆಚ್ಚುತ್ತದೆ ಅನ್ನೋ ಒಂದು ನಂಬಿಕೆ ಇದೆ.

LEAVE A REPLY

Please enter your comment!
Please enter your name here