Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಪೂಜೆ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ !!!!

ಮನೆಯಲ್ಲಿ ಪೂಜೆ ಮಾಡುವುದು ಒಂದು ಒಳ್ಳೆಯ ಕೆಲಸ ಪ್ರತಿದಿನ ಮನೆಯಲ್ಲಿ ದೀಪಾರಾಧನೆ ಯನ್ನು ಮಾಡುವುದರಿಂದ ಆರತಿಯನ್ನು ಬೆಳಗುವುದರಿಂದ ಮನೆಯಲ್ಲಿ ಒಂದು ಸಕಾರಾತ್ಮಕ ಶಕ್ತಿ ಪಸರಿಸಿರುತ್ತದೆ.

ಹಾಗೆ ಪೂಜೆ ಮಾಡುವಂತಹ ಸಮಯದಲ್ಲಿಯೂ ಕೂಡ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡು ನಾವು ಅವುಗಳನ್ನು ಪಾಲಿಸಬೇಕಾಗುತ್ತದೆ, ಹಾಗಾದರೆ ಪೂಜೆ ಮಾಡುವಂತಹ ಸಮಯದಲ್ಲಿ ಪಾಲಿಸ ಬೇಕಾಗಿರುವಂತಹ ಆ ಕೆಲವೊಂದು ವಿಚಾರಗಳು ಯಾವುವು ಪೂಜೆ ಮಾಡಿದ ನಂತರ ಮಾಡಬೇಕಾಗಿರುವ ಕೆಲಸಗಳೇನು ಎಂಬುದನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ.

ಮನೆಯಲ್ಲಿ ನಾವು ಮಾಡುವಂತಹ ಸಣ್ಣ ತಪ್ಪು ಗಳಿಂದಲೂ ಕೂಡ ನಾವು ದೊಡ್ಡ ದೊಡ್ಡ ಸಮಸ್ಯೆಗಳನ್ನು ತೊಂದರೆಗಳನ್ನು ಎದುರಿಸುವಂತಹ ಸಂದರ್ಭ ಎದುರಾಗಬಹುದು,

ಆದಕಾರಣ ಚಿಕ್ಕಪುಟ್ಟ ವಿಚಾರಗಳನ್ನು ಕೂಡ ಗಮನದಲ್ಲಿ ಇಟ್ಟುಕೊಂಡು ಆ ಒಂದು ವಿಚಾರದಲ್ಲಿ ಸರಿಯಾದ ದಾರಿಯಲ್ಲಿ ಮುನ್ನಡೆಯಿರಿ ಆಗ ನಿಮ್ಮ ಜೀವನದಲ್ಲಿ ಚಿಕ್ಕಪುಟ್ಟ ತಪ್ಪುಗಳಿಂದ ಎದುರಾಗುವ ಕಷ್ಟಗಳು ಬರುವುದೇ ಇಲ್ಲ.

ಮನೆ ಎಂದ ಮೇಲೆ ಅಡುಗೆ ಮಾಡುವುದಕ್ಕಾಗಿ ಸ್ನಾನ ಮಾಡುವುದಕ್ಕಾಗಿ ಮತ್ತು ಮಲಗುವುದಕ್ಕೆ ಪ್ರತ್ಯೇಕ ಕೋಣೆಗಳನ್ನು ಕೆಲವರು ಮಾಡಿಕೊಂಡಿರುತ್ತಾರೆ, ಆದರೆ ಇನ್ನು ಕೆಲವರಿಗೆ ಇಂತಹ ಒಂದು ಸುವ್ಯವಸ್ಥೆ ಇರುವುದಿಲ್ಲ ಅಂತವರು, ಮನೆಯಲ್ಲಿ ದೇವರನ್ನು ಅಡುಗೆ ಮನೆಯಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಅಥವಾ ಹಾಲ್ ನಲ್ಲಿ ಪ್ರತಿಷ್ಠಾಪನೆ ಮಾಡಿರುತ್ತಾರೆ,

ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡಬೇಡಿ ಮತ್ತು ಹಾಲ್ ನಲ್ಲಿ ಅಥವಾ ಅಡುಗೆ ಮನೆಯಲ್ಲಿ ದೇವರ ಮನೆಯನ್ನು ಮಾಡಿಕೊಂಡಿರುವವರು ಪ್ರತ್ಯೇಕವಾಗಿ ಅದಕ್ಕೆ ಅಂತಾನೇ ಸ್ವಲ್ಪ ಸ್ಥಳವನ್ನು ಬಿಡುವುದು ಉತ್ತಮ.

ಮನೆಯಲ್ಲಿ ದೀಪ ಹಚ್ಚುವಂತಹ ಸಮಯದಲ್ಲಿ ಎಚ್ಚರದಿಂದ ಇರಬೇಕು ಮತ್ತು ಬಿಳಿಯ ಬಣ್ಣದ ಬತ್ತಿಯನ್ನು ಬಳಸಬೇಕು ಹಾಗೆ ಎಣ್ಣೆಯನ್ನು ಸರಿಯಾಗಿ ಹಾಕಿ ಬತ್ತಿಯನ್ನು ದೀಪಕ್ಕೆ ಸರಿಯಾಗಿ ಜೋಡಿಸಿ, ದೀಪವನ್ನು ಅಂಟಿಸ ಬೇಕಾಗುತ್ತದೆ, ಯಾಕೆ ಎಂದರೆ ಪೂಜೆ ಮಾಡುವಂತಹ ಸಮಯದಲ್ಲಿ, ದೀಪ ಅರುವುದು ಅಷ್ಟೊಂದು ಪ್ರಶಸ್ತವಲ್ಲ ಎಂಬ ಕಾರಣಕ್ಕಾಗಿ.

ಪೂಜೆ ಮಾಡುವ ಸಮಯದಲ್ಲಿ ಪೂಜೆ ಮಾಡುತ್ತಿರುವಂತಹ ವ್ಯಕ್ತಿ ಅಕ್ಷಿ ಮಾಡಿದರೆ ಮತ್ತೊಮ್ಮೆ ಕೈ ಕಾಲುಗಳನ್ನು ಸ್ವಚ್ಛ ಪಡಿಸಿಕೊಂಡು ಮುಖವನ್ನು ತೊಳೆದುಕೊಂಡು ನಂತರ ಪೂಜೆಯನ್ನು ಮುಂದುವರಿಸಬೇಕು, ಅದರ ಬದಲು ಹಾಗೇ ಪೂಜೆಯನ್ನು ಮುಂದುವರಿಸಬಾರದು.

ದೇವರ ಕೋಣೆಯಲ್ಲಿ ಯಾವ ದೇವರ ಪಟವನ್ನು ಅಥವಾ ಮೂರ್ತಿಯನ್ನು ಮರೆತರೂ ಮನೆಯಲ್ಲಿ ವಿಘ್ನೇಶ್ವರನ ಪಟವನ್ನು ಅಥವಾ ಮೂರ್ತಿಯನ್ನು ಇರಿಸಲು ಮರೆಯಬಾರದು, ವಿಘ್ನೇಶ್ವರನ ಮೂರ್ತಿಯನ್ನು ಇಡುವುದಾದರೆ ಎರಡಕ್ಕಿಂತ ಹೆಚ್ಚು ಪಟವನ್ನಾಗಲಿ ಅಥವಾ ಮೂರ್ತಿಯನ್ನಾಗಲಿ ಇಡಬಾರದು.

ಕೆಲವರು ಮನೆಯನ್ನು ಕಟ್ಟಿಸುವಾಗ ದೇವರ ಕೋಣೆಯ ಮೇಲೆ ಶೆಲ್ಫ್ ಅನ್ನು ಕಟ್ಟಿಸುತ್ತಾರೆ ಈ ದೇವರ ಕೋಣೆಯ ಮೇಲೆ ಬೇಡದೆ ಇರುವ ಸಾಮಾನುಗಳನ್ನು ಅಥವಾ ವಸ್ತುಗಳನ್ನು ಇಡಬಾರದು, ಇದರಿಂದ ಮನೆಗೆ ಶ್ರೇಯಸ್ಸಲ್ಲ ಜೊತೆಗೆ ದೇವರ ಕೋಣೆಯೊಳಗೆ ಕೂಡ ಬೇಡದೆ ಇರುವ ವಸ್ತುಗಳನ್ನು ಇಡಬಾರದು ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಪಸರಿಸಬಹುದು.

ದೇವರಿಗಾಗಿ ಸಮರ್ಪಿಸುವ ಹೂವುಗಳನ್ನು ಪ್ರತಿದಿನ ಸ್ವಚ್ಛಪಡಿಸಬೇಕು, ಒಣಗಿದ ಹೂವುಗಳನ್ನು ದೇವರಿಗೆ ಸಮರ್ಪಿಸಬಾರದು ಮತ್ತು ದೇವರಿಗೆ ಹೂವುಗಳನ್ನು ಸಮರ್ಪಿಸುವ ಮುನ್ನ ಆ ಹೂವುಗಳನ್ನು ಶುಭ್ರವಾಗಿಸಿ ನಂತರ ಆ ಹೂವನ್ನು ದೇವರಿಗೆ ಸಮರ್ಪಿಸಬೇಕು.

ಕೆಲವರು ಶಿವಲಿಂಗವನ್ನು ಪೂಜಿಸುತ್ತಾರೆ ಅಂತವರು ಮನೆಯಲ್ಲಿ ಶಿವಲಿಂಗವನ್ನು ಇಡುವುದಾದರೆ ಹೆಬ್ಬೆರಳಿನ ಗಾತ್ರದ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು ಇಲ್ಲವಾದಲ್ಲಿ ಅವನಿಗೆ ಶ್ರೇಯಸ್ ಸಾಗುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

ದೇವರ ಪೂಜೆಯಲ್ಲಿ ಬಳಸುವಂತಹ ಅಕ್ಕಿಯನ್ನು ಕೂಡ ದೇವರಿಗೆ ಸಮರ್ಪಿಸುವ ಮುನ್ನ ಅದನ್ನು ಸ್ವಚ್ಛಪಡಿಸಬೇಕು ಮತ್ತು ದೇವರಿಗಾಗಿ ಬಳಸುವ ದೇವರ ಪೂಜೆಗಾಗಿ ಬಳಸುವ, ಈ ಅಕ್ಕಿಯಲ್ಲಿ ಅರಿಶಿಣವನ್ನು ಬೆರೆಸಿದರೂ ಒಳ್ಳೆಯದು ಎಂದು ಕೂಡ ಹೇಳಲಾಗಿದೆ.

Leave a Reply

Your email address will not be published. Required fields are marked *