ಪ್ರತಿಯೊಂದು ಮಹಿಳೆಯರಿಗೂ ಕೂಡ ಪ್ರತಿನಿತ್ಯ ಅಡುಗೆ ಮಾಡುವ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಕೂಡ ಈ ಚಳಿಗಾಲದಲ್ಲಂತೂ ಒಂದಲ್ಲ ಒಂದು ರೀತಿಯಾದಂತ ಸಮಸ್ಯೆಗಳು ನಮ್ಮನ್ನು ಕಾಡುತ್ತಿರುತ್ತವೆ ಎಂದರೆ ತಪ್ಪಾಗುವುದಿಲ್ಲ
ಒಂದು ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲಿ ಮತ್ತೊಂದು ಸಮಸ್ಯೆಗೆ ಆರಂಭವಾಗಿರುತ್ತದೆ ಅಂಥದ್ದೇ ಒಂದು ಸಮಸ್ಯೆಯೆಂದರೆ ಮೊಸರು ಹೆಪ್ಪಾಗದೆ ಇರುವುದು. ಚಳಿಗಾಲದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿದೆ ರಾತ್ರಿ ಹೆಪ್ಪು ಹಾಕಿದರೂ ಕೂಡ ಬೆಳಿಗ್ಗೆ ಹತ್ತು ಗಂಟೆಯಾದರೂ ಕೂಡ ಹಾಲು ಹೆಪ್ಪಾಗಿರುವುದಿಲ್ಲ
ಅಂದರೆ ಹಾಲು ಮೊಸರಾಗದೆ ಇದ್ದರೆ ಏನು ಮಾಡಬೇಕೆಂದು ತೋಚದೆ ಹಲವರು ಅಂಗಡಿಯಿಂದ ಅಂದರೆ ಹೊರಗಡೆಯಿಂದ ಮೊಸರನ್ನ ತರುವ ಅಭ್ಯಾಸವನ್ನ ಮಾಡಿಕೊಂಡಿರುತ್ತಾರೆ. ಆದರೆ ಈ ದಿನ ನಾನು ನಿಮಗೆ ಸುಲಭವಾಗಿ ಹಾಲು ಮೊಸರು ಮಾಡುವ ವಿಧಾನವನ್ನ ಹೇಳಿಕೊಡುತ್ತೇನೆ.
ನಿಮ್ಮ ಮನೆಯಲ್ಲಿ ಬೆಳಿಗ್ಗೆ ಹತ್ತು ಗಂಟೆಯಾದರೂ ಕೂಡ ಹಾಲು ಮೊಸರಾಗದೆ ಇದ್ದರೆ ಕೇವಲ ಹತ್ತು ನಿಮಿಷದಲ್ಲೇ ಹಾಲು ಮೊಸರು ಮಾಡುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ಇದು ಸರಳವಾದಂತಹ ವಿಧಾನವಾಗಿದೆ
ಮತ್ತು ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಮೊಸರು ಹೆಪ್ಪಾಗದೆ ಇದ್ದರೆ ಈ ವಿಧಾನವನ್ನು ಬಳಸಬಹುದು. ಈ ವಿಧಾನವನ್ನು ನೀವು ಬಳಸಿ ಮತ್ತು ಬೇರೆ ಮಹಿಳೆಯರಿಗೂ ಕೂಡ ಈ ರೀತಿ ವಿದ್ಯಮಾನಗಳನ್ನು ತಿಳಿಸುವ ಪ್ರಯತ್ನ ಮಾಡಿ.
ಮನೆಯಲ್ಲಿ ಎಷ್ಟೊಂದು ಜನರಿಗೆ ಮೊಸರು ತಿನ್ನದೆ ಊಟವೇ ಪೂರ್ಣ ಆಗುವುದಿಲ್ಲ ಎಂದು ಕೂಡ ಇರುತ್ತದೆ ಬೆಳಿಗ್ಗೆ ಎದ್ದರೆ ಈ ಚಳಿಗಾಲದಲ್ಲಿ ಮೊಸರಿಲ್ಲದೆ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ ಅದಕ್ಕೆ ಹೆಪ್ಪು ಹಾಕುವ ವಿಧಾನದ ಬಗ್ಗೆ ಈ ದಿನ ನಾನು ನಿಮಗೆ ಸುಲಭವಾದ ಮಾಹಿತಿಯನ್ನು ನೀಡುತ್ತೇನೆ.
ಹಾಲನ್ನ ಮೊದಲು ಚೆನ್ನಾಗಿ ಕಾಯಿಸಬೇಕು ನಿಮಗೆ ಗಟ್ಟಿ ಮೊಸರು ಬೇಕೆಂದರೆ ಗಟ್ಟಿಯಾಗಿರುವ ಹಾಲನ್ನ ತೆಗೆದುಕೊಳ್ಳಬೇಕು ಹಾಲನ್ನು ಚೆನ್ನಾಗಿ ಕಾಯಿಸಬೇಕು ಅದು ಸಣ್ಣ ಉರಿಯಲ್ಲಿ ಕಾಯಿಸಬೇಕು ಒಂದು ಲೋಟ ಹಾಲು ಮುಕ್ಕಾಲು ಲೋಟ ಬರಬೇಕು ಆ ಮಟ್ಟಿಗೆ ಹಾಲನ್ನು ಚೆನ್ನಾಗಿ ಕಾಯಿಸಬೇಕು
ಅದಾದ ನಂತರ ಹಾಲನ್ನು ಹತ್ತರಿಂದ ಹದಿನೈದು ನಿಮಿಷ ತಣ್ಣಗಾಗಲು ಬಿಡಬೇಕು ಮತ್ತು ನೀವು ಮನೆಯಲ್ಲಿ ತಯಾರಿಸಿಕೊಂಡ ಮೊಸರಿಗೆ ಎರಡು ಚಮಚ ಹಾಲನ್ನು ಹಾಕಿ ಹೆಪ್ಪನ್ನ ರೆಡಿ ಮಾಡಿಕೊಳ್ಳಬೇಕು ಅದಾದ ನಂತರ ಒಂದು ಸಣ್ಣ ಪಾತ್ರೆಗೆ ನೀರು ಕಾಯಿಸಿ ರೆಡಿಯಾಗಿಟ್ಟು ಕೊಂಡಿರುವ ಹಾಲಿಗೆ ಹೆಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಡಬೇಕು.
ನೀವು ಬೆಳಿಗ್ಗೆ ಎದ್ದು ನೋಡಿದರೆ ಅಲ್ಲವೇ ಆಗ ನೀವು ಏನು ಮಾಡಬೇಕು ಎಂದರೆ ಒಂದು ಪಾತ್ರೆಗೆ ಒಂದು ಅಗಲವಾದ ಪಾತ್ರೆಗೆ ಸ್ವಲ್ಪ ಅಂದರೆ ಮೊಸರು ಪಾತ್ರೆ ಮುಳುಗಬಾರದು ಆ ಪಾತ್ರೆಯಲ್ಲಿ ಮುಕ್ಕಾಲಷ್ಟು ನೀರು ಬರುವ ಹಾಗೆ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಚೆನ್ನಾಗಿ ಕಾಯಿಸಬೇಕು
ನೀರು ತೊಂಬತ್ತು%ನಷ್ಟು ಕಾದರೆ ಸಾಕು ಕುದಿಯುವ ಅವಶ್ಯಕತೆಯಿಲ್ಲ ಅದರಲ್ಲಿ ಮೊಸರಿನ ಪಾತ್ರೆಯನ್ನು ಇಡಬೇಕು 5 ನಿಮಿಷಗಳ ಕಾಲ ಆ ಪಾತ್ರೆಯನ್ನು ನೀರಿನ ಒಳಕ್ಕೆ ಇಡಬೇಕು ಅದಾದ ಎರಡು ನಿಮಿಷ ಹಾರಲು ಬಿಟ್ಟು, ತೆಗೆದು ನೋಡಿ ಮೊಸರು ಕಪ್ಪಾಗಿರುತ್ತದೆ ಮತ್ತು ಹಳಿಯಾಗಿ ಬಂದಿರುತ್ತದೆ
ಇನ್ನೂ ಗಟ್ಟಿಯಾಗಬೇಕು ಎಂದರೆ ಐದು ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟರೆ ಸಾಕು ಮೊಸರು ಹೆಪ್ಪಾಗುತ್ತದೆ ನೀವು ಈ ವಿಧಾನವನ್ನು ಒಮ್ಮೆ ಬಳಸಿ ನೋಡಿ ಸುಲಭವಾದ ವಿಧಾನವಾಗಿದೆ ಮತ್ತು ಇದರ ಪರಿಣಾಮ ಕೂಡ ಚೆನ್ನಾಗಿಯೇ ಇದೆ ಹೊರಗಡೆಯಿಂದ ಮೊಸರು ತರುವ ಬದಲು ಮನೆಯಲ್ಲಿಯೇ ಸುಲಭವಾಗಿ ಮೊಸರನ್ನ ತಯಾರಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ ಧನ್ಯವಾದ.