Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನೆಯಲ್ಲಿ ನಾಯಿಯನ್ನು ಸಾಕಿದರೆ ಇಷ್ಟೆಲ್ಲಾ ಉಪಯೋಗವಿದೆಯಂತೆ .. ಅಷ್ಟಕ್ಕೂ ನೀವು ಈ ಬಣ್ಣದ ನಾಯಿಯನ್ನು ಏನಾದ್ರು ಸಾಕಿದರೆ ಸಾಕು ನಿಮ್ಮ ಮನೆಯಲ್ಲಿ ಉತ್ತಮ ಬದಲಾವಣೆಗಳು ಆಗುತ್ತವೆ ….!!!

ನಾಯಿಗಳನ್ನು ಮನೆಯಲ್ಲಿ ಸಾಕುವುದರಿಂದ ನಿಮಗೆ ಏನೇನು ಲಾಭ ಮತ್ತು ಯಾವ ಬಣ್ಣದ ನಾಯಿಯನ್ನು ಸಾಕುವುದರಿಂದ ನಿಮಗೆ ಒಳ್ಳೆಯದು ಎಂದು ಈ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ.ಸ್ನೇಹಿತರೆ ಮನುಷ್ಯರಿಗಿಂತ ಒಂದೊಂದು ಸಲ ಪ್ರಾಣಿಗಳೇ ಮುಖ್ಯ ಅನಿಸುತ್ತೆ ಈಗಿನ ಕೆಟ್ಟ ಯುಗದಲ್ಲಿ ಮುಖವಾಡ ಧರಿಸಿಕೊಂಡು ಇರುವ ಜನರಿಗಿಂತ ಯಾವುದೇ ಕಲ್ಮಶವಿಲ್ಲದ ಪ್ರಾಣಿಗಳನ್ನು ಸಾಕುವುದು ಒಳ್ಳೆಯದು. ಪ್ರಾಣಿಗಳಲ್ಲಿ ನಿಯತ್ತಿಗೆ ಹೆಸರಿರುವ ಪ್ರಾಣಿ ಎಂದರೆ ಅದು ನಾಯಿ. ಮನೆಗಳಲ್ಲಿ ನಾಯಿಯನ್ನು ಸಾಕುವುದು ಒಳ್ಳೆಯದು ಹೌದೋ ಅಲ್ಲವೋ ಎಂಬುದನ್ನು ನಾನು ಈ ಮಾಹಿತಿಯಲ್ಲಿ ತಿಳಿಸುತ್ತೇನೆ

ಮತ್ತು ಯಾವ ಬಣ್ಣದ ನಾಯಿಗಳು ಯಾರಿಗೆ ಲಾಭವನ್ನು ತಂದುಕೊಡುತ್ತವೆ ಎಂಬುದನ್ನು ಸಹ ತಿಳಿಸುತ್ತೇನೆ. ಸ್ನೇಹಿತರೆ ನಾಯಿಯನ್ನು ಪ್ರೀತಿಸುವವರು ಹೃದಯದಿಂದ ತುಂಬಾ ಒಳ್ಳೆಯವರು ಮತ್ತು ಇವರು ತುಂಬಾ ನೆಮ್ಮದಿ ಹಾಗೂ ಸಮಾಧಾನವನ್ನು ಅವರ ಜೀವನದಲ್ಲಿ ಪಡೆಯುತ್ತಾರೆ. ನಾಯಿಯ ಶ್ರೀ ನಾರಾಯಣನ ಸ್ವರೂಪ ಎಂದು ಕೂಡ ಹೇಳುತ್ತಾರೆ ಹಾಗೆ ಭೈರವನಾಥ ದೇವರಿಗೆ ನಾಯಿಯು ವಾಹನವಾಗಿದೆ. ಯಾವುದಾದರೂ ಭೈರವನಾಥ ದೇವಸ್ಥಾನದಲ್ಲಿ ನಾಯಿಯ ಮೇಲೆ ಕೂತಿರುವ ಭೈರವ ದೇವರನ್ನು ನೋಡಿರುತ್ತೀರಾ.

ಯಾರ ಮನೆಯಲ್ಲಿ ದೆವ್ವಗಳ ಕಾಟ ಹಾಗೂ ನಕಾರಾತ್ಮಕ ಶಕ್ತಿಗಳ ಕಾಟ ಇರುತ್ತದೆ ಅವರು ಕಪ್ಪು ಬಣ್ಣದ ನಾಯಿಯನ್ನು ಸಾಕುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಗಳೆಲ್ಲ ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ಕಪ್ಪು ಬಣ್ಣದ ನಾಯಿಯು ಶನಿದೇವನ ಪ್ರತೀಕವಾಗಿದೆ ಮತ್ತು ಕಪ್ಪು ಜೊತೆ ಕಂದು ಬಣ್ಣ ಇರುವ ನಾಯಿಯೂ ರಾಹುವಿನ ಪ್ರತೀಕವಾಗಿದೆ ಹಾಗೆಯೇ ಪೂರ್ತಿಯಾಗಿ ಕಂದು ಬಣ್ಣ ಹೊಂದಿರುವ ನಾಯಿ ಕೇತುವಿನ ಪ್ರತೀಕವಾಗಿದೆ. ಯಾರಿಗಾದರೂ ಶನಿ ರಾಹು ಕೇತು ಗ್ರಹಗಳ ಕಾಟವಿದ್ದರೆ ಇಂತಹ ನಾಯಿಗಳನ್ನು ಸಾಕುವುದರಿಂದ ಅವರ ಗ್ರಹಗತಿಗಳು ಚೆನ್ನಾಗಿರುತ್ತವೆ.

ಪ್ರಾಣಿಗಳು ಸಹ ದೆವ್ವ ಭೂತಗಳನ್ನು ನೋಡುತ್ತವೆ ಮತ್ತು ಅವುಗಳಿಗೆ ಮುನ್ಸೂಚನೆಗಳು ಕೂಡ ಸಿಗುತ್ತವೆ ಎಂದು ಹೇಳುತ್ತಾರೆ. ನಾಯಿಗಳು ಒಂದು ಸಲ ಅವುಗಳನ್ನು ಪ್ರೀತಿಸಿದರೆ ನಿಮ್ಮನ್ನು ಕೂಡ ನಂಬುತ್ತವೆ ಮತ್ತು ಪ್ರೀತಿಸುತ್ತವೆ. ಮನೆಯಲ್ಲಿ ನಿಯತ್ತಿನಿಂದ ಇರುತ್ತದೆ ಒಂದು ಹೊತ್ತು ಊಟ ಹಾಕಿದರೆ ನಾಯಿ ಕೂಡ ನಿಯತ್ತಿನಿಂದ ಇರುತ್ತದೆ ಆದರೆ ಮನುಷ್ಯನು ಸ್ವಾರ್ಥಕ್ಕಾಗಿ ಮತ್ತು ಲಾಭಕ್ಕಾಗಿ ಎಂತೆಂತಹ ತಪ್ಪುಗಳನ್ನು ಮಾಡಲು ಸಿದ್ಧವಾಗಿರುತ್ತಾರೆ. ಹಾಗಾದರೆ ಸ್ನೇಹಿತರೆ ಮನೆಯಲ್ಲಿ ನಾಯಿಯನ್ನು ಸಾಕುವುದು ಒಳ್ಳೆಯದು ಶಾಸ್ತ್ರದ ಪ್ರಕಾರ ಕೂಡ ನಾಯಿಯನ್ನು ಸಾಕುವುದು ತುಂಬಾ ಒಳ್ಳೆಯದು.

ನಿಮ್ಮ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾದರೆ ಶನಿಕಾಟ ನಿಮಗಿದ್ದರೆ ಕಪ್ಪು ಬಣ್ಣದ ನಾಯಿಯನ್ನು ಸಾಕಿ ದಿನಾಲು ಅದಕ್ಕೆ ಹಾಲನ್ನು ಹಾಕಬೇಕು ಹಾಲು ಅಂದರೆ ನೀವು ಕುಡಿಯಲು ತಯಾರಿಸಿದ ಹಾಲು ಅದರ ಜೊತೆಗೆ ಕೇಸರಿ ಬಣ್ಣವನ್ನು ಹಾಕಿ ಅರ್ಧದಷ್ಟು ನೀವು ಕುಡಿದು ಇನ್ನು ಅರ್ಧ ಹಾಲನ್ನು ಮಲಗುವಾಗ ತಲೆ ಇಟ್ಟುಕೊಂಡು ಮಲಗಬೇಕು ಮತ್ತು ಈ ಅರ್ಧ ಹಾಲನ್ನು ನಾಯಿಗೆ ಹಾಕಬೇಕು ಹೀಗೆ ಮಾಡುವುದರಿಂದ ಶನಿ ದೇವರ ಕಾಟ ಹೋಗುತ್ತದೆ ಮತ್ತು ಮನೆಯಲ್ಲಿರುವ ಸಮಸ್ಯೆಗಳು ಕೂಡ ಮಾಯವಾಗುತ್ತವೆ.

ಮನೆಯಲ್ಲಿ ಸಂತಾನದ ಸಮಸ್ಯೆಯನ್ನು ಹೊಂದಿರುವವರು ಕಪ್ಪು ಬಣ್ಣದ ನಾಯಿಯನ್ನು ಹಾಕಿ ಅದಕ್ಕೆ ದಿನಾಲು ಮೊಸರು ಮತ್ತು ಸಕ್ಕರೆಯನ್ನು ಕುಡಿಸಬೇಕು ಹೀಗೆ ಮಾಡುವುದರಿಂದ ಅವರ ಸಮಸ್ಯೆಗಳು ದೂರವಾಗುವವು. ಇನ್ನೂ ಒಂದು ಪರಿಹಾರವೆಂದರೆ ನಾಯಿಗೆ ಅಂಗಡಿಯಿಂದ ಉಂಡೆಯನ್ನು ತರಿಸಿ ಅದರಲ್ಲಿ ಲವಂಗವನ್ನು ಹಾಕಿ ಶಿವನಿಗೆ ಎಡೆಮಾಡಿ ಲವಂಗವನ್ನು ಸುಟ್ಟು ಉಂಡೆಯನ್ನು ನಾಯಿಗೆ ಹಾಕಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಯಾವುದೇ ತರಹದ ತೊಂದರೆಗಳು ಮತ್ತು ವ್ಯವಹಾರದ ತೊಂದರೆಗಳು ಆಗುವುದಿಲ್ಲ.

ಇನ್ನು ಈ ಕಪ್ಪು ಬಣ್ಣದ ನಾಯಿಯು ಮನೆಯಲ್ಲಿ ಮಗುವನ್ನು ಹಾಕಿದರೆ ಮನೆಗೆ ಊಟದ ಕೊರತೆಯಿರುವುದಿಲ್ಲ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಾಗಾದ್ರೆ ಸ್ನೇಹಿತರೆ ನಾಯಿಯನ್ನು ಸಾಕುವುದು ತುಂಬಾ ಒಳ್ಳೆಯದು ಮತ್ತು ನಿಮ್ಮ ಮನೆ ನೆಮ್ಮದಿಗೆ ನಾಯಿಯೂ ಕೂಡ ಕಾರಣವಾಗಿರುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ