Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಚಿಕ್ಕ ಹೆಣ್ಣುಮಕ್ಕಳಿದ್ದರೆ ಅವರಿಗೆ ಈ ರೀತಿಯಾಗಿ ಈ ಸಮಯದಲ್ಲಿ ಬೈಯಬೇಡಿ .. ಮುಂದೆ ನಿಮ್ಮ ಶಾಪವೇ ಅವರಿಗೆ ತಟ್ಟುತ್ತದೆ !!!

ಮನೆಯಲ್ಲಿ ಹಿರಿಯರು ಅಂದರೆ ತಂದೆ ತಾಯಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಅವಾಚ್ಯ ಪದಗಳನ್ನು ಇಂತಹ ಸಮಯದಲ್ಲಿ ಬಳಸಬಾರದು ಅದರಲ್ಲಿಯೂ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಕೆಟ್ಟ ಪದಗಳನ್ನು ಬಳಸಲೇಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.ಹಾಗಾದರೆ ಬನ್ನಿ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಹಿರಿಯರು ಯಾವ ಸಮಯದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳನ್ನಾಗಿ ಗಂಡು ಮಕ್ಕಳನ್ನಾಗಿ ಬೈಯಬಾರದು ಈ ಒಂದು ವಿಚಾರವನ್ನು ಕುರಿತು ಶಾಸ್ತ್ರಗಳು ಎನನ್ನೂ ತಿಳಿಸಿ ಹೇಳುತ್ತಿದೆ ಎಂಬುದನ್ನು ತಿಳಿಯೋಣ.

ಮಕ್ಕಳಿಗೆ ತಾಯಿಯೇ ಮೊದಲ ದೈವ ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿನಂತೆ, ತಾಯಿ ಗುರುವಿನ ಸಮಾನ ಅದರಲ್ಲಿಯೂ ಮೊದಲನೆಯ ಗುರು ತಾಯಿಯಾಗಿರುತ್ತಾಳೆ.ಈ ತಾಯಿಯು ತಮ್ಮ ಮಕ್ಕಳಿಗೆ ಸಾಮಾನ್ಯವಾಗಿ ಬಯ್ಯುವುದಿಲ್ಲ ತನಗೆ ಎಷ್ಟೇ ಕಷ್ಟ ಆದರೂ ತನ್ನ ಮಕ್ಕಳು ಸುಖದಿಂದ ಸಂತೋಷದಿಂದ ಇರಬೇಕು ಅನ್ನುವ ಜೀವ ಅದು. ಆದರೆ ಕೆಲವೊಂದು ಸಮಯದಲ್ಲಿ ಹಿರಿಯರು ಅಥವಾ ತಂದೆ ತಾಯಿ ಮಕ್ಕಳಿಗೆ ಬೈದು ಬಿಡುತ್ತಾರೆ.

ಈ ರೀತಿ ಅವಾಚ್ಯ ಪದಗಳನ್ನು ಬಳಸಿ ಅಥವಾ ಕೆಲವೊಂದು ಪದಗಳನ್ನು ಹೇಳಿ ಮಕ್ಕಳಿಗೆ ಬೈಯಬಾರದಂತೆ, ಇದರಿಂದ ಮಕ್ಕಳ ಜೀವನದಲ್ಲಿ ಅದು ಬಹಳ ಕೆಟ್ಟದಾಗಿ ಪರಿಣಮಿಸುತ್ತದೆ ಎಂದು ಹೇಳಲಾಗಿದೆ.ಯಾವುದೇ ಕಾರಣಕ್ಕೂ ಸಂಜೆಯ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಅವಾಚ್ಯ ಪದಗಳಿಂದ ಬೈಯಬಾರದು, ಅಥವಾ ಹೆಣ್ಣು ಮಕ್ಕಳ ಕೂದಲನ್ನು ಹಿಡಿದು ಎಳೆಯಬಾರದು, ಇದರಿಂದ ಆ ಮನೆಗೆ ದಾರಿದ್ರ್ಯವ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಹಾಗೆ ಈ ಸಂಜೆ ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚರಿಸುತ್ತಿರುತ್ತಾರೆ ನಾವು ಹಾಕುವಂತಹ ಶಾಪವಾಗಿ ನಾವು ಬೈಯುವಂತಹ ಪದಗಳಾಗಲಿ ಅದರಲ್ಲಿಯೂ ಸಂಜೆಯ ಸಮಯದಲ್ಲಿ ಇಂತಹ ಪದಗಳನ್ನು ಹೇಳಿದರೆ ಅಶ್ವಿನಿ ದೇವತೆಗಳು ಅಸ್ತು ಅಂದು ಬಿಡುತ್ತಾರೆ ನಮಗೆ ಅದು ತಿಳಿಯದೆ ಇರಬಹುದು, ಆದರೆ ಸಂಜೆಯ ಸಮಯದಲ್ಲಿ ಹೇಳುವ ಇಂತಹ ಕೆಟ್ಟ ಮಾತುಗಳು ಸತ್ಯವಾಗುವ ಸಾಧ್ಯತೆ ಇರುತ್ತದೆ.ಆದ ಕಾರಣವೇ ಸಂಜೆಯ ಸಮಯದಲ್ಲಿ ದೇವರ ಜಪ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ತಂದೆ ತಾಯಿಯಂದಿರು ಯಾವತ್ತಿಗೂ ಎಂಜಿಲು ಕೈನಿಂದ ಮಕ್ಕಳಿಗೆ ಹೊಡೆಯಬಾರದು ಅಥವಾ ನೀನು ಉದ್ಧಾರವಾಗುವುದಿಲ್ಲ ಹಾಳಾಗುತ್ತೀಯ ಅಂತ ಹೇಳಬಾರದು.

ಯಾಕೆ ಅಂದರೆ ಹೆತ್ತ ತಾಯಿಯೂ ಕೂಡ ಸಾಕ್ಷಾತ್ ದೇವರಿಗೆ ಸಮಾನ ದೇವರು ಹೇಗೆ ಶಾಪವನ್ನು ಕೊಟ್ಟರೆ ಅದು ನಿಜವಾಗುತ್ತದೆಯೋ ಹಾಗೆ ತಂದೆ ತಾಯಿ ಕೂಡ ನೀಡಿದ ಶಾಪ ನಿಜವಾಗುವ ಸಾಧ್ಯತೆ ಇರುತ್ತದೆ.ಆದ ಕಾರಣವೇ ಸಂಜೆ ಸಮಯದಲ್ಲಿ ಯಾವತ್ತಿಗೂ ಅದರಲ್ಲಿಯೂ ದೀಪ ಹಚ್ಚಿದ ಮೇಲೆ ಮನೆಯಲ್ಲಿ ಅವಾಚ್ಯ ಪದಗಳನ್ನು ಬಳಸದಿರಿ ಹಾಗೆ ಮಕ್ಕಳಿಗೆ ಯಾವುದೇ ಕಾರಣಕ್ಕೂ ನಾವು ಈ ಮೇಲೆ ತಿಳಿಸಿದ ಪದಗಳನ್ನು ಬಳಸಿ ಬಯ್ಯಬೇಡಿ, ಇದರಿಂದ ಅವರು ಅವರ ಜೀವನದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ತೊಂದರೆಗಳನ್ನು ಎದುರುಸಬೇಕಾಗುತ್ತದೆ.

ಆದಷ್ಟು ಸಂಜೆಯ ಸಮಯದಲ್ಲಿ ಮನೆಯ ಸದಸ್ಯರು ಒಳ್ಳೆಯ ಮಾತುಗಳನ್ನು ಆಡಿ, ದೇವರ ನಾಮ ಸ್ಮರಣೆ ಮಾಡಿ ಹಾಗೂ ಮನೆಯಲ್ಲಿ ದೇವರ ನಾಮವನ್ನು ಕೇಳುವುದರಿಂದ ದೇವರ ನಾಮವನ್ನು ಜಪಿಸುವುದರಿಂದ ಮನೆಗೂ ಒಳ್ಳೆಯದು ಮನೆಯಲ್ಲಿರುವ ಸದಸ್ಯರಿಗೂ ಕೂಡ ಒಳಿತಾಗುತ್ತದೆ.ಈ ದಿನ ತಿಳಿಸಿದಂತಹ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ, ಹಾಗೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ, ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ