Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಕಸ ಗುಡಿಸುವ ಪೊರಕೆಯನ್ನು ಮನೆಯ ಈ ಜಾಗದಲ್ಲಿ ಇಟ್ಟರೆ ಸಾಕು .. ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ …!!!!

ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೆ ಎಲ್ಲಿ ಮತ್ತು ಹೇಗೆ ಇಟ್ಟರೆ ನಮ್ಮ ಮನೆಗೆ ಲಕ್ಷ್ಮೀದೇವಿ ಆಗಮಿಸುತ್ತಾಳೆ ಎಂದು ತಿಳಿಯಲು ಈ ಮಾಹಿತಿಯನ್ನು ಓದಿ.ಹಾಯ್ ಸ್ನೇಹಿತರೆ ಮನೆಯಲ್ಲಿ ಸ್ವಚ್ಛತೆ ಇದ್ದರೆ ಎಲ್ಲರ ಮನಸ್ಸಿನಲ್ಲಿ ನೆಮ್ಮದಿ ಹಾಗೂ ಮನೆಗೆ ಏನೋ ಒಂದು ಕಳೆ ಇರುತ್ತದೆ. ಯಾರ ಮನೆ ಅಂದವಾಗಿ ಚೆಂದವಾಗಿ ಸ್ವಚ್ಛವಾಗಿರುತ್ತದೆ ಅವರ ಮನೆಯಲ್ಲಿ ಯಾವಾಗಲೂ ಸಂತೋಷ ನೆಮ್ಮದಿ ಸಮೃದ್ಧಿ ಎಲ್ಲಾ ಇರುತ್ತದೆ. ಯಾರ ಮನೆ ಶುದ್ಧತೆಯಿಂದ ಇರುತ್ತದೆ ಅವರ ಮನೆಗೆ ಲಕ್ಷ್ಮೀದೇವಿಯು ಪಾದಾರ್ಪಣೆ ಮಾಡುತ್ತಾಳೆ. ಹಾಗಾದರೆ ಮನೆಯನ್ನು ಗುಡಿಸಲು ನಮಗೆ ಬೇಕಾದದ್ದು ಪೊರಕೆ. ಪೊರಕೆಯೂ ಕೂಡ ಒಂದು ಶುದ್ಧ ಹಾಗೂ ಸ್ವಚ್ಛ ಮಾಡುವ ಒಂದು ವಸ್ತು ಆಗಿದೆ. ಹಾಗಾದ್ರೆ ಇಂತಹ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಇದನ್ನು ಎಲ್ಲಿ ಇಟ್ಟರೆ ಒಳ್ಳೆಯದು ಎಂದು ಈ ಮಾಹಿತಿಯಲ್ಲಿ ತಿಳಿಯೋಣ. ಪೊರಕೆಗೆ ಕೆಲವೊಂದು ಕಡೆ ಕಸಬರಗಿ ಎಂದು ಕೂಡ ಕರೆಯುತ್ತಾರೆ.

ಪೊರಕೆಯನ್ನು ದರಿದ್ರ ಲಕ್ಷ್ಮಿಯ ಸಂಕೇತ ಎಂದು ಹೇಳುತ್ತಾರೆ ಏಕೆಂದರೆ ಇದಕ್ಕೆ ಒಂದು ಕಥೆ ಇದೆ ದರಿದ್ರಲಕ್ಷ್ಮಿ ಎಂದರೆ ಮಹಾಲಕ್ಷ್ಮಿ ಸಹೋದರಿ ಹಾಗಾಗಿ ಮಹಾಲಕ್ಷ್ಮಿಗೆ ದರಿದ್ರ ಲಕ್ಷ್ಮಿ ಅಥವಾ ಪೊರಕೆ ಎಂದರೆ ತುಂಬಾ ಇಷ್ಟ ಹಾಗೂ ಇದು ಮನೆಯನ್ನು ಶುಭ್ರವಾಗಿಡುತ್ತದೆ ಎಂದು ಮಹಾಲಕ್ಷ್ಮಿಗೆ ಪೊರಕೆ ತುಂಬಾ ಇಷ್ಟ ಆಗುತ್ತದೆ. ದರಿದ್ರ ಲಕ್ಷ್ಮಿಯ ಆಯುಧ ಕಸಬರಿಗೆ ಎಂದು ಹೇಳುತ್ತಾರೆ. ಸ್ನೇಹಿತರೆ ಬೇಕಾದರೆ ಗೂಗಲ್ನಲ್ಲಿ ನೀವು ದರಿದ್ರಲಕ್ಷ್ಮಿ ಎಂದು ಟೈಪ್ ಮಾಡಿ ನೋಡಿದರೆ ಅದು ನಿಮಗೆ ಸಿಗುತ್ತದೆ. ದರಿದ್ರ ಲಕ್ಷ್ಮಿ ಪೊರಕೆಯನ್ನು ಕೈನಲ್ಲಿ ಹಿಡಿದಿರುವ ಫೋಟೋ ಸಿಗುತ್ತದೆ ಪೊರಕೆಯನ್ನು ನೀವು ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಎಂದರೆ ಈಶಾನ್ಯ ದಿಕ್ಕು ಬಿಟ್ಟು ಬೇರೆ ಯಾವುದೇ ದಿಕ್ಕಿನಲ್ಲಿ ನೀವು ಇಡಬಹುದು.

ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ಬರುತ್ತದೆ ಹಾಗಾಗಿ ಪೊರಕೆಯನ್ನು ಈ ದಿಕ್ಕಿನಲ್ಲಿ ಇಡಬಾರದು. ಇನ್ನೂ ಯಾರಿಗೂ ಕಾಣದಂತೆ ಬಾಗಿಲದ ಹಿಂದೆ ಒಂದು ಮೊಳೆಯನ್ನು ಹೊಡೆದು ಅದಕ್ಕೆ ಪೊರಕೆಯನ್ನು ಹಾಕಬೇಕು. ಸ್ನೇಹಿತರೆ ಅತಿಥಿಗಳು ಬಂದಾಗ ಇದನ್ನು ಯಾರಿಗೂ ಕಾಣಿಸಬಾರದು. ಹಾಗೆ ಇದನ್ನು ಯಾರಿಗೂ ಕಾಣದಂತೆ ಇರುವ ಸ್ಥಳದಲ್ಲಿ ಇಡಬೇಕು. ಬಾಗಿಲದ ಮುಂದೆ ಅಥವಾ ಬಾಗಿಲದ ಅದಕ್ಕೆ ಮೊಳೆ ಹೊಡೆದು ಇಡಬಾರದು. ಸ್ನೇಹಿತರೆ ಇನ್ನೂ ಪೊರಕೆಯನ್ನು ಯಾವ ರೀತಿಯಾಗಿ ಬಳಸಬೇಕು ಅಂದರೆ ಯಾವ ದಿಕ್ಕಿನಿಂದ ಕಸ ಗುಡಿಸಬೇಕು ಎಂದು ತಿಳಿಯೋಣ ಯಾವಾಗಲೂ ನಾವು ಈಶಾನ್ಯ ದಿಕ್ಕಿನಿಂದ ಗುಡಿಸಲು ಪ್ರಾರಂಭ ಮಾಡಬೇಕು. ಪೊರಕೆಯನ್ನು ನಾವು ಜೋರಾಗಿ ಬಿಸಾಡಬಾರದು.

ಮನೆಯಲ್ಲಿ ಇದು ಒಂದು ಪೊರಕೆ ಇರದಿದ್ದರೆ ನಮ್ಮ ಮನೆಯಲ್ಲಿ ಆರೋಗ್ಯ ಹಾಗೂ ಸ್ವಚ್ಛತೆ ಇರುವುದಿಲ್ಲ. ಪೊರಕೆಯನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳುತ್ತಾರೆ ಹಾಗಾಗಿ ಇದನ್ನು ಎಲ್ಲೆಂದರಲ್ಲಿ ಬಿಸಾಕುವುದು ಹಾಗೂ ಹೊರಗೆ ಎಸೆಯುವುದನ್ನು ಮಾಡಬಾರದು. ಸ್ನೇಹಿತರೆ ಯಾವುದೇ ಒಂದು ವಸ್ತು ಆಗಲಿ ಅದರಿಂದ ಏನೋ ಒಂದು ಒಳ್ಳೆಯ ಕಾರ್ಯ ಅಥವಾ ಕೆಲಸ ಆಗುತ್ತದೆ ಹಾಗಾಗಿ ಯಾವ ವಸ್ತುಗಳನ್ನು ತುಂಬಾ ಕೆಟ್ಟದಾಗಿ ಉಪಯೋಗಿಸಿಕೊಳ್ಳಬೇಕು ಮನೆಯಲ್ಲಿ ಒಂದು ವಸ್ತು ಇರದಿದ್ದರೆ ಎಷ್ಟು ಕಷ್ಟ ಎಂದು ತಿಳಿದುಕೊಳ್ಳಿ.

ಪ್ರತಿ ಹಬ್ಬಕ್ಕೆ ಒಂದು ಸಲ ನಾವು ಕಸಬರಿಗೆಯಿಂದ ಮನೆಯಲ್ಲ ಸ್ವಚ್ಛ ಮಾಡುತ್ತೇವೆ ಅಂದರೆ ಹಬ್ಬಕ್ಕೆ ಮೊದಲ ತಯಾರಿ ಕಸಬರಿಗೆಯಿಂದ ಆಗುತ್ತದೆ. ಹಾಗಾಗಿ ಇದು ಕೂಡ ಒಂದು ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರಲು ಕಾರಣವಾಗಿದೆ. ಇದು ದರಿದ್ರ ಲಕ್ಷ್ಮಿಯ ಆಯುಧ ಅಷ್ಟೇ ಅಲ್ಲದೆ ನಮ್ಮ ಮನೆಯನ್ನು ಸ್ವಚ್ಛ ಮಾಡುವ ಆಯುಧವಾಗಿದೆ. ಹಾಗಾಗಿ ಇದನ್ನು ಮನೆಯಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ಇಡಬೇಕು ಹಾಗೆ ಈಶಾನ್ಯದಿಕ್ಕಿನಲ್ಲಿ ಇಡಬಾರದು ಸ್ನೇಹಿತರೆ ಹಾಗಾದರೆ ಪೊರಕೆಯ ಬಗ್ಗೆ ವಿಶೇಷವಾದ ಮಾಹಿತಿ ಮತ್ತು ಮಹತ್ವ ತಿಳಿಯಿತು ಎಂದು ನಾನು ಭಾವಿಸುತ್ತೇನೆ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ