ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿ ಬೇಸತ್ತಿದ್ದೀರಾ ಹಾಗಾದ್ರೆ ಹೀಗೆ ಮಾಡಿ ನೋಡಿ ಜನುಮದಲ್ಲಿ ಇಲಿಗಳು ನಿಮ್ಮ ಮನೆಯ ಬಳಿ ಸುಳಿಯಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ತೊಂದರೆಗಳು ಇದ್ದೆ ಇರುತ್ತವೆ .ಹಾಗಾಗಿ ಆ ಸಮಸ್ಯೆಗಳನ್ನು ಮನೆಯಲ್ಲೇ ಇರುವ ಕೆಲವೊಂದು ಮನೆಮದ್ದುಗಳಿಂದ ಪರಿಹಾರ ಮಾಡಿಕೊಳ್ಳುವುದು ನಿಮಗೆ ಗೊತ್ತಿರಬೇಕು ಹಾಗಾಗಿ ಕೆಲವು ಮನೆಮದ್ದು ಗಳನ್ನೂ ನಾವು ನಿಮಗೆ ತಿಳಿಸಿಕೊಡುತ್ತೇವೆ.ಮನೆಯಲ್ಲಿ ಸಾಮಾನ್ಯವಾಗಿ ಇರುವ ಸಮಸ್ಯೆ ಯಾವುದು ಎಂದರೆ ಅದು ಇಲಿಗಳ ಕಾಟ.ಹೌದು ಈ ಒಂದು ಸಮಸ್ಯೆ ಸಾಮಾನ್ಯವಾಗಿ ಎಲ್ಲಾರ ಮನೆಯಲ್ಲಿಯೂ ಇರುವಂತ ಒಂದು ಸಮಸ್ಯೆ .ಈ ಒಂದು ಸಮಸ್ಯೆಗೆ ಮನೆಯಲ್ಲೇ ಇರುವ ಕೆಲವು ಮನೆಮದ್ದುಗಳಿಂದ ನೀವು ಪರಿಹಾರವನ್ನು ಕಂಡುಕೊಳ್ಳಬಹುದು .ಹೌದು ಸ್ನೇಹಿತರೇ ನೀವೇನಾದ್ರು ಈ ರೀತಿಯಾಗಿ ಮಾಡಿದರೆ ಸಾಕು ನಿಮ್ಮ ಮನೆಯ ಬಳಿ ಇಲಿಗಳು ಹತ್ತಿರ ಸುಳಿಯುವುದಿಲ್ಲ .ಹಾಗಾದ್ರೆ ಆ ಒಂದು ಮನೆಮದ್ದು ಯಾವುದು ಎನ್ನುವುದನ್ನು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡುತ್ತೇನೆ .

ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದರೆ ಅದನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಹೇಗೆ ಮನೆಯಲ್ಲಿ ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ, ಈ ಇಲಿಗಳನ್ನು ಮನೆಯಿಂದ ಆಚೆ ಓಡಿಸುವುದು ಅನ್ನೋ ಒಂದು ಮಾಹಿತಿಯನ್ನು ಪಡೆದುಕೊಳ್ಳೋಣ. ನಿಮಗೂ ಕೂಡ ಈ ಒಂದು ಮಾಹಿತಿ ಉಪಯುಕ್ತವಾಗಿದ್ದಲ್ಲಿ ಸಂಪೂರ್ಣ ಲೇಖನವನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ, ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಇಲಿಗಳು ಸಾಮಾನ್ಯವಾಗಿ ಮನೆಯಲ್ಲಿ ಓಡಾಡಿದರೆ ಇದರಿಂದ ಯಾವುದಾದರೂ ಒಂದು ಅನಾರೋಗ್ಯ ಸಮಸ್ಯೆಗಳು ಅಥವಾ ಸೋಂಕು ಹೀಗೆ ತೊಂದರೆಗಳು ಆಗೆ ಆಗುತ್ತದೆ. ಆದ ಕಾರಣ ಇಲಿಗಳು ಮನೆಯಲ್ಲಿ ಇದ್ದರೆ, ಅದನ್ನು ನಿರ್ಲಕ್ಷಿಸದೆ ಕೂಡಲೆ ಅದಕ್ಕೆ ತಕ್ಕ ಅದಕ್ಕೆ ಬೇಕಾಗಿರುವಂತಹ ಪರಿಹಾರಗಳನ್ನು ಮಾಡಿಕೊಳ್ಳಿ. ಇಲಿಗಳನ್ನು ಮನೆಯಿಂದ ಆಚೆ ಓಡಿಸಿ. ಮಕ್ಕಳಿದ್ದ ಮನೆಯಲ್ಲಿ ಅಂತೂ ಈ ಇಲಿಗಳು ಇದ್ದರೆ ಬಹಳ ಎಚ್ಚರವನ್ನು ವಹಿಸುವುದು ಉತ್ತಮ.ಇಲಿಗಳನ್ನು ಓಡಿಸುವುದಕ್ಕಾಗಿ ಮನೆಯಲ್ಲಿ ಮಾಡಬಹುದಾದ ಮೊದಲನೆಯ ಪರಿಹಾರ ಇದಕ್ಕೆ ಬೇಕಾಗಿರುವುದು ಪ್ಲಾಸ್ಟರ್ ಆಫ್ ಪ್ಯಾರಿಸ್. ಇದು ಮಾರುಕಟ್ಟೆಯಲ್ಲಿ ದೊರೆಯುತ್ತದೆ ಮತ್ತು ಕೋಕೋ ಪೌಡರ್ ಈ ಎರಡು ಮಿಶ್ರಣವನ್ನು ಪೇಸ್ಟ್ ಮಾಡಿ. ಇಲಿಗಳು ಓಡಾಡುವ ಜಾಗಗಳಲ್ಲಿ ಇಡಬೇಕು ಇದರಿಂದ ಇಲಿಗಳು ಆಂತಹ ಒಂದು ಜಾಗಗಳಿಗೆ ಬರುವುದಿಲ್ಲ ಮನೆ ಬಿಟ್ಟು ಆಚೆ ಹೋಗ್ತಾವೆ.

ಎರಡನೆಯದಾಗಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಹೌದು ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ ಅಂದರೆ ನಿಮ್ಮ ಮನೆಯಲ್ಲಿ ಈರುಳ್ಳಿ ಇದ್ದರೆ ಅದನ್ನು ಸಣ್ಣದಾಗಿ ಕತ್ತರಿಸಿ ಇಲಿಗಳು ಓಡಾಡುವ ಜಾಗದಲ್ಲಿ ಇಡಿ ಅಥವಾ ಬೆಳ್ಳುಳ್ಳಿ ಅನ್ನಾದರೂ ಕತ್ತರಿಸಿ ಇಲಿಗಳು ಓಡಾಡುವ ಜಾಗದಲ್ಲಿ ಹಾಕಿ ಬನ್ನಿ. ಇದರಿಂದ ಎರಡೂ ಪದಾರ್ಥಗಳ ಘಾಟದ ವಾಸನೆಗೆ, ಇಲಿಗಳು ಅಂತಹ ಒಂದು ಜಾಗಗಳಲ್ಲಿ ಬರುವುದಿಲ್ಲ ಹಾಗೆಯೇ ಎರಡು ದಿನಗಳಿಗೊಮ್ಮೆ ಈ ಈರುಳ್ಳಿಯನ್ನು ಬದಲಾಯಿಸುತ್ತಾ ಇರಿ.

ಪೆಪ್ಪರ್ಮಿಂಟ್ ಆಯಿಲ್ ಇದು ಗ್ರಂಥಿಕೆ ಅಂಗಡಿಯಲ್ಲಿ ದೊರೆಯುತ್ತದೆ ಇದನ್ನು ತಂದು ಇದರಲ್ಲಿ ಸುಮಾರು ಹತ್ತಿಯ ಉಂಡೆಗಳನ್ನು ನೆನೆಸಿಡಿ. ನಂತರ ಇಲಿಗಳು ಓಡಾಡುವ ಜಾಗದಲ್ಲಿ ಇಲಿಗಳ ಗೂಡ ಬಳಿ ಇಡುವುದರಿಂದ, ಇದರ ವಾಸನೆಗೆ ಇಲಿಗಳು ಬರೋದೆ ಇಲ್ಲ.ಬೇಕಿಂಗ್ ಸೋಡಾವನ್ನು ಪೀನಟ್ ಬಟರ್ ನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಉಂಡೆ ಮಾಡಿ ಇಲಿಗಳು ಓಡಾಡುವ ಜಾಗದಲ್ಲಿ ಇರಿಸಬೇಕು ಇದನ್ನು ಇಲಿಗಳು ತಿಂದು ಇಲಿಗಳು ಸತ್ತು ಹೋಗುತ್ತದೆ. ಕೊನೆಯದಾಗಿ ಹಾಟ್ ಪೆಪ್ಪರ್ ಫ್ಲೇಕ್ಸ್ ಇದನ್ನು ಇಲಿಗಳು ಓಡಾಡುವ ಜಾಗದಲ್ಲಿ ಸಿಂಪಡಿಸುವುದರಿಂದ, ಇದರ ಘಾಟದ ವಾಸನೆಗೆ ಹಿಡಿಗಳು ಬರೋದೇ ಇಲ್ಲ ಮನೆ ಬಿಟ್ಟು ಆಚೆ ಹೋಗ್ತಾವೆ.ಈ ರೀತಿಯಾಗಿ ಕೆಲವೊಂದು ಮನೆ ಮದ್ದುಗಳನ್ನು ಮಾಡಿಕೊಳ್ಳುವ ಮುಖಾಂತರ ಇಲಿಗಳನ್ನು ನೈಸರ್ಗಿಕವಾಗಿ ಮನೆಯಿಂದ ಆಚೆ ಓಡಿಸಬಹುದು ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಮ್ಮ ಈ ಮಾಹಿತಿಗೆ ಲೈಕ್ ಕೊಡಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *