Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಪೊರಕೆಯಿಂದ ಓಡಿಸಬಹುದು … ಹೇಗೆ ಅಂತ ತಿಳ್ಕೊಬೇಕಾ ಹಾಗಾದ್ರೆ ಈ ಮಾಹಿತಿ ಓದಿ …!!!

ಪೊರಕೆಯನ್ನು ಬಳಸಿ ನಕಾರಾತ್ಮಕ ಶಕ್ತಿಯನ್ನು ಹೇಗೆ ಮನೆಯಿಂದ ಕಳಿಸುವುದು ಎಂದು ತಿಳಿಯಲು ಈ ಒಂದು ಮಾಹಿತಿ ಓದಿ.ಹಾಯ್ ಸ್ನೇಹಿತರೆ ಪೊರಕೆಯನ್ನು ಸಾಮಾನ್ಯವಾಗಿ ನಾವು ಕಸವನ್ನು ಗುಡಿಸಲು ಉಪಯೋಗ ಮಾಡುತ್ತೇವೆ. ಆದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಗಳನ್ನು ಕೂಡ ಪೊರಕೆ ದೂರಮಾಡುತ್ತದೆ. ಸ್ನೇಹಿತರೇ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ನೀವು ಮಾಡುವ ಯಾವುದೇ ಕೆಲಸವೂ ನನಗೆ ಯಶಸ್ಸನ್ನು ತರುವುದಿಲ್ಲ ನಿಮ್ಮ ಮನೆಯಲ್ಲಿ ಕಲಹಗಳು ಮೇಲಿಂದ ಮೇಲೆ ಬರುತ್ತಾ ಇರುತ್ತವೆ ಮನೆಯಲ್ಲಿ ಬರೀ ಅಶಾಂತಿ ವಾತಾವರಣ ತುಂಬಿರುತ್ತದೆ. ಶುಭ ಕಾರ್ಯಕ್ರಮಗಳು ಕೂಡ ಮುಂದೂಡುತ್ತವೆ. ಇನ್ನು ಆರೋಗ್ಯದ ಸಮಸ್ಯೆಗಳು ಮನೆಯಲ್ಲಿ ಇರುವ ಎಲ್ಲಾ ಸದಸ್ಯರನ್ನು ಕಾಡುತ್ತದೆ.

ಹಾಗಾದರೆ ಇಂತಹ ಕಷ್ಟಗಳಿಗೆ ಪರಿಹಾರ ಏನು ಎಂದು ನೀವು ಯೋಚಿಸುತ್ತಿದ್ದರೆ ಈ ಒಂದು ಉಪಾಯವನ್ನು ಮಾಡಿ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿದಾಗ ನಮ್ಮಲ್ಲಿ ಸಕಾರಾತ್ಮಕ ಶಕ್ತಿಗಳು ಕಡಿಮೆಯಾಗುತ್ತದೆ. ಪೊರಕೆ ದೇವಿ ಆದ ಲಕ್ಷ್ಮಿಯ ಸಂಕೇತ ಆಗಿದೆ ನಾವು ಕಸಬರಿಗೆಯನ್ನು ಎಷ್ಟು ಚೆನ್ನಾಗಿ ಇಡುತ್ತೇವೆ ಅಷ್ಟು ನಮ್ಮ ಮೇಲೆ ಲಕ್ಷ್ಮೀದೇವಿ ಪ್ರಭಾವ ಬೀರುತ್ತಾಳೆ. ದೇವಿ ಲಕ್ಷ್ಮಿಯ ಆಶೀರ್ವಾದ ನಮಗೆ ಇದ್ದರೆ ನಾವು ಎಲ್ಲ ಸಮಸ್ಯೆಗಳನ್ನು ಎದುರಿಸಬಹುದು. ಲಕ್ಷ್ಮೀದೇವಿಯ ಆಶೀರ್ವಾದ ನಮ್ಮ ಮೇಲೆ ಇರಬೇಕೆಂದರೆ ನಾವು ಕಸ ಹೊಡೆದ ಮೇಲೆ ಒಂದು ಕಡೆ ಚೆನ್ನಾಗಿ ಪೊರಕೆಯನ್ನು ಮೇಲೆ ಎತ್ತಿ ಇಡಬೇಕು. ಮನೆಯಲ್ಲಿ ನಾವು ಬಳಸುವ ಯಾವುದೇ ವಸ್ತುಗಳ ಆದರೂ ಅದಕ್ಕೆ ಒಂದು ಸ್ಥಳ ಅಂತ ನಿಗದಿ ಮಾಡಬೇಕು

ಎಷ್ಟು ನಾವು ಮನೆಯನ್ನು ಅಲಂಕಾರ ಮಾಡಿ ಸ್ವಚ್ಛತೆಯಿಂದ ಇಟ್ಟುಕೊಳ್ಳುತ್ತೇವೆ ಅಷ್ಟು ಆರೋಗ್ಯ ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ನಮಗೆ ಸಿಗುತ್ತದೆ. ನಕಾರಾತ್ಮಕ ಶಕ್ತಿಯ ಪ್ರಭಾವದಿಂದ ಮನೆಯಲ್ಲಿ ಬರೀ ತೊಂದರೆಗಳು ಸರಮಾಲೆಗಳು ಇರುತ್ತದೆ. ಒಂದು ಸಲ ನಾನು ಹೇಳುವ ಈ ಉಪಾಯವನ್ನು ಮಾಡಿನೋಡಿ ನಿಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗಿ ನಿಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುತ್ತದೆ. ಉಪಾಯವನ್ನು ಮಾಡಲು ಕೇವಲ ಉಪ್ಪು ಮತ್ತು ಲವಂಗಗಳು ಸಾಕು. ಹೆಚ್ಚಾಗಿ ನಕಾರಾತ್ಮಕ ಶಕ್ತಿಗಳು ಮನೆಯ ಮೂಲೆ ಮೂಲೆಗಳಲ್ಲಿ ಇರುತ್ತದೆ. ಹಾಗಾಗಿ ಉಪ್ಪು ಹಾಗೂ ಲವಂಗವನ್ನು ಯಾವುದಾದರೂ ಒಂದು ದಿನ ಬೆಳಿಗ್ಗೆ ಕಸವನ್ನು ಗುಡಿಸಿ ನಾಲ್ಕು ಮೂಲೆಗಳಿಗೂ ಇಡಬೇಕು.

ಮರುದಿನ ಬೆಳಿಗ್ಗೆ ಕಸವನ್ನು ಗುಡಿಸುವಾಗ ಅವುಗಳನ್ನು ಗುಡಿಸಿ ಒಂದು ಕವರ್ನಲ್ಲಿ ಹಾಕಿ ಇಟ್ಟುಕೊಳ್ಳಬೇಕು ಇದರಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗಿ ಅಂದರೆ ಉಪ್ಪು ಮತ್ತು ಲವಂಗ ದಲ್ಲಿ ಬಂದಿರುತ್ತದೆ ಇವುಗಳನ್ನು ನಿಮ್ಮ ಮನೆಯ ಹತ್ತಿರ ಇರುವ ಯಾವುದಾದರೂ ಹರಿವ ನದಿಗೆ ಅಥವಾ ಮೋರೆಗೆ ಕೂಡ ಹಾಕಬಹುದು. ಈ ರೀತಿಯಾಗಿ ನೀವು ಒಂದು ಸಲ ಮಾಡಿ ನಿಮ್ಮ ಮನೆಯಲ್ಲಿ ಜಗಳಗಳು ಕಲಹಗಳು ದೂರವಾಗುತ್ತವೆ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಲಾಭ ಸಿಗುತ್ತದೆ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಇರುವ ಹಾಗೆ ಆಗುತ್ತದೆ. ಪೊರಕೆಯನ್ನು ಉಪಯೋಗಿಸಿದ ಮೇಲೆ ಅವುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಇದರಿಂದ ಲಕ್ಷ್ಮಿದೇವಿ ಕೋಪಗೊಂಡು ಮನೆಯಿಂದ ಹೊರಗೆ ಹೋಗುವ ಸಾಧ್ಯತೆಯಿರುತ್ತದೆ.

ಸ್ನೇಹಿತರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವದಿಂದ ಆಗುವ ತೊಂದರೆಗಳು ನಮ್ಮ ಜೀವನದ ಮೇಲೆ ತುಂಬಾ ಸಮಸ್ಯೆಯನ್ನು ಉಂಟುಮಾಡುತ್ತವೆ ಆದ್ದರಿಂದ ಯಾವುದೇ ನಕಾರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ಇದ್ದರೆ ಅವುಗಳನ್ನು ನೀವು ತಕ್ಷಣ ದೂರ ಮಾಡಿಕೊಳ್ಳಬೇಕು. ನಾನು ಹೇಳುವ ಉಪಾಯವನ್ನು ನೀವು ಮಾಡಿದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನಿಲ್ಲುವುದಿಲ್ಲ. ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ