ಮನೆಯಲ್ಲಿ ಇದ್ದ ಸಿಲಿಂಡರ್ ನಿಂದ ಏನೋ ವಿಚಿತ್ರ ಶಬ್ದ ಎಂದು ತೆಗದು ನೋಡಿದಾಗ ಆಕೆ ಗಾಬರಿಗೊಂಡಿದ್ದಾದರೂ ಯಾಕೆ.

775

ಮಧ್ಯಪ್ರದೇಶಕ್ಕೆ ಸೇರಿದ ಸಣ್ಣ ಊರಿನಲ್ಲಿ ಈ ಒಂದು ಘಟನೆ ನಡೆದಿದೆ ಸತತವಾಗಿ ಶಬ್ದ ಬರುತ್ತಿದ್ದುದನ್ನು ಕಂಡು ಆ ಮನೆಯ ಮಹಿಳೆ ಶಬ್ದ ಎಲ್ಲಿಂದ ಬರುತ್ತಿದೆ ಎಂದು ತಿಳಿಯಲು ಹೊರಟಾಗ ಆಕೆಗೆ ಆ ಶಬ್ದ ಬರುತ್ತಿರುವುದು ಸಿಲಿಂಡರ್ನ ಕೆಳಗಿನಿಂದ ಎಂಬುದು ತಿಳಿಯುತ್ತದೆ .

ಆಗ ಮಹಿಳೆ ಸಿಲಿಂಡರ್ ನ ಕೆಳಗೆ ಏನಿದೆ ಎಂದು ಪರಿಶೀಲಿಸಲು ಹೋದಾಗ ಆಕೆಗೆ ಅಲ್ಲೊಂದು ಗಾಬರಿಯಾದಂತೆ ಒಂದು ಅಚ್ಚರಿ ನಡೆದಿತ್ತು ನಂತರ ಮಹಿಳೆ ಹಚ್ಚಿರುವುದನ್ನು ಕಂಡು ಆ ಮನೆಯ ಅಕ್ಕಪಕ್ಕ ಅವರೆಲ್ಲಾ ಬಂದು ನೋಡಿದಾಗ ಅವರಿಗೂ ಕೂಡ ಒಂದು ಗಾಬರಿ ಅಲ್ಲಿ ಕಾದಿತ್ತು .

ಅದೇನು ಅಂದರೆ ಮಹಿಳೆ ಅಡುಗೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಸಿಲಿಂಡರ್ ನ ಕೆಳಗೆ ಶಬ್ದವೊಂದು ಬರುತ್ತಿತ್ತು ಆಗ ಮಹಿಳೆ ಸಿಲಿಂಡರ್ ಅನ್ನು ಜರುಗಿಸಿ ನೋಡಿದಾಗ ಅಲ್ಲಿ ನಾಗರಹಾವು ಒಂದು ಸಿಲಿಂಡರ್ ನ ಒಳಗೆ ತೂತದಿಂದ ಸಿಲುಕಿ ಹಾಕಿಕೊಂಡಿತ್ತು .

ಸಿಲಿಂಡರ್ ನ ಒಳಗೆ ಸಿಲುಕಿ ಹಾಕಿಕೊಂಡಿದ್ದ ಕಾರಣದಿಂದಾಗಿ ಹಾಗೂ ನೋವಿನಿಂದ ಆ ಶಬ್ದ ಮಾಡುತ್ತಿತ್ತು.

ಹೀಗೆ ಶಬ್ದ ಬರುತ್ತಿದ್ದುದನ್ನು ಕಂಡು ಮಹಿಳೆ ನೋಡಿದ್ದಕ್ಕೆ ಸರಿಯಾಯಿತು ಇಲ್ಲವಾದರೆ ಆ ನಾಗರಹಾವು ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕಾಗಿತ್ತು . ಮಹಿಳೆ ಚೀರಿದ ಕೂಡಲೇ ಆಕೆಯ ಸಹಾಯಕ್ಕೆಂದು ಬಂದ ಅಕ್ಕಪಕ್ಕದವರು ಕೂಡ ಅಲ್ಲಿ ನೆರೆದಿದ್ದರು ನಂತರ ಆ ಜನರು ಕೂಡ ಅಲ್ಲಿ ನಡೆದಿದ್ದ ಘಟನೆಯನ್ನು ನೋಡಿ ಗಾಬರಿಗೊಂಡಿದ್ದರು .

ಅದೇನೇ ಆಗಿರಲಿ ಆ ನಾಗರ ಹಾವು ಸಿಲಿಂಡರ್ ನ ಕೆಳಗೆ ಹೋದದ್ದಾದರೂ ಹೇಗೆ ನಿಜಕ್ಕೂ ಈ ರೀತಿ ಘಟನೆಗಳು ಮನೆಯಲ್ಲಿ ನಡೆದರೆ ಭಯವಾಗುವುದು ಖಂಡಿತ . ನಂತರ ಪ್ರಾಣಿದಯಾ ಸಂಘದವರಿಗೆ ಕರೆ ಮಾಡಿ ಕರೆಸಿ ಅಲ್ಲಿ ಇದ್ದಂತಹ ನಾಗರ ಹಾವನ್ನು ಸಿಲಿಂಡರ್ ನಿಂದ ಹೊರತೆಗೆದು ಸುರಕ್ಷಿತವಾಗಿ ನಾಗರಹಾವನ್ನು ಸುರಕ್ಷಿತವಾದ ಸ್ಥಳಕ್ಕೆ ರವಾನಿಸಲಾಗಿತ್ತು .

ಕೆಲವೊಮ್ಮೆ ಮನೆಗೆ ನಾಗರ ಹಾವುಗಳು ಬರುವುದು ಸಹಜ ಆದರೆ ಈ ನಾಗರ ಹಾವುಗಳು ಬಂದಾಗ ಬೇಗನೆ ತಿಳಿದು ಬಿಡುತ್ತದೆ ಕೇವಲ ನಾಗರಹಾವು ಮಾತ್ರವಲ್ಲ ಮನೆಗೆ ಯಾವುದೇ ರೀತಿಯ ಹಾವುಗಳು ಬಂದರೂ ಅವುಗಳು ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇರುತ್ತದೆ ಅದನ್ನು ನೋಡಿದರೆ ಸಾಕು ಹಾವು ಬಂದಿದೆ ಎಂದು ವಿಚಾರ ತಿಳಿಯುತ್ತದೆ .

ಆದರೆ ಹಾವು ಬಂದು ಸಿಲಿಂಡರ್ ನ ಒಳಗೆ ಹೊಕ್ಕಿ ಸುಮ್ಮನಾದರೆ ಯಾರಿಗೂ ಕೂಡ ಆ ವಿಚಾರವೇ ತಿಳಿಯುವುದಿಲ್ಲ ಮನೆಯಲ್ಲಿ ಮಕ್ಕಳಿದ್ದರೆ ಅದು ಕೂಡ ಕಷ್ಟ ಸಾಧ್ಯ ಯಾವಾಗ ಹಾವು ಕಚ್ಚುತ್ತದೆಯೋ ಅಂತ ಭಯ ಬೇರೆ .ಆದ್ದರಿಂದಲೇ ಮನೆಯೊಳಗೆ ಕೆಲಸ ಮಾಡುತ್ತಿರುವಾಗ ಮಹಿಳೆಯರು ಮನೆಯ ಬಾಗಿಲನ್ನು ಸರಿಯಾಗಿ ಮುಚ್ಚಿಕೊಂಡು ಕೆಲಸ ಮಾಡಬೇಕು ಇಲ್ಲವಾದಲ್ಲಿ ಮನೆಯೊಳಗೆ ಯಾವ ಪ್ರಾಣಿಗಳು ಬಂದರೂ ಗೊತ್ತಾಗುವುದಿಲ್ಲ ಇನ್ನು ಮನುಷ್ಯರು ಬಂದರೂ ಕೂಡ ತಿಳಿಯುವುದಿಲ್ಲ .

ಯಾವುದೇ ಪ್ರಾಣಿಯಾಗಲಿ ನಾವು ಅವುಗಳಿಗೆ ಹಾನಿ ಮಾಡದಿದ್ದರೆ ಅವುಗಳು ಕೂಡ ನಮ್ಮ ತಂಟೆಗೆ ಬರುವುದಿಲ್ಲ ಹಾಗೆಯೇ ನಾವು ಪ್ರಾಣಿಗಳನ್ನು ನೋಡಿ ಗಾಬರಿಗೊಳ್ಳುವುದು ಅವಶ್ಯಕತೆ ಇರುವುದಿಲ್ಲ ಹಾಗೂ ಆ ಪ್ರಾಣಿಗಳನ್ನು ಆಚೆ ಹಾಕಲು ಆ ಪ್ರಾಣಿಗಳಿಗೂ ಕೂಡ ಗಾಬರಿ ಮಾಡಬಾರದು ಆಗಲೇ ಅವುಗಳು ನಮಗೆ ಹಾನಿ ಮಾಡಲು ಮುಂದಾಗುತ್ತವೆ .

ಅದೇನೇ ಇರಲಿ ಈ ಮಾಹಿತಿ ಮುಖಾಂತರ ನಾನು ನಿಮಗೆ ಕೇಳಿಕೊಳ್ಳುವುದೇನೆಂದರೆ ಮನೆಯೊಳಗೆ ಇದ್ದಾಗ ಮನೆಯ ಬಾಗಿಲನ್ನು ಆದಷ್ಟು ಮುಚ್ಚಿಟ್ಟಿರಿ ಇನ್ನು ಮನೆಯನ್ನು ಪ್ರತಿದಿನ ಸ್ವಚ್ಛಗೊಳಿಸಿ ಇದರಿಂದ ಯಾವ ಹುಳ ಹುಪ್ಪಟೆಗಳು ಪ್ರಾಣಿಗಳು ಮನೆಯೊಳಗೆ ಸೇರಿಕೊಳ್ಳುವುದಿಲ್ಲ .

 

LEAVE A REPLY

Please enter your comment!
Please enter your name here