ನಮಸ್ಕಾರ ಪ್ರಿಯ ವೀಕ್ಷಕರೇ ನಿಮಗೆಲ್ಲರಿಗೂ ಗೊತ್ತಿದೆ ಈ ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಹೊಂದಿರುವುದಿಲ್ಲ ಮತ್ತು ಒಂದೇ ತರಹದ ಬುದ್ಧಿಯನ್ನು ಕೂಡ ಪಡೆದುಕೊಂಡಿರುವುದಿಲ್ಲ
ಅದೇ ರೀತಿಯಲ್ಲಿ ಎಲ್ಲರ ಚಿಂತನೆಗಳು ಯೋಚನೆಗಳು ಕೂಡ ಒಂದೇ ಆಗಿರುವುದಿಲ್ಲ. ಹಾಗೆ ಜೀವನದಲ್ಲಿ ಕಷ್ಟಗಳು ಕೂಡ ಎಲ್ಲರಿಗೂ ಒಂದೇ ಸಮನೆ ಬರುವುದಿಲ್ಲ. ಒಬ್ಬರಿಗೆ ಕಷ್ಟ ಬಂದರೆ ಇನ್ನೊಬ್ಬರಿಗೆ ಸುಖ ಇರುತ್ತದೆ,
ಅಥವಾ ಒಬ್ಬರು ಮಾಡಿದ ತಪ್ಪನ್ನು ಮತ್ತೊಬ್ಬರು ಕ್ಷಮಿಸುವುದಿಲ್ಲ ಮತ್ತೊಬ್ಬರು ಸಹಿಸುವುದೂ ಇಲ್ಲ ಅದೇ ರೀತಿಯಲ್ಲಿ ಆ ತಪ್ಪನ್ನು ಅವರೇ ಮಾಡಿದ್ದರೆ ಕ್ಷಮಿಸಿ ಎಂದು ಕೇಳ್ತಾರೆ ಇದೆ ಅಲ್ವಾ ಜೀವನ, ಜನರ ವ್ಯಕ್ತಿತ್ವ.
ಹಾಗಾದರೆ ನಾವು ಇಂದಿನ ಮಾಹಿತಿಯಲ್ಲಿ ತಿಳಿಯೋಣ ಪಾಪ ಪುಣ್ಯ ಕರ್ಮಗಳು ಇವೆಲ್ಲವೂ ಕೂಡ ನಿಜವಾಗಿಯೂ ಇದೆಯಾ ಇದನ್ನು ಈಗಲೂ ಕೂಡ ಜನ ನಂತರ ಅಥವಾ ನಂಬಬೇಕಾ ಅನ್ನುವುದನ್ನು.
ಹೌದು ನಿಮಗೆ ಗೊತ್ತು ಗೊತ್ತಿಲ್ಲವೋ ಶಾಪ ಎಂಬುದು ಇಂದಿಗೂ ಕೂಡ ಇದೆ ಎಂಬುದಕ್ಕೆ ಸತ್ಯ ಎಂಬುದಕ್ಕೆ ನಿದರ್ಶನ ನಮ್ಮ ಮೈಸೂರು ಅರಮನೆಗೆ ನೀಡಿದ ಒಂದು ಹೆಣ್ಣಿನ ಶಾಪ.
ಹೌದು ನಾವು ಪಾಪಗಳನ್ನು ಮಾಡ್ತೇವೆ ನಮಗೆ ತಿಳಿದೋ ತಿಳಿಯದೆಯೋ ಪಾಪವನ್ನು ಮಾಡಿ ಬಿಡ್ತೇವೆ ಆದರೆ ಒಂದಂತೂ ನಿಜ ಶಾಸ್ತ್ರಗಳು ಕೂಡ ಇದನ್ನು ಒಪ್ಪುತ್ತದೆ ಅದೇನೆಂದರೆ ನಾವು ಒಬ್ಬರ ಒಳಿತಿಗಾಗಿ ಒಬ್ಬರ ಉಳಿವಿಗಾಗಿ ಒಬ್ಬರನ್ನು ಖುಷಿ ಪಡಿಸುವುದಕ್ಕಾಗಿ ಮಾಡಿದಂತಹ ಕರ್ಮ ಅಥವಾ ಹೇಳಿದ ಸುಳ್ಳು ಗಳಾಗಲಿ ಯಾವುದು ಕೂಡ ಪಾಪ ಅಲ್ಲ, ಯಾವುದು ಕೂಡ ಕರ್ಮ ಅಲ್ಲ ಅಂತ ಹೇಳಲಾಗುತ್ತದೆ.
ಹೌದು ನೀವು ಗಮನಿಸಿ ನಿಮ್ಮ ತರ ಯೋಚನೆ ಮಾಡುವವರು ನಿಮ್ಮ ಮನೆಯಲ್ಲಿಯೇ ಇರುವುದಿಲ್ಲ ಅಥವಾ ನಿಮ್ಮ ಪಕ್ಕದ ಮನೆಯಲ್ಲಿಯೇ ಇರುವುದಿಲ್ಲ ಹೇಗೆ ನಮ್ಮ ಕೈಗಳಲ್ಲಿ ಬೆರಳುಗಳು ಸಮನಾಗಿ ಇರುವುದಿಲ್ಲವೋ ಜನರು ಕೂಡಾ ಹಾಗೆಯೆ. ಆದ ಕಾರಣ ಒಬ್ಬರ ವ್ಯಕ್ತಿತ್ವ ಮತ್ತೊಬ್ಬರಿಗೆ ಇರುವುದಿಲ್ಲ
ಅದೇ ರೀತಿಯಲ್ಲಿ ಒಬ್ಬರು ಯೋಚನೆ ಮಾಡಿದ ಹಾಗೆ ಇನ್ನೊಬ್ಬರು ಯೋಚನೆ ಮಾಡುವುದಿಲ್ಲ ಒಬ್ಬರು ತಮ್ಮ ಸ್ವಾರ್ಥಕ್ಕಾಗಿ ತಪ್ಪುಗಳನ್ನು ಮಾಡಿದರೆ ಇನ್ನೊಬ್ಬರು ತಮ್ಮ ಸ್ವಾರ್ಥವನ್ನು ಮರೆತು ಬೇರೆಯವರ ಖುಷಿಗಾಗಿ ಬೇರೆಯವರ ಒಳಿತಿಗಾಗಿ ಬೇರೆಯವರ ಏಳಿಗೆಗಾಗಿ ಶ್ರಮಿಸುತ್ತಾರೆ ಅದಕ್ಕಾಗಿ ಸುಳ್ಳನ್ನು ಹೇಳ್ತಾರೆ ಅಥವಾ ಬೇರೆ ಯಾವುದಾದರೂ ಪಾಪಕೃತ್ಯಗಳನ್ನು ಕೂಡ ಮಾಡುತ್ತಾರೆ.
ಆದರೆ ಇನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿಯೇ ಪಾಪಗಳನ್ನು ಮಾಡ್ತಾ ಇರ್ತಾರೆ ಹಾಗಾದರೆ ಯಾವ ಪಾಪ ಕರ್ಮಗಳು ಕರ್ಮ ಅಂತ ಅನಿಸಿಕೊಳ್ಳುತ್ತದೆ ಪಾಪ ಅಂತ ಅನಿಸಿಕೊಳ್ಳುತ್ತದೆ ಅಂದರೆ ಯಾವಾಗ ಹೆಣ್ಣನ್ನು ನಿಂದಿಸುತ್ತೇವೆ ಯಾವಾಗ ಹೆಣ್ಣನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ ಆಗ ಅದು ಪಾಪ ಅನ್ನಿಸಿಕೊಳ್ಳುತ್ತದೆ.
ಆದ ಕಾರಣ ನೀವು ಜೀವನದಲ್ಲಿ ಬೇರೆಯವರ ಖುಷಿಗಾಗಿ ತಪ್ಪು ಮಾಡಿದರೆ ಅದನ್ನು ಶಾಸ್ತ್ರ ಕೂಡ ತಪ್ಪು ಅಂತ ಹೇಳೋದಿಲ್ಲ ಆದರೆ ಯಾವಾಗ ನೀವು ಹೆಣ್ಣನ್ನು ಅಗೌರವದಿಂದ ನೋಡ್ತೀರಾ ಗೌರವವನ್ನು ನೀಡುವುದಿಲ್ಲ
ಆಗ ಅದು ಪಾಪ ಅನಿಸಿಕೊಳ್ಳುತ್ತದೆ ನೀವು ನಿಮ್ಮ ಜೀವನದಲ್ಲಿ ಎಷ್ಟೇ ಪುಣ್ಯದ ಕೆಲಸಗಳನ್ನು ಮಾಡಿದ್ದರೂ, ಹೆಣ್ಣನ್ನು ಗೌರವಿಸುತ್ತಿದ್ದೆ ನಿಮ್ಮ ಪುಣ್ಯ ಸಂಪಾದನೆಯಲ್ಲಿ ನೀರಿನಲ್ಲಿ ವ್ಯರ್ಥ ಮಾಡಿದಂತೆ ಆಗುತ್ತದೆ.
ಈ ದಿನ ತಿಳಿಸಿದಂತಹ ಮಾಹಿತಿಯಲ್ಲಿ ನಿಮಗೆ ಕೆಲವೊಂದು ವಿಚಾರಗಳು ಅರ್ಥವಾಗಿದೆ ಅಂತ ನಾನು ಭಾವಿಸುತ್ತೇನೆ ಸಮಾಜದಲ್ಲಿ ಹೆಣ್ಣನ್ನು ಗೌರವಿಸಿ ಹೆಣ್ಣನ್ನು ರಕ್ಷಿಸಿ ಧನ್ಯವಾದ.