Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮದುವೆ ಆದ ನಂತರ ಹೆಣ್ಣುಮಕ್ಕಳು ಕೆಲವು ವಿಷಯಗಳನ್ನು ತನ್ನ ಗಂಡನಿಂದ ಮುಚ್ಚಿಡುತ್ತಾರಂತೆ ಹಾಗಾದ್ರೆ ಆ ವಿಷಯಗಳು ಯಾವುವು ನಿಮಗೇನಾದ್ರು ಗೊತ್ತ ಗೊತ್ತಿಲ್ಲ ಅಂದ್ರೆ ಈ ಮಾಹಿತಿ ಓದಿ …!!!

ಮಹಿಳೆಯರು ಮದುವೆಯಾದ ಮೇಲೆ ಗಂಡನಿಂದ ಬಚ್ಚಿಡುವ ಮೂರು ಮುಖ್ಯವಾದ ವಿಷಯಗಳು ಯಾವುವು ಎಂದು ಈ ಮಾಹಿತಿಯಲ್ಲಿ ತಿಳಿಯಿರಿ.
ಹಾಯ್ ಸ್ನೇಹಿತರೆ ಒಂದು ಹೆಣ್ಣು ಮನೆಯಲ್ಲಿ ಹುಟ್ಟಿದ ತಕ್ಷಣ ಮನೆಗೆ ಮಹಾಲಕ್ಷ್ಮಿ ಬಂದಳು ಎಂದು ಖುಷಿಯಾಗುತ್ತಾರೆ. ನಂತರ ಮಗಳು ಬೆಳೆದು ದೊಡ್ಡವಳಾದ ಮೇಲೆ ಖರ್ಚು ಹೆಚ್ಚಿತು ಎಂದು ಹೇಳುತ್ತಾರೆ. ಅವಳ ಓದು ಮುಗಿಯುತ್ತಿದ್ದಂತೆ ತಂದೆ-ತಾಯಿಗೆ ಮಗಳನ್ನು ಮದುವೆ ಮಾಡುವ ಆಸೆ ಹಾಗೂ ಕನಸು ಇರುತ್ತದೆ. ಎಲ್ಲಾ ತಂದೆ ತಾಯಿಯರಿಗೂ ಮಕ್ಕಳ ಮದುವೆ ಒಂದು ದೊಡ್ಡ ಕನಸಾಗಿರುತ್ತದೆ. ಮದುವೆಯಾದ ಮೇಲೆ ಹೆಣ್ಣು ಗಂಡನ ಮನೆಯಲ್ಲಿ ಮಹಾಲಕ್ಷ್ಮಿಯಾಗಿ ತನ್ನ ಜವಾಬ್ದಾರಿಯನ್ನು ತೆಗೆದುಕೊಂಡು ಎಲ್ಲರನ್ನೂ ತನ್ನರಂತೆ ಭಾವಿಸಿ ನೋಡಿಕೊಂಡು ಹೋಗುತ್ತಾಳೆ.

ಇಂತಹ ಹೆಣ್ಣುಮಕ್ಕಳು ಸಿಗುವುದು ತುಂಬಾ ಅದೃಷ್ಟ ಅಂದುಕೊಳ್ಳಿ. ಯಾವುದೇ ಹೆಣ್ಣು ಆದರೂ ತನ್ನ ಗಂಡ ಆಗುವವನ ಬಗ್ಗೆ ನೂರಾರು ಕನಸುಗಳನ್ನು ಇಟ್ಟುಕೊಂಡಿರುತ್ತಾಳೆ. ತನ್ನ ಗಂಡ ಅವಳನ್ನು ಬಿಟ್ಟು ಬೇರೆ ಯಾರನ್ನು ಹೆಚ್ಚಾಗಿ ಪ್ರೀತಿಸಬಾರದು ಎಂಬ ಆಸೆ ಕೂಡ ಇಟ್ಟುಕೊಂಡಿರುತ್ತಾಳೆ. ಗಂಡ ಮನೆಯಿಂದ ಹೊರಗೆ ಹೋದಾಗ ಯಾವಾಗ ಬರುತ್ತಾರೆ ಎಂದು ಕಾಯುತ್ತಾಳೆ. ಸದಾ ಗಂಡನಿಗೂಸ್ಕರ ಕಾಯುವುದು ಮತ್ತು ಬಂದಮೇಲೆ ಅವರನ್ನು ಉಪಚರಿಸುವುದು ಅವಳಿಗೆ ಒಂದು ಸಂತೋಷವನ್ನು ತಂದುಕೊಡುತ್ತದೆ. ಗಂಡ-ಹೆಂಡತಿಯ ನಡುವೆ ಅನ್ಯೋನ್ಯವಾದ ಪ್ರೀತಿ ಬಾಂಧವ್ಯ ಇದ್ದಾಗ ಜೀವನದಲ್ಲಿ ಎಷ್ಟೇ ನೋವುಗಳಿದ್ದರು ಅನುಸರಿಸಿಕೊಂಡು ಇರುತ್ತಾರೆ.

ಆದರೆ ಗಂಡನಿಂದಲೇ ಅಥವಾ ಹೆಂಡತಿಯಿಂದಲೇ ಸುಖ ಪ್ರೀತಿ ಶಾಂತಿ ನೆಮ್ಮದಿ ಇಲ್ಲದಾಗ ಇಬ್ಬರ ಜೀವನವೂ ವ್ಯರ್ಥವಾಗುತ್ತದೆ ಇಂತಹ ಕಷ್ಟ ಯಾವ ಗಂಡ-ಹೆಂಡತಿಗೆ ಬರಬಾರದು. ಹಾಗೇ ಎಲ್ಲಿ ಹೆಚ್ಚು ಕೋಪ ಇರುತ್ತದೆಯೋ ಅಷ್ಟೇ ಅವರ ನಡುವೆ ಪ್ರೀತಿ ಕೂಡ ಇರುತ್ತದೆ. ಸ್ನೇಹಿತರೇ ಹಾಗಾದರೆ ಈ ಮಾಹಿತಿಯಲ್ಲಿ ನಾವು ಮುಖ್ಯವಾಗಿ ಹೆಂಡತಿ ಗಂಡನಿಂದ ಬಚ್ಚಿಡುವ ವಿಷಯಗಳು ಯಾವುವು ಎಂಬುದನ್ನು ನೋಡೋಣ. ಎಲ್ಲರೂ ಇದೇ ರೀತಿಯಾಗಿ ಬಚ್ಚಿಡುತ್ತಾರೆ ಎನ್ನುವುದಿಲ್ಲ ಆದರೆ ಬಚ್ಚಿಡುವ ಮಹಿಳೆಯರು ಇಂತಹ ವಿಷಯವನ್ನು ಬಿಚ್ಚಿಡಬಹುದು ಎಂದು ಹೇಳುತ್ತಿದ್ದೇನೆ ಹಾಗಾದರೆ ಅವು ಯಾವುವು ಎಂದು ನೋಡೋಣ ಮೊದಲನೆಯದಾಗಿ ತನ್ನ ಜೀವನದಲ್ಲಿ ಮದುವೆಗೆ ಮುಂಚೆ ಆದ ಕೆಲವೊಂದು ಪ್ರೀತಿಯ ವಿಷಯಗಳನ್ನು ಹಾಗೂ ಯಾರಾದರ ಮೇಲೆ ಆಕರ್ಷಣೆಯಾಗಿದ್ದರೆ ಅಂತಹ ವಿಷಯಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ.

ಏಕೆಂದರೆ ಕೆಲವೊಬ್ಬ ಗಂಡು ಮಕ್ಕಳು ತನ್ನ ಹೆಂಡತಿ ತನ್ನನ್ನು ಮಾತ್ರ ಪ್ರೀತಿಸಬೇಕು ಹಾಗೂ ಅವಳು ಬೇರೆ ಪುರುಷನನ್ನು ಹೆಚ್ಚಾಗಿ ಇಷ್ಟ ಪಡಬಾರದು ಎಂಬ ಭಾವನೆ ಇಟ್ಟುಕೊಂಡಿರುತ್ತಾರೆ ಅಂತವರಿಗೆ ಇಂತಹ ವಿಷಯಗಳು ತಿಳಿದಾಗ ಅವರಿಗೂ ಕೂಡ ಮುಜಗರ ಆಗುವ ಸಾಧ್ಯತೆ ಇರುತ್ತದೆ. ಕೆಲವೊಂದು ಸಲ ಹೀಗೆ ಬಚ್ಚಿಡುವುದು ಒಳ್ಳೆಯದು ಎನಿಸುತ್ತದೆ ಏಕೆಂದರೆ ಆಗಿಹೋದ ಕೆಲವು ಘಟನೆಗಳಿಂದ ಈಗಿರುವ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಅದೇ ರೀತಿಯಾಗಿ ಯಾವುದೇ ಹುಡುಗಿ ಆಗಲಿ ಪ್ರೀತಿಸಿದ ಮೇಲೆ ಅವರನ್ನೇ ಮದುವೆಯಾಗಿ ಬಾಳುವ ಹಾಗೆ ಆಗುತ್ತೆ ಅಂದಾಗ ಮಾತ್ರ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ. ಇದರಿಂದ ಯಾರಿಗೂ ಕೂಡ ಅನ್ಯಾಯ ಆಗುವುದಿಲ್ಲ.

ಇನ್ನು ಎರಡನೆಯ ವಿಷಯ ಯಾವುದೆಂದರೆ ಹುಡುಗಿಗೆ ತನ್ನ ಗಂಡ ತನ್ನನ್ನು ಬಿಟ್ಟು ಬೇರೆ ಹುಡುಗಿಯರನ್ನು ನೋಡಬಾರದು ಹಾಗೂ ಅವರ ಜೊತೆ ಸಲಿಗೆಯಿಂದ ಇರಬಾರದು ಎನ್ನುವ ಆಸೆ ಇರುತ್ತದೆ. ಇದನ್ನು ಇಂಗ್ಲಿಷ್ನಲ್ಲಿ ಪೊಸೆಸ್ಸಿವ್ ಎನ್ನುತ್ತಾರೆ. ಒಂದು ಹೆಣ್ಣು ಏನನ್ನಾದರೂ ಹಂಚಲು ಇಷ್ಟಪಡುತ್ತಾಳೆ ಆದರೆ ಮದುವೆಯಾದ ಗಂಡನನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಅವಳು ನೀವು ಯಾರಾದರೂ ಜೊತೆ ಸಲಿಗೆಯಿಂದ ಮಾತನಾಡಿದರೆ ಸಹಿಸಿಕೊಳ್ಳುವುದಿಲ್ಲ. ಆದರೆ ಇದನ್ನು ಗಂಡನ ಹತ್ತಿರ ಹೇಳಿಕೊಳ್ಳುವುದಿಲ್ಲ. ಸ್ನೇಹಿತರೆ ಹುಡುಗಿ ಆಗಲಿ ಅಥವಾ ಹುಡುಗನಾಗಲಿ ಮದುವೆಯಾದ ಮೇಲೆ ತಮ್ಮ ಪ್ರೀತಿಯನ್ನು ಅವರಿಬ್ಬರ ನಡುವೆ ಮಾತ್ರ ಹಂಚಿಕೊಳ್ಳಬೇಕು ಇದರಿಂದ ಎಲ್ಲರಿಗೂ ಒಳ್ಳೆಯದು.

ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅವರಿಬ್ಬರು ಸಮನಾಗಿ ಜೀವನವನ್ನು ನಡೆಸಿಕೊಂಡು ಹೋಗಬೇಕು. ಇನ್ನು ಮೂರನೇ ವಿಷಯ ಯಾವುದೆಂದರೆ ಹೆಣ್ಣುಮಕ್ಕಳಿಗೆ ತುಂಬಾ ಶಾಪಿಂಗ್ ಮಾಡುವವರು ಇರುತ್ತದೆ. ಗಂಡನಿಗೆ ಗೊತ್ತಿರದ ಹಾಗೆ ಏನನ್ನಾದರೂ ತೆಗೆದುಕೊಂಡು ಮನೆಗೆ ಬಂದು ಅದನ್ನು ಬಚ್ಚಿಟ್ಟು ಇಟ್ಟಿರುತ್ತಾಳೆ. ಏಕೆಂದರೆ ಗಂಡನ ಮೇಲಿನ ಭಯ ಕೂಡ ಇದಕ್ಕೆ ಕಾರಣ. ಹಾಗೆಯೇ ಮಕ್ಕಳಿಗೆ ಹಾಗೂ ಅವಳಿಗೆ ಏನನ್ನಾದರೂ ತೆಗೆದುಕೊಳ್ಳುವ ಆಸಕ್ತಿ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಇರುತ್ತದೆ. ಸ್ನೇಹಿತರೆ ಇದು ಕೂಡ ಹೆಣ್ಣು ಮಕ್ಕಳ ತಪ್ಪಲ್ಲ ಏನೋ ಆಸೆ ಪಟ್ಟಂತೆ ತೆಗೆದುಕೊಳ್ಳುವ ಅವಕಾಶ ಅವಳಿಗೂ ಬೇಕು. ಮನೆಯಲ್ಲಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಮಹಿಳೆಗೆ ಇಷ್ಟು ಸ್ವತಂತ್ರ ಇಲ್ಲದಿದ್ದರೆ ಹೇಗೆ ಹೇಳಿ. ಹಾಗಾದರೆ ಇನ್ನೊಂದು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ತಿಳಿದಿದ್ದೇನೆ. ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ