ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ವಿಶೇಷವಾದಂತಹ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೆ. ವಿಶೇಷವಾದಂತಹ ಮಾಹಿತಿ ಯಾವುದೆಂದರೆ ಮಹಿಳೆಯರಿಗೆ ಸಂಬಂಧಪಟ್ಟಂತಹ ಒಂದು ವಿಶೇಷವಾದಂತಹ ಮಾಹಿತಿ.ಹೌದು ಸಾಮಾನ್ಯವಾಗಿ ಹಿಂದೂ ಶಾಸ್ತ್ರದ ಪ್ರಕಾರ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಕೂಡ ಹಣೆಗೆ ಕುಂಕುಮವನ್ನು ಇರುತ್ತಾರೆ.ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ಒಂದು ಪ್ರಮುಖವಾದಂತಹ ಸ್ಥಾನವನ್ನು ನೀಡಲಾಗಿದೆ.
ಹಾಗೆಯೇ ಶಾಸ್ತ್ರ ಪ್ರಕಾರ ಮದುವೆಯಾದ ಅಂತಹ ಸುಮಂಗಲಿ ಆದಂತಹ ಹೆಣ್ಣುಮಕ್ಕಳು ಕುಂಕುಮವನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಎನ್ನುವ ಪದ್ಧತಿ ಕೂಡ ಇದೆ.ಇದಕ್ಕೆ ಹಲವಾರು ಕಾರಣಗಳು ಕೂಡ ಇವೆ ಸ್ನೇಹಿತರೆ. ಅದಕ್ಕೆ ಕಾರಣಗಳು ಯಾವುವು.ಈ ಒಂದು ಕುಂಕುಮವನ್ನು ಮಹಿಳೆಯರು ಇಟ್ಟುಕೊಂಡ ನಂತರ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ಆರೋಗ್ಯ ಮತ್ತು ಅದೃಷ್ಟ ವಲಿದು ಬರುತ್ತದೆ ಎನ್ನುವುದನ್ನು ಹೇಳಲಾಗುತ್ತದೆ ಸ್ನೇಹಿತರೆ.ಚಿಕ್ಕ ಕೆಲಸ ಯಾವುದು ಎಂದು ಈ ಮಾಹಿತಿಯಲ್ಲಿ ತಿಳಿಯೋಣ ಬನ್ನಿ.
ಹೌದು ಸ್ನೇಹಿತರೆ ಸಾಮಾನ್ಯವಾಗಿ ಮಹಿಳೆಯರು ಬೆಳಗ್ಗೆ ಎದ್ದ ತಕ್ಷಣ ತಮ್ಮ ಕೆಲಸ ಎಲ್ಲವನ್ನೂ ಮುಗಿಸಿ ಕೊಂಡು ಇಲ್ಲವೇ ಸ್ನಾನ ಮಾಡಿಕೊಂಡು ಆಮೇಲೆ ಎಲ್ಲಾ ಕೆಲಸವನ್ನು ಪ್ರಾರಂಭ ಮಾಡುವುದಕ್ಕಿಂತ ಮೊದಲು ಹಣೆಗೆ ಕುಂಕುಮವನ್ನು ಇಟ್ಟುಕೊಂಡು ಈ ಒಂದು ಚಿಕ್ಕ ಮಂತ್ರವನ್ನು ಹೇಳಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖಸಮೃದ್ಧಿ ಸಂಪತ್ತು ಇರುತ್ತದೆ ಎಂದು ನಮ್ಮ ಹಿರಿಯರು ಹೇಳಿಕೊಂಡು ಬಂದಿದ್ದಾರೆ.ಮಹಿಳೆಯರು ಯಾವಾಗಲೂ ಕೂಡ ಹಣೆಗೆ ಬೊಟ್ಟು ಇಡುವಾಗ ಈ ಒಂದು ಮಂತ್ರವನ್ನು ಹೇಳಿದರೆ ನೀವು ಯಾವಾಗಲೂ ಸುಮಂಗಲಿ ಆಗಿರುತೀರಾ ಎನ್ನುವ ನಂಬಿಕೆಯೂ ಇದೆ.
ಅದು ಒಂದು ಮಂತ್ರ ಯಾವುದೆಂದರೆ ಅದು ಗೌರಿಗೆ ಸಮರ್ಪಿಸ ಬಹುದಾದಂತಹ ಒಂದು ರೀತಿಯಾದಂತಹ ಮಂತ್ರ. ಮಂತ್ರ ಯಾವುದೆಂದರೆ “ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಿಕೆ, ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ” .ಈ ಒಂದು ಮಂತ್ರವನ್ನು ಸ್ಮರಣೆ ಮಾಡುತ್ತಾ ನೀವು ಕುಂಕುಮವನ್ನು ಇಟ್ಟುಕೊಂಡಿದ್ದೆ ಅದಲ್ಲಿ ನೀವು ಯಾವಾಗಲೂ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಸದಸ್ಯರಿಗೆ ಯಾವಾಗಲೂ ಕೂಡ ಏನೂ ತೊಂದರೆಯಾಗುವುದಿಲ್ಲ ಸ್ನೇಹಿತರೆ.ಹಣೆ ಮೇಲೆ ಕುಂಕುಮವನ್ನು ಇಟ್ಟುಕೊಳ್ಳಲು ವೈಜ್ಞಾನಿಕ ಕಾರಣಗಳು ಕೂಡ.
ಕಾರಣಗಳೇನೆಂದರೆ ಹಣೆಯ ಮಧ್ಯಭಾಗದಲ್ಲಿ ಕುಂಕುಮವನ್ನು ಇಡುವುದರಿಂದ ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹಲವಾರು ಪ್ರಯೋಜನಗಳಿವೆ ಸ್ನೇಹಿತರೆ.ಹೌದು ಹಣೆಯ ಮಧ್ಯಭಾಗದಲ್ಲಿ ಇಡುವುದರಿಂದ ಹಣೆಯ ಮಧ್ಯಭಾಗವು ಹಲವಾರು ನರಗಳಿಗೆ ಜೋಡಣೆಯಾಗಿರುವ ರಿಂದ ಒಂದು ಕುಂಕುಮವನ್ನು ಇಡುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಕೂಡ ಹೇಳುತ್ತಾರೆ.ಈ ಒಂದು ಕುಂಕುಮವು ಸುಮಂಗಲಿಯರ ಒಂದು ಸಂಕೇತವಾಗಿದೆ. ಆದರೆ ಇಂದಿನ ಫ್ಯಾಷನ್ ಯುಗದಲ್ಲಿ ಕೆಲವರು ಕುಂಕುಮವನ್ನು ಇಡುವುದನ್ನು ಮರೆತುಬಿಟ್ಟಿದ್ದಾರೆ.
ಹಾಗಾಗಿ ಆಧುನಿಕ ಯುಗದಲ್ಲಿ ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತಹ ಕೆಲವು ಪದ್ಧತಿಗಳು ಮರೆತುಹೋಗುತ್ತಿವೆ .ಆದರೆ ನಮ್ಮ ಪೂರ್ವಜರು ಏನೇ ನಡೆಸಿಕೊಂಡು ಬಂದರು ಕೂಡ ಆ ಪದ್ಧತಿಯಲ್ಲಿ ಒಂದು ನಂಬಿಕೆ ಇರುತ್ತದೆ ಹಾಗೂ ಅದಕ್ಕೆ ಒಂದು ಅರ್ಥ ಇರುತ್ತದೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಅವರಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.