Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಣ್ಣಿನ ಪಾತ್ರೆಯಲ್ಲಿ ಮಾಡಿದ ಊಟ ತಿಂದು ನೋಡಿ…. ಅದರಿಂದಾಗುವ ಲಾಭ ಆದರೂ ಏನ್ ಗೊತ್ತಾ.

ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡಿ ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನ ಇದೆ ಎಂಬುದನ್ನು ತಿಳಿದರೆ ನೀವು ಕೂಡ ಸ್ಟೀಲ್ ಪಾತ್ರೆಗಳನ್ನು ಅಥವಾ ಇಂಡಿಯಂ ಪಾತ್ರೆಗಳನ್ನು ಬಳಸುವ ಬದಲು ಇನ್ನು ಮುಂದೆ ಈ ಮಣ್ಣಿನ ಪಾತ್ರೆಯಲ್ಲಿ ಅಡುಗೆಯನ್ನು ತಯಾರಿಸಿಕೊಂಡು ತಿನ್ನುತ್ತೀರಾ.ಹೌದು ಸ್ನೇಹಿತರ ಅಷ್ಟೇ ಅಲ್ಲದೆ ಈ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ತಿನ್ನುವುದರಿಂದ ರುಚಿ ಕೂಡ ಹೆಚ್ಚುತ್ತದೆ .

ಹಾಗೂ ಆರೋಗ್ಯ ಕೂಡ ವೃದ್ಧಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಇಲ್ಲ .ಹಿಂದಿನ ಕಾಲದವರ ಆಹಾರದ ರುಚಿಯನ್ನು ನೀವು ನೋಡಬೇಕಿತ್ತು ಅವರು ಮಾಡುತ್ತಿದ್ದಂತಹ ಆಹಾರದ ವೈಖರಿಯ ಜೊತೆಗೆ ಅವರು ಮಣ್ಣಿನ ಪಾತ್ರೆಯಲ್ಲಿ ಆಹಾರವನ್ನು ತಯಾರಿಸುತ್ತಿದ್ದರೂ ಅದರಲ್ಲಿಯೂ ಹಿಂದಿನ ದಿನಗಳಲ್ಲಿ ಯಾವುದೇ ಸಿಲಿಂಡರ್ ಸ್ಟೌವ್ ಆಗಲಿ ಇರುತ್ತಿರಲಿಲ್ಲ ಸೌದೆ ಒಲೆಯಲ್ಲಿ ಅಡುಗೆಯನ್ನು ಬೇಯಿಸುತ್ತಿದ್ದರು ಇದರಿಂದಾಗಿ ಆಹಾರದ ರುಚಿ ಹೆಚ್ಚುತ್ತಿತ್ತು ಇದರ ಜೊತೆಗೆ ಆರೋಗ್ಯ ಕೂಡ ಚೆನ್ನಾಗಿರುತ್ತಿತ್ತು .

ಆದರೆ ದುರದೃಷ್ಟವಶಾತ್ ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಸ್ಟೀಲ್ ಇಂಡಿಯಂ ಅಲ್ಯುಮಿನಿಯಂ ಇಂತಹ ಲೋಹದ ಪಾತ್ರೆಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ ಆದರೆ ಮಣ್ಣಿನ ಪಾತ್ರೆಗಳ ಮಹತ್ವವನ್ನು ತಿಳಿದರೆ ಅಚ್ಚರಿ ಯಾಗುವುದರ ಜೊತೆಗೆ ಈ ಮಣ್ಣಿನ ಪಾತ್ರೆಯನ್ನು ಅಡುಗೆಯಲ್ಲಿ ಬಳಸಲು ನೀವು ಮುಂದಾಗುತ್ತೀರಾ .

ಅಷ್ಟೇ ಅಲ್ಲದೆ ಈ ಮಣ್ಣಿನ ಮಡಕೆಯನ್ನು ಬಡವರ ತಂಗಳು ಪೆಟ್ಟಿಗೆ ಅಂತ ಕೂಡ ಕರೆಯಲಾಗುತ್ತದೆ ಯಾಕೆ ಎಂದರೆ ನೀರನ್ನು ಇದರಲ್ಲಿ ಶೇಖರಿಸಿ ಇಟ್ಟರೆ ನೀರು ತಂಪಾಗಿರುತ್ತದೆ ಹಾಗೆಯೇ ಬೇಸಿಗೆಕಾಲದಲ್ಲಿ ಈ ನೀರನ್ನು ಸೇವಿಸುವುದರಿಂದ ದೇಹಕ್ಕೆ ತಂಪು ಹಾಗೂ ಫ್ರಿಡ್ಜ್ ನಲ್ಲಿ ಇಟ್ಟು ಕುಡಿಯುವ ನೀರಿನ ಬದಲು ಈ ರೀತಿ ನೀರನ್ನು ಸೇವಿಸುವುದರಿಂದ ಪ್ರಯೋಜನಗಳು ಹೆಚ್ಚು ಹಾಗೂ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡಲು ಇದು ಸಹಕರಿಸುತ್ತದೆ .

ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಅಂದರೆ ಮೊದಲನೆಯದಾಗಿ ಇದರ ರುಚಿ ಹೆಚ್ಚುತ್ತದೆ ಜೊತೆಗೇ ಇದರಲ್ಲಿರುವ ಅನೇಕ ಪೋಷಕಾಂಶಗಳು ಆಹಾರದ ಜೊತೆ ಬೆರೆತು ನಮ್ಮ ದೇಹಕ್ಕೆ ಸೇರಿ ಆರೋಗ್ಯವನ್ನು ಕೂಡ ಉತ್ತಮಗೊಳಿಸುತ್ತದೆ .ಅಷ್ಟೇ ಅಲ್ಲದೆ ಮಣ್ಣಿನ ಪಾತ್ರೆಗಳನ್ನು ಮಣ್ಣುಗಳಿಂದ ತಯಾರಿಸಿದಾಗ ಆ ಮಣ್ಣಿನಲ್ಲಿ ಇರುವಂತಹ ಅನೇಕ ಉತ್ತಮ ಪೋಷಕಾಂಶಗಳು ಉತ್ತಮ ಖನಿಜಾಂಶವು ನಮ್ಮ ದೇಹಕ್ಕೆ ಸೇರುತ್ತದೆ ಹಾಗೂ ಈ ಮಣ್ಣಿನ ಪಾತ್ರೆ ಅಲ್ಲಿ ಅಡುಗೆಯನ್ನು ತಯಾರಿಸುವುದರಿಂದ ಹೆಚ್ಚು ನೀರಿನ ಅವಶ್ಯಕತೆ ಇರುವುದಿಲ್ಲ ಜೊತೆಗೆ ಹೆಚ್ಚು ಎಣ್ಣೆಯ ಅವಶ್ಯಕತೆ ಕೂಡ ಇರುವುದಿಲ್ಲ .

ಆದ್ದರಿಂದ ಮಣ್ಣಿನ ಮಡಿಕೆಯಲ್ಲಿ ಅಡುಗೆಯನ್ನು ಮಾಡಿ ತಿನ್ನುವುದರಿಂದ ನಾನಾ ತರಹದ ಪ್ರಯೋಜನಗಳಿವೆ ಹಾಗೂ ನಮ್ಮ ಪೂರ್ವಜರು ದೀರ್ಘಕಾಲ ಬದುಕುತ್ತಿದ್ದರೂ ಅದರಲ್ಲಿ ಆರೋಗ್ಯವಾಗಿ ಎಂದರೆ ಅದಕ್ಕೆ ಒಂದು ಕಾರಣ ಅಂದರೆ ಅದು ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುತ್ತಿದ್ದದ್ದು ಕೂಡ .ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡಿ ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಬೀ ೧೨ ಕ್ಯಾಲ್ಶಿಯಂ ಪೊಟಾಶಿಯಂ ಐರಾನ್ ಮೆಗ್ನೀಷಿಯಂ ನಂತಹ ಅಂಶಗಳು ಕೂಡ ದೊರೆಯುತ್ತದೆ .

ಇನ್ನು ಈ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ತಿನ್ನುವುದರಿಂದ ಇದು ಆಹಾರದ ಪಿಎಚ್ ಅನ್ನು ಸಮತೋಲದಲ್ಲಿ ಇಡಲು ಸಹಕರಿಸುತ್ತದೆ ಆದ್ದರಿಂದ ನಮಗೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ .ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇನ್ನಾದರೂ ಮಡಿಕೆಯಲ್ಲಿ ಅಡುಗೆ ಮಾಡಿ ತಿನ್ನುವ ಕ್ರಮವನ್ನು ಪಾಲಿಸೋಣ ಶುಭ ದಿನ ಧನ್ಯವಾದಗಳು .

Leave a Reply

Your email address will not be published. Required fields are marked *