Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಕ್ಕಳಿಗೆ ಕಪ್ಪು ದಾರವನ್ನು ಕೈಗೆ ಅಥವಾ ಕಾಲಿಗೆ ಕಟ್ಟುವ ಮುನ್ನ ಶನೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಆ ಒಂದು ದಾರದಿಂದ ಈ ಒಂದು ಕೆಲಸ ಮಾಡಿ ನಿಮ್ಮ ಮಕ್ಕಳಿಗೆ ಯಾವುದೇ ಕಾರಣಕ್ಕೂ ಕೆಟ್ಟ ಕಣ್ಣುಗಳು ಮತ್ತು ದೃಷ್ಟಿ ತಗುಲುವುದಿಲ್ಲ !!!!

ಮನೆಯಲ್ಲಿ ಮಕ್ಕಳಿದ್ದರೆ ಆ ಮನೆಯಲ್ಲಿ ಹಿರಿಯರಿದ್ದರೆ ಈ ಒಂದು ಕೆಲಸವನ್ನು ಹಿರಿಯರು ಮಾಡಿಯೆ ಇರುತ್ತಾರೆ ನೀವು ಗಮನಿಸಿ. ಅದೇನೆಂದರೆ ಮನೆಯಲ್ಲಿರುವ ಮಕ್ಕಳಿಗೆ ಅದರಲ್ಲೂ ಚಿಕ್ಕ ಮಕ್ಕಳಿಗೆ ದೃಷ್ಟಿ ತೆಗೆಯುವುದು

ಹೌದು ಈ ಮಕ್ಕಳಿಗೆ ದೃಷ್ಟಿ ಬೇಗ ತಗುಲುತ್ತದೆ ಆದಕಾರಣ ಹಿರಿಯರು ವಾರಕ್ಕೆ ಒಮ್ಮೆಯಾದರೂ ಗುರುವಾರ ಅಥವಾ ಭಾನುವಾರ ದಿವಸಗಳಂದು ದೃಷ್ಟಿ ತೆಗೆಯುವ ಕೆಲಸವನ್ನು ಮಾಡುತ್ತಾರೆ.

ಆದರೆ ಇಂದಿನ ಪೀಳಿಗೆಯವರಿಗೆ ಆ ಮಾಹಿತಿ ಇರುವುದಿಲ್ಲ ಮಕ್ಕಳಿಗೆ ಕಪ್ಪು ಬೊಟ್ಟನ್ನು ಇಟ್ಟು ಮತ್ತು ಕೈಗಳಿಗೆ ಕರಿಮಣಿಯ ದಾರವನ್ನು ಕಟ್ಟಿ ಸುಮ್ಮನಾಗಿಬಿಡುತ್ತಾರೆ ಆದರೆ ದೃಷ್ಟಿಯ ವಿಚಾರದ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ.

ನಿಮಗೂ ಕೂಡ ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಇಲ್ಲ ಅಂದರೆ ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಮಕ್ಕಳಿಗೆ ದೃಷ್ಟಿಯನ್ನು ತೆಗೆಯುವುದು ಯಾಕೆ ಮತ್ತು ದೃಷ್ಟಿಯನ್ನ ಯಾಕೆ ತೆಗೆಯಲೇಬೇಕು ಮತ್ತು ತಾಯಿಯ ಗರ್ಭದಲ್ಲಿ ಮಗು ಇದ್ದಾಗ ಯಾಕೆ ದೃಷ್ಟಿಯನ್ನು ತಾಯಿಗೂ ತಗೆಯಬೇಕು ಅನ್ನೋ ವಿಚಾರವನ್ನು ನಿಮಗೆ ತಿಳಿಸಿಕೊಡುತ್ತೇವೆ.

ಸಂಪೂರ್ಣವಾಗಿ ಈ ದಿನದ ಈ ಮಾಹಿತಿಯನ್ನು ತಿಳಿಯಿರಿ ಮತ್ತು ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಗರ್ಭಿಣಿ ಸ್ತ್ರೀಯರಿದ್ದರೆ ತಪ್ಪದೆ ಈ ಪದ್ದತಿಯನ್ನು ಪಾಲಿಸಿ.

ಮಕ್ಕಳಿಗೆ ಕಪ್ಪು ದಾರ ಕಟ್ಟುವುದು ಅಷ್ಟೇ ಅಲ್ಲ ಮಕ್ಕಳಿದ್ದ ಮನೆಯಲ್ಲಿ ನೀವು ಈ 1ಪರಿಹಾರವನ್ನು ಮಾಡಿಕೊಳ್ಳಿ ಅದೇನೆಂದರೆ 1ಮೀಟರ್ ಕಪ್ಪುದಾರವನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಶನಿದೇವನ ಆಲಯಕ್ಕೆ ಹೋಗಿ ಅದು ಶನಿವಾರದ ದಿವಸದಂದೇ ಹೋಗಬೇಕು

ನಂತರ ಅಲ್ಲಿ ಶನೀಶ್ವರನಿಗೆ ಪ್ರಾರ್ಥನೆ ಮಾಡುತ್ತಾ ಓಂ ನಮೋ ಶನೇಶ್ವರಾಯ ನಮಃ ಎಂದು ಹೇಳುತ್ತಾ ಆ ಒಂದು ಮೀಟರ್ ದಾರದಲ್ಲಿ ನೂರ ಎಂಟು ಗಂಟುಗಳನ್ನು ಹಾಕಬೇಕು ನೆನಪಿನಲ್ಲಿ ಇಡೀ ಪ್ರತಿಯೊಂದು ಗಂಟನ್ನು ಹಾಕುವಾಗಲೂ ಮಂತ್ರವನ್ನು ಪಠಿಸಬೇಕು.

ನಂತರ ಈ ದಾರವನ್ನು ತಂದು ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಮಗುವಿಗೆ ನಕಾರಾತ್ಮಕ ಶಕ್ತಿಗಳ ಪರಿಣಾಮ ಬೀರುವುದಿಲ್ಲ. ಇನ್ನು ಮನೆಯಲ್ಲಿ ಗರ್ಭಿಣಿ ಸ್ತ್ರೀಯರಿದ್ದರೇ ಗರ್ಭಿಣಿ ಸ್ತ್ರೀಯರಿಗೂ ಕೂಡ ತುಂಬಾ ಬೇಗ ಈ ದೃಷ್ಟಿ ಎಂಬುದು ತಗುಲುತ್ತದೆ ಅವರಿಗೂ ಕೂಡ ದೃಷ್ಟಿಯನ್ನು ತೆಗೆಯುವುದುಂಟು

ಗರ್ಭಿಣಿ ಸ್ತ್ರಿ ಮನೆಯಲ್ಲಿ ಇದ್ದಲ್ಲಿ ಅವರ ಉದ್ದಕ್ಕೂ ಕಪ್ಪು ದಾರವನ್ನು ತೆಗೆದುಕೊಂಡು ಅದಕ್ಕೆ ದೇವರ ಮನೆಯಲ್ಲಿರುವ ಸಿಂಧೂರವನ್ನು ಹಚ್ಚಿ ಅದಕ್ಕೂ ಕೂಡ ಗಂಟನ್ನು ಕಟ್ಟಬೇಕು ನೂರ ಎಂಟು ಗಂಟನ್ನು ಕಟ್ಟಿ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು

ನಂತರ ಇದನ್ನು ಭಾನುವಾರ ತೆಗೆಯಬೇಕು ಮತ್ತೆ ಮಗು ಆಗುವವರೆಗೂ ಈ ರೀತಿ ಮಾಡುತ್ತಾ ಇರಬೇಕು. ಇನ್ನು ಗರ್ಭಿಣಿ ಮಹಿಳೆಯರಿಗೆ ಯಾಕೆ ದೃಷ್ಟಿಯನ್ನು ತೆಗೆಯಬೇಕು ಅಂದರೆ ತಾಯಿಗೆ ಆದ ದೃಷ್ಟಿ ಮಗುವಿಗೂ ಕೂಡ ತಗುಲುವ ಸಾಧ್ಯತೆ ಇರುತ್ತದೆ

ಆದಕಾರಣ ನಿರ್ಲಕ್ಷ್ಯ ಮಾಡದೆ ದೃಷ್ಟಿಯನ್ನು ತೆಗೆಯುವ ಪದ್ದತಿಯನ್ನ ನಾವು ಅಳವಡಿಸಿಕೊಳ್ಳಬೇಕು. ಇನ್ನೂ ದೃಷ್ಟಿಯನ್ನು ತೆಗೆಯುವ ಪ್ರಕ್ರಿಯೆಯನ್ನು ಪಾಲಿಸುವುದರಿಂದ ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುವುದಿಲ್ಲ ಮತ್ತು ಆ ತಾಯಿಗೆ ದೃಷ್ಟಿ ಕೂಡ ತಗಲುವುದಿಲ್ಲ.

ಈ ರೀತಿಯಾಗಿ ನಮ್ಮ ಸಂಪ್ರದಾಯದಲ್ಲಿ ದೃಷ್ಟಿಗೆ ಒಂದು ಮಹತ್ವವಾದ ಸ್ಥಾನವಿದೆ ನಾವು ಅದನ್ನು ಪಾಲಿಸಲೇಬೇಕು. ಇನ್ನು ಮಕ್ಕಳಿಗೆ ದೃಷ್ಟಿ ತೆಗೆದಿಲ್ಲ ವಾದರೆ ಮಕ್ಕಳು ಹಠ ಮಾಡುತ್ತಾರೆ ಸರಿಯಾಗಿ ಊಟ ಮಾಡುವುದಿಲ್ಲ ಅನಾರೋಗ್ಯ ಸಮಸ್ಯೆಗಳು ಕೂಡ ಕಾಡಬಹುದು.

ಹಾಗಾದರೆ ನಿಮಗೆ ಈ 1ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಪ್ರತಿಯೊಬ್ಬರಿಗೂ ಶೇರ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ಶುಭ ದಿನ ಧನ್ಯವಾದ

Leave a Reply

Your email address will not be published. Required fields are marked *