ಭಾರತದ ರಾಜ ರೋಲ್ಸ್ ರೊಯ್ಸ್ ಕಂಪನಿ ಮೇಲೆ ಹೇಗೆ ಪ್ರತಿಕಾರ ತೀರಿಸಿಕೊಂಡ ರೀತಿ ಹೇಗಿತ್ತು ಗೊತ್ತ…

208

ಸಾಮಾನ್ಯವಾಗಿ ಎಲ್ಲರಿಗೂ ಕೂಡ ತಮ್ಮ ತಮ್ಮ ದೇಶದ ಮೇಲೆ ಹೆಚ್ಚಿನ ಗೌರವ ಇರುವುದನ್ನು ಗಮನಿಸಬಹುದಾಗಿದೆ.
ಅದರಲ್ಲೂ ನಮ್ಮ ಭಾರತ ದೇಶದ ಮೇಲೆ ನಮಗೆ ಹೆಚ್ಚಿನ ಗೌರವದ ಭಾವನೆ ಇರುವುದನ್ನು ಕಾಣಬಹುದು ಅದಕ್ಕೆ ಪ್ರಮುಖವಾಗಿ ಹಲವಾರು ಕಾರಣಗಳಿವೆ ಈ ದಿನ ನಾನು ಅದರಲ್ಲಿ ಇನ್ನೂ ಒಂದು ಪ್ರಮುಖವಾದ ವಿಷಯವನ್ನು ನಿಮಗೆ ತಿಳಿಸಿಕೊಡುತ್ತೇನೆ.

ಅದೇನೆಂದರೆ ರಾಜಾ ಜೈ ಸಿಂಗ್ ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ ನಮ್ಮ ಭಾರತ ದೇಶವನ್ನು ಆಳಿದ ಪ್ರಮುಖ ರಾಜರುಗಳಲ್ಲಿ ರಾಜಾ ಜೈ ಸಿಂಗ್ ಕೂಡ ಒಬ್ಬರು ಈ ರಾಜನಿಗೆ ಅಂದರೆ ನಮ್ಮ ಭಾರತ ದೇಶದ ರಾಜನಿಗೂ ಲಂಡನ್ನಲ್ಲಿರುವ ರೋಲ್ಸ್ರಾಯ್ ಕಾರು ಕಂಪನಿಗೂ ಇರುವ ಸಂಬಂಧವೇನು ಎಂಬ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ.

ಸಂಬಂಧದ ಜೊತೆಯಲ್ಲಿ ಅವರು ಈ ಕಾರು ಕಂಪನಿಯ ವಿರುದ್ಧ ಏಕೆ ಸೇಡನ್ನು ತೀರಿಸಿಕೊಂಡಿದ್ದಾರೆ ಎಂಬ ಪ್ರಶ್ನೆ ಕೂಡ ಮೂಡುತ್ತದೆ ಅವರು ಹೇಗೆ ದ್ವೇಶವನ್ನು ತೀರಿಸಿಕೊಂಡರು ಅದರಿಂದಾಗಿ ನಮ್ಮ ದೇಶದ ರಾಜರಿಗೆ ಯಾಕೆ ಇಷ್ಟೊಂದು ಒಳ್ಳೆಯ ಹೆಸರು ಬಂತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ದಿನ ನಿಮಗೆ ತಿಳಿಸಿಕೊಡುತ್ತೇನೆ ನೀವು ಕೂಡ ಈ ಮಾಹಿತಿಯನ್ನು ಓದಿ ಬೇರೆಯವರಿಗೂ ಕೂಡ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ .

ರಾಜಾ ಜೈ ಸಿಂಗ್ ಅವರು ನಮ್ಮ ದೇಶದಿಂದ ಸಾವಿರದ ಒಂಬೈನೂರ ಇಪ್ಪತ್ತರ ಸಮಯದಲ್ಲಿ ಲಂಡನ್ ದೇಶಕ್ಕೆ ಹೋಗುತ್ತಾರೆ ಲಂಡನ್ ಗೆ ರಾಜ ಜೈಸಿಂಗ್ ಹೋಗುವ ಪ್ರಮುಖ ಕಾರಣವೇನೆಂದರೆ ಸ್ವಲ್ಪ ದಿನದ ಮಟ್ಟಿಗೆ ವಿಶ್ರಾಂತಿಯನ್ನು ತೆಗೆದುಕೊಂಡು ಸಾಮಾನ್ಯ ಜನರು ಹೇಗೆ ಲಂಡನ್ನಲ್ಲಿ ಬದುಕುತ್ತಾರೆ ಅಂದರೆ ನಮ್ಮ ಭಾರತೀಯ ಸಾಮಾನ್ಯ ಜನರು ಹೇಗೆ ಲಂಡನ್ನಲ್ಲಿ ಬದುಕುತ್ತಾರೆ ಎಂಬುದನ್ನು ತಿಳಿದುಕೊಂಡು ಬರಲು ಅವರು ಸಾಮಾನ್ಯರ ರೀತಿಯಲ್ಲಿ ಲಂಡನ್ ಗೆ ಹೋಗುತ್ತಾರೆ.

ಆ ಸಂದರ್ಭದಲ್ಲಿ ಅವರು ಯಾವುದೇ ಆಡಂಬರದ ವಸ್ತ್ರಗಳನ್ನು ಧರಿಸದೇ ಒಡವೆಗಳನ್ನು ಹಾಕಿಕೊಳ್ಳದೆ ಸಾಮಾನ್ಯರಂತೆ ರಸ್ತೆಯಲ್ಲಿ ತಿರುಗಾಡುತ್ತಿರುವ ಅವರಿಗೆ ರೋಲ್ಸ್ ರಾಯ್ ಕಾರುಗಳ ಶೋರೂಂ ಕಣ್ಣಿಗೆ ಬೀಳುತ್ತದೆ ಅಲ್ಲಿರುವ ಒಂದು ಕಾರು ಅವರ ಮನಸ್ಸನ್ನು ಹೆಚ್ಚಾಗಿ ಮೆಚ್ಚುತ್ತದೆ ಅದರಿಂದ ಅವರು ಆ ಕಾರಿನ ಶೋರೂಂ ಒಳಗೆ ಹೋಗುತ್ತಾರೆ ಅದಾದ ನಂತರ ಅಲ್ಲಿದ್ದ ಒಬ್ಬ ಬ್ರಿಟಿಷ್ ಸೇಲ್ಸ್ ಮ್ಯಾನ್ನನ್ನು ಕರೆದು ಈ ಕಾರಿನ ಬೆಲೆ ಏನು ಮತ್ತು ಈ ಕಾರಿನ ಗುಣ ವಿಶೇಷತೆಗಳೇನು ಎಂಬುದನ್ನು ಕೇಳುತ್ತಾರೆ.

ಆದರೆ ಅವನ್ನು ಇವರು ಸಾಮಾನ್ಯ ಭಾರತೀಯನೆಂದು ಮನಗಂಡು ಅವರಿಗೆ ಯಾವುದೇ ಮಾಹಿತಿಗಳನ್ನು ನೀಡದೆ ಅವರನ್ನು ಕಾರಿನ ಶೋ ರೂಂನಿಂದ ಹೊರಗೆ ಹಾಕುತ್ತಾನೆ ಅದಾದ ನಂತರ ರಾಜಾ ಜೈ ಸಿಂಗ್ ಅವರು ಆಳ್ವಾಸ್ನ ಮಹಾರಾಜ ಬರುತ್ತಿದ್ದಾನೆ ಎಂದು ರೋಲ್ಸ್ರಾಯ್ ಕಾರಿನ ಶೋರೂಂಗೆ ಹೇಳುತ್ತಾರೆ ಅವರು ಕೆಂಪು ರತ್ನಗಂಬಳಿ ಯಿಂದ ಅವರನ್ನು ಸ್ವಾಗತಿಸುತ್ತಾರೆ ಅವರು ಬಂದು ಆರು ಕಾರುಗಳನ್ನು ಖರೀದಿಸುವುದಾಗಿ ಹೇಳಿ ನಗದು ರೂಪದಲ್ಲಿ ಹಣವನ್ನು ಕೊಡುತ್ತಾರೆ .

ಕಾರುಗಳ ಜೊತೆಯಲ್ಲಿ ಆ ಬ್ರಿಟಿಷ್ ಸೇಲ್ಸ್ ಮ್ಯಾನ್ಗೂ ಕೂಡ ಹಣವನ್ನು ಕೊಟ್ಟು ಅವನನ್ನು ಕೂಡ ಕರೆದುಕೊಂಡು ಹೋಗಿ ಆ ಕಾರುಗಳನ್ನು ಭಾರತ ದೇಶದಲ್ಲಿ ನಗರಸಭೆಗೆ ಕೊಟ್ಟು ಕಸವನ್ನು ತುಂಬಲು ಹೇಳುತ್ತಾರೆ ಅಂದಿನಿಂದ ಭಾರತ ದೇಶದಲ್ಲಿ ರೋಲ್ಸ್ ರಾಯ್ ಕಾರುಗಳು ಕಸಗಳನ್ನು ತುಂಬುವ ಗಾಡಿಯಾಗಿ ಮಾರ್ಪಾಡಾಗುತ್ತವೆ ಅದನ್ನು ತಿಳಿದ ಯುರೋಪ್ ಮತ್ತು ಅಮೆರಿಕಾ ದೇಶದ ಜನರು ಆ ಕಾರುಗಳಿಗಿದ್ದ ಬೆಲೆಯನ್ನು ಕಡಿಮೆ ಮಾಡುತ್ತಾರೆ ಆ ಕಾರಿಗಿದ್ದ ಬೆಲೆ ಕ್ಷಣಾರ್ಧದಲ್ಲಿ ಇಳಿದುಹೋಗುತ್ತದೆ ಅದಾದ ನಂತರ ರೋಲ್ಸ್ ರಾಯ್ ಕಂಪನಿಯ ಸೇಲ್ಸ್ ಮ್ಯಾನ್ ಗೆ ಇವರ ವ್ಯಕ್ತಿತ್ವದ ಪರಿಚಯವಾಗುತ್ತದೆ .

ಮತ್ತು ನಮ್ಮ ದೇಶದ ಬಗ್ಗೆ ಕೂಡ ಗೌರವ ಬೆಳೆಯುತ್ತದೆ ಅದಾದ ನಂತರ ರೋಲ್ಸ್ ರಾಯ್ ಕಂಪನಿಯ ಮಾಲೀಕರು ಇವರ ಬಳಿ ಕ್ಷಮೆಯನ್ನು ಕೋರಿ ಪತ್ರವನ್ನು ಬರೆಯುತ್ತಾರೆ ಇವರು ಕೂಡ ಕ್ಷಮಿಸುತ್ತಾರೆ ಅದಾದ ನಂತರ ಕಾರಿನ ಮಾಲೀಕರು ಇವರಿಗೆ ಆರು ಕಾರುಗಳನ್ನು ಉಚಿತವಾಗಿ ನೀಡುತ್ತಾರೆ ಇದು ನಮ್ಮ ಭಾರತ ದೇಶದ ಗೌರವವನ್ನು ಎತ್ತಿಹಿಡಿಯುವ ಒಂದು ಪ್ರಮುಖವಾದಂತಹ ಉದಾಹರಣೆಯಾಗಿದೆ ಧನ್ಯವಾದಗಳು.

LEAVE A REPLY

Please enter your comment!
Please enter your name here