ಭಗವಾನ್ ಗೌತಮ ಬುದ್ಧರು ಹೇಳಿದ ಈ ಮಾತುಗಳನ್ನು ತಪ್ಪದೇ ಪಾಲಿಸಿ ನಿಮ್ಮ ಜೀವನವೇ ಬದಲಾಗುತ್ತದೆ!!!!

40

ಸ್ನೇಹಿತರೇ ನಮ್ಮ ಸುತ್ತಮುತ್ತ ಎಂತೆಂಥ ಜನರಿರುತ್ತಾರೆ ಎಂಬುದು ನಮ್ಮ ಕಲ್ಪನೆಗೆ ಮೀರಿದ್ದು ಅದರಲ್ಲೂ ಹಿಂದಿನಿಂದಲೂ ಕೂಡ ಹಲವಾರು ಮಾತುಗಳಿಗೆ ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂದು ಇದರ ಕುರಿತಾಗಿ .

ಈ ದಿನ ನಾನು ನಿಮಗೆ ಒಂದು ಕಟುವಾದ ಸತ್ಯವನ್ನು ಹೇಳುತ್ತೇನೆ. ಬುದ್ಧ ತನ್ನ ಶಿಷ್ಯೆಗೆ ಹೇಳಿದಂತಹ ಮಾತು ಅದೊಂದು ನೈಜ ಘಟನೆಯಾಗಿದೆ. ಆ ಘಟನೆಯನ್ನು ಆಧರಿಸಿ ಮನುಷ್ಯ ಎಷ್ಟು ಮಾತನಾಡಬೇಕು ಯಾವ ಸಂದರ್ಭದಲ್ಲಿ ಯಾವ ಮಾತು ಉಪಯೋಗಕ್ಕೆ ಬರುತ್ತದೆ ಎಂಬ ಸಂಪೂರ್ಣ ಮಾಹಿತಿ ನಿಮಗಿಲ್ಲಿ ಸಿಗುತ್ತದೆ.

ಮಾತಿಗೆ ಸಂಬಂಧಪಟ್ಟ ಹಾಗೆ ಹಲವಾರು ಗಾದೆಗಳಿ ರುವುದನ್ನು ನಾವು ಗಮನಿಸಬಹುದು ಎಲ್ಲ ಗಾದೆಗಳು ಕೂಡ ಅರ್ಥಪೂರ್ಣವಾಗಿದೆ ಬುದ್ಧನ ಶಿಷ್ಯ ಬುದ್ಧನಿಗೆ ಒಂದು ಬಾರಿ ಒಂದು ಪ್ರಶ್ನೆಯನ್ನು ಕೇಳುತ್ತಾನೆ .ಮಾತು ಅತಿಯಾಗಿ ಆಡಿದರೆ ಒಳ್ಳೆಯದೇ ಕಡಿಮೆ ಆಡಿದರೆ ಒಳ್ಳೆಯದೇ ಎಂದು.

ಅದಕ್ಕೆ ಬುದ್ಧ ಒಂದು ಉದಾಹರಣೆಯನ್ನು ಕೊಡುತ್ತಾರೆ ಕಪ್ಪೆ ಯಾವಾಗಲೂ ಹೊಟಗುಟ್ಟುತ್ತದೆ ಆದರೆ ಅದಕ್ಕೆ ಯಾರೂ ಬೆಲೆಯನ್ನು ಕೊಡುವುದಿಲ್ಲ ಆದರೆ ಹುಂಜ ಕೆಲವೊಂದು ಬಾರಿ ಮಾತ್ರ ಕೂಗುತ್ತದೆ ಅದಕ್ಕೆ ಎಲ್ಲರೂ ಬೆಲೆಯನ್ನು ಕೊಡುತ್ತಾರೆ.

ಎಂಬ ಒಂದು ಅರ್ಥಪೂರ್ಣ ಕಥೆಯನ್ನು ಹೇಳುತ್ತಾರೆ. ಅದಾದ ನಂತರ ಒಮ್ಮೆ ಬುದ್ಧರು ತಪಸ್ಸಿನಲ್ಲಿ ಇರುವಾಗ ಒಂದು ಮಹಿಳೆ ಬಂದು ತನ್ನ ಮಗಳ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ.

ಅವಳು ಎಲ್ಲರಿಗೂ ಚಾಡಿ ಹೇಳುತ್ತಾಳೆ ಮತ್ತು ಎಲ್ಲರ ನಡುವೆ ಜಗಳ ತಂದಿಡುತ್ತಾಳೆ ತುಂಬಾ ಮಾತನಾಡುತ್ತಾಳೆ ಎಂಬ ಮಾತುಗಳನ್ನು ಹೇಳಿದಾಗ ಬುದ್ಧ ಆಕೆಯನ್ನು ಕರೆಸಲು ಹೇಳುತ್ತಾರೆ.

ಆಕೆ ಬಂದ ನಂತರ ಅವಳನ್ನು ಪ್ರಶ್ನಿಸುತ್ತಾರೆ ನಿನ್ನ ಹೆಸರೇನೆಂದು ಅದಕ್ಕೆ ಅವಳು ಹೇಳುತ್ತಾಳೆ ಪದ್ಮಾ ಮುಖಿ. ಬುದ್ಧರು ನಿನ್ನ ಹೆಸರು ತುಂಬಾ ಚೆನ್ನಾಗಿದೆ ಮತ್ತು ತುಂಬಾ ಚೆನ್ನಾಗಿ ನಗುತಿಯ ಎಂದಾಗ ಎಲ್ಲರೂ ಹೀಗೆ ಹೇಳುತ್ತಾರೆ .

ಆದರೆ ನನ್ನ ತಾಯಿ ಮಾತ್ರ ನನಗೆ ಯಾವಾಗಲೂ ಬೈಯುತ್ತಾರೆ ಎಂದು ಹೇಳಿದಂತಹ ಸಂದರ್ಭದಲ್ಲಿ ಬುದ್ಧರು ಆಕೆಗೆ ಅವಳ ತಪ್ಪಿನ ಅರಿವನ್ನು ಮಾಡಿಸುವ ಪ್ರಯತ್ನದಲ್ಲಿ ಅವಳಿಗೆ ಒಂದು ಕೆಲಸವನ್ನು ಕೊಡುತ್ತಾರೆ.

ನೀನು ಊರಿನ ಎಲ್ಲ ಮನೆಯ ಹತ್ತಿರವೂ ಈ ಪುಕ್ಕವನ್ನು ಒಂದೊಂದಾಗಿ ಹಾಕಿ ಬಾ ಎಂದು ಅದಕ್ಕೆ ಅವಳು ಒಪ್ಪಿಕೊಂಡು ಎಲ್ಲಾ ಮನೆಯ ಮುಂದೆಯೂ ಒಂದೊಂದು ಪುಕ್ಕವನ್ನು ಹಾಕಿ ನಂತರ ಬುದ್ಧರ ಬಳಿ ಬರುತ್ತಾಳೆ .

ಅದಾದ ನಂತರ ಬುದ್ಧ ಮತ್ತೆ ಆಕೆಗೆ ಕೆಲಸವನ್ನು ಕೊಡುತ್ತಾರೆ ಆ ಎಲ್ಲಾ ಪುಕ್ಕಗಳನ್ನು ಮತ್ತೆ ತೆಗೆದುಕೊಂಡು ಬಾ ಎಂದು ಆಕೆ ಊರಿನ ಎಲ್ಲ ಮನೆಯ ಮುಂದೆ ಹೋದರೂ ಕೂಡ ಆಕೆಗೆ ನೂರರಲ್ಲಿ ಹತ್ತು ರಷ್ಟು ಮಾತ್ರ ಪುಕ್ಕಗಳು ಸಿಗುತ್ತವೆ ಉಳಿದ ಪುಕ್ಕಗಳು ಸಿಗುವುದಿಲ್ಲ.

ಅದಾದ ನಂತರ ಬುದ್ಧರ ಬಳಿ ಬಂದ ಪದ್ಮ ಮುಖಿ ಹೇಳುತ್ತಾಳೆ ನನಗೆ ಸಿಕ್ಕಿದ್ದು ಕೆಲವೇ ಪುಕ್ಕಗಳು ಎಲ್ಲ ಪುಕ್ಕಗಳು ಹಾರಿಹೋಗಿದೆ ಎಂದು ಆಗ ಬುದ್ಧರು ಆಕೆಗೆ ಮನವರಿಕೆ ಮಾಡುತ್ತಾರೆ.

ನೋಡು ಹೀಗೆ ಜೀವನವೂ ಕೂಡ ಎಲ್ಲರೂ ಕೂಡ ಯಾವಾಗಲೂ ನಮ್ಮ ಜೊತೆಯಲ್ಲಿ ಇರುವುದಿಲ್ಲ ಕೆಲವೊಬ್ಬರು ಮಾತ್ರ ನಮ್ಮ ಜೊತೆಯಲ್ಲಿ ಇರುತ್ತಾರೆ ಇರುವವರನ್ನು ಅನುಸರಿಸಿಕೊಂಡು ಎಲ್ಲರಿಗೂ ಒಳ್ಳೆಯದನ್ನು ಬಯಸಿಕೊಂಡು ಜೀವನ ಮಾಡಬೇಕು ಎಂದು

ಆಕೆಗೆ ಒಂದು ಕೆಲಸವನ್ನು ಕೊಟ್ಟು ಅವಳಿಗೆ ಅರ್ಥ ಮಾಡಿಸುತ್ತಾರೆ ಮಾತಿನಲ್ಲಿ ಬುದ್ಧಿ ಹೇಳದೇ ಇದ್ದರೂ ಸಹ ಅವರು ಮಾಡಿಸಿದ ಕೆಲಸ ಅವಳಿಗೆ ಜ್ಞಾನೋದಯವನ್ನು ಮಾಡಿಸುತ್ತದೆ ಮಾತು ಕಡಿಮೆ ಆಡಿದಷ್ಟು ಕೂಡ ಅದು ತೂಕವಿರಬೇಕು. ತೂಕ ಇಲ್ಲದ ಮಾತಿಗೆ ಬೆಲೆ ಇಲ್ಲ ಎಂಬ ಮಾತಿಗೆ ಇಲ್ಲಿ ಬೆಲೆ ಸಿಕ್ಕಾಗಾಗುತ್ತದೆ ಧನ್ಯವಾದಗಳು.

LEAVE A REPLY

Please enter your comment!
Please enter your name here