Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬೆಳಗಿನ ಈ ಸಮಯದಲ್ಲಿ ನೀವು ಏನೇ ಕೇಳಿಕೊಂಡರೂ ಅದು ನೂರಕ್ಕೆ ನೂರರಷ್ಟು ನೆರವೇರುತ್ತೆ ಅಂತೆ ಹಾಗಾದ್ರೆ ಈ ಒಂದು ಸಮಯ ಯಾವುದು ಗೊತ್ತ …!!!

ಬೆಳಗಿನ ಜಾವ ಪ್ರತಿದಿನ ಈ ರೀತಿಯಾಗಿ ನೀವು ಹತ್ತು ನಿಮಿಷ ಮಾಡಿದರೆ ಸಾಕು ನೀವು ಬಯಸಿದ್ದೆಲ್ಲ ಸಿಗುತ್ತದೆ ಇದು ಸತ್ಯವಾಗಲೂ ನಿಮ್ಮ ಆಸೆಗಳನ್ನು ನೆರವೇರಿಸುತ್ತದೆ.ಹಾಯ್ ಸ್ನೇಹಿತರೆ ನಿಮಗೆ ಆಸೆಗಳಿವೆ ಅಂದರೆ ಏನಿದೆಯೆಂದು ಒಂದು ಸಲ ನೆನೆಸಿಕೊಳ್ಳಿ ಈ ಆಸೆಗಳಿಗೆ ಕೊನೆ ೌಇಲ್ಲದ ಹಾಗೆ ಆಗುತ್ತದೆ ಒಂದು ಆಸೆ ನೆರವೇರಿದೆ ಮೇಲೆ ಇನ್ನೊಂದು ಆಸೆ ಪ್ರಾರಂಭವಾಗುತ್ತದೆ ಹೀಗೆ ಮನುಷ್ಯನ ಆಸೆಗೆ ಕೊನೆಯಿಲ್ಲ. ಆಸೆಯನ್ನು ಈ ಭೂಮಿಯಲ್ಲಿರುವ ಎಲ್ಲಾ ಜೀವಿಗಳು ಹೊಂದಿರುತ್ತವೆ ಅದರಲ್ಲೂ ಮನುಷ್ಯನಿಗೆ ಇರುವಷ್ಟು ಆಸೆಗಳು ಯಾವ ಜೀವಿಗಳಿಗೂ ಇಲ್ಲ ಅನಿಸುತ್ತದೆ. ಆಸೆಗಳ ಬೆನ್ನ ಹಿಂದೆ ಹೊರಟರೆ ಇದಕ್ಕೆ ಕೊನೆಯೇ ಇಲ್ಲ. ಹಾಗಂತ ಆಸೆಗಳನ್ನು ತೊರೆದು ಜೀವನದಲ್ಲಿ ಸುಮ್ಮನೆ ಇರುವುದು ಕೂಡ ಮನುಷ್ಯನಿಗೆ ಒಳ್ಳೆಯದಲ್ಲ

ಆದರೆ ಎಲ್ಲಾ ಆಸೆಗಳಿಗೂ ಒಂದು ಮಿತಿ ಅಂತ ಇರಬೇಕು. ನಾವು ಎಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತೇವೆ ಅಷ್ಟೇ ನೋವುಗಳು ಕಷ್ಟಗಳು ನಮ್ಮ ಹಿಂದೆ ಇರುತ್ತವೆ ಅದರಲ್ಲೂ ಒಂದು ಗಾದೆ ಇದೆ ಆಸೆಯೇ ದುಃಖಕ್ಕೆ ಮೂಲ ಎಂದು ಅಂದರೆ ನಮ್ಮ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳಲು ನಾವು ತುಂಬಾ ದುಃಖವನ್ನು ಪಡೆಯುತ್ತೇವೆ ಎಂದು ಅರ್ಥ. ಆದರೆ ಆಸೆಗಳನ್ನು ಪೂರೈಸುವುದಕ್ಕೆ ನಮ್ಮ ಜೀವನವನ್ನೇ ಕಳೆಯಬಾರದು. ವ್ಯಾಪಾರಸ್ಥರಿಗೆ ಲಾಭದ ಆಸೆ ಗಂಡ ಹೆಂಡತಿಗೆ ಮಕ್ಕಳ ಆಸೆ ಮಕ್ಕಳಿಗೆ ಆಟ ಆಡುವ ಆಸೆ ಹೀಗೆ ಎಲ್ಲರಿಗೂ ಒಂದೊಂದು ಆಸೆಗಳು ಇದ್ದೇ ಇರುತ್ತವೆ.

ನಾವು ದುಡ್ಡು ಇಲ್ಲದೆ ಜೀವನ ಮಾಡುವುದಕ್ಕೆ ಆಗುವುದಿಲ್ಲ. ಹಣದ ಅವಶ್ಯಕತೆ ಎಲ್ಲರಿಗೂ ಇರುತ್ತದೆ ಇದು ಕೂಡ ಒಂದು ಆಸೆಯೇ ಆಗಿದೆ ಆದರೆ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟು ಸಿಕ್ಕರೆ ಅದು ಜೀವನಕ್ಕೆ ಬೇಕು ಆದರೆ ಇನ್ನೂ ಹೆಚ್ಚಾಗಿ ದುಡ್ಡು ಬೇಕು ಎಂದು ಮಲಗದೇ ಜೀವನದಲ್ಲಿ ದುಡಿಯುವುದು ಅತಿಯಾಸೆ. ಈ ಒಂದು ಪರಿಹಾರವನ್ನು ನೀವು ಮಾಡಿದರೆ ನಿಮ್ಮ ಎಲ್ಲಾ ಆಸೆಗಳು ನೆರವೇರುತ್ತವೆ. ಸ್ನೇಹಿತರೆ ಬೆಳಗಿನ ಜಾವ 3:00 ಗಂಟೆಯಲ್ಲಿ ನಾವು ಸುಖವಾದ ನಿದ್ರೆಯನ್ನು ಮಾಡುತ್ತಿರುತ್ತೇವೆ. ಈ ಸಮಯದಲ್ಲಿ ನಾವು ಈ ಪರಿಹಾರವನ್ನು ಮಾಡಿದರೆ ನಮ್ಮ ಆಸೆ ಕನಸುಗಳೆಲ್ಲಾ ನೆರವೇರುತ್ತವೆ ಒಂದು ಪರಿಹಾರವನ್ನು ಮೂರು ಗಂಟೆ ಹತ್ತು ನಿಮಿಷಕ್ಕೆ ಪ್ರಾರಂಭ ಮಾಡಬೇಕು ಮೂರು ಗಂಟೆ 20 ನಿಮಿಷದಲ್ಲಿ ಇದನ್ನು ಮುಕ್ತಾಯ ಮಾಡಬೇಕು.

ಸ್ನೇಹಿತರೆ 3:00 ಸಮಯದಲ್ಲಿ ನೀವು ಶುದ್ಧರಾಗಿ ಸ್ನಾನ ಮಾಡಿ ದೇವರ ಮುಂದೆ ಬಂದು ಒಂದು ಉಣ್ಣೆಯ ವಸ್ತ್ರವನ್ನು ಕೆಳಗೆ ಹಾಕಿಕೊಂಡು ಅದರ ಮೇಲೆ ಕುಳಿತುಕೊಳ್ಳಬೇಕು. ಈ ಸಮಯದಲ್ಲಿ ಸಾಕ್ಷಾತ್ ಸರಸ್ವತಿಯು ನಿಮ್ಮ ನಾಲಿಗೆಯಲ್ಲಿ ಇರುತ್ತಾಳೆ ಹಾಗಾಗಿ ಈ ಸಮಯದಲ್ಲಿ ನೀವು ಏನೇ ಕೇಳಿದರು ಎಲ್ಲಾ ಸಿಗುತ್ತದೆ. ಸರಸ್ವತೀದೇವಿಯು ಶುದ್ಧ ಮನಸ್ಸಿನ ದೇವತೆಯಾಗಿದ್ದಾಳೆ ಇವಳ ಸೀರೆಯು ಬಿಳಿ ಬಣ್ಣದಿಂದ ಕೂಡಿರುತ್ತದೆ ಅಂದರೆ ಸರಸ್ವತಿಯು ಶಾಂತವಾಗಿ ಹಾಗೂ ಶುದ್ಧವಾಗಿ ಸದಾ ಇರುತ್ತಾಳೆ ಎಂದರ್ಥ. ಸರಸ್ವತಿಯು ತ್ರಿಮೂರ್ತಿಯ ಸ್ವರೂಪವಾಗಿದ್ದಾಳೆ ಅಂದರೆ ಮಹಾಲಕ್ಷ್ಮಿ ಹಾಗೂ ಪಾರ್ವತಿ ಹಾಗೂ ಸರಸ್ವತಿ ಈ ಮೂರು ದೇವರ ಸ್ವರೂಪವನ್ನು ಹೊಂದಿದ್ದಾಳೆ.

ಸರಸ್ವತಿಯ ನಾಲ್ಕು ಕೈಗಳು ನಾಲ್ಕು ವೇದಗಳ ಸಂಕೇತ ಆಗಿವೆ. ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣವೇದ ಈ ನಾಲ್ಕು ವೇದಗಳ ಸಂಕೇತವೇ ಶ್ರೀ ಸರಸ್ವತಿಯ ಕೈಗಳು. ಸರಸ್ವತಿಯು ಒಮ್ಮೆ ಒಲಿದರೆ ಮಕ್ಕಳು ಯಾವುದೇ ಕೆಲಸವನ್ನು ಪಡೆಯಬಲ್ಲರು ಹಾಗೆಯೇ ಅವರ ವಿದ್ಯೆಗೆ ಯಾವುದೇ ತೊಂದರೆ ಇರುವುದಿಲ್ಲ ಯಾರ ಮನೆಯಲ್ಲಿ ಸರಸ್ವತಿಯ ಆಶೀರ್ವಾದ ಇರುತ್ತದೆ ಅವರ ಮನೆ ಸದಾ ನೆಮ್ಮದಿ ಹಾಗೂ ಶಾಂತಿಯಿಂದ ಇರುತ್ತದೆ. ಹಾಗಾದರೆ ಸ್ನೇಹಿತರೇ ಈ ಒಂದು ಪರಿಹಾರಕ್ಕೆ ನೀವು ಕುಳಿತುಕೊಳ್ಳುವ ಮೊದಲು ಒಂದು ಕಪ್ನಲ್ಲಿ ಶುದ್ಧವಾದ ನೀರನ್ನು ಇಟ್ಟುಕೊಳ್ಳಿ.

ನೀವು ಆಸನದ ಮೇಲೆ ಕುಳಿತು ಕಣ್ಣು ಮುಚ್ಚಿ ಹತ್ತು ನಿಮಿಷ ನಿಮ್ಮ ಆಸೆಗಳನ್ನು ಬೇಡಿಕೊಂಡು ಎಲ್ಲವನ್ನು ಕೇಳಿಕೊಂಡು 10 ನಿಮಿಷ ಆದಮೇಲೆ ಕಣ್ಣನ್ನು ನಿಧಾನವಾಗಿ ತೆಗೆದು ನಮಸ್ಕರಿಸಿ ಕಪ್ನಲ್ಲಿ ತುಂಬಿರುವ ನೀರನ್ನು ಕುಡಿಯಬೇಕು. ಸ್ನೇಹಿತರೆ ಈ ನೀರು ಸಾಧಾರಣವಾದ ನೀರಲ್ಲ ಇದು ಸರಸ್ವತಿಯ ಆಶೀರ್ವಾದದಿಂದ ಗಂಗಾಜಲವಾಗಿರುತ್ತದೆ ಇದನ್ನು ನೀವು ಆ ಸಮಯದಲ್ಲಿ ಕುಡಿದರೆ ನಿಮ್ಮ ಆಸೆಗಳು ನೆರವೇರುತ್ತವೆ. ಈ ಒಂದು ಪರಿಹಾರವನ್ನು ನೀವು ಯಾರಿಗೂ ತಿಳಿಯದ ಹಾಗೆ ಮಾಡಬೇಕು. ಶುದ್ಧ ಮನಸ್ಸಿನಿಂದ ನಂಬಿಕೆಯಿಂದ ಇದನ್ನು ಮಾಡಿದರೆ ನಿಮ್ಮ ಆಸೆಗಳೆಲ್ಲ ನೆರವೇರುತ್ತವೆ ಸ್ನೇಹಿತರೆ ಈ ಒಂದು ಪರಿಹಾರವನ್ನು ನೀವು 21 ದಿನ ಮಾಡಬೇಕು ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ