Categories
ಉಪಯುಕ್ತ ಮಾಹಿತಿ ಭಕ್ತಿ

ಬೆಂಗಳೂರಿನಲ್ಲಿ 400 ವರ್ಷ ಹಳೆಯದಾದ ಅಂತಹ ನಿಗೂಢವಾಗಿ ಇನ್ನೂ ಉಳಿದುಕೊಂಡಿರುವ ಅಂತಹ ಹಳೆಯ ಅದ್ಭುತ ಶಿವನ ದೇವಸ್ಥಾನ ಇದೆ ಇಂದು ಇವಾಗಲೇ ಬೆಳಕಿಗೆ ಬಂದಿದೆ !!!

ನಾವು ಹಲವಾರು ಲೇಖನವನ್ನು ಬರೆದಿದ್ದೇನೆ ಬೆಂಗಳೂರಿನಲ್ಲಿ ಇರುವಂತಹ ದೇವಸ್ಥಾನಗಳು ಇನ್ನೆಲ್ಲೂ ನೀವು ನೋಡುವುದಕ್ಕೆ ಸಾಧ್ಯವಿಲ್ಲ, ಏಕೆಂದರೆ ಬೆಂಗಳೂರು ಕೇವಲ ಉದ್ಯಾನನಗರಿಯಲ್ಲಿ ಬೆಂಗಳೂರು ಒಂದು ದೇವಸ್ಥಾನಗಳ ನಗರ ಹಾಗೂ ಕಲ್ಯಾಣನಗರ. ಹಲವಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದವು ಅದಕ್ಕೆ ಕಾರಣ ಬೆಂಗಳೂರಿನಲ್ಲಿ ಇರುವಂತಹ ಹಲವಾರು ದೇವಸ್ಥಾನಗಳು ಹಾಗೂ ಧಾರ್ಮಿಕ ನಂಬಿಕೆಗಳು.

ಇವತ್ತು ನಾವು ನಿಮಗೆ ಹೇಳುವಂತಹ ವಿಚಾರ ಬೆಂಗಳೂರಿನಲ್ಲಿ ಇರುವಂತಹ ಅದರಲ್ಲೂ ನಾ ನೂರು ವರ್ಷ ಹಳೆಯದಾದ ಅಂತಹ ನಿಗೂಢವಾಗಿ ಇನ್ನು ಉಳಿದುಕೊಂಡಿರುವ ಅದರಲ್ಲೂ ಇತ್ತೀಚೆಗೆ ಬೆಳಕಿಗೆ ಬಂದಂತಹ 400 ವರ್ಷ ಹಳೆಯದಾದ ಅಂತಹ ದೇವಸ್ಥಾನದ ಬಗ್ಗೆ. ಇನ್ನೇಕೆ ತಡ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಬೆಂಗಳೂರಿನಲ್ಲಿ ನೀವು ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣ ಕ್ಷೇತ್ರ ಎಂದು ಕರೆಯಲ್ಪಡುವ ಅಂತಹ ಒಂದು ಪ್ರದೇಶವಿದೆ, ದೇವಸ್ಥಾನವನ್ನು ನೀವು ಬೆಂಗಳೂರಿನಲ್ಲಿ ಇರುವಂತಹ ಕಾಡು ಮಲ್ಲೇಶ್ವರ ದೇವಸ್ಥಾನದ ಎದುರು ಇರುವಂತಹ ನಂದಿ ತೀರ್ಥ ವನ್ನು ನೀವು ನೋಡಬಹುದಾಗಿದೆ.

1997 ಅಲ್ಲಿ ಕೆಲವರು ಈ ಪ್ರದೇಶದಲ್ಲಿ ಕಟ್ಟಡವನ್ನು ಕಟ್ಟಲು ನಿರ್ಧರಿಸಿದ್ದರಂತೆ ಹೀಗೆ ಕಟ್ಟಡವನ್ನು ಕಟ್ಟುವ ಸಂದರ್ಭದಲ್ಲಿ ಮಣ್ಣು ತೆಗೆಯುವಾಗ ಈ ದೇವಸ್ಥಾನ ಗೋಚರವಾಗಿ ದಂತೆ ,ಹೀಗೆ ಸಿಕ್ಕಂತಹ ದೇವಸ್ಥಾನದ ಜಾಗದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ ಎಂದು ಹಲವಾರು ಪುರಾವೆಗಳು ನಮಗೆ ಸಿಗುತ್ತವೆ.

ಹೀಗೆ ಅನ್ವೇಷಣೆ ಮಾಡುವ ಸಂದರ್ಭದಲ್ಲಿ ಮೊದಲನೇದಾಗಿ ಅಲ್ಲಿನ ಅಧಿಕಾರಿಗಳಿಗೆ ನಂದಿ ವಿಗ್ರಹವು ದೊರಕುತ್ತದೆ, ನಂತರ ನಂದಿ ವಿಗ್ರಹವನ್ನು ಸ್ವಲ್ಪ ಒರಸಿ ನೋಡಿದಾಗ ನಂದಿ ವಿಗ್ರಹದ ಬಾಯಿಯಲ್ಲಿ ಒಂದೇ ಸಮನೆ ನೀರು ಬರುವುದನ್ನು ಅಲ್ಲಿನ ಅಧಿಕಾರಿಗಳು ಗಮನಿಸುತ್ತಾರೆ, ಹೀಗೆ ಒಂದೇ ಸಮನೆ ನೀರು ಬರುತ್ತಿರುವ ಅಂತಹ ನಂದಿ ವಿಗ್ರಹದ ಬಾಯಿಯಲ್ಲಿ ಮತ್ತು ಅಂತಹ ನೀರನ್ನು ನೆಲದ ಮೇಲೆ ವರಿಸಿದಾಗ ಇನ್ನೊಂದು ಅಚ್ಚರಿ ಉಂಟುಮಾಡುತ್ತದೆ,

ಆಶ್ಚರ್ಯ ಏನಪ್ಪಾ ಅಂದರೆ ಆ ನೀರಿನಿಂದ ತೊಳೆದಾಗ  ಅಂತಹ ಜಾಗದಲ್ಲಿ ಒಂದು ಶಿವಲಿಂಗವೂ ಕೂಡಾ ದೊರಕುತ್ತದೆ. ಇವತ್ತು ಕೂಡ ಆ ರೀತಿಯ ದೃಶ್ಯವನ್ನು ಈ ದೇವಸ್ಥಾನದಲ್ಲಿ ನೀವು ನೋಡಬಹುದಾಗಿದೆ. ನಿಜವಾಗಲೂ ಈ ರೀತಿಯ ಪವಾಡ ಮಾಡದಿರುವಂತಹ ನಂದಿ ವಿಗ್ರಹದ ಬಾಯಿಯಲ್ಲಿ ನೀರು ಸರಿಯಾಗಿ ಶಿವಲಿಂಗದ ಮೇಲೆ ಬೀಳುತ್ತಿರುವುದು ನೋಡುವುದಕ್ಕಾಗಿ ಹಲವಾರು ಜನರು ಸಾವಿರಾರು ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳಾಗಲಿ ಅಥವಾ ಯಾವುದೇ ವಿಜ್ಞಾನಿಗಳು ಆಗಲಿ ನಂದಿ ಬಾಯಿಯಿಂದ ಬರುತ್ತಿರುವ ಅಂತಹ ನೀರು ಎಲ್ಲಿಂದ ಬರುತ್ತದೆ ಅದು ಹೇಗೆ ಬರುತ್ತದೆ ಎನ್ನುವುದಕ್ಕೆ ಕಂಡುಹಿಡಿಯಲು ಇಲ್ಲಿವರೆಗೂ ಯಾವ ವಿಜ್ಞಾನಿಗೂ ಗಳು ಕೂಡ ಆಗಿಲ್ಲ.

ಹಲವಾರು ಜನರು ಇಲ್ಲಿನ ಈ ದೇವಸ್ಥಾನವನ್ನು ವೃಷಭಾವತಿ ನದಿಯ ಉಗಮ ಸ್ಥಳ ಎಂದು ಕೂಡ ಕರೆಯುತ್ತಾರೆ, ಅದು ಕೆಲವು ಪುರಾಣಗಳ ಪ್ರಕಾರ ಈ ದೇವಸ್ಥಾನಕ್ಕೆ 7000 ವರ್ಷಗಳ ಹಿನ್ನೆಲೆಯಿದೆ ಎಂದು ಕೂಡ ಹೇಳುತ್ತಾರೆ. ಈ ರೀತಿಯ ಅದ್ಭುತವನ್ನು ಉಂಟುಮಾಡುತ್ತಿರುವ ಅಂತಹ ಈ ದೇವಸ್ಥಾನಕ್ಕೆ ಹೋಗಿ ಒಂದು ಸಾರಿ ಕೈ ಮುಗಿಲ ಬೇಕು ಎಂದು ಅನಿಸುತ್ತದೆ. ಹಾಗಾದರೆ ಇನ್ನೇಕೆ ತಡ ಇವತ್ತು ಈ ದೇವಸ್ಥಾನಕ್ಕೆ ಹೋಗಿ ಕೈಮುಗಿದು ಬನ್ನಿ. ಹಾಗೂ ಇಲ್ಲಿನ ನಂದಿಯ ಬಾಯಿಯಲ್ಲಿ ಬರುವಂತಹ ನೀರಿನ ಹಾಗೂ ನೀರು ಶಿವಲಿಂಗದ ಮೇಲೆ ಬೀಳುವಂತಹ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡು ಬನ್ನಿ.

ನೀವು ನಮ್ಮ ಪೇಜ್ ಲೈಕ್ ಮಾಡಿ ಅಥವಾ ಫಾಲೋ ಮಾಡದೆ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *