ಬೆಂಕಿಯಿಂದ ಸುಟ್ಟ ಗಾಯಕ್ಕೆ ಸುಲಭವಾಗಿ ಮನೆ ಮಧ್ಯೆ ಮಾಡಬಹುದು ಇದಕ್ಕಾಗಿ ಆಸ್ಪತ್ರೆಗೆ ಹೋಗಿ ಖರ್ಚು ಮಾಡಿ ಇನ್ನೂ ಗಾಯವನ್ನು ಹೆಚ್ಚು ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಹಾಗಾದರೆ ಬೆಂಕಿ ಅನಾಹುತದಿಂದಾಗಿ ಚರ್ಮ ಸುಟ್ಟಿದ್ದರೆ ಚರ್ಮದ ಕಲೆ ಉಳಿದಿದ್ದರೆ ಅಥವಾ ಬೆಂಕಿಯಿಂದ ಸುಟ್ಟಂತಹ ಚರ್ಮ ನೋಯುತ್ತಿದ್ದರೆ .

ಈ ಸುಲಭ ಮನೆಮದ್ದನ್ನು ಪಾಲಿಸಿ ನೋಡಿ ಈ ರೀತಿ ಮಾಡುವುದರಿಂದ ನೀವು ನೋವನ್ನು ಬೇಗನೆ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಸುಟ್ಟ ಗಾಯದ ಕಲೆ ಕೂಡ ಬೇಗನೇ ಮಾಯವಾಗುತ್ತದೆ .ಬೆಂಕಿ ಅನಾಹುತ ಯಾವಾಗ ಹೇಗೆ ಸಂಭವಿಸುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿದಿರುವುದಿಲ್ಲ ಈ ಬೆಂಕಿಯಿಂದ ಅನಾಹುತವಾದಾಗ ಆದಷ್ಟು ಎಚ್ಚರದಿಂದ ಇರಬೇಕು ಎಂಬುದನ್ನು ನಾವು ತಿಳಿದಿರಬೇಕಾಗುತ್ತದೆ .

ಉದಾಹರಣೆಗೆ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಸ್ಟೌವನ್ನು ಹಚ್ಚಿದ್ದರೆ ಸ್ಟವ್ ಬಳಿ ಮಕ್ಕಳನ್ನು ಬಿಡಬಾರದು ಅಥವಾ ಈ ಸ್ಟೌನಲ್ಲಿ ಅಡುಗೆ ಮಾಡುವಾಗ ಅಥವಾ ಸೌದೆ ಒಲೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಆದಷ್ಟೂ ಕಾಟನ್ ಬಟ್ಟೆಗಳನ್ನು ಹಾಕಿಕೊಂಡಿರಬೇಕು ಹಾಗೂ ಬೆಂಕಿಯಿಂದ ದೂರವೇ ಕೆಲಸವನ್ನು ಮಾಡುವುದು ಉತ್ತಮ .

ಬೆಂಕಿಯ ಶಾಖದಿಂದ ದೂರವಿರಲು ಆದಷ್ಟು ಹ್ಯಾಂಡಲ್ಗಳನ್ನು ಅಂದರೆ ಇಕ್ಕಳಗಳನ್ನು ಬಳಸುವುದು ಒಳ್ಳೆಯದು ಹಾಗೆ ಸುಡುತ್ತಿರುವ ಪಾತ್ರೆಗಳನ್ನು ಮುಟ್ಟುವ ಮೊದಲು ಬಟ್ಟೆಯ ಸಹಾಯದಿಂದ ಪಾತ್ರೆಯನ್ನು ಮುಟ್ಟುವುದು ಒಳ್ಳೆಯದು ಇಂತಹ ಅನೇಕ ವಿಚಾರಗಳನ್ನು ತಿಳಿದುಕೊಂಡಿರುವುದು ಉತ್ತಮ .

ಇನ್ನು ಬೆಂಕಿ ಅನಾಹುತದಲ್ಲಿ ಚರ್ಮ ಸುಟ್ಟರೆ ಏನು ಮಾಡಬೇಕು ಎಂದರೆ ತಕ್ಷಣವೇ ಕೊಬ್ಬರಿ ಎಣ್ಣೆಯನ್ನು ಸವರಬೇಕು ಅಥವಾ ಈ ರೀತಿ ಬೆಂಕಿಯಿಂದ ಅನಾಹುತವಾಗಿ ಚರ್ಮ ಸುಟ್ಟರೆ ಅದನ್ನು ತಣ್ಣೀರಿಗೆ ಹೆಜ್ಜೆ ಅರ್ಧ ಗಂಟೆಗಳ ಬಳಿಕ ಕೈಯನ್ನು ಅಥವಾ ಸುಟ್ಟಂತಹ ಭಾಗವನ್ನು ಆಚೆ ತೆಗೆಯಬೇಕು .

ನಂತರ ತಕ್ಷಣವೇ ಆ ಸುಟ್ಟಂತಹ ಜಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಸವರಬೇಕು ಈ ಕೊಬ್ಬರಿ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಟು ಮ್ಯಾಕ್ರೋಬಿಯಲ್ ಆಂಟಿಸೇಪ್ಟಿಕ್ ಗುಣ ಹೆಚ್ಚಾಗಿರುವ ಕಾರಣದಿಂದಾಗಿ ಕೊಬ್ಬರಿ ಎಣ್ಣೆ ನೋವನ್ನು ಬೇಗನೆ ಶಮನಗೊಳಿಸುತ್ತದೆ ಜೊತೆಗೆ ಗಾಯವಾದಂತೆ ಜಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಪ್ರತಿದಿನ ಸವರುತ್ತಾ ಬಂದರೆ ಕಲೆ ಕೂಡ ಬೇಗನೇ ಮಾಯವಾಗುತ್ತದೆ .

ಸುಟ್ಟಂತಹ ಜಾಗಕ್ಕೆ ಮತ್ತೊಂದು ಮಾಡಬಹುದಾದಂತಹ ಮನೆ ಮದ್ದು ಯಾವುದು ಎಂದರೆ ಶುದ್ಧವಾದ ಅರಿಶಿನ ಮತ್ತು ಶುದ್ಧವಾದ ತುಪ್ಪವನ್ನು ಬೆರೆಸಿ ಆ ಸುಟ್ಟಂತಹ ಜಾಗಕ್ಕೆ ಹಚ್ಚುವುದರಿಂದ ನೋವು ಶಮನವಾಗುತ್ತದೆ ಜೊತೆಗೆ ಕಲೆ ಕೂಡ ಮಾಯವಾಗುತ್ತದೆ .
ಹೀಗೆ ಸುಟ್ಟಂತಹ ಜಾಗಕ್ಕೆ ಹೆಚ್ಚು ನೀರನ್ನು ಹಾಕಬಾರದು ಸುಟ್ಟ ಕೂಡಲೇ ಒಣಗಿದ ಬಟ್ಟೆಯಿಂದ ಡಸ್ಟ್ ನೆಲ್ಲ ಸ್ವಚ್ಛಗೊಳಿಸಿ ಅದನ್ನು ತಣ್ಣೀರನ್ನು ಬಳಸಿ ಚೆನ್ನಾಗಿ ಸ್ವಚ್ಛ ಮಾಡಬೇಕು ನಂತರ ಅದರ ಮೇಲೆ ಅರಿಶಿನ ಪುಡಿಯನ್ನು ಹಚ್ಚಬೇಕು .

ಅರಿಶಿನ ಪುಡಿ ಯಲ್ಲಿಯೂ ಕೂಡ ಆಂಟಿಸೆಪ್ಟಿಕ್ ಗುಣ ಇರುವ ಕಾರಣದಿಂದಾಗಿ ಯಾವ ರೀತಿಯ ಗಾಯವಾದರೂ ಕೂಡ ಮೊದಲಿಗೆ ಆ ಗಾಯದ ಮೇಲೆ ಅರಿಶಿನ ಪುಡಿಯನ್ನು ಹಚ್ಚಿಕೊಳ್ಳಬೇಕು ಇದು ರಕ್ತಸ್ರಾವವನ್ನು ಕೂಡ ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ .
ನೀವು ಬಳಸುವಂತಹ ಅರಿಶಿಣವನ್ನು ಆದಷ್ಟು ಪರಿಶುದ್ಧವಾದ ಹರಿವನ್ನು ಬಳಸುವುದರಿಂದ ಉತ್ತಮ ಹಾಗೂ ಅಡುಗೆಯಲ್ಲಿ ಅರಿಶಿನ ಪುಡಿಯನ್ನು ಪ್ರತಿದಿನ ನಿಯಮಿತವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ .

ಈ ಮೇಲೆ ತಿಳಿಸಿದಂತ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಹಾಗೂ ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ .

LEAVE A REPLY

Please enter your comment!
Please enter your name here