ತೊನ್ನು ಈ ಒಂದು ಸಮಸ್ಯೆ ಚರ್ಮರೋಗ ಸಮಸ್ಯೆ ಎಂದು ಕರೆಯಲಾಗುತ್ತದೆ ಹಾಗೂ ಈ ಸಮಸ್ಯೆ ಬರುವುದು ಯಾವ ಕಾರಣದಿಂದಾಗಿ ಅಂದರೆ ಪಿಗ್ಮಂಟೇಷನ್ ಕೋಶಗಳು ಸತ್ತು ಹೋಗುವುದರಿಂದ ಈ ಸಮಸ್ಯೆ ಬರುತ್ತದೆ.

ಹಾಗೆ ಈ ಸಮಸ್ಯೆ ಬರುವುದಕ್ಕೆ ಮತ್ತೊಂದು ಮುಖ್ಯ ಕಾರಣವೂ ಏನು ಅಂದರೆ ರೋಗನಿರೋಧಕ ಶಕ್ತಿ ಕುಂಠಿತವಾದರೂ ಕೂಡ ಈ ಸಮಸ್ಯೆ ಮನುಷ್ಯನಿಗೆ ಬರುತ್ತದೆ ಹಾಗೆ ಈ ಸಮಸ್ಯೆ ಬಂದರೆ ಪರಿಹಾರವಿಲ್ಲ ಎಂದು ಕೂಡ ಕೆಲವರು ನಂಬಿರುತ್ತಾರೆ .

ಇದಕ್ಕೆ ತೊನ್ನು ಎಂದು ಕರೆಯಲಾಗುತ್ತದೆ ಜೊತೆಗೆ ಬಿಳಿ ಮಚ್ಚೆ ಎಂದು ಕೂಡ ಕರೆಯುತ್ತಾರೆ , ಕೆಲವರ ಪ್ರಕಾರ ಈ ಬಿಳಿ ಮಚ್ಚೆ ಬರುವುದು ಹೆಚ್ಚಾಗಿ ಹಿಡಿಯಿಂದ ಹೌದು ಇದು ನಿಜಾನೇ ಹೆಚ್ಚಿನ ಜನರಿಗೆ ಈ ಒಂದು ಸಮಸ್ಯೆ ಬರುವುದು ಹೆರಿಡಿಟಿ ಇಂದ್ದಾನೆ .
ಇತ್ತೀಚಿನ ದಿನಗಳಲ್ಲಿ ಈ ಬಿಳಿ ಮಚ್ಚೆಯಿಂದ ಬಳಲುತ್ತಿರುವ ವ್ಯಕ್ತಿಗಳು ಪೂರ್ತಿ ಮೈಯನ್ನು ಬಿಳಿ ಮಚ್ಚೆ ಬಣ್ಣಕ್ಕೆ ತಿರುಗಿಸಿಕೊಳ್ಳುವ ಹಾಗೆ ಮಾಡಿಸಿಕೊಳ್ಳುತ್ತಾರೆ ಈ ಒಂದು ಟೆಕ್ನಾಲಜಿಯು ಕೂಡ ಇದೀಗ ಬಂದಿದೆ .

ಈ ಬಿಳಿ ಮಚ್ಚೆ ಇದ್ದರೆ ಆ ವ್ಯಕ್ತಿಯನ್ನು ಏನೋ ತಪ್ಪು ಮಾಡಿದೆನೇನೋ ಅನ್ನುವುದು ಮನೋಭಾವದಿಂದ ನೋಡುತ್ತಿರುತ್ತಾರೆ ಆದರೆ ಇದೊಂದು ದೊಡ್ಡ ಸಮಸ್ಯೆಯೇನೂ ಅಲ್ಲ ಇವರಿಂದ ಈ ಒಂದು ಚರ್ಮ ರೋಗ ಬೇರೆಯವರಿಗೆ ಹರಡುವುದೂ ಇಲ್ಲ .
ಇದೀಗ ತಿಳಿಯೋಣ ಈ ಬಿಳಿ ಮಚ್ಚೆ ಸಮಸ್ಯೆಗೆ ಪರಿಹಾರವೇನು ಎಂದು ಮೊದಲನೇ ಮನೆ ಮದ್ದು ಯಾವುದು ಎಂದರೆ ವಿಳ್ಳೆದೆಲೆಯನ್ನು ತೆಗೆದುಕೊಂಡು ಅದಕ್ಕೆ ಸೌತೆಕಾಯಿ ರಸವನ್ನು ಬೆರೆಸಿ ಈ ಮಚ್ಚೆ ಆಗಿರುವಂತಹ ಭಾಗಕ್ಕೆ ಪ್ರತಿ ದಿನ ಹಚ್ಚುತ್ತಾ ಬರಬೇಕು ಈ ರೀತಿ ಮಾಡುವುದರಿಂದ ಈ ಬಿಳಿ ಮತ್ತೆ ಸಮಸ್ಯೆ ಬೇಗನೆ ಪರಿಹಾರಗೊಳ್ಳುತ್ತದೆ .

ಎರಡನೇ ಮನೆ ಮದ್ದು ಏನು ಅಂದರೆ ಕೆಮ್ಮಣ್ಣಿನ ಜೊತೆಗೆ ಶುಂಠಿ ರಸವನ್ನು ಬೆರೆಸಿ ಈ ಜಾಗಕ್ಕೆ ಲೇಪಿಸಿಕೊಂಡು ಸ್ವಲ್ಪ ಸಮಯದ ಬಳಿಕ ಸ್ನಾನವನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಕೂಡ ಬಿಳಿ ತೊನ್ನಿನ ಸಮಸ್ಯೆ ಪರಿಹಾರಗೊಳ್ಳುತ್ತವೆ .ಮತ್ತೊಂದು ಮನೆ ಮದ್ದು ಯಾವುದು ಎಂದರೆ ಸಾಸಿವೆ ಎಣ್ಣೆಯೊಂದಿಗೆ ಅರಿಶಿಣವನ್ನು ಬೆರೆಸಿ ಪ್ರತಿದಿನ ಈ ಮಚ್ಚೆ ಆದಂತಹ ಭಾಗಕ್ಕೆ ಹಚ್ಚುತ್ತಾ ಬರಬೇಕು ಈ ರೀತಿ ಮಾಡುವುದರಿಂದ ಕೂಡ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ ಅಂತ ಹೇಳಬಹುದಾಗಿದೆ .

ಬಿಳಿ ಮಚ್ಚೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಆ ಮಚ್ಚೆ ಆದಂತಹ ಜಾಗಕ್ಕೆ ಹುಣಸೆ ಹಣ್ಣಿನ ರಸವನ್ನು ಹಚ್ಚಿಕೊಳ್ಳುವುದರಿಂದ ಸಮಸ್ಯೆ ಬೇಗ ಪರಿಹಾರವಾಗುವುದು . ಇದಕ್ಕೆ ಮತ್ತೊಂದು ಮನೆ ಮದ್ದನ್ನು ಕೂಡ ಮಾಡಬಹುದು ಅದು ಏನು ಅಂದರೆ ಬೇವಿನ ಸೊಪ್ಪಿನ ರಸವನ್ನು ಬಿಳಿ ಮಚ್ಚೆ ಆಗಿರುವಂತಹ ಭಾಗಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ಕೂಡ ಈ ಸಮಸ್ಯೆ ದೂರವಾಗುತ್ತದೆ .

ಕೇವಲ ತೊನ್ನು ಅಂದರೆ ಬಿಳಿ ಮಚ್ಚೆ ಸಮಸ್ಯೆ ಮಾತ್ರವಲ್ಲದೆ ಎಲ್ಲ ರೀತಿಯ ಚರ್ಮರೋಗ ಸಮಸ್ಯೆಗಳಿಗೆ ಹಾಗೂ ಮೊಡವೆ ಮೊಡವೆ ಕಲೆಗಳು ಇಂತಹ ಸಮಸ್ಯೆಗೆ ಬೇವಿನ ಸೊಪ್ಪಿನ ರಸವನ್ನು ಬಳಸುವುದರಿಂದ ಸಾಕಷ್ಟು ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು .

ಇದಿಷ್ಟು ಬಿಳಿ ತೊನ್ನಿನ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದಾದಂತಹ ಮನೆಮದ್ದುಗಳು , ಇದೀಗ ವಿಜ್ಞಾನಿಗಳು ಈ ಬಿಳಿ ಮಚ್ಚೆ ಸಮಸ್ಯೆಗೆ ಒಂದು ಕ್ರೀಮನ್ನು ಕಂಡು ಹಿಡಿದಿದ್ದಾರೆ ನೀವು ವೈದ್ಯರ ಸಲಹೆ ಮೇರೆಗೆ ಈ ಕ್ರೀಮ್ ಅನ್ನು ಪಡೆದುಕೊಂಡು ಹಚ್ಚುವುದರಿಂದ ಈ ಸಮಸ್ಯೆ ದೂರವಾಗುತ್ತದೆ .

LEAVE A REPLY

Please enter your comment!
Please enter your name here