ಸಾಮಾನ್ಯವಾಗಿ ಹಣ್ಣು ತರಕಾರಿಗಳನ್ನು ತಿನ್ನುವುದರಿಂದ ಬಹಳಷ್ಟು ಪ್ರಯೋಜನವಿದೆ ಅಂತ ಹೇಳಬಹುದು ಆದರೆ ನಾವು ಕೆಲವೊಂದು ಬಾರಿ ಕೆಲವೊಂದು ಹಣ್ಣು ತರಕಾರಿಗಳ ಬಗ್ಗೆ ತಿಳಿಯದೆ ಅವುಗಳು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಅಂತ ಅಂತಹ ಹಣ್ಣು ತರಕಾರಿಗಳನ್ನು ತಿನ್ನುವುದಕ್ಕೆ ಹೋಗುವುದಿಲ್ಲ.
ಕೆಲವೊಂದು ತಪ್ಪು ಕಲ್ಪನೆಯಿಂದಾಗಿ ನಾವು ಕೆಲವೊಂದು ಬಾರಿ ಹಲವಾರು ಪೋಷಕಾಂಶಗಳಿರುವ ಹಣ್ಣು ತರಕಾರಿಗಳನ್ನು ಸೇವಿಸುವುದಕ್ಕೆ ಹೋಗುವುದಿಲ್ಲ ಅಂತಹ ಅನೇಕ ಪೋಷಕಾಂಶಗಳು ಇರುವ ಒಂದು ಹಣ್ಣು ಮತ್ತು ಒಂದು ತರಕಾರಿಯ ಬಗ್ಗೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.
ಈ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಇದೊಂದು ಆರೋಗ್ಯಕರ ಮಾಹಿತಿ ನಿಮಗೂ ಕೂಡ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ನೀಡಿ.
ಹೌದು ಆ ಹಣ್ಣು ಮತ್ತು ತರಕಾರಿ ಯಾವುದು ಅಂದರೆ ಬಾಳೆಹಣ್ಣು ಮತ್ತು ಆಲೂಗೆಡ್ಡೆ ನಾವು ಅನಾರೋಗ್ಯ ಬೀಳುತ್ತೇವೆ ಅಂತ ಆಲೂಗಡ್ಡೆಯನ್ನು ಹೆಚ್ಚಾಗಿ ಸೇವಿಸುವುದಕ್ಕೆ ಹೋಗುವುದಿಲ್ಲ ಹೌದು ಯಾವುದೇ ಪದಾರ್ಥವಾಗಲಿ ಅದನ್ನು ನಾವು ನಿಯಮಿತವಾಗಿ ಸೇವಿಸಬೇಕು.
ಹೆಚ್ಚು ಹೆಚ್ಚು ತಿಂದಾಗ ಅದು ನಮ್ಮ ಆರೋಗ್ಯವನ್ನು ಕ್ಷೀಣಿಸಿ ಬಿಡುತ್ತದೆ, ಆದ ಕಾರಣ ಯಾವುದೇ ಆಗಲಿ ಅದು ಅಮೃತವೇ ಆಗಲೇ ನಿಯಮಿತವಾಗಿ ಸೇವಿಸಿ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಿ .
ಆಲೂಗೆಡ್ಡೆಯನ್ನು ವಾರಕ್ಕೆ ಎರಡು ಬಾರಿ ತಿನ್ನುವುದರಿಂದ ಅಗಾಧವಾದ ಆರೋಗ್ಯ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು ಆಲೂಗಡ್ಡೆಯಲ್ಲಿ ಪೊಟಾಶಿಯಂ ವಿಟಮಿನ್ ಸಿ, ಝಿಂಕ್ ,ಸತು, ಮೆಗ್ನೀಶಿಯಂ, ಕ್ಯಾಲ್ಷಿಯಂ ಇಂತಹ ಪೋಷಕಾಂಶಗಳು ಹೆಚ್ಚಾಗಿದ್ದು ಈ ಆಲೂಗಡ್ಡೆಯನ್ನು ತಿನ್ನುವುದರಿಂದ ನಾವು ಈ ಎಲ್ಲ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.
ಆಲೂಗಡ್ಡೆಯನ್ನು ಬೇಯಿಸಿ ಅದರಿಂದ ಯಾವುದಾದರೂ ಖಾದ್ಯವನ್ನು ತಯಾರಿಸಿಕೊಂಡು ವಾರಕ್ಕೆ ಎರಡು ಬಾರಿ ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ ಜೊತೆಗೆ ಕರೆದ ಆಲೂಗಡ್ಡೆಯ ಪದಾರ್ಥಗಳನ್ನು ತಿನ್ನಲು ಹೋಗಬೇಡಿ,.
ಯಾಕೆ ಅಂದರೆ ಕರೆದ ಆಲೂಗೆಡ್ಡೆಯ ಪದಾರ್ಥವನ್ನು ತಿನ್ನುವುದರಿಂದ ಅದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ ಆದ ಕಾರಣ ಬೇರೆ ಯಾವುದಾದರೂ ಖಾದ್ಯವನ್ನು ತಯಾರಿಸಿಕೊಂಡು ಸೇವಿಸುತ್ತಾ ಬನ್ನಿ ನಿಯಮಿತ ಆಲೂಗಡ್ಡೆ ಸೇವನೆಯಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.
ಬಾಳೆಹಣ್ಣಿನ ವಿಚಾರಕ್ಕೆ ಬರುವುದಾದರೆ ಬಾಳೆಹಣ್ಣಿನ ಯಲ್ಲಿಯೂ ಕೂಡ ಉತ್ತಮವಾದ ಪ್ರಯೋಜನಕಾರಿ ಅಂಶವಿದೆ ಇನ್ನು ಬಾಳೆಹಣ್ಣಿನ ಗಾತ್ರದ ಮೇಲೆ ಆರೋಗ್ಯವನ್ನು ನಿರ್ಧರಿಸಲಾಗುತ್ತದೆ.
ಬಾಳೆಹಣ್ಣಿನ ಗಾತ್ರ ಚಿಕ್ಕದಾಗುತ್ತ ಬಂದ ಹಾಗೆ ಆರೋಗ್ಯಕರ ಅಂಶವೂ ಇದರಲ್ಲಿ ಹೆಚ್ಚುತ್ತಾ ಬರುತ್ತದೆ ಆದ ಕಾರಣ ಪ್ರತಿದಿನ ಒಂದು ಬಾಳೆಹಣ್ಣನ್ನು ಸೇವಿಸುತ್ತಾ ಬನ್ನಿ ಇದು ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಮತ್ತು ಮಧುಮೇಹಿಗಳು ಬಾಳೆಹಣ್ಣನ್ನು ತಿನ್ನುವ ಮುನ್ನ ಬಾಳೆಹಣ್ಣಿನ ತುದಿಯನ್ನು ಸ್ವಲ್ಪ ತೆಗೆದು ಹಾಕಿ ಸೇವಿಸುವುದರಿಂದ ಉತ್ತಮ.
ಬಾಳೆ ಹಣ್ಣಿನಲ್ಲಿ ಗ್ಲೂಕೋಸ್ ಫ್ರಕ್ಟೋಸ್ ಮತ್ತು ಸುಕ್ರೋಸ್ ಅಂಶವು ಹೆಚ್ಚಾಗಿದ್ದು ಇದು ಕಾರ್ಬೋ ಹೈಡ್ರೇಟ್ಸ್ ಅನ್ನು ಹೊಂದಿದೆ, ಇದು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಬೇಗನೆ ಹೆಚ್ಚು ಮಾಡಿಬಿಡುತ್ತದೆ ಆದ ಕಾರಣ ಮಿಲ್ಕ್ ಶೇಕ್ ರೂಪದಲ್ಲಿ ಬಾಳೆಹಣ್ಣನ್ನು ಸೇವಿಸಬೇಡಿ ಯಾಕೆ ಅಂದರೆ ಇದರಲ್ಲಿರುವ ಹೆಚ್ಚು ಕ್ಯಾಲೋರಿ ಅನಾರೋಗ್ಯವನ್ನು ಉಂಟು ಮಾಡಬಹುದು.
ಇದಿಷ್ಟು ಇವತ್ತಿನ ಮಾಹಿತಿಯಲ್ಲಿ ಆಲೂಗೆಡ್ಡೆ ಮತ್ತು ಬಾಳೆಹಣ್ಣನ್ನು ಹೇಗೆ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟ ಚಿಕ್ಕ ವಿಚಾರವಾಗಿದ್ದು ನಿಮಗೂ ಕೂಡ ಈ ಮಾಹಿತಿಯಿಂದ ಉಪಯುಕ್ತ ಆದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.