ಇಂದಿನ ಮಾಹಿತಿಯಲ್ಲಿ ತಿಳಿಯೋಣ ಬಾಳೆಹಣ್ಣಿನ ಹಲ್ವಾ ವನ್ನು ಹೇಗೆ ಮನೆಯಲ್ಲಿಯೇ ತಯಾರಿ ಮಾಡಬಹುದು ಅಂತ. ಸಾಮಾನ್ಯವಾಗಿ ಹಬ್ಬ ಹರಿದಿನಗಳು ಬಂದಾಗ ಮನೆಯಲ್ಲಿ ಪಾಯಸ ಹೋಳಿಗೆ ಇಂತಹ ಸಿಹಿ ತಿಂಡಿಗಳನ್ನು ಮಾಡಿ ತಿನ್ನುತ್ತೇವೆ.
ಇಲ್ಲವಾದಲ್ಲಿ ಆಚೆ ಹೊಗೆ ಯಾವುದಾದರೂ ಸ್ವೀಟ್ ಅನ್ನು ತಂದು ದೇವರಿಗೆ ನೈವೇದ್ಯ ಮಾಡುತ್ತೇವೆ. ಆದರೆ ಆಚೆ ಯಿಂದ ತಂದ ಸಿಹಿ ತಿಂಡಿಗಳು ಅಷ್ಟೇನೂ ಆರೋಗ್ಯಕ್ಕೆ ಉತ್ತಮವಲ್ಲ.
ಹಾಗೆ ಈ ಸಿಹಿ ತಿಂಡಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿರುವ ಯಾವ ಅಂಶವೂ ಕೂಡ ಇರುವುದಿಲ್ಲ ಆದ ಕಾರಣ ನಾವು ಮನೆಯಲ್ಲಿಯೇ ಹೇಗೆ ಸುಲಭವಾಗಿಯೇ ಬಾಳೆಹಣ್ಣಿನ ಹಲವರನ್ನು ಸುಲಭವಾಗಿ ತಯಾರಿಸಬಹುದು ಎಂಬುದನ್ನು ತಿಳಿಯೋಣ.
ಬಾಳೆ ಹಣ್ಣಿನ ಹಲ್ವಾ ಇದು ಕೇರಳ ರಾಜ್ಯದಲ್ಲಿ ತುಂಬಾನೇ ಪ್ರಸಿದ್ಧಿ ಹೊಂದಿರುವಂತಹ ಒಂದು ಸಿಹಿ ತಿನಿಸು ಆಗಿದ್ದು ಬಹಳಾನೆ ರುಚಿಕರವಾಗಿರುತ್ತದೆ ಇದನ್ನು ಮಾಡುವುದಕ್ಕೆ ಬೇಕಾಗಿರುವುದು ಬಾಳೆಹಣ್ಣು ತುಪ್ಪ ಬೆಲ್ಲ ಗೋಡಂಬಿ ಏಲಕ್ಕಿ ಪುಡಿ ಮತ್ತು ಬಾಳೆಹಣ್ಣಿನ ಹಲ್ವಾ ಮಾಡುವುದಕ್ಕೆ ಒಂದು ಬಾಣಲಿ.
ಮೊದಲಿಗೆ ಬಾಳೆಹಣ್ಣನ್ನು ತುಂಡು ತುಂಡಾಗಿ ಕತ್ತರಿಸಿಕೊಂಡು ಸಣ್ಣಗೆ ರುಬ್ಬಿಕೊಳ್ಳಬೇಕು ಇದೀಗ ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿಕೊಂಡು ಗೋಡಂಬಿಯನ್ನು ಸ್ವಲ್ಪ ಹುರಿದಿಟ್ಟು ಕೊಳ್ಳಬೇಕು.
ನಂತರ ನೀವು ಬಾಳೆಹಣ್ಣನ್ನು ತೆಗೆದುಕೊಂಡು ಪ್ರಮಾಣಕ್ಕೆ ತಕ್ಕಷ್ಟು ಬೆಲ್ಲವನ್ನು ತೆಗೆದುಕೊಳ್ಳಬೇಕು ಇಲ್ಲಿ ಬೆಲ್ಲದ ಪಾಕವನ್ನು ಮಾಡುವ ಅವಶ್ಯಕತೆ ಇಲ್ಲ ಬೆಲ್ಲವನ್ನು ಕರಗಿಸಿದರೆ ಸಾಕು ಆದ ಕಾರಣ ತುಪ್ಪವನ್ನು ಹಾಕಿ ಅದರಲ್ಲಿ ಬೆಲ್ಲವನ್ನು ಸಣ್ಣ ಸಣ್ಣದಾಗಿ ಕಟ್ ಮಾಡಿಕೊಂಡು ತುಪ್ಪದೊಂದಿಗೆ ಹಾಕಿ ಈ ಬೆಲ್ಲವನ್ನು ಕರಗಿಸಿಕೊಳ್ಳಬೇಕು.
ಬಾಣಲಿಯಲ್ಲಿ ತುಪ್ಪದೊಂದಿಗೆ ಬೆಲ್ಲವನ್ನು ಕರಗಿಸುವಾಗ ಈ ಬೆಲ್ಲ ಪೂರ್ತಿಯಾಗಿ ನೀರಿನ ಹಾಗೆ ಆಗಬೇಕು ಅಲ್ಲಿಯವರೆಗೂ ಈ ತುಪ್ಪವನ್ನು ಕರಗಿಸಿ ನಂತರ ಇದನ್ನು ಸ್ವಲ್ಪ ಸಮಯ ಹಾಗೇ ಬಿಡಿ ಇದೀಗ ನಾವು ತುಪ್ಪದೊಂದಿಗೆ ರುಬ್ಬಿ ಕೊಂಡಂತಹ ಬಾಳೆಹಣ್ಣನ್ನು ಫ್ರೈ ಮಾಡಬೇಕು ಹೇಗೆ ಅಂತ ಹೇಳ್ತೀನಿ ಅದೇ ಹದದಲ್ಲಿ ಬಾಳೆಹಣ್ಣನ್ನು ಫ್ರೈ ಮಾಡಿ.
ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ರುಬ್ಬಿ ಇಟ್ಟುಕೊಂಡಂತಹ ಬಾಳೆಹಣ್ಣನ್ನು ಅದಕ್ಕೆ ಹಾಕಿ ತಿರುಗಿಸುತ್ತಾ ಇರಬೇಕು, ಬಾಳೆ ಹಣ್ಣನ್ನು ಎಷ್ಟು ಸಮಯ ಈ ರೀತಿ ಫ್ರೈ ಮಾಡಬೇಕು ಅನ್ನುವುದು ತಿಳಿಯದೆ ಹೋದಲ್ಲಿ ಬಾಳೆಹಣ್ಣಿನ ಹಸಿವಾಸನೆ ಹೋಗುವವರೆಗೂ ಬಾಣಲಿಯಲ್ಲಿ ಫೈ ಮಾಡುತ್ತಲೇ ಇರಿ.
ನಂತರ ಬಾಳೆಹಣ್ಣನ್ನು ಸ್ವಲ್ಪ ತಿಂದು ನೋಡಿದರೆ ಬಾಳೆ ಹಣ್ಣಿನ ರುಚಿ ಬರಬಾರದು ಆ ಹದದಲ್ಲಿ ಬಾಳೆಹಣ್ಣನ್ನು ತುಪ್ಪದೊಂದಿಗೆ ಫ್ರೈ ಮಾಡಬೇಕು.
ಇಷ್ಟು ಆದ ಬಳಿಕ ಕಡಿಮೆ ಫ್ರೇಮ್ನಲ್ಲಿ ತಯಾರಿಸಿ ಎಟುಕುವಂತಹ ಬೆಲ್ಲದ ಪಾಕ್ ಅವನ್ನು ಈ ಬಾಳೆ ಹಣ್ಣಿನೊಂದಿಗೆ ಬೆರೆಸಿ ಮತ್ತೊಮ್ಮೆ ಕೈಯಾಡಿಸುತ್ತಲೇ ಇರಬೇಕು, ಈ ಬಾಳೆಹಣ್ಣು ಮತ್ತು ಬೆಲ್ಲದ ಪಾಕ ಚೆನ್ನಾಗಿ ಬೆರೆತು ಬಣ್ಣ ಬದಲಾಗಬೇಕು.
ಮತ್ತು ಒಂದು ನಿಮಿಷಕ್ಕೊಮ್ಮೆ ಒಂದು ಚಮಚ ತುಪ್ಪವನ್ನು ಇದಕ್ಕೆ ಬೆರೆಸಿ ಕೈಯಾಡಿಸುತ್ತಲೇ ಇರಬೇಕು ನಂತರ ಈ ಬಾಳೆ ಹಣ್ಣಿನ ಬಣ್ಣ ಬದಲಾಗಿ ಇದಕ್ಕೆ ಹಾಕಿಕೊಂಡಿರುವ ತುಪ್ಪ ಬಾಳೆಹಣ್ಣಿನಿಂದ ಹೊರಬರಬೇಕು ಈ ರೀತಿ ಬಾಣಲಿಯಲ್ಲಿ ಬಾಳೆ ಹಣ್ಣನ್ನು ಬಾಡಿಸುತ್ತ ಇರಬೇಕು.
ಬಾಳೆಹಣ್ಣಿನ ಬಣ್ಣ ಬದಲಾದ ಕೂಡಲೇ ಸ್ಟೌವ್ ಆಫ್ ಮಾಡಿ ಇದನ್ನು ಮತ್ತೊಂದು ಪಾತ್ರೆಯಲ್ಲಿ ಸಮವಾಗಿ ಹಾಕಿ ನಂತರ ಚೌಕಾಕಾರದಲ್ಲಿ ಎಸ್ಟೇಟ್ ಅನ್ನು ಕಟ್ ಮಾಡಿ ಇದು ತಣ್ಣಗಾದ ಬಳಿಕ ಬಾಳೆಹಣ್ಣಿನ ಹಲ್ವಾ ರೆಡಿಯಾಗಿರುತ್ತದೆ ಮನೆಯವರೊಂದಿಗೆ ಈ ಸಿಹಿತಿಂಡಿಯನ್ನು ಸವಿಯಿರಿ.