Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಬಾಲಿವುಡ್ ನಲ್ಲಿ ಬಹಳಷ್ಟು ಖ್ಯಾತಿ ಪಡೆದಿರುವ ನಟಿಯರು ಧರಿಸಿರುವ ಮಂಗಳಸೂತ್ರದ ಬೆಲೆಯನ್ನು ಏನಾದ್ರು ನೀವು ಕೇಳಿದರೆ ತಲೆ ತಿರುಗಿ ಬೀಳುತ್ತೀರ …!!!

ಈ ಖ್ಯಾತ ಬಾಲಿವುಡ್ ನಟಿಯರ ತಾಳಿಯ ಬೆಲೆಯನ್ನು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಾ.ಹಾಯ್ ಸ್ನೇಹಿತರೆ ಹೆಣ್ಣುಮಕ್ಕಳಿಗೆ ಬಂಗಾರವೆಂದರೆ ತುಂಬಾ ಆಸೆ ಮೋಹ ಹಾಗೆ ಇಷ್ಟವು ಕೂಡ ಹೌದು. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳ ತಾಳಿಗೆ ತುಂಬಾನೇ ಮಹತ್ವವಿದೆ. ತಾಳಿ ಎಂದರೆ ಕೇವಲ ಕರಿಮಣಿಯ ದಾರವಲ್ಲ ಇದು ಗಂಡ-ಹೆಂಡತಿಯ ಪ್ರೀತಿ ನಂಬಿಕೆ ವಿಶ್ವಾಸ ಹಾಗೂ ಬಾಂಧವ್ಯ ಬೆಸೆಯುವ ಕೊಂಡಿ. ತಾಳಿಯನ್ನು ಈಗಿನ ಮಹಿಳೆಯರು ಒಂದೊಂದು ಸಲ ತೆಗೆದು ಇಡುತ್ತಾರೆ ಈ ರೀತಿಯಾಗಿ ಮಾಡಬಾರದು ಮಂಗಲಸೂತ್ರವನ್ನು ಪ್ರತಿದಿನವೂ ಹಾಕಬೇಕು ಹಾಗೆಯೇ ಪೂಜೆ ಮಾಡುವಾಗ ತಾಳಿಯನ್ನು ಕೂಡ ಪ್ರತಿನಿತ್ಯ ಪೂಜಿಸಬೇಕು ಹೀಗೆ ಮಾಡುವುದರಿಂದ ಗಂಡನ ಅಭಿವೃದ್ಧಿ ಹೆಚ್ಚಿಸುತ್ತದೆ.

ತಾಳಿಯೂ ಕೂಡ ಗಂಡನ ಅಭಿವೃದ್ಧಿಗೆ ಕಾರಣವಾಗಿದೆ. ಹಿಂದಿನ ಕಾಲದಲ್ಲಿ ಒಂದು ಬಿಳಿ ದಾರದಲ್ಲಿ ಅರಿಶಿನದ ಕೊಂಬನ್ನು ಕಟ್ಟುತ್ತಿದ್ದರು ಇದು ಕೂಡ ಶ್ರೇಷ್ಠವಾದ ಮತ್ತು ಪವಿತ್ರವಾದ ತಾಳಿ. ಈಗಿನ ಕಾಲದಲ್ಲಿ ವಿಧವಿಧವಾದ ತಾಳಿಗಳನ್ನು ತಯಾರಿಸುತ್ತಾರೆ. ತಾಳಿಯ ಡಿಸೈನ್ ಗಳ ಮೇಲೆ ಅದರ ಬೆಲೆಯನ್ನು ನಿರ್ಧರಿಸಲಾಗುತ್ತದೆ ಹಾಗೆಯೇ ಈಗ ಬಂಗಾರದ ಬೆಲೆಯು ಕೂಡ ಹೆಚ್ಚಿದೆ. ಹಾಗಾದರೆ ಫ್ರೆಂಡ್ಸ್ ಕೆಲವೊಂದು ಬಾಲಿವುಡ್ ನಟಿಯರ ತಾಳಿಯ ರೇಟ್ ಗಳನ್ನು ನಾನು ನಿಮಗೆ ಈ ಮಾಹಿತಿಯಲ್ಲಿ ತಿಳಿಸುತ್ತೇನೆ ನೀವು ಕೂಡ ಈ ವಿಷಯ ತಿಳಿದ ಮೇಲೆ ಶಾಕ್ ಆಗುತ್ತೀರಾ.

ಬಾಲಿವುಡ್ ಬ್ಯೂಟಿ ಕ್ವೀನ್ ಐಶ್ವರ್ಯ ರೈ ಅವರ ತಾಳಿಯ ಬೆಲೆ ನೀವು ಕೇಳಿದರೆ ನಿಜಕ್ಕೂ ನೀವು ಶಾಕ್ ಆಗುತ್ತೀರಾ ಹಾಗಾದರೆ ಇವರ ತಾಳಿಯ ಬೆಲೆ ಎಷ್ಟೆಂದರೆ ಬರೋಬ್ಬರಿ 45 ಲಕ್ಷ ರೂಪಾಯಿಗಳು. ಬಾಲಿವುಡ್ನಲ್ಲಿ ತುಂಬಾ ಚಲನಚಿತ್ರಗಳನ್ನು ಮಾಡಿದವರು ಶ್ರೀಮಂತರು ಹಾಗೂ ರೂಪವಂತೆ ಕೂಡ ಹೌದು. ಇಷ್ಟು ಶ್ರೀಮಂತವಾಗಿರುವ ಇವರಿಗೆ 4500000 ರೂಪಾಯಿ ಸಾಮಾನ್ಯವಾಗಿ ಇರಬಹುದು ಆದರೆ ನಮ್ಮೆಲ್ಲರಿಗೂ ಇದು ಹೆಚ್ಚು. ಹಾಗೆಯೇ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ತಾಳಿಯ ಬೆಲೆಯನ್ನು ಕೇಳಿ ಇವರ ಮಂಗಳಸೂತ್ರದ ಬೆಲೆ 52 ಲಕ್ಷ ರೂಪಾಯಿಗಳು.

ಹಾಗೆಯೇ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಅವರ ಮಂಗಳಸೂತ್ರ ವಜ್ರದಿಂದ ಮಾಡಲಾಗಿದೆ ಇದರ ಬೆಲೆ 25 ಲಕ್ಷ ರೂಪಾಯಿ. ಹಾಗಾದರೆ ಪ್ರಿಯಾಂಕ ಚೋಪ್ರಾ ಅವರ ಮಾಂಗಲ್ಯವು ಸಾಂಪ್ರದಾಯಕವಾಗಿ ಕರಿಮಣಿ ಇಂದ ಮಾಡಿದೆ ಹಾಗೆಯೇ ಅದರಲ್ಲೂ ಕೂಡ ಒಂದು ವಜ್ರವಿದೆ ಇದರ ನಿಖರ ಬೆಲೆ ಇನ್ನು ತಿಳಿದಿಲ್ಲ. ಇನ್ನು ಬಳ್ಳಿಯಂತೆ ಇರುವ ಬಾಲಿವುಡ್ ಬೆಡಗಿ ಫಿಟ್ನೆಸ್ ತಾರೆ ಶಿಲ್ಪಾ ಶೆಟ್ಟಿಯವರ ಮಂಗಳಸೂತ್ರದ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ ಇದನ್ನು ಅವರ ಪತಿ ರಾಜ್ ಕುಂದ್ರಾ ಅವರು ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು ಮಹಾರಾಷ್ಟ್ರ ಶೈಲಿಯಲ್ಲಿ ಅಜಯ್ ಅವರನ್ನು ಮದುವೆ ಆಗಿರುವ ಬೆಡಗಿ ಕಾಜೋಲ್ ಅವರ ಮಂಗಳಸೂತ್ರದ ಬೆಲೆ 21 ಲಕ್ಷ ರೂಪಾಯಿ. ಹಾಗೆಯೇ ಕರಿಷ್ಮ ಕಪೂರ್ ಅವರ ತಾಳಿಯ ಬೆಲೆ 17 ಲಕ್ಷ ರೂಪಾಯಿ. ಇವರು ಕೂಡ ತುಂಬಾ ಸಿನಿಮಾಗಳಲ್ಲಿ ಫೇಮಸ್ ಆಗಿದ್ದು ಡ್ಯಾನ್ಸ್ ಕ್ಷೇತ್ರದಲ್ಲಿ ತುಂಬಾ ಹೆಸರನ್ನು ಸಹ ಮಾಡಿದ್ದಾರೆ. ಇನ್ನೂ 1999 ರಲ್ಲಿ ಮದುವೆಯಾದ ಮಾಧುರಿ ದೀಕ್ಷಿತ್ ಅವರ ಮಂಗಳಸೂತ್ರದ ಮೌಲ್ಯ ಬರೋಬ್ಬರಿ 8 ವರೆ ಲಕ್ಷ. ಇವರು ಹಳೆಯ ಹೀರೋಯಿನ್ ಆದರೂ ಕೂಡ ಯಾವ ಹೀರೋಯಿನ್ಗಳಿಗೆ ಕಮ್ಮಿ ಇಲ್ಲ. 1990 ರಲ್ಲಿ ಇವರು ಮಾಡಿದ ಪ್ರತಿಯೊಂದು ಸಿನಿಮಾ ಕೂಡ ತುಂಬಾನೇ ಹೆಸರುವಾಸಿಯಾಗಿವೆ.

ನೋಡಿದ್ರಲ್ಲ ಸ್ನೇಹಿತರೇ ಬಾಲಿವುಡ್ ಬೆಡಗಿಯರ ಮಂಗಳಸೂತ್ರದ ಬೆಲೆ ಒಬ್ಬರಿಗಿಂತ ಒಬ್ಬರದು ಹೆಚ್ಚಾಗಿದೆ. ಇವರ ಸಂಭಾವನೆಗಳಿಗೆ ತಕ್ಕಹಾಗೆ ಇವರು ಕೂಡ ತಮ್ಮ ಮಂಗಲಸೂತ್ರವನ್ನು ಧರಿಸಿದ್ದಾರೆ. ಇದು ಕೂಡ ಅವರ ತಪ್ಪಲ್ಲ ಸ್ನೇಹಿತರೆ ಅವರ ಕೆಲಸ ಹಾಗೂ ಅವರ ಜೀವನಶೈಲಿಗೆ ತಕ್ಕಹಾಗೆ ಅವರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಪ್ರತಿ ಹೆಣ್ಣುಮಕ್ಕಳಿಗೂ ಮಂಗಲಸೂತ್ರ ತುಂಬಾ ಚೆನ್ನಾಗಿ ಕಾಣಬೇಕು ಹಾಗೂ ತುಂಬಾ ಚೆನ್ನಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ.

ನೀವು ಕೂಡ ಮಂಗಳಸೂತ್ರವನ್ನು ನಿತ್ಯ ನಿಮ್ಮ ಕುತ್ತಿಗೆಯಲ್ಲಿ ಹಾಕಿಕೊಳ್ಳಿ ಯಾವ ಕಾರಣಕ್ಕೂ ಅದನ್ನು ತೆಗೆಯಬೇಡಿ ಹಾಗೆಯೇ ಅದನ್ನು ಭಕ್ತಿಯಿಂದ ಪೂಜಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ