ನಮಸ್ಕಾರ ಸ್ನೇಹಿತರೆ, ಒಂಟೆ ಪ್ರಾಣಿಯೂ ಕೇವಲ ಮರಳುಗಾಡಿನಲ್ಲಿ ಮಾತ್ರ ಕಂಡುಬರುವಂತಹ ಪ್ರಾಣಿಯಾಗಿದೆ. ಈ ಪ್ರಾಣಿಯು ಅದರ ಬೆನ್ನ ಮೇಲೆ ಡಬ್ಬಗಳ ಎಂದು ಕರೆಯಲಾಗುವ ಕೊಬ್ಬಿನ ಸಂಗ್ರಹವನ್ನು ಹೊಂದಿರುವ ಕುಮೇಲುಸ್ ಜಾತಿಗೆ ಸೇರಿದಂತಹ ಒಂದು ಪ್ರಾಣಿಯಾಗಿದೆ.
ಈ ಪ್ರಾಣಿಯು ಅತಿ ಉದ್ದವಾದ ಕಾಲುಗಳನ್ನು ಹೊಂದಿದಂತಹ ಪ್ರಾಣಿಯಾಗಿದೆ. ಹಾಗೆ ಅತಿ ಉದ್ದವಾದ ಅಂತಹ ಕುತ್ತಿಗೆಯನ್ನು ಕೂಡ ಹೊಂದಿರುವಂತಹ.ಈ ಪ್ರಾಣಿಯು ಸುಮಾರು ಒಂದು ತಿಂಗಳ ಕಾಲ ನೀರಿಲ್ಲದೆ ಬದುಕಬಹುದಾದ ಅಂತಹ ಪ್ರಾಣಿಯಾಗಿದೆ.
ಆದ್ದರಿಂದಲೇ ಈ ಪ್ರಾಣಿಯನ್ನು ಮರುಭೂಮಿಯಲ್ಲಿರುವ ಪ್ರಾಣಿ ಎಂದು ಕರೆಯಲಾಗುತ್ತದೆ. ಈ ಪ್ರಾಣಿಯ ಹಾಲಿನಿಂದ ಕೆಲವು ಉತ್ಪನ್ನಗಳು ತಯಾರಾಗುತ್ತಿವೆ ಹಾಗೂ ಹಾಲು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಈ ಪ್ರಾಣಿ ಅಂತೆಯೇ ಹಲವಾರು ಪ್ರಾಣಿಗಳ ಹಾಲು ಮತ್ತು ಹಾಲಿನ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಒಂಟಿ ಹಾಲು ಈಗ ಬಲು ದುಬಾರಿಯಾಗಿದೆ ವಿದೇಶದಲ್ಲಿ ಒಂಟೆಯ ಹಾಲು ಪ್ರತಿ ಲೀಟರಿಗೆ 2100rs.
ಇದು ಒಂಟೆ ಹಾಲಿನಿಂದ ಅಂದರೆ ಈ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಅಧಿಕ ವಾದಂತಹ ಪ್ರಯೋಜನಗಳಿವೆ.ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳು ಯಾವುವು ಎಂದು ಅದರ ಬಗ್ಗೆ ಇಂದಿನ ಮಾಹಿತಿಯಲ್ಲಿ ನಾನು ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಇತ್ತೀಚಿಗೆ ಮಾರುಕಟ್ಟೆಗೆ ಚಿತ್ರವಿಚಿತ್ರವಾದ ಹಾಲುಗಳು ಪರಿಚಯಿಸಲ್ಪಟ್ಟವೆ. ಇದರಲ್ಲಿ ಒಂಟೆ ಹಾಲು ಕೂಡ ಒಂದು. ಒಂಟೆ ಹಾಲನ್ನು ಬಳಸುವುದರಿಂದ ನಮ್ಮ ದೇಹಕ್ಕೆ ಬೇಕಾದಂತಹ ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ.
ಚಿಕ್ಕ ಮಕ್ಕಳಿಗೆ ಒಂಟೆ ಹಾಲನ್ನು ಕೊಡುವುದರಿಂದ ಮಕ್ಕಳ ಬೆಳವಣಿಗೆಗೆ ತುಂಬಾನೇ ಹಾಲು ಸಹಕಾರಿಯಾಗಿದೆ. ಮುಖ್ಯವಾಗಿ ಒಂಟೆ ಹಾಲು ರಕ್ತಹೀನತೆಯನ್ನು ಸರಿದೋಗಿಸುವಲ್ಲಿ ಮುಖ್ಯವಾಗಿ ಸಹಕಾರಿಯಾಗಿದೆ.
ಈ ಮೊದಲಿಗೆ ಒಂಟೆ ಹಾಲು ಕೇವಲ ಮರುಭೂಮಿ ಪ್ರದೇಶದಲ್ಲಿ ದುಬಾರಿಯಾಗಿದ್ದವು ಈಗ ನಮ್ಮ ದೇಶದಲ್ಲಿ ಕೂಡ ದುಬಾರಿಯಾಗಿದೆ.ಇದರ ಹಾಲು ಮತ್ತು ಇತರ ಉತ್ಪನ್ನಗಳ ರೂಪದಲ್ಲಿ ಜಗತ್ತಿನಲ್ಲಿಯೇ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ.
ಹಾಲು ರಕ್ತಹೀನತೆಗೆ ಉತ್ತಮವಾದಂತಹ ಮನೆಮದ್ದು ಈ ಹಾಲಿನಲ್ಲಿ ಕಬ್ಬಿಣ ಅಂಶ ಅಂತಹ ಪೋಷಕಾಂಶಗಳಿವೆ. ಇದು ರಕ್ತಹೀನತೆಯನ್ನು ತಡೆಗಟ್ಟಲು ಆದರ್ಶ ಪ್ರಿಯ ವಾದಂತಹ ಆಹಾರ. ಅಷ್ಟೇ ಅಲ್ಲದೆ ಈ ಒಂಟೆ ಹಾಲು ಹಲವಾರು ಪೋಷಕಾಂಶಗಳನ್ನು ಒಳಗೊಂಡಿದ್ದರಿಂದ ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಕೂಡ ಸಮತೋಲನದಲ್ಲಿ ಇರಿಸಲು ಸಹಕಾರಿಯಾಗಿದೆ.
ಹಾಗಾಗಿ ಇದು ಮಧುಮೇಹವನ್ನು ಗುಣಪಡಿಸುತ್ತದೆ.ಇನ್ನು ಬೆಳೆಯುವ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯದಿಂದ ಮಕ್ಕಳು ಹಿಂದೆ ಇದ್ದರೆ ಹಾಲನ್ನು ಕುಡಿಯುವುದರಿಂದ ಮಕ್ಕಳ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ.
ಒಂಟೆಯ ಹಾಲಿನಲ್ಲಿ ಸಮೃದ್ಧವಾಗಿರುವ ಪ್ರೋಟಿನ್ ಮತ್ತು ಇತರ ಸಾವಯವ ಸಂಯುಕ್ತಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ವೃದ್ಯಾಪ ವನ್ನು ಕೂಡ ದೂರಮಾಡುತ್ತದೆ.
ಇನ್ನೂ ಒಂಟೆಯ ಹಾಲಿನಲ್ಲಿ ಕಡಿಮೆ ಅಂಶದ ಕೊಬ್ಬು ಇದ್ದು ಇದು ತೂಕ ಇಳಿಸುವವರಿಗೆ ಕೂಡ ಉತ್ತಮವಾದಂತಹ ಆಹಾರ. ಒಂಟೆ ಹಾಲಿನಲ್ಲಿ ವಿಟಮಿನ್ ಬಿ2 ಮತ್ತು ವಿಟಮಿನ್-ಸಿ ಅಂಶಗಳನ್ನು ಒಳಗೊಂಡಿದೆ.
ಒಂಟಿ ಹಾಲು ಹಸುವಿನ ಹಾಲಿನ ಪ್ರಮಾಣಕ್ಕಿಂತ ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.ಒಂಟೆ ಹಾಲಿನಲ್ಲಿ ಪೋಷಕಾಂಶಗಳಾದ ಪ್ರೋಟಿನ್, ತಾಮ್ರ ಇತ್ಯಾದಿ ಪೋಷಕಾಂಶಗಳಿವೆ ಅದಲ್ಲದೆ ಕೊಲೆಸ್ಟ್ರಾಲ್ ಅಂಶವು ತುಂಬಾನೇ ಕಡಿಮೆ ಇರುತ್ತದೆ.
ಒಂಟೆ ಹಾಲನ್ನು ಹಸಿ ಹಾಲನ್ನು ಸೇವಿಸಬಾರದು. ಇದನ್ನು ಪಾಶ್ಚೀಕರಿಸಿದ ನಂತರವೇ ಹಾಲನ್ನು ಸೇವಿಸಬೇಕು.ನೋಡಿದ್ರಲ್ಲ ಸ್ನೇಹಿತರೆ ಒಂಟೆ ಹಾಲಿನ ಪ್ರಯೋಜನಗಳನ್ನು ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.