ಬಂಗಾರಕ್ಕಿಂತ ದುಬಾರಿ ಬೆಲೆ ಹೊಂದಿರುವ ತಿಮಿಂಗಿಲದ ವಾಂತಿಯನ್ನು ಎಲ್ಲಿ ಉಪಯೋಗಿಸುತ್ತಾರೆ ಗೊತ್ತೆ … ಅಷ್ಟಕ್ಕೂ ಇದರ ಬೆಲೆ ಎಷ್ಟು ಎಂದು ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪ್ರಕೃತಿಯ ಒಡಲಿನಲ್ಲಿ ಅಗಾಧವಾದ ಜೀವರಾಶಿಗಳಿವೆ ಈ ಎಲ್ಲಾ ಜೀವರಾಶಿಗಳಿಗೂ ಕೂಡ ಇಲ್ಲಿ ಬದುಕುವ ಹಕ್ಕಿದೆ ಅದೇ ರೀತಿ ಪ್ರಕೃತಿ ಎಂತಹ ವಿಸ್ಮಯಕಾರಿ ಎಂಬ ವಿಚಾರಗಳನ್ನು ಕೂಡ ನಾವು ಹಲವು ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಅದೇ ರೀತಿ ಈ ದಿನದ ಲೇಖನದಲ್ಲಿ ಕೂಡ ನೀವು ಅಚ್ಚರಿ ಪಡುವಂತಹ ವಿಚಾರವೊಂದರ ಬಗ್ಗೆ ಈ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ. ತಿಮಿಂಗಿಲಗಳು ಸಾಮಾನ್ಯವಾಗಿ ಸಮುದ್ರ ಕರಾವಳಿಯಿಂದ ಸಾಕಷ್ಟು ದೂರದಲ್ಲಿ ವಾಸ ಮಾಡುತ್ತವೆ ಈ ತಿಮಿಂಗಿಲ ಗಳು ನೀರಿನಲ್ಲಿ ಜೀವಿಸುವುದರಿಂದ ಇವುಗಳ ತ್ಯಾಜ್ಯಗಳ ಬಗ್ಗೆ ಅಥವಾ ಇವುಗಳು ವಾಂತಿ ಮಾಡಿಕೊಳ್ಳುತ್ತವೆ ಎಂಬ ವಿಚಾರಗಳು ಎಷ್ಟೋ ಜನರಿಗೆ ತಿಳಿದಿರುವುದಿಲ್ಲ.

ಹೌದು ಈ ತಿಮಿಂಗಿಲಗಳ ವ್ಯಾಜ್ಯ ನೀರಿನಲ್ಲಿ ಸುಮ್ಮನೆ ವ್ಯರ್ಥವಾಗಿ ಇರುವುದಿಲ್ಲ ಇದಕ್ಕೂ ಕೂಡ ಬೆಲೆ ಇದೆ. ಹೌದು ನೀವು ಅಂದುಕೊಳ್ಳಬಹುದು ತಿಮಿಂಗಲದ ವ್ಯಾಜ್ಯವನ್ನು ಏನಕ್ಕೆ ಬಳಸುತ್ತಾರೆ ಅಂತ ಯಾವುದಕ್ಕಾಗಿ ಇದರ ಬಳಕೆ ಮಾಡಲಾಗುತ್ತದೆ ಎಂದು ಆದರೆ ತಿಮಿಂಗಿಲದ ವ್ಯಾಜ್ಯವನ್ನು ಪ್ರಮುಖವಾದ ವಸ್ತುವಿನ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ ಅದನ್ನ ಕೂಡ ತಿಳಿಯೋಣ ಇಂದಿನ ಮಾಹಿತಿಯಲ್ಲಿ. ಹೌದು ಇವೆಲ್ಲವೂ ಸತ್ಯ ತಿಮಿಂಗಿಲದ ವ್ಯಾಜ್ಯ ಹಾಗೂ ಉದರ ವಾಂತಿಯನ್ನು ಬಹುಮುಖ್ಯವಾದ ವಿಚಾರವೊಂದಕ್ಕೆ ಬಳಕೆ ಮಾಡುತ್ತಾರೆ.ಅನೇಕರು ಇದನ್ನು ಮಲ ಎಂದು ಕರೆದರೆ ಅನೇಕ ಬಾರಿ ಈ ವಸ್ತುವು ಗುದನಾಳದ ಮೂಲಕ ಹೊರಬರುತ್ತದೆ. ಆದರೆ ಕೆಲವೊಮ್ಮೆ ತಿಮಿಂಗಿಲವು ದೊಡ್ಡದಾದಾಗ ಅದನ್ನು ಬಾಯಿಯಿಂದ ಚೆಲ್ಲುತ್ತದೆ,

ಹೌದು ಸಾಮಾನ್ಯವಾಗಿ ತಿಮಿಂಗಿಲ ಅಂದರೆ ಅದೊಂದು ದೊಡ್ಡ ಪ್ರಾಣಿಯೇ ಹೌದು ಇಂತಹ ಸಮಯದಲ್ಲಿ ತಿಮಿಂಗಿಲವು ತನ್ನಲ್ಲಿರುವ ತ್ಯಾಜ್ಯವನ್ನು ಬಾಯಿಯ ಮೂಲಕ ಹೊರ ಹಾಕುತ್ತದೆ ಅದನ್ನು ವಾಂತಿ ಎಂದು ಕರೆಯುತ್ತಾರೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ಅಂಬರ್ಗ್ರಿಸ್ ಎಂದು ಕರೆಯಲಾಗುತ್ತದೆ. ತಿಮಿಂಗಿಲದ ಕರುಳಿನಿಂದ ಬರುವ ಅಂಬರ್ಗ್ರಿಸ್ ಕಪ್ಪು ಅಥವಾ ಬೂದು ಬಣ್ಣದ ಘನ ವಸ್ತುವೂ ಆಗಿರುತ್ತದೆ ಹಾಗೂ ಈ ವಸ್ತುವು ತನ್ನ ದೇಹದೊಳಗೆ ತಿಮಿಂಗಿಲವನ್ನು ರಕ್ಷಿಸುತ್ತದೆ.ಈ ಅಂಬರ್ಗ್ರಿಸ್ ಎಂಬ ಬೂದು ಬಣ್ಣದ ವಸ್ತು ದೇಹದಿಂದ ಹೊರ ಹೊಮ್ಮಲು ಹಲವು ವರುಷಗಳು ಬೇಕಾಗುತ್ತದೆ ಹಾಗೂ ಒಮ್ಮೆ ಹೊರಬಂದ ತಕ್ಷಣ ಸಮುದ್ರದ ಉಪ್ಪು ನೀರು ಹಾಗೂ ಸೂರ್ಯನ ಬೆಳಕಿನಿಂದ ಇತ್ಯಾಜ್ಯವು ಬಂಡೆಯಂತಹ ನಯವಾದ ಉಂಡೆಯಾಗಿ ಬದಲಾಗುತ್ತದೆ.

ಅದು ಮೇಣದಂತೆ ಭಾಸವಾಗುತ್ತದೆ ಮತ್ತು ಸುಗಂಧ ದ್ರವ್ಯಗಳನ್ನು ತಯಾರಿಸಲು ಅಂಬರ್ಗ್ರಿಸ್ ಅನ್ನು ಬಳಸಲಾಗುತ್ತದೆ. ಈ ಕಾರಣದಿಂದಾಗಿ, ಇದು ಸಾಕಷ್ಟು ಮೌಲ್ಯಯುತವಾಗಿದೆ. ಅಂಬರ್ಗ್ರಿಸ್ನಿಂದ ತಯಾರಿಸಿದ ಸುಗಂಧವು ದೀರ್ಘಕಾಲದವರೆಗೆ ಇರುತ್ತದೆ. ಅನೇಕ ವಿಜ್ಞಾನಿಗಳು ಅಂಬರ್ಗ್ರಿಸ್ ತೇಲುವ ಚಿನ್ನ ಎಂದೂ ಕರೆಯುತ್ತಾರೆ. ಅದರ ತೂಕದ ಬಗ್ಗೆ ಮಾತನಾಡುವಾಗ, ಇದು 15 ಗ್ರಾಂ ನಿಂದ 50 ಕೆಜಿ ವರೆಗೆ ಇರಬಹುದು. ಈ ರೀತಿಯಾಗಿ ತಿಮಿಂಗಲದ ಹೊರಬರುವ ಈ ವ್ಯಾಜ್ಯವು ಕೂಡ ಹಲವು ವಸ್ತುಗಳ ತಯಾರಿಕೆಗೆ ಡಿಯೋಡ್ರೆಂಟ್ ಪರ್ಫ್ಯೂಮ್ ತಯಾರಿಕೆಗೆ ಬಳಕೆಯಾಗುತ್ತದೆ. ನೋಡ್ರಲಾ ಈ ತಿಮಿಂಗಿಲದ ತ್ಯಾಜ್ಯಕ್ಕೂ ಕೂಡ ಅದೆಷ್ಟು ಬೆಲೆ ಏರುತ್ತದೆ ಎಂದು. ಕಡಲತೀರದಲ್ಲಿ ಅಥವಾ ಮೀನುಗಾರರಿಗೆ ಇಂಥ ವಿಚಾರಗಳು ತಿಳಿದಿರುತ್ತದೆ ಇನ್ನೂ ಎಷ್ಟೋ ಬಾರಿ ಅದೃಷ್ಟ ಇದ್ದವರಿಗೆ ಮೀನಿನ ತ್ಯಾಜ್ಯ ಸಿಕ್ಕಿರುವ ಉದಾಹರಣೆಗಳು ಕೂಡ ಉಂಟು ಧನ್ಯವಾದಗಳು.

Leave a Reply

Your email address will not be published. Required fields are marked *