Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪ್ರೇಮಿಗಳೇ ನಿಮ್ಮ ಪ್ರೀತಿ ಗೆಲ್ಲಬೇಕು ಅಂದ್ರೆ ಇವತ್ತೇ ಇಲ್ಲಿಗೆ ಭೇಟಿ ಕೊಡಿ? ಈ ದೇವಸ್ಥಾನಕ್ಕೆ ಹೋಗಿ ಬಂದ್ರೆ ನಿಮಗೆ ಇರುವಂತಹ ಎಲ್ಲಾ ಕಷ್ಟಗಳು ದೂರವಾಗುತ್ತವೆ !!! ಇದು ಪ್ರೀತಿಯ ದೇವರಂತೆ!!!!

ಎಲ್ಲಾ ಪ್ರೇಮಿಗಳಿಗೂ ಕೊನೆಯದಾಗಿ ಬಂದು ಹೋಗುವಂತಹ ಒಂದು ಸಮಸ್ಯೆ ಏನಪ್ಪಾ ಅಂದರೆ ಹೆಣ್ಣಿನ ಮನೆಯಲ್ಲಿ  ಅಥವಾ ಗಂಡಿನ ಮನೆಯಲ್ಲಿ ಅವರವರ ಪ್ರೇಮವನ್ನು ಒಪ್ಪಿಕೊಳ್ಳದೆ ಇರುವುದು.

ಹೀಗೆ ಒಪ್ಪಿಕೊಳ್ಳದೇ ಇರುವ ಸಮಯದಲ್ಲಿ ಅಚಾತುರ್ಯ ದಲ್ಲಿ ಪ್ರೇಮಿಗಳು ಏನು ಬೇಕಾದರೂ ಮಾಡಿಕೊಳ್ಳಲು ನಿರ್ಧರಿಸಬಹುದು ಉದಾಹರಣೆಗಾಗಿ ಮನೆಯಲ್ಲಿ ಹೇಳದೆ ಮದುವೆ ಮಾಡಿಕೊಳ್ಳಬಹುದು ಅಥವಾ ಮನೆಯವರ ಒತ್ತಾಯಕ್ಕೆ ಬೇರೆಯವರನ್ನು ಮದುವೆಯಾಗಿ ಅವರ ಜೀವನವನ್ನು ಹಾಳು ಮಾಡಿಕೊಂಡು ಇನ್ನೊಬ್ಬರ ಜೀವನವನ್ನು ಕೂಡ ಹಾಳು  ಮಾಡಬಹುದು.

ನಾವು ನಿಮಗೆ ಇಲ್ಲೊಂದು ದೇವಸ್ಥಾನ ಇದೆ ಸ್ನೇಹಿತರೆ ಈ ದೇವಸ್ಥಾನಕ್ಕೆ ನೀವೇನಾದರೂ ಹೋಗಿ ನಿಮ್ಮ ನಿಜವಾದ ಪ್ರೀತಿಯನ್ನು ಈ ದೇವರ ಮುಂದೆ ಹೇಳಿಕೊಂಡರೆ ನಿಮಗೂ ಇರುವಂತಹ ಅಡೆತಡೆಗಳನ್ನು ದೇವರು  ನಿವಾರಣೆ ಮಾಡುತ್ತಾನಂತೆ. ಆದರೆ ನಿಮ್ಮ ಪ್ರೀತಿ ನಿಜ ವಾಗಿರಬೇಕು.

ಹಾಗೂ ನಿಮ್ಮ ಪ್ರೀತಿಯ ಮದುವೆಯಾಗಿ ಮುಂದೆ ಸಂಸಾರ ಮಾಡು ವಂತಹ ಆಲೋಚನೆಯನ್ನು ಇಟ್ಟುಕೊಂಡು ಈ ದೇವರಿಗೆ ಹರಕೆಯನ್ನು ಮಾಡಿದರೆ ನಿಜವಾಗಲೂ ನಿಮ್ಮ ಪ್ರೀತಿ ಜಯ ಗಳಿಸುತ್ತದೆ ಹಾಗೆ ಎರಡೂ ಕಡೆಯಿಂದ ಮನೆಯವರು ಒಪ್ಪಿಗೆ ಸೂಚಿಸಿ ನಿಮಗೆ ಮದುವೆಯನ್ನು ಮಾಡುತ್ತಾರೆ.

ಇಷ್ಟೆಲ್ಲಾ ಹೇಳಿದ ಮೇಲೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಈ ದೇವಸ್ಥಾನದಲ್ಲಿ ಇರುವಂತಹ ದೇವರು ಯಾರು ಎನ್ನುವ ಪ್ರಶ್ನೆಗೆ ಉತ್ತರ, ಮುನೇಶ್ವರ ಎನ್ನುವ ದೇವರು, ಮುನೇಶ್ವರ ಎನ್ನುವ ಹೆಸರಿನಲ್ಲಿ ಇರುವಂತಹ ಶಿವ ಪರಮಾತ್ಮನು ಇಲ್ಲಿ ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ.

ಈ ದೇವಸ್ಥಾನದಲ್ಲಿ ಹಲವಾರು ಜನರು ತಾವು ಬಯಸಿದಂತಹ ಪ್ರೇಯಸಿಯು ತುರುಕಿದ್ದಾರೆ ಹಾಗೂ ಇತರ ಪವಾಡಗಳು ಇಲ್ಲಿ ಹಲವಾರು ಉದಾಹರಣೆಗಳಿಂದ  ಜನರು ಪ್ರೇರಿತರಾಗಿದ್ದಾರೆ. ಇದರಿಂದಾಗಿ ಸಾವಿರಾರು ಜನರು ಇಲ್ಲಿಗೆ ಬಂದು ತಮ್ಮ ತಮ್ಮ ಸಮಸ್ಯೆಯನ್ನು ಎಲ್ಲಿ ಹೇಳಿಕೊಂಡು ನಿರ್ವಹಣೆಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ .

ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ಕುಂಬಕೋಣಂ ಅನ್ನುವ ಪಟ್ಟಣದಿಂದ 7 ಕಿಲೋ ಮೀಟರ್ ದೂರದಲ್ಲಿ ಇದೆ. ಅಲ್ಲಿ ಹೋಗಿ ನೀವು ತಿರುಶಕ್ತಿಮಟ್ಟಂ ಎನ್ನುವ  ಹಳ್ಳಿಯ ಹೆಸರನ್ನು ಕೇಳಿದರೆ ಯಾರು ಬೇಕಾದರೂ ದೇವರ ದೇವಸ್ಥಾನದ ಬಗ್ಗೆ ನಿಮಗೆ ಹೇಳುತ್ತಾರೆ.

ಈ ದೇವಸ್ಥಾನದ ಹಿನ್ನೆಲೆ ಏನು ಹಾಗೂ ಈ ದೇವಸ್ಥಾನದ ಹಿಂದೆ ಯಾವ ತರಹದ ಕಥೆ ಅಡಗಿದೆ ?

ಈ ಪ್ರದೇಶವು ಪಾರ್ವತಿ ದೇವಿಯು ತಪಸ್ಸು ಮಾಡಿದಂತಹ ಸ್ಥಳವಾಗಿದೆ ಎಂದು ಕೆಲ ಜನರು ಹೇಳುತ್ತಾರೆ. ಹಾಗೆ ಪೂರಕವಾಗಿರುವ ಅಂತಹ ಕತೆಯೂ ಕೂಡ ಇದೆ ಆ ಕಥೆ ಏನಪ್ಪಾ ಅಂದರೆ, ಪಾರ್ವತಿ ದೇವಿಯು ಶಿವನನ್ನು ಹೇಗಾದರೂ ಮಾಡಿ ಬಳಸಿಕೊಳ್ಳಬೇಕು ಎಂದು ಒಂಟಿ ಕಾಲಿನಲ್ಲಿ ತಪಸ್ಸು ಮಾಡುತ್ತಾಳೆ.

ಹೀಗೆ ತಪಸ್ಸು ಮಾಡಿದಂತಹ ಪಾರ್ವತಿಯ ತಪಸ್ಸನ್ನು ನೋಡಿ ಶಿವನ ಅಗ್ನಿಯ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಹಾಗೆ  ಪ್ರತ್ಯಕ್ಷ ಆಗಿರುವಂತಹ ಶಿವನನ್ನು ಯಾವುದೇ ಯೋಚನೆ ಮಾಡದೆ ಶಿವನನ್ನು ಅಪ್ಪಿಕೊಳ್ಳುತ್ತಾಳೆ. ಹೀಗೆ ಅಪ್ಪಿಕೊಳ್ಳುತ್ತಾಳೆ.

ಹೀಗೆ ಅಪ್ಪಿಕೊಂಡ ಅಂತಹ ಪಾರ್ವತಿಯನ್ನು ಹಾಗೂ ಅವಳ ನಿಜವಾದ ಪ್ರೇಮವನ್ನು ಕಂಡಂತಹ ಶಿವನು ಅವಳನ್ನು ವಿಹಾಹ ಆಗುತ್ತಾನೆ. ಹೀಗೆ ಈ ಸ್ಥಳದಲ್ಲಿ ಯಾರಾದರೂ ಯಾರ ಮೇಲಾದರೂ ಪ್ರೇಮವನ್ನು ಬಯಸಿದರೆ ಇಲ್ಲಿ ಬಂದು ಕೋರಿಕೆಯನ್ನು ಇಟ್ಟರೆ ಆ ಶಿವನು ನಿಮಗೆ ವರವನ್ನು ನೀಡುತ್ತಾನೆ ಇಲ್ಲವೇ ಒಂದು ಪ್ರತೀತಿ ಇದೆ.

Leave a Reply

Your email address will not be published. Required fields are marked *