ಪ್ರಮುಖ ಕೆಲಸಕ್ಕೆ ನೀವು ಹೊರಗೆ ಹೋಗುವಾಗ ಒಂದು ಮುಷ್ಟಿ ಅಕ್ಕಿಯನ್ನು ಕೈಯಲ್ಲಿ ಇಟ್ಟುಕೊಂಡು ಹೀಗೆ ಹೇಳಿದರೆ ಸಾಕು ನಿಮ್ಮ ಮನಸಿನ ಬೇಡಿಕೆಗಳು ಈಡೇರುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಆಚೆ ಕೆಲಸಕ್ಕೆ ಹೋಗುವಾಗ ನೀವೇನಾದರೂ ಹೊಸ್ತಿಲಿನ ಮುಂದೆ ಈ ಪರಿಹಾರವನ್ನ ಮಾಡಿಕೊಂಡು ನಿಮ್ಮ ಕೆಲಸಕ್ಕೆ ಹೋಗಿದ್ದೇ ಆದಲ್ಲಿ ಅಥವಾ ಮನೆಯವರು ಬೆಳಿಗ್ಗೆ ಎದ್ದು ಈ ಕೆಲಸವನ್ನು ಮಾಡಿದರೆ ಮನೆಯಿಂದ ಆಚೆ ಹೋಗಿ ಕೆಲಸ ಮಾಡಿ ಬರುವವರಿಗೆ ಒಳ್ಳೆಯ ಲಾಭ ಆಗುತ್ತದೆ ಮತ್ತು ಅವರು ಹೋದ ಕೆಲಸ ಯಾವುದೇ ನಿರ್ವಿಘ್ನ ಇಲ್ಲದೆ ಅಡೆತಡೆಗಳೂ ಇಲ್ಲದೆ ಕೆಲಸ ಆಗುತ್ತದೆ ಹೌದು ಹಾಗಾದರೆ ಹೊಸ್ತಿಲಿನ ಬಳಿ ಮಾಡುವಂತಹ ಆ ಪರಿಹಾರವೇನು ಅಂತ ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ಪರಿಹಾರವನ್ನು ಯಾವ ಧರ್ಮದವರು ಬೇಕಾದರೂ ಪಾಲಿಸಬಹುದು ಆದಕಾರಣ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದು ಈ ಪರಿಹಾರವನ್ನು ಪ್ರತಿಯೊಬ್ಬರೂ ಹೊಸ್ತಿಲಿನ ಬಳಿ ಪಾಲಿಸಿ.

ಹಿಂದೂ ಸಂಪ್ರದಾಯವನ್ನು ಪಾಲಿಸುವವರು ಹಿಂದೂ ಧರ್ಮದ ಪಾಲನೆ ಮಾಡುವವರು ಹೊಸ್ತಿಲಿನ ಪೂಜೆ ಮಾಡುತ್ತಾರೆ ಮತ್ತು ಬೆಳಿಗ್ಗೆ ಎದ್ದು ಪ್ರತಿ ದಿನ ಈ ಹೊಸ್ತಿಲನ್ನು ಒರೆಸಿ ಅರಿಶಿಣ ಕುಂಕುಮವನ್ನು ಇಟ್ಟು ಹೊಸ್ತಿಲನ್ನು ಪೂಜಿಸುತ್ತಾರೆ ಆದರೆ ಕೆಲವರು ಅಂದರೆ ಬೇರೆ ಧರ್ಮ ಪಾಲನೆ ಮಾಡುವವರು ಈ ಹೊಸ್ತಿಲು ಪೂಜೆಯನ್ನೂ ಮಾಡುವುದಿಲ್ಲ ಆದರೆ ಪ್ರತಿಯೊಬ್ಬರೂ ಕೂಡ ಪಾಲಿಸಬಹುದಾದ ಈ ಪರಿಹಾರ ಅದೇನೆಂದರೆ ಬೆಳಿಗ್ಗೆ ಎದ್ದ ತಕ್ಷಣ ಶುಭ್ರವಾಗಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಹೊಸ್ತಿಲನ್ನು ನೀರು ಹಾಕಿ ಸುಭದ್ರಗೊಳಿಸಬೇಕು ಅಂದರೆ ಆ ಹೊಸ್ತಿಲು ನೆನೆಯಬೇಕು ಹಾಗೆ ನೀರನ್ನು ಹಾಕಿ ಅದು ಸ್ವಲ್ಪ ಸಮಯದವರೆಗೂ ಒಣಗಬಾರದು ಅಷ್ಟು ನೀರನ್ನು ಹಾಕಿ ನಂತರ ನಿಮ್ಮ ಮನೆಯಲ್ಲಿ ಇರುವ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಸಮಯ ನೆನೆಸಿ ನಂತರ ಎರಡೂ ಬದಿಗೂ ಅಂದರೆ ಹೊಸ್ತಿಲಿನ ಎರಡೂ ಬದಿಗೂ ಈ ಅಕ್ಕಿಯನ್ನು ಇರಿಸಬೇಕು.

ಈ ರೀತಿ ಬೆಳಿಗ್ಗೆ ಮಾಡುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ನ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ ಹಾಗೂ ಮನೆಯಲ್ಲಿ ಹಿರಿಯರು ಆಚೆ ಕೆಲಸಕ್ಕೆಂದು ಹೋಗುವಾಗ ಅದಕ್ಕೂ ಮುಂಚೆ ಈ ಪರಿಹಾರವನ್ನು ಮಾಡಿದರೆ ಅವರು ಹೋಗುವ ಪ್ರತಿ ಕೆಲಸವೂ ಕೂಡ ಉತ್ತಮವಾಗಿ ಜರಗುತ್ತದೆ. ಉತ್ತರ ಕರ್ನಾಟಕದ ಮಂದಿ ಮನೆಯಿಂದ ಆಚೆ ಕೆಲಸಕ್ಕೆ ಹೋಗುವವರಿಗೆ ಈ ರೀತಿ ಮಾಡುತ್ತಾರೆ ಅದೇನೆಂದರೆ ತಮ್ಮ ಮಧ್ಯದ ಬೆರಳಿನಿಂದ ಕುಂಕುಮವನ್ನು ತೆಗೆದು ಕೊಂಡು ಅದನ್ನು ಹಣೆಗೆ ಇರಿಸಿ ನಂತರ ಅಕ್ಕಿಯನ್ನು ನೆನೆಸಿ ಆ ನೆನೆಸಿದ ಅಕ್ಕಿಯನ್ನು ತಲೆಯ ಭಾಗದಲ್ಲಿ ಬೊಟ್ಟು ಇರಿಸಿದ ಜಾಗದಲ್ಲಿ ಅಂಟಿಸುತ್ತಾರೆ ಹೀಗೆ ಮಾಡುವುದರಿಂದ ಹೋಗುವ ಕೆಲಸ ಶುಭಕರವಾಗಿ ಜರುಗಲಿ ಎಂಬ ಆಲೋಚನೆಯಿಂದ ಪಾಲಿಸುತ್ತಾರೆ. ಅದರಿಂದ ಕೆಲಸಕ್ಕೆ ಹೋಗುವ ಮುನ್ನ ಈ ರೀತಿ ಮಾಡುವುದರಿಂದ ಹೋದ ಕೆಲಸ ಉತ್ತಮವಾಗಿ ನೆರವೇರುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ರೀತಿಯ ಒಂದು ಪರಿಹಾರವನ್ನು ಕೂಡ ಮಾಡಿಕೊಳ್ಳಬಹುದು.

ಇನ್ನು ಯಾರಿಗಾದರೂ ಹಣೆಗೆ ಬೊಟ್ಟನ್ನು ಇಡುವಾಗ ಅಂದರೆ ಕುಂಕುಮ ಅಥವಾ ಚಂದನವನ್ನು ಇರಿಸುವಾಗ ಮಧ್ಯ ಬೆರಳನ್ನು ಬಳಸಿ ಹಣೆಗೆ ಕುಂಕುಮ ಲೇಪನ ಮಾಡುವುದು ತುಂಬ ಶ್ರೇಷ್ಠ ಅಂತ ಹೇಳಲಾಗಿದೆ. ನಿಮಗೆ ಹಣೆಗೆ ಅರ್ಚಕರೇ ಆಗಲಿ ಅಥವಾ ನಿಮ್ಮ ಮನೆಯಲ್ಲಿ ಹಿರಿಯರು ಆಗಿರಲಿ ಅವರು ನಿಮಗೆ ಹಣೆಗೆ ಇಡುವಾಗ ನೀವು ಗಮನಿಸಿ ಮಧ್ಯದ ಬೆರಳನ್ನು ಬಳಸಿ ಹಣೆಗೆ ಬೊಟ್ಟು ಇಡುತ್ತಾರೆ. ಅದರಿಂದ ಬೇರೆಯವರಿಗೆ ಹಣೆಗೆ ಬೊಟ್ಟನ್ನು ಇಡುವಾಗ ಈ ಮಧ್ಯದ ಬೆರಳನ್ನು ಬಳಸಿ ಬೊಟ್ಟನ್ನಿಡುವುದು ಶ್ರೇಷ್ಠ ಎಂದು ನಂಬಲಾಗಿದೆ.

Leave a Reply

Your email address will not be published.