ಮನೆಯಲ್ಲಿ ಹೆಂಗಸರಿಗೆ ಪವಿತ್ರವಾದ ಸ್ಥಳ ಎಂದರೆ ಅಡುಗೆ ಮನೆ. ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಚವಾಗಿಡಬೇಕು ಸ್ವಚ್ಛವಾಗಿಟ್ಟರೆ ಲಕ್ಷ್ಮಿ ನೆಲೆಸುತ್ತಾಳೆ ಎಂಬ ಮಾತುಗಳು ಕೇಳಿ ಬರುತ್ತವೆ ಆದರೆ ಈ ದಿನ ನಾವು ಪ್ರತಿನಿತ್ಯ ಹಾಲು ಕಾಯಿಸುವ ಸಂದರ್ಭದಲ್ಲಿ ಹೇಗೆ ನಿಮ್ಮ ಮನೆಗೆ ಲಕ್ಷ್ಮಿ ಬರುತ್ತಾಳೆ ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.
ಇದನ್ನ ಕೇಳಿದರೆ ಅಚ್ಚರಿಯಾಗುವುದು ಖಂಡಿತ ಏಕೆಂದರೆ ಮಹಿಳೆಯರು ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸವೇ ಹಾಲು ಕಾಯಿಸುವುದು ಇದರಿಂದ ಆಗುವ ಉಪಯೋಗ ಏನು ಅನಾನುಕೂಲ ಏನು ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ.
ನಾವು ಮನೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಹಾಲು ಕಾಯಿಸುವಂಥ ಸಂದರ್ಭದಲ್ಲಿ ಮನೆಯಲ್ಲಿ ಇರುವಂತಹ ಒಲೆ ಅಥವಾ ಗ್ಯಾಸ್ಟ್ರೋ ಚೆನ್ನಾಗಿ ಒರೆಸಿ ಸ್ವಚ್ಚಗೊಳಿಸಬೇಕು ಅದಾದ ನಂತರ ಅದಕ್ಕೆ ಕುಂಕುಮವನ್ನ ಇಡಬೇಕು ಮತ್ತು ಅಡುಗೆ ಮನೆಯನ್ನು ಕೂಡ ಸ್ವಚ್ಚವಾಗಿಡಬೇಕು ಯಾಕೆ ಅಡುಗೆಮನೆಯನ್ನು ಸ್ವಚ್ಛವಾಗಿಡಬೇಕು ಎಂದರೆ ಆ ರೀತಿ ಸ್ವಚ್ಚವಾಗಿಡುವುದರಿಂದ ಲಕ್ಷ್ಮಿ ಮನೆಗೆ ಬರುತ್ತಾಳೆ
ಮತ್ತೊಂದು ವಿಶೇಷವಾದ ಮಾಹಿತಿಯೆಂದರೆ ನಮ್ಮ ಆರೋಗ್ಯದ ದೃಷ್ಟಿಯಿಂದ ಅಂದರೆ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿ ಅಡುಗೆ ಮನೆ ಸ್ವಚ್ಛವಾಗಿರಬೇಕು ಏಕೆಂದರೆ ಮಹಿಳೆಯರು ಹೆಚ್ಚಾಗಿ ಅಡುಗೆ ಮನೆಯಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ
ಅವರು ಆ ರೀತಿ ಹೆಚ್ಚು ಸಮಯ ಅಡುಗೆಮನೆಯಲ್ಲಿ ಕಳೆಯುವುದರಿಂದ ಅಡುಗೆಮನೆ ಸ್ವಚ್ಛವಾಗಿಲ್ಲದಿದ್ದರೆ ಅವರಿಗೆ ಯಾವುದಾದರೂ ರೋಗ ರುಜಿನಗಳು ಬರುವ ಸಾಧ್ಯತೆ ಇರುತ್ತದೆ ಆದ್ದರಿಂದ ಯಾವಾಗಲೂ ಕೂಡ ಅಡುಗೆ ಮನೆ ಸ್ವಚ್ಛವಾಗಿರಬೇಕು ಮನೆಯಯನ್ನ ಸ್ವಚ್ಛವಾಗಿಡುವುದು ಎಷ್ಟು ಮುಖ್ಯವೋ ಅಡುಗೆಮನೆಯನ್ನು ಸ್ವಚ್ಛವಾಗಿಡುವುದು ಅಷ್ಟೇ ಮುಖ್ಯ ಏಕೆಂದರೆ ಮನೆಯಲ್ಲಿರುವ ಎಲ್ಲರ ಆರೋಗ್ಯವನ್ನು ಕಾಪಾಡಲು ಹೆಚ್ಚು ಸಹಕಾರಿಯಾಗಿದ್ದು ಅಡುಗೆಮನೆ ಅಲ್ಲವೇ.
ಈ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಸ್ವಚ್ಛವಾಗಿ ಇಟ್ಟುಕೊಂಡ ನಂತರ ಹಾಲನ್ನ ಒಲೆಯ ಮೇಲೆ ಇಡಬೇಕು ಯಾವುದೇ ಕಾರಣಕ್ಕೂ ಹಾಲು ಉಕ್ಕದ ರೀತಿಯಲ್ಲಿ ನೋಡಿಕೊಳ್ಳಬೇಕು ಅಪ್ಪಿತಪ್ಪಿ ನಿಮ್ಮ ಮನೆಯಲ್ಲಿ ಹಾಲು ಉಕ್ಕಿತು ಎಂದರೆ ಲಕ್ಷ್ಮಿ ಮನೆಗೆ ಬರುವುದಿಲ್ಲ
ಸಾಧ್ಯವಾದಷ್ಟು ಹಾಲು ಉಕ್ಕದ ರೀತಿಯಲ್ಲಿ ನೋಡಿಕೊಳ್ಳಿ ಹಾಗೂ ಏನಾದರೂ ನಿಮ್ಮ ಗಮನವನ್ನು ತಪ್ಪಿ ಹಾಲು ಉಕ್ಕಿತೋ ಎಂದರೆ ಅದಕ್ಕೆ ಐದರಿಂದ ಒಂಭತ್ತು ಕಾಳಿನಷ್ಟು ಅಕ್ಕಿಯನ್ನು ಹಾಕಿ ಇದರಿಂದ ಹಾಲಿಗೆ ಸಂಬಂಧಪಟ್ಟ ಹಾಗೆ ಯಾವುದೇ ದೋಷವಿದ್ದರೂ ನಿವಾರಣೆಯಾಗುತ್ತದೆ.
ನಾವು ಈ ರೀತಿ ಹಾಲು ಉಕ್ಕಿಸುವುದರಿಂದ ಲಕ್ಷ್ಮಿಗೆ ಅಪಮಾನ ಮಾಡಿದ ರೀತಿ ಆಗುತ್ತದೆ ಏಕೆಂದರೆ ಹಾಲು ಎಂಬುದು ಶ್ರೇಷ್ಠತೆಯ ಸಂಕೇತ ಮತ್ತು ಯಾವಾಗಲೂ ನಾವು ಲಕ್ಷ್ಮಿಗೆ ಹಾಲಿನಿಂದ ಅಭಿಷೇಕ ಮಾಡಬೇಕು ಮತ್ತು ಅಭಿಷೇಕದ ಹಾಲನ್ನ ಮನೆಯಲ್ಲಿರುವ ಎಲ್ಲರಿಗೂ ಕೊಡಬೇಕು ಅದರ ಜೊತೆಯಲ್ಲಿ ಲಕ್ಷ್ಮಿಗೆ ನೈವೇದ್ಯ ಮಾಡುವಂತಹ ಸಂದರ್ಭದಲ್ಲಿ ಹಾಲನ್ನು ಉಪಯೋಗಿಸಿ ನೈವೇದ್ಯವನ್ನ ಮಾಡಬೇಕು
ಹಾಲು ಅಕ್ಕಿ ಬೆಲ್ಲ ಈ ಮೂರನ್ನು ಉಪಯೋಗಿಸಿ ನೈವೇದ್ಯ ಮಾಡಿದರೆ ಸಾಕು ಬೇರೆ ಯಾವುದೇ ಪದಾರ್ಥಗಳನ್ನು ಹಾಕುವ ಅವಶ್ಯಕತೆ ಬರುವುದಿಲ್ಲ ಆದರೆ ಈ ಮಾಹಿತಿ ಎಷ್ಟೊಂದು ಜನರಿಗೆ ತಿಳಿದಿರುವುದಿಲ್ಲ ಆಡಂಬರವಾಗಿ ಪೂಜೆಗೆ ನೈವೇದ್ಯ ಮಾಡುತ್ತಾರೆ
ಆದರೆ ಲಕ್ಷ್ಮಿಗೆ ಪ್ರಿಯವಾದುದು ಹಾಲು ಈ ಹಾಲನ್ನು ಬಳಸಿ ನೈವೇದ್ಯ ಮಾಡಿದರೆ ಸಾಕು ಲಕ್ಷ್ಮಿ ತೃಪ್ತಿ ಆಗುತ್ತಾಳೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ. ಈಗ ಮೇಲೆ ಹೇಳಿದಂತೆ ಪ್ರತಿ ನಿತ್ಯ ಹಾಲು ಕಾಯಿಸುವ ಸಂದರ್ಭದಲ್ಲಿ ಮುಖ್ಯವಾಗಿ ಹಾಲು ಉಕ್ಕದ ರೀತಿಯಲ್ಲಿ ನೋಡಿಕೊಂಡು ಹಾಲನ್ನು ಕಾಯಿಸಿ ಮನೆಯಲ್ಲಿ ಯಾವುದೇ ಕಷ್ಟಗಳಿದ್ದರೂ ದೂರಾಗುತ್ತದೆ ಧನ್ಯವಾದಗಳು.