ಮೊಸರಿಲ್ಲದ ಊಟ ಅಪೂರ್ಣ ಅಂತ ಹೇಳ್ತಾರೆ ಎಷ್ಟೊ ಹಿರಿಯರು, ಇದಕ್ಕೆ ಕಾರಣವೇನು ಈ ರೀತಿ ಹೇಳುವುದರ ಹಿಂದೆ ಏನಿದೆ ವಿಚಾರ ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುವುದರ ಜೊತೆಗೆ, ಮೊಸರನ್ನು ತಿನ್ನುವುದರಿಂದ ಯಾವೆಲ್ಲಾ ಪ್ರಯೋಜನವಿದೆ ಎಂಬುದನ್ನು ಕೂಡ ನಿಮಗೆ ವಿವರಿಸಿ ಹೇಳುತ್ತೇನೆ.
ಇಂದಿನ ಈ ಉಪಯುಕ್ತ ಆರೋಗ್ಯ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು, ಇನ್ನು ಮುಂದೆ ಊಟವನ್ನು ಮೊಸರನ್ನ ತಿನ್ನುವುದರ ಮುಖಾಂತರವೆ ಪರಿಪೂರ್ಣವನ್ನಾಗಿಸಿಕೊಳ್ಳಿ.
ಹೌದು ಭೂಲೋಕದ ಅಮೃತ ಅಂತ ಹೇಳ್ತಾರೆ ಹಾಲನ್ನು, ಈ ಹಾಲಿನಿಂದ ಮಾಡುವ ಮೊಸರನ್ನು ಕೂಡ ಅಮೃತಕ್ಕೆ ಸಮಾನವಾಗಿ ಪರಿಗಣಿಸಲಾಗಿದ್ದು, ಪಂಚಾಮೃತಗಳಲ್ಲಿ ಒಂದಾಗಿದೆ ಈ ಮೊಸರು.
ಮನೆಯಲ್ಲಿಯೇ ಮಾಡಿದಂತಹ ಮೊಸರು ಕೊಡುವ ರುಚಿಯೇ ಬೇರೆ ಅದನ್ನು ಆಚೆಯಿಂದ ತಂದು ತಿನ್ನುವ ರುಚಿಯೇ ಬೇರೆ, ಆದ ಕಾರಣ ಪ್ರತಿಯೊಬ್ಬರೂ ಮನೆಯಲ್ಲಿಯೇ ಮಾಡಿದ ಮೊಸರನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.
ಈ ಮೊಸರನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಹೇಳುವುದಾದರೆ, ಇದರಲ್ಲಿ ಕ್ಯಾಲ್ಸಿಯಂ ,ವಿಟಮಿನ್ ಡಿ, ಪ್ರೊಟೀನ್, ಘಟ್ ಬ್ಯಾಕ್ಟೀರಿಯಾ ಇರುತ್ತದೆ,
ನಾವು ಸೇವಿಸಿದ ಆಹಾರದಿಂದ ದೊರೆಯುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸಂಪೂರ್ಣವಾಗಿ ಹೀರಿ ಕೊಳ್ಳಬೇಕಾದರೆ ಅದಕ್ಕೆ ವಿಟಮಿನ್ ಡಿ ಅಂಶದ ಅವಶ್ಯಕತೆ ಇದ್ದು, ಈ ವಿಟಮಿನ್ ಡಿ ಮೊಸರಿನಲ್ಲಿ ಹೇರಳವಾಗಿರುತ್ತದೆ.
ನಾವು ಆರೋಗ್ಯಕರವಾಗಿರಬೇಕೆಂದರೆ ನಾವು ತಿಂದ ಆಹಾರ ಪರಿಪೂರ್ಣವಾಗಿ ಜೀರ್ಣವಾಗಬೇಕು. ಜೀರ್ಣಾಂಗ ಕ್ರಿಯೆಯನ್ನು ವೃದ್ಧಿಸುವ ಈ ಮೊಸರು ಪ್ರಯೋಜನಕಾರಿಯಾದ ಬ್ಯಾಕ್ಟೀರಿಯಾಗಳನ್ನು ಹೊಂದಿದೆ,
ಬ್ಯಾಕ್ಟೀರಿಯಾ ಅಂದರೆ ಹೆದರುವ ಅವಶ್ಯಕತೆ ಇಲ್ಲ, ನಮ್ಮ ದೇಹಕ್ಕೆ ಬೇಕಾಗಿರುವ ಉಪಯುಕ್ತ ಬ್ಯಾಕ್ಟೀರಿಯಾ ಅಂಶವನ್ನು ಹೊಂದಿರುವ ಮೊಸರು, ನಮ್ಮ ಆರೋಗ್ಯವನ್ನು ವೃದ್ಧಿ ಮಾಡುವುದರಲ್ಲಿ ಈ ಬ್ಯಾಕ್ಟೀರಿಯಾಗಳು ಸಹಕಾರಿಯಾಗಿರುತ್ತದೆ.
ಹೊಟ್ಟೆ ನೋವು ಅಥವಾ ಪದೇ ಪದೇ ಶೌಚಾಲಯಕ್ಕೆ ಹೋಗಬೇಕು ಅಂತ ಅನಿಸುತ್ತಿದ್ದರೆ, ಇಂತಹ ತೊಂದರೆಗಳಿಂದ ನೀವು ಬಳಲುತ್ತಿದ್ದರೆ ಮೊಸರನ್ನು ಸೇವಿಸಬೇಕು, ಇದರಿಂದ ಸಮಸ್ಯೆ ಪರಿಹಾರವಾಗುತ್ತದೆ.
ಮೊಸರಿನಲ್ಲಿ ಕ್ಯಾಲ್ಷಿಯಂ ಅಂಶವು ಹೇರಳವಾಗಿ ಇದೆ, ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ, ಮೂಳೆಗಳನ್ನು ಕೀಲುಗಳನ್ನು ಹಲ್ಲುಗಳನ್ನು ಬಲಪಡಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯಕಾರಿಯಾಗಿದೆ ಮೊಸರು, ಆದ ಕಾರಣ ಊಟದ ನಂತರ ಮೊಸರನ್ನವನ್ನು ತಿನ್ನುವುದರಿಂದ ಅಥವಾ ಮೊಸರನ್ನು ಸೇವಿಸುವುದರಿಂದ ಒಳ್ಳೆಯ ಪ್ರಯೋಜನವಿದೆ.
ಈ ಮೊಸರನ್ನು ಲಸ್ಸಿಯನ್ನಾಗಿ ಮಾಡಿಕೊಂಡು ಸೇವಿಸುತ್ತಾ ಬರುವುದರಿಂದ ಇದರಲ್ಲಿರುವ ವಿಟಮಿನ್ ಎ, ಝಿಂಕ್, ಫಾಸ್ಫರಸ್ ಆರೋಗ್ಯವನ್ನು ವೃದ್ಧಿ ಮಾಡುವುದಲ್ಲದೆ, ಮೂಳೆಗಳನ್ನು ಬಲಪಡಿಸುತ್ತದೆ. ಜೊತೆಗೆ ಹೃದ್ರೋಗ ಸಮಸ್ಯೆಯನ್ನು ನಿವಾರಿಸುತ್ತದೆ.
ಮೊಸರಿನಲ್ಲಿ ಇರುವ ಬ್ಯಾಕ್ಟೀರಿಯಾಗಳು ಕ್ರಿಮಿಗಳ ವಿರುದ್ಧ ಹೋರಾಡುವುದಕ್ಜೆ ಸಹಕರಿಸುತ್ತದೆ ಮತ್ತು ಹೆಣ್ಣು ಮಕ್ಕಳು ಈಸ್ಟ್ ನಿಂದ ಉಂಟಾಗುವ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರಿಗೂ ಕೂಡ ಶಮನವನ್ನು ನೀಡುತ್ತದೆ ಮೊಸರು.
ಮೂತ್ರ ಪಿಂಡದ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಲ್ಲಿ ಸಹಾಯಕಾರಿಯಾಗಿದೆ ಮೊಸರು. ಇನ್ನು ಅನೇಕ ಅನೇಕ ಲಾಭಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ,
ಈ ಮೊಸರನ್ನು ಸೇವಿಸುವುದರಿಂದ. ಹೊಟ್ಟೆಯಲ್ಲಿರುವ ಉಷ್ಣಾಂಶವನ್ನು ನಿಯಂತ್ರಿಸಲು ಸಹಾಯಕಾರಿಯಾಗಿರುವ ಮೊಸರನ್ನು ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ.
ಇಷ್ಟೆಲ್ಲ ಆರೋಗ್ಯಕರ ಪ್ರಯೋಜನವಿರುವ ಮೊಸರನ್ನು ಇತ್ತೀಚಿನ ದಿನಗಳಲ್ಲಿ ಊಟದ ನಂತರ ಸೇವಿಸುವ ಪದ್ಧತಿಯನ್ನು ಮಾಡಿಕೊಂಡಿದ್ದಾರೆ, ಆದರೆ ಈ ಒಂದು ಪದ್ಧತಿ ಇಂದಿನದ್ದು ಅಲ್ಲ ಅನೇಕ ವರ್ಷಗಳಿಂದ ರೂಢಿಸಿಕೊಂಡು ಬಂದಿರುವ ಈ ಪದ್ಧತಿಯೂ ಉತ್ತಮವಾಗಿದೆ ಆರೋಗ್ಯಕರವಾಗಿದೆ.
Originally posted on August 4, 2020 @ 3:12 pm