ನಿಮಗೆ ಗೊತ್ತಿರಬಹುದು ಹಳ್ಳಿಗಳಲ್ಲಿ ಕೆಲವೊಂದು ಮನೆಯಲ್ಲಿ ನೀವೇನಾದರೂ ಹೆಚ್ಚಾಗಿ ಕಂಡು ಬಂದರೆ ನಿಮಗೆ ನೀರನ್ನು ಕುಡಿಯಲು ಕೊಡುತ್ತಾರೆ ಹಾಗೆಯೇ ನೀರಿನ ಜೊತೆಗೆ ಕೆಲವು ಬೆಲ್ಲದ ತುಂಡನ್ನು ಕೂಡ ಕೊಡುತ್ತಾರೆ ಇದಕ್ಕೆ ಅರ್ಥ ಏನಪ್ಪಾ ಅಂದರೆ ಬೆಲ್ಲವನ್ನು ತಿಂತಾ ನೀರನ್ನು ಕುಡಿದರೆ ನೀರು ಹೆಚ್ಚಾಗಿ ಕುಡಿಯಬಹುದು ಎನ್ನುವುದು ಒಂದು ಕಾರಣ.

ಆದರೆ ಇನ್ನೊಂದು ಕಾರಣ ಏನಪ್ಪಾ ಅಂದರೆ ಇದರಲ್ಲಿ ಇರುವಂತಹ ಹಲವಾರು ಪೋಸ್ಟ್ಸ್ ಅಂಶಗಳು ಹಲವಾರು ಪ್ರೋಟೀನ್ಗಳು ನಮ್ಮ ದೇಹಕ್ಕೆ ತುಂಬಾ ಸಹಕಾರಿಯಾಗುತ್ತದೆ. ಹಾಗಾದರೆ ಇವತ್ತಿನ ಈ ಸಂಚಿಕೆಯಲ್ಲಿ ಊಟ ಮಾಡಿದ ನಂತರ ಬೆಲ್ಲವನ್ನು ತಿಂದರೆ ನಿಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಏನು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ನಾನು ನಿಮಗೆ ತಿಳಿಸಿ ಕೊಳ್ಳುತ್ತೇನೆ, ಹೆಚ್ಚಿನ ವಿವರಗಳಿಗಾಗಿ ಸಂಪೂರ್ಣವಾಗಿ ಓದಿ.

ಪ್ರತಿದಿನ ನೀವೇನಾದರೂ ಬೆಲ್ಲವನ್ನು ತಿನ್ನುವುದನ್ನು ನೀವು ಅಳವಡಿಸಿಕೊಂಡರೆ ನಿಮ್ಮ ಲಿವರ್ ನಲ್ಲಿ ಇರುವಂತಹ ಹಲವಾರು ಮಲಿನ ಗಳನ್ನು ತೊಡೆದು ಹಾಕುವಲ್ಲಿ ಇವೆಲ್ಲವೂ ಹೆಚ್ಚಾಗಿ ಸಹಕಾರಿಯಾಗುತ್ತದೆ. ಅದಲ್ಲದೆ ನೀವೇನಾದ್ರೂ ಊಟ ಮಾಡಿದ ನಂತರ ಬೆಲ್ಲವನ್ನು ತಿಂದರೆ ನಿಮ್ಮ ಜೀರ್ಣ ಕ್ರಿಯೆಯನ್ನು ತುಂಬಾ ಚೆನ್ನಾಗಿ ಆಗಲು ಇದು ತುಂಬಾ ಸಹಕಾರಿಯಾಗುತ್ತದೆ.

ಹಾಗೆ ನಿಮಗೆ ಯಾವುದೇ ತರಹದ ಮಲಬದ್ಧತೆಯನ್ನು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತದೆ. ಹಾಗೆಯೇ ನೀವೇನಾದರೂ ಬೆಲ್ಲವನ್ನು ನಿರಂತರವಾಗಿ ಸೇವಿಸುತ್ತಾ ಬಂದರೆ ರಕ್ತ ಹೀನತೆ ಸಮಸ್ಯೆಯನ್ನು ಕೂಡ ಪರಿಣಾಮಕಾರಿಯಾಗಿ ಕಡಿಮೆ ಮಾಡಿಕೊಳ್ಳಬಹುದು.

ನಿಮಗೆ ಒಂದು ವಿಷಯ ಗೊತ್ತಾಗ್ತಿಲ್ಲ ದಲ್ಲಿ ಯಾವುದೇ ತರಹದ ಕೊಲೆಸ್ಟ್ರಾಲ್ ಅಂಶ ಇರುವುದಿಲ್ಲ ಇದರಲ್ಲಿ ಇರುವಂತಹ ಪೊಟಾಶಿಯಂ ಹಾಗೂ ಐರನ್ ಕಂಟೆಂಟ್ ಗಳು ನಿಮ್ಮ ದೇಹಕ್ಕೆ ಬೇಕಾದಂತಹ ಎಲ್ಲ ಪ್ರೋಟೀನ್ ಗಳನ್ನು ಒದಗಿಸಿಕೊಡುವಂತೆ  ಮಾಡುತ್ತವೆ. ಆದ್ದರಿಂದ ನೀವು ಊಟ ಆದ ನಂತರ ಒಂದು ತುಂಡು ಬೆಲ್ಲವನ್ನು ತಿಂದರೆ ತುಂಬಾ ಒಳ್ಳೆಯದು.

ಬೆಲ್ಲವನ್ನು ನೀವು ಊಟ ಮಾಡಿದ ನಂತರ ಹಾಗೂ ದಿನನಿತ್ಯ ನೀವು ಸೇವನೆ ಮಾಡುತ್ತಾ ಬಂದರೆ ನಿಮ್ಮ ರಕ್ತ ಕಣಗಳಲ್ಲಿ ಇರುವಂತಹ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಾಗಿ ಮಾಡಲು ಇವೆಲ್ಲವೂ ಹೆಚ್ಚಾಗಿ ಸಹಕಾರಿ ಆಗುತ್ತದೆ. ಇದರಲ್ಲಿ ಹೆಚ್ಚಾಗಿ ಐರನ್ ಅಂಶ ಇರುವುದರಿಂದ ಇದನ್ನು ಗರ್ಭಿಣಿಯರಿಗೆ ಹೆಚ್ಚಾಗಿ ಕೊಡುವುದರಿಂದ ಅವರ ಆರೋಗ್ಯವೂ ಕೂಡ ಸುಧಾರಿಸುತ್ತದೆ. ಹಾಗೆಯೇ ಗರ್ಭದಲ್ಲಿ ಇರುವಂತಹ ಶಿಶುವಿನ ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಅದಕ್ಕೂ ಕೂಡ ಇವೆಲ್ಲವೂ ತುಂಬಾ ಸಹಕಾರಿಯಾಗುತ್ತದೆ ಹಾಗು ಶಿಶುವಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಆದಂತಹ ಆರೋಗ್ಯ ಗುಣಗಳನ್ನು ಇದು ನೀಡುತ್ತದೆ.

ಹೀಗೆ ಹೆಚ್ಚಾಗಿ ಆರೋಗ್ಯದ ಗುಣಗಳನ್ನು ಹೊಂದಿರುವಂತಹ ಬೆಲ್ಲವನ್ನು ನೀವು ಊಟ ಆದ ನಂತರ ಒಂದೆರಡು ತುಣುಕನ್ನು ತಿನ್ನಿ,  ಈ ಲೇಖನವೇ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹೆಚ್ಚಿಕೊಳ್ಳಿ ಹಾಗೂ ಇದನ್ನು ಶೇರ್ ಮಾಡುವುದನ್ನು ಮರೆಯಬೇಡಿ.

 

LEAVE A REPLY

Please enter your comment!
Please enter your name here