ಮಕ್ಕಳ ಬೆಳವಣಿಗೆಗಾಗಿ ಹಣ್ಣುಗಳನ್ನು ತರಕಾರಿಗಳನ್ನು ನೀಡಬೇಕು ಅಂತ ವೈದ್ಯರುಗಳು ಸಲಹೆ ನೀಡುತ್ತಾರೆ ಆದರೆ ಪೋಷಕರು ತಿಳಿದುಕೊಳ್ಳ ಬೇಕಾದಂತಹ ಒಂದು ಮುಖ್ಯವಾದ ವಿಚಾರವೇನು ಅಂದರೆ ಯಾವ ಹಣ್ಣನ್ನು ಯಾವ ಸಮಯದಲ್ಲಿ ನೀಡಬೇಕು .
ಹಾಗೂ ಯಾವ ಹಣ್ಣಿನೊಂದಿಗೆ ನೀಡಬೇಕು ಅನ್ನೋದನ್ನು ಸರಿಯಾದ ಕ್ರಮದಲ್ಲಿ ತಿಳಿದುಕೊಂಡಿದ್ದರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು .
ಇನ್ನು ಹಣ್ಣುಗಳನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತದೆ ಅನ್ನೋದು ನೀವು ಈಗಾಗಲೇ ಸಾಕಷ್ಟು ಮಾಹಿತಿಗಳಲ್ಲಿ ತಿಳಿದುಕೊಂಡಿರುತ್ತಾರೆ ಹಾಗೆಯೇ ಸ್ನೇಹಿತರೇ ಮತ್ತೊಂದು ಮುಖ್ಯವಾದ ವಿಚಾರವನ್ನು ತಿಳಿದುಕೊಳ್ಳ ಬೇಕಾಗಿರುವುದು ಏನು ಅಂದರೆ ಅದರಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಹಣ್ಣುಗಳನ್ನು ಕೊಡುವ ಸಕ್ರಮವನ್ನು ಬದಲಾಯಿಸಿಕೊಳ್ಳಬೇಕಾಗಿದೆ .
ಹೌದು ನಿಮ್ಮ ಮಕ್ಕಳಿಗೆ ನೀವು ಹಣ್ಣುಗಳನ್ನು ಹಾಲಿನ ಜೊತೆ ನೀಡುತ್ತಿದ್ದರೆ ಯಾವ ಹಣ್ಣನ್ನು ಹಾಲಿನೊಂದಿಗೆ ಮಕ್ಕಳಿಗೆ ನೀಡಬೇಕು ಹಾಗೂ ಯಾವ ಹಣ್ಣನ್ನು ನೀಡಬಾರದು ಅನ್ನೋದನ್ನು ಕೂಡ ತಪ್ಪದೇ ನೀವು ತಿಳಿದುಕೊಂಡಿರಬೇಕಾಗುತ್ತದೆ .
ಈ ಒಂದು ವಿಚಾರ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಆದ್ದರಿಂದ ನೀವು ಲೇಖನವನ್ನು ಪೂರ್ತಿಯಾಗಿ ತಿಳಿದು ಬೇರೆಯವರೊಂದಿಗೂ ಮಾಹಿತಿಯನ್ನು ಶೇರ್ ಮಾಡಲು ಮರೆಯದಿರಿ .ಇದೀಗ ತಿಳಿಯೋಣ ಯಾವ ಹಣ್ಣನ್ನು ಯಾವ ಹಣ್ಣಿನೊಂದಿಗೆ ತಿನ್ನಬಾರದು ಅಥವಾ ಯಾವ ಹಣ್ಣುಗಳನ್ನು ಬೇರೆ ಪದಾರ್ಥಗಳೊಂದಿಗೆ ತಿಂದರೆ ಸಮಸ್ಯೆಗಳು ಉಂಟಾಗುತ್ತವೆ ಅನ್ನೋದನ್ನು ಮೊದಲಿಗೆ ಕಿತ್ತಳೆ ಹಣ್ಣು .
ಕಿತ್ತಳೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲಾ ಇರುತ್ತದೆ ಹಾಗೂ ವಿಟಮಿನ್ ಸಿ ಅಂಶವು ಕೂಡ ಇರುತ್ತದೆ ಈ ಕಿತ್ತಳೆ ಹಣ್ಣನ್ನು ಹಾಲಿನೊಂದಿಗೆ ಮಕ್ಕಳಿಗೆ ನೀಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಹಾಗೆ ಕಿತ್ತಳೆ ಹಣ್ಣನ್ನು ತಿಂದ ಎರಡರಿಂದ ಮೂರು ಗಂಟೆಗಳ ನಂತರ ಮಕ್ಕಳಿಗೆ ಹಾಲು ಕೊಡುವುದು ಉತ್ತಮ .
ಎರಡನೆಯದ್ದು ಪಪಾಯಿ ಹಣ್ಣನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ ಕೊಡಬಾರದು ಈ ರೀತಿ ಪಪಾಯಿ ಹಣ್ಣಿನೊಂದಿಗೆ ನಿಂಬೆ ರಸವನ್ನು ಸೇರಿಸಿ ಕೊಡುವುದರಿಂದ ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ ಜೊತೆಗೆ ರಕ್ತ ಸಂಬಂಧಿ ಕಾಯಿಲೆಗಳು ಕೂಡ ಬರುತ್ತವೆ .
ಮೂರನೇ ಹಣ್ಣು ಸೀಬೆ ಹಣ್ಣಿನೊಂದಿಗೆ ಬಾಳೆಹಣ್ಣನ್ನು ಯಾವತ್ತಿಗೂ ತಿನ್ನಬಾರದು ಈ ರೀತಿ ಈ ಎರಡು ಹಣ್ಣನ್ನು ಒಂದೆಸಲ ತಿನ್ನುವುದರಿಂದ ಗ್ಯಾಸ್ಟ್ರಿಕ್ ಹಾಗೂ ಅಸಿಡಿಟಿ ಅಂತಹ ಸಮಸ್ಯೆ ಉಂಟಾಗುತ್ತದೆ ಹಾಗೂ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕೂಡ ಉಂಟಾಗುತ್ತದೆ .
ನಾಲ್ಕನೆಯದು ಕಿತ್ತಳೆ ಹಣ್ಣಿನೊಂದಿಗೆ ಯಾವತ್ತಿಗೂ ಕ್ಯಾರೆಟ್ ಅನ್ನು ಬೆರೆಸಿ ತಿನ್ನಬಾರದು ಅಥವಾ ಈ ಎರಡೂ ಪದಾರ್ಥಗಳನ್ನು ಒಂದೇ ಸಮನೆ ತಿನ್ನಬಾರದು ಈ ರೀತಿ ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತವೆ . ಐದನೆಯದ್ದು ಅನಾನಸ್ ಜೊತೆಗೆ ಹಾಲನ್ನು ಕುಡಿಯಬಾರದು ಈ ರೀತಿ ಅನನಸ್ನ್ನೊಂದಿಗೆ ಹಾಲನ್ನು ಕುಡಿಯುವುದರಿಂದ ದೇಹದಲ್ಲಿ ವಿಷಕಾರಿ ಅಂಶವು ಹೆಚ್ಚಾಗುತ್ತದೆ ಹಾಗೂ ಹಲವಾರು ಆರೋಗ್ಯ ಸಮಸ್ಯೆಯನ್ನು ಇದರಿಂದ ಎದುರಿಸಬೇಕಾಗುತ್ತದೆ .
ಈ ಒಂದು ಉಪಯುಕ್ತ ಮಾಹಿತಿಯನ್ನು ಪೋಷಕರು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಯಾವತ್ತಿಗೂ ಕೂಡ ಈ ರೀತಿ ಮಿಶ್ರಣದ ಹಣ್ಣುಗಳನ್ನು ತಿನ್ನಿಸದೇ ಇರುವುದು ಉತ್ತಮ ಹಾಗೆ ಮಕ್ಕಳು ಮಾತ್ರವಲ್ಲದೆ ದೊಡ್ಡವರು ಕೂಡ ಈ ರೀತಿಯ ಆಹಾರ ಪದ್ಧತಿಯನ್ನು ಪಾಲಿಸದೆ ಇರುವುದೇ ಒಳ್ಳೆಯದು .
ನಾನು ಈ ಮೇಲೆ ತಿಳಿಸಿದಂತಹ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಹಾಗೆಯೇ ಇಂತಹ ಇನ್ನೂ ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕು ಅಂದರೆ ನಮ್ಮ ಪೇಜ್ ಲೈಕ್ ಮಾಡೋದನ್ನು ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡೋದನ್ನು ಮರೆಯದಿರಿ .