Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪೂಜೆ ಮಾಡುವಾಗ ಯಾವ ಎಣ್ಣೆ ಬಳಸಬೇಕು ಹಾಗೂ ಎಷ್ಟು ಬತ್ತಿಯನ್ನು ಹಾಕಬೇಕು ಇದನ್ನು ನೀವು ಖಡ್ಡಾಯವಾಗಿ ತಿಳಿದುಕೊಳ್ಳಲೇಬೇಕು !!!!

ಪೂಜೆ ಮಾಡುವುದು ನಮ್ಮ ಮನಸ್ಸಿನ ಶಾಂತಿಗಾಗಿ ನೆಮ್ಮದಿಗಾಗಿ ಇನ್ನು ಮನೆಯಲ್ಲಿ ದೀಪ ಹಚ್ಚುವುದು ದೇವರಿಗೆ ದೀಪಾರಾಧನೆ ಮಾಡುವುದು ನಾವು ಮಾಡಿದ ಕರ್ಮಗಳನ್ನು ನಿವಾರಿಸಿಕೊಳ್ಳುವುದಕ್ಕೆ.

ಹಾಗಾದರೆ ದೀಪವನ್ನು ಯಾವ ಎಣ್ಣೆಯನ್ನು ಬಳಸಿ ಹಚ್ಚಬೇಕು ಹಾಗೆ ಈ ದೀಪದಲ್ಲಿ ಬಳಸುವ ಎಣ್ಣೆ ಯಾವುದಿರಬೇಕು. ಮನೆಯಲ್ಲಿ ದೀಪಾರಾಧನೆ ಮಾಡುವುದಕ್ಕೆ ಯಾವ ಎಣ್ಣೆಯನ್ನು ಬಳಸಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ.

ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ಈ ಉಪಯುಕ್ತ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ.

ಪದ್ಧತಿಯ ಪ್ರಕಾರ ಸಂಸ್ಕೃತಿಯ ಪ್ರಕಾರ ಹೆಣ್ಣು ಮಕ್ಕಳು ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಬೇಕು .ಹಾಗೆ ಈ ಹಚ್ಚುವ ದೀಪ ಕಬ್ಬಿಣದ ದೀಪ ಆಗಿರಬಾರದು. ಹೌದು ಯಾವುದೇ ಕಾರಣಕ್ಕೂ ಮನೆಯಲ್ಲಿ ಕಬ್ಬಿಣದ ದೀಪವನ್ನು ಹಚ್ಚಬಾರದು.

ಹಾಗಾದರೆ ಯಾವ ದೀಪವನ್ನು ಹಚ್ಚಬೇಕು ಯಾವ ದೀಪವನ್ನು ಹಚ್ಚಿದರೆ ಶ್ರೇಷ್ಠ ಅಂತ ಹೇಳುವುದಾದರೆ ಬೆಳ್ಳಿ ದೀಪ ಪಂಚಲೋಹದ ದೀಪ ಅಥವಾ ಮಣ್ಣಿನ ದೀಪವನ್ನು ಮನೆಯಲ್ಲಿ ಹಚ್ಚುವುದು ಒಳ್ಳೆಯದು ಹಾಗೂ ಶ್ರೇಷ್ಠ ಅಂತ ಹೇಳಲಾಗಿದೆ.

ಯಾವ ದೀಪವನ್ನು ಹಚ್ಚುವುದು ಒಳ್ಳೆಯದು ಅಂತ ತಿಳಿಸಿದೆವು ಹಾಗಾದರೆ ಯಾವ ಎಣ್ಣೆಯನ್ನು ದೀಪ ಹಚ್ಚುವುದಕ್ಕಾಗಿ ಬಳಸಬೇಕು ಎಂದು ಹೇಳುವುದಾದರೆ ಮನೆಯಲ್ಲಿ ಹಚ್ಚುವ ದೀಪ ಯಾವುದೇ ಕಾರಣಕ್ಕೂ ಎಳ್ಳೆಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬಾರದು .

ಕೊಬ್ಬರಿ ಎಣ್ಣೆ ಅಥವಾ ಅಂಗಡಿಗಳಲ್ಲಿ ದೀಪದ ಎಣ್ಣೆ ಎಂದು ಸಿಗುತ್ತದೆ ಈ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬಹುದು ಅಥವಾ ಅಂಗಡಿಗಳಲ್ಲಿ ಮಾರುಕಟ್ಟೆಗಳಲ್ಲಿ ಸಿಗುವ ಪಾಮಾಯಿಲ್ ಅನ್ನು ಬಳಸಿ ಕೂಡ ದೀಪವನ್ನು ಹಚ್ಚಬಹುದು ಆದರೆ ಯಾವುದೇ ಕಾರಣಕ್ಕೂ ಎಳ್ಳಿನಿಂದ ತಯಾರಿಸಿದ ಎಣ್ಣೆಯನ್ನು ಮನೆಯಲ್ಲಿ ಹಚ್ಚದೆ ಇರುವುದೇ ಶ್ರೇಷ್ಠ.

ಎಳ್ಳು ಅಂದರೆ ಅದು ಶನಿದೇವನಿಗೆ ಅರ್ಪಿಸುವ ಒಂದು ಪದಾರ್ಥವಾಗಿದ್ದು ಶನಿವಾರದಂದು ಶನಿ ದೇವನ ದೇವಸ್ಥಾನಕ್ಕೆ ಹೋಗಿ ಎಳ್ಳಿನ ಎಣ್ಣೆಯನ್ನು ದಾನ ಮಾಡುವುದು ಅಥವಾ ಎಳ್ಳೆಣೆ ದೀಪವನ್ನು ಹಚ್ಚಿ ಬರುವುದು ಒಳ್ಳೆಯದು. ಆದ ಕಾರಣ ಮನೆಯಲ್ಲಿ ಎಳ್ಳೆಣ್ಣೆಯನ್ನು ಬಳಸಿ ದೀಪವನ್ನು ಹಚ್ಚದೆ ಇರುವುದು ಒಳ್ಳೆಯದು ಅಂತ ಹೇಳುತ್ತಿದ್ದಾರೆ ಹಿರಿಯರು ಮತ್ತು ಶಾಸ್ತ್ರಜ್ಞರು.

ನಾವೀಗ ಮನೆಯಲ್ಲಿ ಯಾವ ದೀಪವನ್ನು ಬಳಸಬೇಕು ಹಾಗೆ ದೀಪಾರಾಧನೆಗೆ ಯಾವ ಎಣ್ಣೆಯನ್ನು ಬಳಸಬೇಕು ಎಂಬುದನ್ನು ತಿಳಿದೆವು .ಈ ದೀಪಾರಾಧನೆ ಮಾಡುವಾಗ ಅದರಲ್ಲಿಯೂ ದೇವರಿಗೆ ದೀಪಾರಾಧನೆ ಮಾಡುವಂತಹ ಸಮಯದಲ್ಲಿ ದೀಪಕ್ಕೆ ಬಳಸುವ ಬತ್ತಿ ಎಷ್ಟು ಎಳೆ ಇರಬೇಕು ಎಂಬ ವಿಚಾರದ ಬಗ್ಗೆ ತಿಳಿಯುವುದಾದರೆ.

ಯಾವುದೇ ಕಾರಣಕ್ಕೂ ಒಂದು ಎಳೆಯ ಬತ್ತಿಯನ್ನು ಬಳಸಬಾರದು ದೀಪ ಹಚ್ಚುವಾಗ ಎರಡು ಎಳೆಯ ಬತ್ತಿಯನ್ನು ಬಳಸಿಯೇ ದೀಪವನ್ನು ಹಚ್ಚಬೇಕು ಹಾಗಾದರೆ .ಹೇಗೆ ಈ ಎರಡು ಎಳೆಯ ಬತ್ತಿಯನ್ನು ಮಾಡಿಕೊಳ್ಳುವುದು ಅಂದರೆ ಒಂದು ಎಳೆಯ ಎರಡು ಬತ್ತಿಗಳನ್ನು ತೆಗೆದುಕೊಂಡು ಅದನ್ನು ಕೂಡಿಸಿ ದೀಪಕ್ಕೆ ಹಾಕಿ ದೀಪವನ್ನು ಹಚ್ಚಬೇಕು.

ಇದಿಷ್ಟು ಆದ ಬಳಿಕ ದೀಪವನ್ನು ಹಚ್ಚುವಾಗ ಮೊದಲು ದೀಪಕ್ಕೆ ಎಣ್ಣೆಯನ್ನು ಬಿಟ್ಟು ನಂತರ ಅದಕ್ಕೆ ಬತ್ತಿಯನ್ನು ಹಾಕಬೇಕು ನಂತರ ದೀಪವನ್ನು ಹಚ್ಚಬೇಕು. ಈ ಕ್ರಮದಲ್ಲಿ ಇನ್ನು ಮುಂದೆ ನಿಮ್ಮ ಮನೆಯಲ್ಲಿ ದೀಪವನ್ನು ಹಚ್ಚಿ ಮತ್ತು ಎಳ್ಳೆಣ್ಣೆಯನ್ನು ಹೊರತುಪಡಿಸಿ ದೀಪದ ಎಣ್ಣೆಯನ್ನೇ ಬಳಸುವುದು ಒಳ್ಳೆಯದು. ಈ ಉಪಯುಕ್ತ ಮಾಹಿತಿ ನಿಮಗೆ ಪ್ರಯೋಜನವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದ.

Leave a Reply

Your email address will not be published. Required fields are marked *