ಪೂಜೆ ಮಾಡುವಾಗ ಅರಿಶಿನ ಕುಂಕುಮ ಕೆಳಗೆ ಬಿದ್ದರೆ ಅದರ ಅರ್ಥ ಏನು ಗೊತ್ತ … !!!

46

ಪೂಜೆ ಮಾಡುವಾಗ ಅಪ್ಪಿ ತಪ್ಪಿ ನಿಮ್ಮ ಕೈಯಿಂದ ಅರಿಶಿನ ಕುಂಕುಮ ಕೆಳಗೆ ಬಿದ್ದರೆ ಶುಭವೋ ಅಥವಾ ಅಶುಭವೋ ಎಂದು ತಿಳಿಯಲು ಮಾಹಿತಿಯನ್ನು ಸಂಪೂರ್ಣವಾಗಿ ಓದಿ.ಹಾಯ್ ಸ್ನೇಹಿತರೆ ನಮ್ಮ ಸಂಸ್ಕೃತಿಯಲ್ಲಿ ಸುಮಾರು ಸಂಪ್ರದಾಯಗಳು ಇವೆ. ನಮ್ಮ ಹಿರಿಯರ ಕಾಲದಿಂದಲೂ ತುಂಬಾ ವಿಶೇಷವಾಗಿ ಒಂದೊಂದು ಕಡೆ ಒಂದೊಂದು ಸಂಪ್ರದಾಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಎಲ್ಲಾ ಸಂಪ್ರದಾಯಗಳಿಗೂ ಅದರದ್ದೇ ಆದ ವಿಶೇಷತೆಗಳು ಇದೆ. ಹಬ್ಬಗಳು ಅಮಾವಾಸ್ಯೆ ಹುಣ್ಣಿಮೆಗಳು ಇದ್ದಾಗ ಮನೆಯಲ್ಲಿ ಸಿಹಿಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಹಿಂದೂಗಳ ಹಬ್ಬವಾದ ಗಣೇಶ ಹಬ್ಬ ಪಂಚಮಿ ಹಬ್ಬ ದೀಪಾವಳಿ ಹಬ್ಬ ಹಾಗೂ ದಸರಾ ಹಬ್ಬ ವಿಜೃಂಭಣೆಯಿಂದ ನಡೆಯುತ್ತವೆ.

ಪ್ರತಿನಿತ್ಯ ನಾವು ಪೂಜಿಸುವಾಗ ವಿಭೂತಿ ಕುಂಕುಮ ಅರಿಶಿಣ ಉದ್ದಿನ ಕಡ್ಡಿ ಎಲ್ಲವನ್ನು ಬಯಸುತ್ತೇವೆ. ಮುಖ್ಯವಾಗಿ ಪೂಜೆ ಮಾಡುವಾಗ ಮೊದಲು ದೀಪವನ್ನು ಹಚ್ಚುತ್ತೇವೆ. ದೀಪದಿಂದ ಆರಂಭವಾದ ಪೂಜೆ ತುಂಬಾ ಶಾಂತಿಯಿಂದ ನೆರವೇರುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿಯಾಗಿ ಯಾವ ಪೂಜೆಯು ಅರಿಶಿನ ಕುಂಕುಮ ಇಲ್ಲದೆ ಮಾಡುವುದಕ್ಕೆ ಆಗುವುದಿಲ್ಲ. ಮಹಿಳೆಯರು ಪ್ರತಿನಿತ್ಯ ಅರಿಶಿನ-ಕುಂಕುಮವನ್ನು ಬಳಸುತ್ತಾರೆ. ಹಬ್ಬಹರಿದಿನಗಳಲ್ಲಿ ವಿಶೇಷವಾಗಿ ಕುಂಕುಮ ಪೂಜೆ ಮಾಡುತ್ತಾರೆ. ಪೂಜೆ ಮಾಡುವಾಗ ಕುಂಕುಮ ಕೆಳಗೆ ಬಿದ್ದರೆ ಒಳ್ಳೆಯದಲ್ಲವೆಂದು ಕೆಲವೊಬ್ಬರು ಹೇಳುತ್ತಾರೆ ಆದರೆ ಇದು ಸತ್ಯ ಅಥವಾ ಸುಳ್ಳು ಎಂಬುದನ್ನು ಮಾಹಿತಿಯಲ್ಲಿ ನಾನು ನಿಮಗೆ ಸಂಪೂರ್ಣವಾಗಿ ಹೇಳುತ್ತೇನೆ.

ದೇವರಿಗೆ ಪೂಜೆ ಮಾಡುವಾಗ ಮೊದಲು ಗಂಗೆ ಅಂದರೆ ನೀರನ್ನು ಹಾಕಿ ನಂತರ ವಿಭೂತಿಯನ್ನು ಹಚ್ಚಿ ಅರಿಶಿಣವನ್ನು ಹಚ್ಚಿ ಹೂಗಳನ್ನು ದೇವರಿಗೆ ಏರಿಸುತ್ತಾರೆ. ಯಾವುದೇ ಪೂಜೆವಾದರೂ ಇದೇ ರೀತಿಯಾಗಿ ನೆರವೇರುತ್ತದೆ. ಕೆಲವೊಮ್ಮೆ ಅಕಸ್ಮಾತ್ತಾಗಿ ಕೈಯಿಂದ ಜಾರಿ ಕುಂಕುಮ ಅರಿಶಿಣ ಕೆಳಗೆ ಬೀಳುವ ಸಾಧ್ಯತೆ ಇರುತ್ತದೆ ಇದನ್ನು ಎಲ್ಲರೂ ಅಪಶಕುನ ಎಂದು ಹೇಳುತ್ತಾರೆ. ಆದರೆ ಸ್ನೇಹಿತರೆ ಕೆಳಗೆಬಿದ್ದ ಕುಂಕುಮ ಅಥವಾ ಅರಿಶಿಣ ಭೂಮಿಯನ್ನು ಸ್ಪರ್ಶಿಸುತ್ತದೆ ಅದು ಭೂತಾಯಿಯನ್ನು ಪೂಜೆ ಮಾಡಿದಂತೆ ಸಮವಾಗಿರುತ್ತದೆ. ಕೆಳಗೆ ಬಿದ್ದ ಅರಿಶಿನ-ಕುಂಕುಮವನ್ನು ಮತ್ತೆ ತೆಗೆದುಕೊಂಡು ದೇವರಿಗೆ ಹಚ್ಚುವುದು ನೀವು ನಿಮ್ಮ ಹಣೆಗೆ ಹಚ್ಚಿಕೊಳ್ಳುವುದು ಮಾಡಬಾರದು ಅದನ್ನು ತುಳಿಯದಂತೆ ಯಾವುದಾದರೂ ಹಸಿರು ಗಿಡಕ್ಕೆ ಹಾಕಿ ಬರಬೇಕು.

ಇನ್ನು ಪೂಜೆ ಮಾಡಿದಾಗ ಕುಂಕುಮ ಅಥವಾ ಅರಿಶಿಣ ಕೆಳಗೆ ಬಿದ್ದರೆ ನಾವು ಪೂಜೆ ಮಾಡುವಾಗ ಮಾಡಿಕೊಂಡಿರುವ ಸಂಕಲ್ಪ ನೆರವೇರುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಇದು ಒಂತರಾ ಶುಭಶಕುನ ಆಗಿದೆ. ಯಾರಿಗೆ ಆಗಲಿ ಕೆಳಗೆ ಕುಂಕುಮ ಚೆಲ್ಲಿದ ತಕ್ಷಣ ಅವರನ್ನು ನಿಂದಿಸಬಾರದು ಬದಲಾಗಿ ಅದು ಆಕಸ್ಮಿಕ ಎಂದು ತಿಳಿಯಬೇಕು. ಇನ್ನು ಪೂಜೆ ಮಾಡುವಾಗ ದೀಪ ಆರಿ ಹೋದರೆ ಅದಕ್ಕೂ ಭಯಪಡಬಾರದು ಕೆಲವೊಮ್ಮೆ ಅತಿಯಾದ ಗಾಳಿಯಿಂದ ದೀಪವು ಶಾಂತಿಯಾಗಿರುತ್ತದೆ ಮತ್ತೆ ಅದನ್ನು ಗಾಳಿ ಬರದಂತೆ ಇರುವ ಸ್ಥಳಕ್ಕೆ ಹಚ್ಚಬೇಕು. ಅಪ್ಪಿತಪ್ಪಿಯೂ ಇಂತಹ ಘಟನೆಗಳು ನಿಮ್ಮ ಮನೆಯಲ್ಲಿ ನಡೆದರೆ ಮನೆಯವರಿಗೆ ಇದನ್ನು ತಿಳಿಸಿ ಹೇಳಿ.

ಭೂತಾಯಿಯು ಕೂಡ ದೇವತೆ, ಭೂಮಿಗೆ ಬಿದ್ದ ಕುಂಕುಮ ಅರಿಶಿಣ ಎಂದಿಗೂ ಅಪಶಕುನ ಅಲ್ಲ. ಸ್ನೇಹಿತರೆ ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಎಂದಿಗೂ ಕುಂಕುಮ ಅರಿಶಿನ ಕೆಳಗೆ ಬಿದ್ದರೆ ಅಶುಭ ಎಂದು ತಿಳಿದುಕೊಳ್ಳಬೇಡಿ. ಜೀವನದಲ್ಲಿ ಏನೇ ಆದರೂ ಎಲ್ಲದಕ್ಕೂ ಒಂದು ಕಾರಣ ಇರುತ್ತದೆ ಆದರೆ ಅದಕ್ಕೆ ನೀವು ಮೂಢನಂಬಿಕೆಗಳನ್ನು ಬೆಳೆಸಿಕೊಂಡು ಭಯಪಡಬೇಡಿ. ಏನೇ ಆದರೂ ಒಳ್ಳೆಯದಕ್ಕೆ ಆಗಿದೆ ಎಂಬುದನ್ನು ನಾವು ಯಾವಾಗಲೂ ಮರೆಯಬಾರದು ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಶೇರ್ ಮಾಡಿ ನಿಮ್ಮ ಮನೆಯವರೆಗೆ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here