ಪದೇ ಪದೇ ಸತ್ತವರು ಕನಸಿನಲ್ಲಿ ಬಂದರೆ ಮತ್ತು ನೀರು ಹಾಗು ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ಏನರ್ಥ ಗೊತ್ತಾ ಇದನ್ನು ನೀವು ತಿಳಿದುಕೊಳ್ಳಲೇ ಬೇಕು !!!!

45

ನಮಸ್ಕಾರ ಸ್ನೇಹಿತರೆ. ಕನಸಿನಲ್ಲಿ ಯಾವುದೆಲ್ಲ ಬಂದರೆ ಏನು ಅರ್ಥ,ಅಂದರೆ ಕನಸಿನಲ್ಲಿ ಹಾವು, ಊಟ ಮಾಡುವ ಹಾಗೆ ,ಮತ್ತು ಸತ್ತವರು ಬಂದರೆ ಮತ್ತು ಬೆತ್ತಲೆಯಾಗಿ ಇನ್ನೊಬ್ಬರು ಕಂಡರೆ ಹಾಗೂ ಕನಸಲ್ಲಿ ಬಂದರೆ ಏನು ಅರ್ಥ ಎನ್ನುವುದರ ಬಗ್ಗೆ ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಸ್ನೇಹಿತರೆ ಕನಸು ಎನ್ನುವುದು ನಾವು ನಿದ್ರೆ ಮಾಡುವಂತಹ ಸಂದರ್ಭದಲ್ಲಿ ಬರುವಂತಹ ಒಂದು ಸನ್ನಿವೇಶ. ಈ ಸಂದರ್ಭದಲ್ಲಿ ಕೆಲವೊಂದುನಮ್ಮ ಮನಸ್ಸಿನಲ್ಲಿರುವ ಅಂತಹ ಭಾವನೆಗಳ ರೂಪದಲ್ಲಿ ಕನಸು ಬೀಳುತ್ತದೆ.

ಕೆಲವರಿಗೆ ದಿನರಾತ್ರಿ ಕನಸುಗಳು ಬರುತ್ತವೆ..ಕೆಲವರಿಗೆ ಮುಂದೆ ಆಗುವುದರ ಬಗ್ಗೆ ಕನಸು ಬಿದ್ದರೆ ಇನ್ನೂ ಕೆಲವರಿಗೆ ಆಗಿ ಹೋಗಿರುವುದರ ಬಗ್ಗೆ ಕನಸುಗಳು ಬೀಳುತ್ತವೆ. ಹಾಗಾಗಿ ಸ್ನೇಹಿತರೆ ಈ ಕನಸುಗಳು ಶುಭಸೂಚಕ ಹೌದು ಅಶುಭಸೂಚಕವೂ ಹೌದು.

ಕೆಲವರು ಕನಸಿನಲ್ಲಿ ಸತ್ತವರು ಯಾವಾಗಲೂ ಬರುತ್ತಿರುತ್ತಾರೆ. ಹೀಗೆ ಸತ್ತವರು ಯಾವಾಗಲೂ ಕನಸಿನಲ್ಲಿ ಬಂದರೆ ಕೆಲವರಿಗೆ ಒಳ್ಳೆಯದಾಗುತ್ತದೆ ಆದರೆ ಇನ್ನು ಕೆಲವರಿಗೆ ಅದರಿಂದ ತುಂಬಾನೇ ಕೆಟ್ಟದಾಗುತ್ತದೆ.

ಸತ್ತವರು ಏನಾದರೂ ನಗುಮುಖದಿಂದ ಇದ್ದಾರೆ ನಿಮಗೆ ನಿಮ್ಮ ಜೀವನದಲ್ಲಿ ತುಂಬಾನೇ ಒಳ್ಳೆಯ ಫಲ ವಾಗುತ್ತದೆ. ಆದರೆ ಸತ್ತವರು ಏನಾದರೂ ನಿಮ್ಮ ಕನಸಿನಲ್ಲಿ ಅಳುತ್ತಿದ್ದರೆ ಅದು ನಿಮಗೆ ಒಳ್ಳೆಯ ಫಲವನ್ನು ನೀಡುವುದಿಲ್ಲ ಅಂದರೆ ಜೀವನದಲ್ಲಿ ಯಾವುದು ಒಂದು ಸಂಕಷ್ಟ ಎದುರಾಗುತ್ತಿದೆ ಎಂದು ಅರ್ಥ.

ಹೌದು ಸ್ನೇಹಿತರೆ ಹೀಗೆ ಸತ್ತವರು ಕನಸಿನಲ್ಲಿ ಬರುವುದರಿಂದ ಒಳ್ಳೆಯ ಫಲವು ಇದೆ ಕೆಟ್ಟ ಫಲವು ಇದೆ.ಇನ್ನು ಕೆಲವರಿಗೆ ಹಾವುಗಳು ಪದೇಪದೇ ಕನಸಿನಲ್ಲಿ ಬರುತ್ತಿರುತ್ತವೆ.ಈ ರೀತಿಯಾಗಿ ಹಾವುಗಳು ಕನಸಿನಲ್ಲಿ ಬಂದು ಕಚ್ಚಿ ಹೋದರೆ ಅದರಲ್ಲಿಯೂ ಕೂಡ ಬಲಗೈಗೆ ಕಚ್ಚಿ ಹೋದರೆ ತುಂಬಾ ಒಳ್ಳೆಯ ಫಲವನ್ನು ನೀವು ಅನುಭವಿಸುತ್ತೀರಿ.

ಅವುಗಳು ಏನಾದರೂ ಈ ರೀತಿಯಾಗಿ ಅಂದರೆ ನಿಮ್ಮೆದುರಿಗೆ ಬಂದು ನಿಮ್ಮ ಅಕ್ಕಪಕ್ಕದಲ್ಲಿ ಹೋದಂತೆ ಆದರೆ ನಿಮಗೆ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಇದು ಶುಭಕರವಲ್ಲ ಎಂದು ನಮ್ಮ ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.

ನಿಮ್ಮ ಕನಸಿನಲ್ಲಿ ಏನಾದರೂ ಮಗು ಬಂದರೆ ಒಂದು ರೀತಿಯ ಅಂತಹ ಕೆಟ್ಟ ಶಕ್ತಿಯು ನಿಮ್ಮ ಮೇಲೆ ಕಣ್ಣಿಟ್ಟಿದೆ ಎಂದರ್ಥ. ಕನಸಿನಲ್ಲಿ ಮಗು ಬಂದರೆ ನಿಮಗೆ ಒಳ್ಳೆಯ ಫಲ ಇರುವುದಿಲ್ಲ. ಅಂದಹಾಗೆ ಕೆಲವೊಮ್ಮೆ ಕೆಲವು ಬರ ಕನಸಿನಲ್ಲಿ  ವಿಧವೆಯವರು ಕಾಣುತ್ತಾರೆ. ಹಾಗೆ ಕಂಡರೆ ಯಾವುದೋ ಒಂದು ನಿಮ್ಮ ಮನೆ ದೇವರಿನ ಹರಕೆ ನೀವು ತೀರಿಸಿಲ್ಲ ಎಂದು ಅರ್ಥ ಹೇಗಿದ್ದಾರೆ ಕೂಡಲೇ ನಿಮ್ಮ ಹರಕೆ ಏನಾದರೂ ಇದ್ದರೆ ಕೂಡಲೇ ಹರಕೆಯನ್ನು ತೀರಿಸಿ.

ಕೆಲವರ ಕನಸಿನಲ್ಲಿ ಯಾವಾಗಲೂ ಬೆತ್ತಲೆ ಆಗಿರುವಂತಹ ಒಂದು ಮನುಷ್ಯರೂಪ ಕಂಡರೆ ನಿಮ್ಮ ಜೀವನದಲ್ಲಿ ಮುಂದೆ ಒಂದು ದೊಡ್ಡ ಸಂಕಷ್ಟ ಎದುರಾಗುತ್ತದೆ ಎಂಬ ಅರ್ಥ.ಹಾಗೆಯೇ ನಿಮ್ಮ ಕನಸಿನಲ್ಲಿ ಏನಾದರೂ ಹರಿಯುವ ಝರಿ ನದಿ-ಸಮುದ್ರ ಹಾಗೂ ಪ್ರವಾಹ ಆಗುತ್ತಿರುವ ಹಾಗೆ ಕಂಡರೆ ನಿಮ್ಮ ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸುತ್ತೀರಿ ಎಂದು ಅರ್ಥ.

ಹಾಗಾಗಿ ನೀವು ಇಂಥ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಕನಸು ಬೀಳುವುದು ಸರ್ವೇಸಾಮಾನ್ಯ.ಆದರೆ ಈ ಕನಸುಗಳು ಬೀಳುವ ಆಧಾರದ ಮೇಲೆ ನೀವು ಅಶುಭ ಮತ್ತು ಶುಭ ಫಲವನ್ನು ತಿಳಿದುಕೊಂಡು ಅದರಿಂದ ಎಚ್ಚರಿಕೆಯಿಂದ ಇರಬೇಕು.

ಹೀಗೆ ಇದ್ದರೆ ನಿಮಗೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಉಂಟಾಗುವುದಿಲ್ಲ ಸ್ನೇಹಿತರೆ.ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here