ಪ್ರತಿಯೊಂದು ಊರಿನಲ್ಲಿಯೂ ಕೂಡ ಆಂಜನೇಯಸ್ವಾಮಿಯ ಗುಡಿ ಇರುವುದನ್ನು ನಾವು ಗಮನಿಸಬಹುದಾಗಿದೆ ಹಾಗೆ ಇದೀಗ ನಮ್ಮ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ಕೂಡ ಎಷ್ಟೊಂದು ಬೆಳೆದಿದೆ
ಆದರೆ ಮುಂಚೆ ಈ ಬೆಂಗಳೂರು ಚಿಕ್ಕದಾದ ಊರಾಗಿತ್ತು ಆಗ ಬೆಂಗಳೂರಿಗೆ ಪ್ರವೇಶ ಮಾಡುವ ಪುರದ್ವಾರ ಗಳಲ್ಲಿಯೂ ಕೂಡ ಆಂಜನೇಯಸ್ವಾಮಿಯ ಗುಡಿಗಳು ಇರುವುದನ್ನು ನಾವು ಗಮನಿಸಬಹುದಾಗಿದೆ ಉದಾಹರಣೆಗೆ
ಮೈಸೂರು ಮತ್ತು ಬೆಂಗಳೂರಿನ ಪ್ರವೇಶದ ಪುರದ್ವಾರವಾದ ಬೆಟ್ಟ ರಾಯನಪುರದಲ್ಲಿ ಗಾಳಿ ಆಂಜನೇಯಸ್ವಾಮಿ ಇರುವುದನ್ನು ನಾವು ನೋಡಬಹುದು ಮತ್ತು ಮಹಾಲಕ್ಷ್ಮೀ ಪುರಂ ನಲ್ಲಿ ಆಳೆತ್ತರದ ಆಂಜನೇಯಸ್ವಾಮಿ ದೇವಾಲಯ ಹಾಗೆ ಚಾಮರಾಜ ಪೇಟೆಯ ಕೋಟೆ ಪ್ರದೇಶದ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಕೂಡ ಇದೆ.
ಹೌದು ಆಂಜನೇಯಸ್ವಾಮಿ ಗುಡಿ ಯ ಬಗ್ಗೆ ಮಾತನಾಡುತ್ತಿರುವ ಹಿನ್ನಲೆಯ ಮಾಹಿತಿಯನ್ನು ಅಂದರೆ ನಾವು ಇವತ್ತಿನ ಈ ಲೇಖನದಲ್ಲಿ ರಾಗಿಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಬಗ್ಗೆ ಇನ್ನಷ್ಟು ವಿಶೇಷ ಕರವಾದ ಮಹತ್ವಕರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ಎಷ್ಟೋ ಮಂದಿಗೆ ತಿಳಿದಿಲ್ಲ ರಾಗೀಗುಡ್ಡದ ಹೆಸರಿನ ಹಿಂದಿರುವ ಕಥೆ ಅದನ್ನು ತಿಳಿಸುತ್ತೇವೆ ಈ ಮಾಹಿತಿಯಲ್ಲಿ. ಜಯನಗರ ಒಂಬತ್ತನೇ ಬ್ಲಾಕ್ ನಲ್ಲಿ ಇರುವ ಈ ರಾಗಿಗುಡ್ಡದ ಆಂಜನೇಯ ದೇವಾಲಯವು ಧಾರ್ಮಿಕ ನೆಲೆಯಾಗಿದೆ
ಅಷ್ಟೇ ಅಲ್ಲ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಪೀಠ ಕೂಡ ಆಗಿದೆ ಆದರೆ ಈ ರಾಗಿಗುಡ್ಡ ದೇವಾಲಯವು ಸುಮಾರು ವರ್ಷಗಳ ಹಿಂದೆ ಬೆಂಗಳೂರಿನ ಉತ್ಸಾಹಿ ಯುವಕರ ಟ್ರೆಕ್ಕಿಂಗ್ ಸ್ಪಾಟ್ ಕೂಡ ಆಗಿತ್ತು.
ಇದೀಗ ಪುಣ್ಯ ಕ್ಷೇತ್ರವಾಗಿರುವ ಈ ದೇವಾಲಯದಲ್ಲಿ ಆಶ್ರಮ ಕೂಡ ಇದೆ ಎಷ್ಟೋ ಮಂದಿಗೆ ವಿದ್ಯಾದಾನ ಕೂಡ ಮಾಡಲಾಗುತ್ತಿದೆ ರಾಗಿಗುಡ್ಡ ವು ಅನೇಕ ಧಾರ್ಮಿಕ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದು,
ರಾಗಿಗುಡ್ಡದ ಪ್ರವೇಶದಲ್ಲಿ ಆಶ್ರಮ ಇದೆ ಮತ್ತು ಇಲ್ಲಿ ಘನ ಉದ್ಯಾನವನ ಕೂಡ ಇದೆ. ಅಷ್ಟೇ ಅಲ್ಲಾ ಈ ಪುಣ್ಯಕ್ಷೇತ್ರದ ಉದ್ಯಾನವನದಲ್ಲಿ ಗರುಡವು ಈ ದೇವಾಲಯವನ್ನು ಹೊತ್ತಿರುವ ಒಂದು ಸುಂದರವಾದ ವಿನ್ಯಾಸವನ್ನು ಕೂಡ ಇಲ್ಲಿ ನಾವು ನೋಡಬಹುದು.
ಸುಮಾರು ಐದೂವರೆ ಎಕರೆ ಯಲ್ಲಿ ಇರುವ ಈ ದೇವಾಲಯವು ಐವತ್ತೆಂಟು ಅಡಿ ಹೆಬ್ಬಂಡೆಯ ಮೇಲೆ ಆಂಜನೇಯಸ್ವಾಮಿಯ ಗುಡಿಯಿದೆ.ಇಲ್ಲಿ ಗಣಪತಿ ಬ್ರಹ್ಮ ವಿಷ್ಣು ಮಹೇಶ್ವರ ಸಪ್ತಮಾತ್ರಕೆಯರು ರಾಮ ಲಕ್ಷ್ಮಣ ಸೀತೆಯರ ಅಂದವಾದ ಮೂರ್ತಿಯ ಕೆತ್ತನೆಯನ್ನು ಕೂಡ ಮಾಡಿಸಲಾಗಿದೆ.
ಈ ದೇವಾಲಯಕ್ಕೆ ಈ ಹೆಸರು ಬಂದ ಹಿಂದಿರುವ ಕತೆ ಏನು ಅಂದರೆ ಹಿಂದೆ ಈ ದೇವಾಲಯದ ಸುತ್ತಮುತ್ತ ರಾಗಿ ಬೆಳೆಯನ್ನು ಬೆಳೆಯುತ್ತಿದ್ದರು. ಸುಮಾರು ಅರುವತ್ತು ಅಡಿ ಎತ್ತರದ ರಾಗಿಯನ್ನು ರಾಶಿ ಹಾಕುತ್ತಿದ್ದರು ಅಂದಿನ ಕಾಲದಲ್ಲಿ ಈ ಪ್ರದೇಶವನ್ನು ಪಟೇಲರು ಆಳ್ವಿಕೆ ಮಾಡುತ್ತಿದ್ದರು.
ಒಮ್ಮೆ ಪಟೇಲರ ಮನೆಗೆ 3ಜನ ತೇಜೋ ಮಯ ದಾಸರು ಭಿಕ್ಷೆ ಕೇಳುತ್ತಾ ಬಂದರು ಆಗ ಪಟೇಲರ ಸೊಸೆ ಮರದಲ್ಲಿ ರಾಖಿಯನ್ನು ತಂದು ದಾಸರಿಗೆ ನೀಡಲು ಬಂದಾಗ ಪಟೇಲರ ಜಿಪುಣ ಪತ್ನಿ ಅದನ್ನು ತಡೆಯುತ್ತಾಳೆ.
ಬೆಳೆದ ರಾಗಿ ದೇವರಿಗೆ ಸಮಾನರಾಗಿರುವ ದಾಸರಿಗೆ ಇಲ್ಲ ಅನ್ನೋದಾದರೆ ರಾಶಿ ಹಾಕಿರುವ ರಾಗಿಯಲ್ಲಿ ಕಲ್ಲಾಗಿ ಹೋಗಲಿ ಎಂದು ಕೋಪದಿಂದ ನುಡಿಯುತ್ತಾಳೆ ಆಗ ರಾಶಿ ಹಾಕಿದ್ದ ರಾಗಿ ಎಲ್ಲವೂ ಕಲ್ಲಾಗಿ ಹೋಯ್ತೋ ಮತ್ತು ಬಂದ ಮೂವರು ದಾಸರು ಕೂಡ ಹೊಂಬಣ್ಣದ ಶಿಲೆಯಾದರು.
ಈ ಶಿಲೆಗಳನ್ನು ದೇವಸ್ಥಾನದ ಬಳಿಯೆ ಪ್ರತಿಷ್ಠಾಪನೆ ಕೂಡ ಮಾಡಲಾಗಿದೆ. ಈ ರೀತಿಯಾಗಿ ಈ ಪ್ರದೇಶಕ್ಕೆ ರಾಗೀಗುಡ್ಡ ಎಂಬ ಹೆಸರು ಬಂದಿತು. ಇಂದಿಗೂ ಕೂಡ ಸಾವಿರಾರು ಭಕ್ತಾದಿಗಳು ರಾಗಿ ಗುಡ್ಡಕ್ಕೆ ತೆರಳಿ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಬರುತ್ತಾರೆ ಧಾರ್ಮಿಕ ನೆಲೆಯಾಗಿರುವ ಈ ಪುಣ್ಯಕ್ಷೇತ್ರಕ್ಕೆ ನೀವು ಕೂಡ ಒಮ್ಮೆ ಭೇಟಿ ನೀಡಿ ಧನ್ಯವಾದ.