Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೆನೆಸಿಟ್ಟ ಎರಡು ಖರ್ಜೂರವನ್ನು ಪ್ರತಿದಿನ ಖಾಲಿ ಹೊಟ್ಟೆಗೆ ತಿನ್ನುತ್ತಾ ಬಂದರೆ ನಿಮ್ಮ ದೇಹಕ್ಕೆ ಏನೆಲ್ಲಾ ಲಾಭಗಳು ಆಗುತ್ತೆ ಗೊತ್ತಾ !!!!

ದಿನಕ್ಕೆ ಎರಡು ಖರ್ಜೂರವನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಪಡೆದುಕೊಳ್ಳಬಹುದು ಗೊತ್ತಾ. ಹೌದು ನೀವು ನೆನೆಸಿಟ್ಟ ಎರಡು ಖರ್ಜೂರವನ್ನು ದಿನಕ್ಕೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವುದಲ್ಲದೇ ಇನ್ನೂ ನಾನಾ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಹಾಗಾದರೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಯಾವೆಲ್ಲಾ ಆರೋಗ್ಯ ವೃದ್ಧಿಸುವುದರಲ್ಲಿ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು ಖರ್ಜೂರವನ್ನು ತಿನ್ನುವುದರಿಂದ ಎಂದು .

ಕಾಯಿಲೆಗಳಿಗೆ ಉತ್ತಮ ಮನೆ ಮದ್ದು ಆಗಿದೆ ಈ ಖರ್ಜೂರ. ಆಯುರ್ವೇದದಲ್ಲಿ ಈ ಖರ್ಜೂರವನ್ನು ಕೂಡ ಬಳಸಲಾಗುತ್ತದೆ ಹಾಗೂ ನಾನಾ ತರಹದ ಕಾಯಿಲೆಗಳಿಗೆ ಮನೆ ಮದ್ದು ಎಂದು ಕರೆಸಿಕೊಂಡಿದೆ ಖರ್ಜೂರ .

ಹಾಲಿನಲ್ಲಿ ಎಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳು ಇದೆಯೋ ಹಾಗೆಯೇ ಖರ್ಜೂರವನ್ನು ಕೂಡ ಒಂದು ಪರಿಪೂರ್ಣ ಆಹಾರ ಪದಾರ್ಥವೆಂದು ಪರಿಗಣಿಸಲಾಗಿದೆ .

ಹಾಗಾದರೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ನೆನೆಸಿಟ್ಟ ಖರ್ಜೂರವನ್ನು ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಲಾಭಗಳು ದೊರೆಯುತ್ತದೆ ಎಂದು ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ಇದನ್ನು ನೀವು ಕೂಡ ಮನೆಯಲ್ಲಿ ಪಾಲಿಸಿ ನೋಡಿ .

ನಮ್ಮಲ್ಲಿರುವಂತಹ ಸಾಕಷ್ಟು ಸಮಸ್ಯೆಗಳಿಗೆ ಮನೆಯಲ್ಲಿಯ ಅಡುಗೆ ಮನೆಯ ಮಸಾಲಾ ಡಬ್ಬದಲ್ಲಿ ಇರುವ ಪದಾರ್ಥಗಳು ಮನೆದ್ದಾಗಿರುತ್ತದೆ.ಆದರೆ ಜನರಿಗೆ ಈ ವಿಚಾರ ತಿಳಿಯದೆ ಸಣ್ಣ ಸಣ್ಣ ಸಮಸ್ಯೆಗಳಿಗೂ ಕೂಡ ಆಸ್ಪತ್ರೆಯ ಮೊರೆ ಹೋಗುತ್ತಾರೆ.

ಮುಂದೆ ಒಂದು ದಿನ ಆಸ್ಪತ್ರೆಯೇ ನಮ್ಮ ಮನೆಯಾದರೆ ಆಶ್ಚರ್ಯವೇನೂ ಇಲ್ಲ . ಆಯುರ್ವೇದದಲ್ಲಿ ಈ ಖರ್ಜೂರಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ ಹಾಗೂ ಈ ಖರ್ಜೂರವನ್ನು ಇಷ್ಟ ಪಡದೇ ಇರುವವರು ಯಾರೂ ಇಲ್ಲ.

ಯಾವ ರೂಪದಲ್ಲಾದರೂ ಈ ಖರ್ಜೂರವನ್ನು ತಿನ್ನಲು ಅಂದರೆ ಒಣ ಖರ್ಜೂರವನ್ನು ಅಥವಾ ಹಸಿ ಖರ್ಜೂರವನ್ನು ತಿನ್ನಲು ಇಷ್ಟಪಡುತ್ತಾರೆ .ದೈಹಿಕ ಚಟುವಟಿಕೆಗಳನ್ನು ಸರಾಗವಾಗಿಸಲು ಈ ಕರ್ಜೂರ ಹೆಚ್ಚು ಸಹಾಯಕಾರಿಯಾಗಿದ್ದು ದೇಹಕ್ಕೆ ಬೇಕಾಗಿರುವ ಎಲ್ಲ ತರಹದ ಪೋಷಕಾಂಶಗಳನ್ನು ಇದರಲ್ಲಿ ನೋಡಬಹುದಾಗಿದೆ

ಹಾಗೂ ಇದನ್ನು ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡರೆ ಏನೆಲ್ಲ ಲಾಭಗಳು ದೊರೆಯುತ್ತದೆ ಎಂದು ತಿಳಿದರೆ ಅಚ್ಚರಿಯಾಗುತ್ತದೆ .ಖರ್ಜೂರವೂ ಒಂದು ಒಣಹಣ್ಣು ಆಗಿರುವ ಕಾರಣದಿಂದಾಗಿ ಇದರಲ್ಲಿ ಹೆಚ್ಚು ಪೋಷಕಾಂಶ ,ವಿಟಮಿನ್, ಖನಿಜಾಂಶ ಗ್ಲುಕೋಸ್, ಫ್ರುಕ್ಟೋಸ್, ಸುಕ್ರೋಸ್ ನಂತಹ ನೈಸರ್ಗಿಕ ಸರ್ಕಾರ ಅಂಶವೂ ಇದರಲ್ಲಿ ಇರುತ್ತದೆ ಹಾಗೆ ಈ ಅಂಶಗಳು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ .

ಖರ್ಜೂರವನ್ನು ಹಾಲಿನಲ್ಲಿ ಬೆರೆಸಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ ಹಾಗೂ ಇದರಲ್ಲಿ ಪೊಟಾಶಿಯಂ ಅಂಶವು ಹೇರಳವಾಗಿದ್ದು ಸೋಡಿಯಂ ಅಂಶವು ಅಲ್ಪ ಪ್ರಮಾಣದಲ್ಲಿ ಇರುತ್ತದೆ .ಇದರಿಂದ ನರಮಂಡಲಗಳ ಆರೋಗ್ಯವಾಗಿರಲು ಇದು ನೆರವಾಗುತ್ತದೆ .

ಇತ್ತೀಚಿನ ದಿನಗಳಲ್ಲಿ ನಡೆಸಿದಂತಹ ಒಂದು ಸಂಶೋಧನೆ ತಿಳಿಸುವುದೇನೆಂದರೆ ಪಾರ್ಶ್ವವಾಯುವಿನಂತಹ  ಅಪಾಯವನ್ನು ಕಡಿಮೆ ಗೊಳಿಸುವಂತಹ ಗುಣವೂ ಖರ್ಜೂರದಲ್ಲಿ ಅಡಗಿದ್ದು ,ಆದ್ದರಿಂದ ಇದನ್ನು ನಿರ್ದಿಷ್ಟ ಪ್ರಮಾಣದಲ್ಲಿ ತಿನ್ನುವುದರಿಂದ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ .

ಅತ್ಯಧಿಕ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇರುವ ಕಾರಣದಿಂದಾಗಿ ಇದು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೇಗನೆ ಪರಿಹಾರವನ್ನು ದೊರಕಿಸಿಕೊಡುತ್ತದೆ .ಖರ್ಜೂರವನ್ನು ಅಧಿಕವಾಗಿ ತಿನ್ನುವುದರಿಂದ ಮೂತ್ರ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳು ದೊರೆಯುತ್ತದೆ.

ಹಾಗೂ ಗರ್ಭಿಣಿ ಸ್ತ್ರೀಯರು ಈ ನೆನಸಿದ ಖರ್ಜೂರವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಾನಾ ತರಹದ ಪ್ರಯೋಜನಗಳು ದೊರೆಯುತ್ತದೆ .ದಂತಕ್ಷಯ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಖರ್ಜೂರವನ್ನು ತಿನ್ನುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ .

ಹಾಗೂ ಗರ್ಭಿಣಿ ಸ್ತ್ರೀಯರು ಖರ್ಜೂರವನ್ನು ತಿನ್ನುವುದರಿಂದ ಎದೆಹಾಲು ವೃದ್ಧಿಸುತ್ತದೆ ಹಾಗೂ ಭ್ರೂಣ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಿದೆ ಮತ್ತು ಹೀಮೋಗ್ಲೋಬಿನ್ ಅಂಶವನ್ನು ಕೂಡ ಹೆಚ್ಚಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *