ನೀವೇನಾದ್ರು ಸಾಬೂನು ಬಳಸಿ ಸ್ನಾನ ಮಾಡುತ್ತಿದ್ದೀರಾ .. ಹಾಗೆ ಸಾಬೂನಿನಿಂದ ಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ !!!

23

ನೀವೇನಾದರೂ ನಿಮ್ಮ ಮನೆಯಲ್ಲಿ ಸ್ನಾನ ಮಾಡುವುದಕ್ಕೆ ಸೋಪ್ ಬಳಸುತ್ತಿದ್ದರೆ ಈ ಮಾಹಿತಿಯನ್ನು ನೀವು ತಪ್ಪದೆ ತಿಳಿಯಲೇಬೇಕು. ಇದೊಂದು ಚಿಕ್ಕ ವಿಚಾರವೇ ಆಗಿರಬಹುದು. ಆದರೆ ನಾವು ಈ ಒಂದು ವಿಚಾರದ ಬಗ್ಗೆ ಸಂಕ್ಷಿಪ್ತವಾಗಿ ಅರ್ಥ ಮಾಡಿಕೊಂಡರೆ ಇದರಲ್ಲಿಯೂ ಕೂಡ ವಿಷಯವಿದೆ .

ನಾವು ಇದರ ಬಗ್ಗೆಯೂ ಕೂಡ ಯೋಚನೆ ಮಾಡಬೇಕಾಗಿತ್ತು ಅಂತ ಅನ್ನಿಸುತ್ತದೆ ಹಾಗಾದರೆ ಬನ್ನಿ ಇಂದಿನ ಮಾಹಿತಿಯಲ್ಲಿ ನೀವು ಪ್ರತಿನಿತ್ಯ ಬಳಸುವ ಸೋಪುಗಳು ಎಷ್ಟು ಸೇಫ್ ಎಂಬುದನ್ನು ತಿಳಿಯೋಣ .ಯಾಕೆ ನೀವು ಕೂಡ ಒಂದು ಉಪಯುಕ್ತ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.

ಹೌದು ನಾವು ಪ್ರತಿ ದಿನ ಸ್ನಾನಕ್ಕಾಗಿ ಸೋಪುಗಳನ್ನು ಬಳಸುತ್ತಿರುತ್ತೇವೆ, ಕೆಲವರ ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸೋಪನ್ನು ಬಳಸಿದರೆ ಇನ್ನು ಕೆಲವರ ಮನೆಯಲ್ಲಿ ಒಂದೇ ಸೋಪನ್ನು ಎಲ್ಲರೂ ಬಳಸುತ್ತಾರೆ.

ಇನ್ನು ಕೆಲವರಂತೂ ಸೋಪುಗಳನ್ನು ಬಳಸಿ ಅದನ್ನು ಒಂದು ಡಬ್ಬದ ಒಳಗೆ ಕೂಡ ಇಡುವುದಿಲ್ಲ ಅದನ್ನು ಹಾಗೇ ಕಲ್ಲುಗಳ ಮೇಲೆ ಅಥವಾ ಯಾವುದಾದರೂ ಒಂದು ವಸ್ತುವಿನ ಮೇಲೆ ಇಟ್ಟು ಸುಮ್ಮನಾಗಿಬಿಡುತ್ತಾರೆ.

ಈ ರೀತಿ ನಾವು ಬಳಸಿದ ಸೋಪಿನಲ್ಲಿ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚಿರುತ್ತದೆ ಹಾಗೆ ಸೋಪುಗಳನ್ನು ಹಾಗೆ ಬಳಸಿ ಕಲ್ಲುಗಳ ಮೇಲೆ ಅಥವಾ ಯಾವುದಾದರೂ ವಸ್ತುವಿನ ಮೇಲೆ ಇಟ್ಟು ಬರುವುದರಿಂದ ಅದು ಆ ವಸ್ತುವಿನ ಮೇಲೆ ಕರಗಬಹುದು.

ಅಥವಾ ಸಾಬೂನಿಗೆ ಹೆಚ್ಚು ಬ್ಯಾಕ್ಟೀರಿಯಾ ಅಂಟಿಕೊಳ್ಳಬಹುದು ಇದನ್ನು ಮತ್ತೆ ನಾವು ಬಳಸುವುದರಿಂದ ಆ ಬ್ಯಾಕ್ಟೀರಿಯಾಗಳು ನಮಗೆ ಸೋಂಕು ಮಾಡುವ ಸಾಧ್ಯತೆ ಇರುತ್ತದೆ.

ಹೀಗೆ ಸೋಪು ಬಳಸುವುದರಿಂದ ಆಗುವ ಒಂದು ಕೆಟ್ಟ ಪರಿಣಾಮ ಆದರೆ ಮತ್ತೊಂದು ವಿಚಾರವೇನು ಅಂದರೆ, ಸೋಪುಗಳನ್ನು ನಾವು ಬಳಸಿ ಅದನ್ನು ಹಾಗೆ ಇಟ್ಟು ಬಿಡುತ್ತವೆ.

ಆಗ ಅದು ನೀರಾಗಿರುವ ಕಾರಣ ಕರಗುವ ಸಾಧ್ಯತೆ ಇರುತ್ತದೆ ಹೀಗೆ ಕೆಲವರು ಹೆಚ್ಚು ಬೆಲೆ ಇರುವ ಸೋಪುಗಳನ್ನು ಬಳಸುತ್ತಿರುತ್ತಾರೆ ಆದರೆ ಈ ರೀತಿ ಸೋಪುಗಳು ಕರಗುತ್ತಿದ್ದರೆ ಹಣ ಎಷ್ಟು ವ್ಯರ್ಥವಾಗಬಹುದು ಎಂಬುದನ್ನು ಒಮ್ಮೆ ಯೋಚಿಸಿ.

ಆದ ಕಾರಣ ಸೋಪುಗಳಿಗಿಂತ ಶವರ್ ಜೆಲ್ ಅನ್ನು ಬಳಸಿ ಸ್ನಾನ ಮಾಡುವುದರಿಂದ ಇದು ಹಣವೂ ಉಳಿತಾಯ ಮಾಡುತ್ತದೆ.

ಜೊತೆಗೆ ಯಾವ ಬ್ಯಾಕ್ಟೀರಿಯಾವು ಕೂಡ ಈ ಶವರ್ ಜೆಲ್ ನಲ್ಲಿ ಅಂಟಿ ಕೊಂಡಿರುವುದಿಲ್ಲ ಇದು ನಮ್ಮ ಮೇಲೆ ಯಾವ ಅಡ್ಡ ಪರಿಣಾಮಗಳನ್ನು ಕೂಡ ಉಂಟು ಮಾಡುವುದಿಲ್ಲ.

ಆದರೆ ಜನರು ಶವರ್ ಜೆಲ್ ಅನ್ನು ಬಳಸುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಈ ಶವರ್ ಜೆಲ್ ಗೆ ಹೆಚ್ಚು ಹಣವಿರಬಹುದೇನೊ ಅಂತ ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಐವತ್ತು ರೂಪಾಯಿಗಳಿಂದಲು ಶವರ್ ಜೆಲ್ ಮಾರಾಟಕ್ಕಿರುತ್ತವೆ

ಇದನ್ನು ನೀವು ಕೊಂಡುಕೊಂಡು ಬಂದು ಸುಮಾರು ತಿಂಗಳಿನವರೆಗೂ ಬಳಸಬಹುದು ಹಾಗೆ ಶವರ್ ಜೆಲ್ ಬಳಸುವ ವಿಧಾನವು ಹೇಗೆ ಅಂದರೆ ಸ್ನಾನ ಮಾಡುವುದಕ್ಕಾಗಿಯೇ ಒಂದು ಸ್ವಾಂಜ್ ರೀತಿಯ ಜುಂಗು ಸಿಗುತ್ತದೆ .

ಅದನ್ನು ನೀರಿನಲ್ಲಿ ನೆನೆಸಿ ಸ್ವಲ್ಪವೇ ಶವರ್ ಜಾಲ ಹಾಕಿದರೆ ಹೆಚ್ಚು ನೊರೆ ಬರುತ್ತದೆ ನೀವು ಇದರಿಂದ ಹಣವನ್ನು ಉಳಿಸಬಹುದು ಹಾಗೆ ಇದು ತ್ವಚೆಯ ಮೇಲೆ ಯಾವ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ.

ಹಾಗೆ ಫ್ರೆಂಡ್ಸ್ ಮತ್ತೊಂದು ವಿಚಾರವೇನು ಅಂದರೆ ಶವರ್ ಜೆಲ್ ಗಳಲ್ಲಿ ಸಾಕಷ್ಟು ಎಸೆನ್ಷಿಯಲ್ ಆಯಿಲ್ ಗಳು ವಿಟಮಿನ್ಸ್ಗಳು ಇರುತ್ತದೆ.

ಇದು ತ್ವಚೆಗೆ ನರೀಶ್ ಮಾಡುತ್ತದೆ ಆದರೆ ಸೋಪುಗಳಲ್ಲಿ ಇಂತಹ ಅಂಶಗಳು ಇರುವುದಿಲ್ಲ ಇದು ತ್ವಚೆಗೆ ಹಾನಿಯನ್ನುಂಟು ಮಾಡಬಹುದು. ಈ ಒಂದು ಚಿಕ್ಕ ವಿಚಾರ ನಿಮಗೆ ಉಪಯುಕ್ತವಾಗಿ ದ್ದರೆ ತಪ್ಪದೇ ಮಾಹಿತಿಗೆ ಒಂದು ಲೈಕ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here