ನೀವೇನಾದ್ರು ಶಕ್ತಿಶಾಲಿಯಾದ ಈ ಒಂದು ಬೀಜಾಕ್ಷರಿ ಮಂತ್ರವನ್ನು ನೀವು 41 ದಿನಗಳ ಕಾಲ ದಿನಕ್ಕೆ 108 ಬಾರಿ ಅಥವಾ 5 ಬಾರಿ ಪಠಿಸಿ ಮತ್ತು ಲಕ್ಷ್ಮಿಯನ್ನು ಪೂಜಿಸಿದರೆ ನಿಮ್ಮ ಮನೆಗೆ ಅದೃಷ್ಟ ಒಲಿದು ನೀವು ಶ್ರೀಮಂತರಾಗುತ್ತೀರಾ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ಈ ಒಂದು ಬೀಜಾಕ್ಷರಿ ಮಂತ್ರವನ್ನು ನೀವು ಪಠಿಸುತ್ತಾ ಬನ್ನಿ, ದಿನಕ್ಕೆ 108 ಅಥವಾ 5 ಒಂದು ಬಾರಿ ಪಠಿಸಬೇಕಾಗಿರುವ ಈ ಬೀಜಾಕ್ಷರಿ ಮಂತ್ರದ ಮಹತ್ವವನ್ನು ಮತ್ತು ಈ ಬೀಜಾಕ್ಷರಿ ಮಂತ್ರದ ಅರ್ಥವನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ,ಈ ಬೀಜಾಕ್ಷರಿ ಮಂತ್ರವನ್ನು ಯಾವಾಗ ಪಠಿಸಬೇಕು ಯಾವ ಸಮಯದಲ್ಲಿ ಪಠಿಸಬೇಕು ಹೇಗೆ ಪಠಿಸಬೇಕು ಎಂಬುದನ್ನು ಕೂಡ ತಿಳಿಸುತ್ತೇನೆ ಇಂದಿನ ಈ ಮಾಹಿತಿಯಲ್ಲಿ.

ಯಾವೊಬ್ಬ ವ್ಯಕ್ತಿಯ ಜೀವನದಲ್ಲಿ ಆದರೂ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಇರಲೇಬೇಕಾಗುತ್ತದೆ ಯಾಕೆ ಅಂದರೆ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಹಣವು ಅವಶ್ಯಕವಾದುದು .ಈ ಹಣದ ಅತಿ ದೇವತೆಯಾಗಿರುವ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸಬೇಕಾದರೆ ಲಕ್ಷ್ಮಿದೇವಿಯ ಕೃಪಾಕಟಾಕ್ಷ ಇರಬೇಕು, ಈ ಕಟಾಕ್ಷ ವಾಗಬೇಕಾದರೆ ಈ ಒಂದು ಮಂತ್ರವನ್ನು ಪ್ರತಿ ದಿನ 5 ಒಂದು ಬಾರಿ ಪಠಿಸುತ್ತಾ ಬರಬೇಕು.

ಶ್ರೀ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಮಂಗಳವಾರ ಮತ್ತು ಶುಕ್ರವಾರ ದಿವಸದಂದು ತಾಯಿಯ ಪೂಜೆಯನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ಪ್ರತಿ ದಿನ ಲಕ್ಷ್ಮೀದೇವಿಯ ಪಟ ಅಥವಾ ಮೂರ್ತಿಯ ಮುಂದೆ ಕುಳಿತು ಈ ಬೀಜಾಕ್ಷರಿ ಮಂತ್ರವನ್ನು ಪಠಿಸಬೇಕು ಆಗದ್ದು ಬೀಜಾಕ್ಷರ ಮಂತ್ರ ಹೀಗಿದೆ ” ಓಂ ಐಂ ಹಿರೀಂ ಕ್ಲೀಂ ಶ್ರೀಂ ಶ್ರೀ ಮಹಾಲಕ್ಷ್ಮಿಯೇ ನಮಃ “ಈ ಒಂದು ಬೀಜಾಕ್ಷರಿ ಮಂತ್ರವನ್ನು ನೀವು ಪಠಿಸ ಬೇಕಾಗುತ್ತದೆ. ಬೀಜಾಕ್ಷರಿ ಮಂತ್ರವನ್ನು ನೀವು ಧ್ಯಾನ ಮುದ್ರೆಯಲ್ಲಿ ಕುಳಿತು ಪಠಿಸಬೇಕು ಅಂತ ಏನು ನಿಯಮವಿಲ್ಲ ನೀವು ಈ ಒಂದು ಮಂತ್ರವನ್ನು ದೀಪವನ್ನು ಹಚ್ಚುವಾಗ ಮತ್ತು ತಾಯಿಯನ್ನು ನೆನೆಸಿಕೊಳ್ಳುವಾಗ ತಾಯಿಯ ಪೂಜೆಯನ್ನು ಮಾಡುವಾಗ ತಾಯಿಗೆ ಆರತಿಯನ್ನು ಬೆಳಗುವಾಗ ಈ ಒಂದು ಮಂತ್ರವನ್ನು ನೀವು ಪಡಿಸಬಹುದಾಗಿದೆ.

ಈ ಬೀಜಾಕ್ಷರಿ ಮಂತ್ರವು ವಿಷ್ಣು ದೇವನ ಕೈಯಲ್ಲಿರುವ ಶಂಕು ಮತ್ತು ಸುದರ್ಶನ ಚಕ್ರದ ಸಂಭಾಷಣೆಯಿಂದ ಹುಟ್ಟಿಕೊಂಡ ಬೀಜಾಕ್ಷರಿ ಮಂತ್ರಿಗಳಾಗಿದ್ದು ಇದಕ್ಕೆ ಬಹಳಾನೇ ಮಹತ್ವವೂ ಕೂಡ ಇದೆ, ಹಾಗೆಯೇ ಈ ಬೀಜಾಕ್ಷರಿ ಮಂತ್ರದ ಅರ್ಥವನ್ನು ಹೇಳುವುದಾದರೆ,ಓಂ ಅಂದರೆ ಬ್ರಹ್ಮಾಂಡ, ಐಮ್ ಅಂದರೆ ಮಹಾ ಲಕ್ಷ್ಮಿಯನ್ನು ಆಹ್ವಾನ ಮಾಡಿಕೊಳ್ಳುವುದಕ್ಕಾಗಿ ಬಳಸುವ ಪದ ಅಥವಾ ಐಂ ಅಂದರೆ ಲಕ್ಷ್ಮೀದೇವಿಯನ್ನು ಆಹ್ವಾನ ಮಾಡಿಕೊಂಡಂತೆ, ಹಿರೇಮ ಅಂದರೆ ಒಂದು ಸಕಾರಾತ್ಮಕ ಶಕ್ತಿಯ ಸಂಕೇತವಾಗಿರುತ್ತದೆ,

ಕ್ಲೀಂ ಅಂದರೆ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಆಚೆ ಕಳಿಸಿದಂತೆ ಮತ್ತು ಶ್ರೀಂ ಅಂದರೆ ಲಕ್ಷ್ಮೀದೇವಿಯ ಕೃಪೆಯೂ ನಮ್ಮ ಮೇಲೆ ಇರಲಿ ಎಂಬ ಅರ್ಥವನ್ನು ಇದು ನೀಡುತ್ತದೆ, ಒಟ್ಟಿನಲ್ಲಿ ಶ್ರೀಂ ಅಂದರೆ ಶುಭದ ಸಂಕೇತವಾಗಿರುತ್ತದೆ. ಶ್ರೀ ಮಹಾಲಕ್ಷ್ಮೀ ದೇವಿ ಅಂದರೆ ದೇವಿಯನ್ನು ನಾಮ ಸ್ಮರಣೆ ಮಾಡುವುದು ಇದರ ಅರ್ಥವಾಗಿರುತ್ತದೆ.ಈ ಒಂದು ಬೀಜಾಕ್ಷರಿ ಮಂತ್ರವನ್ನು ದಿನಕ್ಕೆ ೫ ಒಂದು ಬಾರಿ ಪಠಿಸ ಬೇಕಾಗುತ್ತದೆ ಹಾಗೆ ಈ ಮೇಲೆ ತಿಳಿಸಿದಂತಹ ಬೀಜಾಕ್ಷರಿ ಮಂತ್ರವನ್ನು ಅಷ್ಟು ಬೀಜಾಕ್ಷರಿ ಮಂತ್ರದ ಅರ್ಥವನ್ನು ತಿಳಿದು ನೀವು ಕೂಡ ಇನ್ನು ಮುಂದಿನ ದಿನಗಳಲ್ಲಿ ಈ ಬೀಜಾಕ್ಷರಿ ಮಂತ್ರವನ್ನು ಪಠಿಸ ಬೇಕಾಗುತ್ತದೆ.

ಮತ್ತು ಮತ್ತೊಂದು ತಿಳಿದ ಬೇಕಾಗಿರುವಂತಹ ವಿಚಾರವೇನು ಅಂದರೆ, ಈ ಬೀಜಾಕ್ಷರಿ ಮಂತ್ರವನ್ನು ಸರಿಯಾದ ಅಕ್ಷರಗಳಿಂದ ಸ್ಪಷ್ಟನೆಗಾಗಿ ಪಠಿಸುವುದು ಒಳ್ಳೆಯದು. ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದಲ್ಲಿ ತಪ್ಪದೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *