Categories
Uncategorized ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನೀವೇನಾದ್ರು ವೈರ್ ಲೆಸ್ ಹೆಡ್ ಫೋನ್ ಬಳಸುತ್ತಿದ್ದರೆ ಈಗ್ಲೇ ಬಿಟ್ಟುಬಿಡಿ ಯಾಕೆ ಗೊತ್ತಾ …!!!

ನಮಸ್ಕಾರ ಸ್ನೇಹಿತರೇ  ನಾವು ಇಂದು ಹೇಳುತ್ತಿರುವ ಮಾಹಿತಿಯಲ್ಲಿ ನೀವೇನಾದ್ರು ವೈರ್ ಲೆಸ್ ಹೆಡ್ ಫೋನ್ ಬಳಸುತ್ತಿದ್ದಾರೆ ಏನಾಗುತ್ತೆ ಗೊತ್ತ  ಗೊತ್ತಾಗಬೇಕೆಂದರೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ  ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ಮನುಷ್ಯನು ಎಷ್ಟು ಅವಲಂಬಿತವಾಗಿದ್ದಾನೆ ಎಂದರೆ ಅದನ್ನು ಬಿಟ್ಟಿರಲು ಅವನಿಗೆ ಸಾಧ್ಯವಾಗುವುದಿಲ್ಲ. ಮೊಬೈಲ್, ಟಿವಿ ಇತ್ಯಾದಿಗಳು ಮನುಷ್ಯನ ದೈನಂದಿನ ಕೆಲಸಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದರಲ್ಲೂ ಮೊಬೈಲ್ ಅನ್ನುವುದು ಜೀವನದ ಅತೀ ಮುಖ್ಯ ಸಾಧನ ಎಂದೇ ಪರಿಗಣಿಸಲಾಗಿದೆ.ಮೊಬೈಲ್ ಇಲ್ಲದೆ ಮನುಷ್ಯನ ಜೀವನವೇ ಇಲ್ಲ ಎನ್ನುವಷ್ಟು ಅದನ್ನು ಹಚ್ಚಿಕೊಂಡಿದ್ದಾನೆ. ದಿನನಿತ್ಯವೂ ಮೊಬೈಲ್ ಗೆ ಸಂಬಂಧಿಸಿದ ಏನಾದರೊಂದು ಸಾಧನಗಳು ಬಿಡುಗಡೆಯಾಗುತ್ತಲೇ ಇರುತ್ತದೆ. ಇದನ್ನು ನಾವು ಖರೀದಿ ಮಾಡಿ ಉಪಯೋಗಿಸುತ್ತೇವೆ. ಆದರೆ ಇಂತಹ ಎಲೆಕ್ಟ್ರಾನಿಕ್ ಸಾಧನಗಳಿಂದ ಆಗುವ ಹಾನಿಯ ಬಗ್ಗೆ ಆಲೋಚನೆ ಮಾಡುವುದೇ ಇಲ್ಲ. ಇಲ್ಲಿ ನಾವು ಹೇಳಲು ಹೊರಟಿರುವುದು ಬ್ಲೂಟೂಥ್ ಹೆಡ್ ಫೋನ್ ಗಳ ಬಗ್ಗೆ.ಇದನ್ನು ಕಿವಿಗೆ ಹಾಕಿಕೊಂಡು ಮೊಬೈಲ್ ನ್ನು ಕಿಸೆಯಲ್ಲೇ ಇಟ್ಟುಕೊಂಡು ಎಷ್ಟು ಬೇಕಿದ್ದರೂ ಮಾತನಾಡಿಕೊಂಡು ಹೋಗಬಹುದು.

ಇದಕ್ಕಾಗಿ ವಯರ್ ಇರುವಂತಹ ಹೆಡ್ ಫೋನ್ ಧರಿಸುವಂತಹ ಅಗತ್ಯವೂ ಇರುವುದಿಲ್ಲ. ಬ್ಲೂಟೂಥ್ ಮೂಲಕವಾಗಿ ಇದು ನಿಮಗೆ ಮಾತನಾಡಲು ಅವಕಾಶ ನೀಡುವುದು. ಆದರೆ ಇದರಿಂದ ಆರೋಗ್ಯದ ಮೇಲೆ ಆಗುವಂತಹ ಪರಿಣಾಮಗಳ ಬಗ್ಗೆ ಎಂದಾದರೂ ಆಲೋಚನೆ ಮಾಡಿದ್ದೀರಾ ಸಂಶೋಧನಾ ವರದಿಯು ಹೇಳಿರುವ ಪ್ರಕಾರ ಇತ್ತೀಚೆಗೆ ಒಂದು ಸಂಶೋಧನಾ ವರದಿಯು ಹೇಳಿರುವ ಪ್ರಕಾರ ವಯರ್ ಲೆಸ್ ಹೆಡ್ ಫೋನ್ ಗಳಿಂದಾಗಿ ಕ್ಯಾನ್ಸರ್ ಬರುವಂತಹ ಅಪಾಯವು ಅಧಿಕವಾಗಿರುವುದು. ವಯರ್ ಲೆಸ್ ಹೆಡ್ ಫೋನ್ ನ್ನು ಉಪಯೋಗಿಸಿದ ವೇಳೆ ಅದು ವಿಕಿರಣವನ್ನು ಮೆದುಳಿಗೆ ಕಳುಹಿಸಿಕೊಡುವುದು. ಇದರಲ್ಲಿ ಇರುವಂತೆ ವಯರ್ ಲೆಸ್ ಹೆಡ್ ಫೋನ್ ಗಳಿಂದಾಗಿ ಕ್ಯಾನ್ಸರ್ ನ ಅಪಾಯವು ಹೆಚ್ಚಾಗಿರುವುದು. ಅಮೆರಿಕಾದ ಕೊಲೊರಾಡೋ ಸ್ಪ್ರಿಂಗ್ಸ್ ನ ಯೂನಿವರ್ಸಿಟಿ ಆಫ್ ಕೊಲೊರಾಡೊದ ಜೀವರ ಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಂತಹ ಪ್ರಾಧ್ಯಾಪಕ ಜೆರ್ರಿ ಫಿಲಿಪ್ಸ್ ಅವರ ಹೇಳಿಕೆಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಕಿವಿಯ ರಂಧ್ರದಲ್ಲಿ ವಯರ್ ಲೆಸ್ ಹೆಡ್ ಫೋನ್ ಗಳನ್ನು ಇಡುವುದರಿಂದ ತಲೆಯಲ್ಲಿರುವಂತಹ ಅಂಗಾಂಶಗಳು ರೇಡಿಯೋ ತರಂಗಾಂತರ ವಿಕಿರಣಕ್ಕೆ ತೆರೆದಿಡುವುದು ಅತಿಯಾಗಿರುವುದು” ಎಂದು ಫಿಲಿಪ್ಸ್ ಹೇಳಿದ್ದಾರೆ. ಈ ಲೇಖನದಲ್ಲಿ ಹೇಳಿರುವ ಪ್ರಕಾರ, ಫಿಲಿಪ್ಸ್ ಅವರು ಮಾತ್ರ ವಯರ್ ಲೆಸ್ ಹೆಡ್ ಫೋನ್ ನಿಂದ ಆಗುತ್ತಿರುವಂತಹ ವಿವಿಧ ಆರೋಗ್ಯ ತೊಂದರೆಗಳ ಬಗ್ಗೆ ಚಿಂತಿರಾದದ್ದಲ್ಲ. 40 ರಾಷ್ಟ್ರಗಳು ನಡೆಸಿರುವಂತಹ ಸುಮಾರು 250 ಸಂಶೋಧನೆಗಳು ಒಂದು ಒಪ್ಪಂದಕ್ಕೆ ಸಹಿ ಮಾಡಿ ವಯರ್ ಲೆಸ್ ಹೆಡ್ ಫೋನ್ ನಿಂದ ಆಗುತ್ತಿರುವ ಅಪಾಯಗಳ ಬಗ್ಗೆ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿವೆ.ವಯರ್ ಲೆಸ್ ಹೆಡ್ ಫೋನ್ ಗಳು ನಿಜವಾಗಿಯೂ ಹಾನಿಕಾರಕವೇ

ಬ್ಲೂಟೂಥ್ ಹೆಡ್ ಫೋನ್ ಗಳು ಬಿಡುಗಡೆ ಮಾಡುವಂತಹ ವಿಕಿರಣಗಳು ಖಂಡಿತವಾಗಿಯೂ ನಿಮ್ಮ ದೇಹಕ್ಕೆ ಹಾನಿ ಉಂಟು ಮಾಡುವುದು. ಆದರೆ ಇದನ್ನು ನೀವು ಸಂಪೂರ್ಣವಾಗಿ ನಿಮ್ಮ ಜೀವನದಿಂದ ನಿಷೇಧ ಹೇರಲು ಸಾಧ್ಯವಿಲ್ಲ. ಯಾರು ಕೂಡ ಈ ವಿಕಿರಣದಿಂದ ಪಾರಾಗಲು ಸಾಧ್ಯವಿಲ್ಲ. ನೀವು ವಯರ್ ಲೆಸ್ ಹೆಡ್ ಫೋನ್ ನ್ನು ಬಿಟ್ಟರೂ ಬೇರೆ ವಿಧಾನಗಳಿಂದ ವಿಕಿರಣಗಳಿಗೆ ನೀವು ತೆರೆದಿಡಬಹುದು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ  ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ