ನೀವೇನಾದ್ರು ರಾತ್ರಿ ಮಲಗುವ ಸಮಯದಲ್ಲಿ ಪ್ರತಿದಿನ ನಿಮ್ಮ ಪಕ್ಕಕ್ಕೆ ನಿಂಬೆಹಣ್ಣಿಗೆ ಈ ಒಂದು ವಸ್ತುವನ್ನು ಚುಚ್ಚಿ ಮಲಗುವುದರಿಂದ ಹೀಗೆಲ್ಲ ಆಗುತ್ತತಂತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ನಾವು ಪ್ರತಿದಿನ ಉಲ್ಲಾಸದಿಂದ ಇರಬೇಕೆಂದರೆ ನಮ್ಮ ದಿನಚರಿ ಬಹಳ ಮುಖ್ಯವಾಗಿರುತ್ತದೆ .ಹಾಗಾಗಿ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡು ನಾವು ಉಲ್ಲಾಸದಿಂದ ಇರಬೇಕೆಂದರೆ ನಾವು ಪ್ರತಿದಿನ ಚೆನ್ನಾಗಿ ನಿದ್ದೆಯನ್ನು ಮಾಡಬೇಕಾಗುತ್ತದೆ .ಹೌದು ಮನುಷ್ಯನಿಗೆ ಒಂದು ಹೊತ್ತು ಊಟವಿಲ್ಲದಿದ್ದರೂ ನಿದ್ದೆ ಮಾತ್ರ ಸಂಪೂರ್ಣವಾಗಿ ಇರಬೇಕಾಗುತ್ತದೆ .ಹಾಗಾಗಿ ಇಂದಿನ ಆಧುನಿಕ ಯುಗದಲ್ಲಿ ಇಂದಿನ ಆಹಾರ ಪದ್ಧತಿಯ ವ್ಯತ್ಯಾಸದಿಂದ ನಿದ್ರಾಹೀನತೆ ಉಂಟಾಗುತ್ತದೆ .ಹಲವಾರು ಕಾರಣಗಳಿಗೆ ನಿದ್ರಾಹೀನತೆ ಉಂಟಾಗುತ್ತದೆ .

ನಿಮಗೆ ರಾತ್ರಿ ಯಾವುದೇ ಅಡೆ ತಡೆ ಇಲ್ಲದೇ ನಿಮಗೆ ನಿದ್ದೆ ಬರಬೇಕೆಂದರೆ ಮೊದಲು ನೀವು ಮಲಗುವ ಜಾಗ ಚೆನ್ನಾಗಿರಬೇಕು.ಅದಕ್ಕೆ ಕೆಲವು ನೈಸರ್ಗಿಕವಾಗಿ ಸಿಗುವ ಮನೆಮದ್ದುಗಳನ್ನು ಉಪಯೋಗಿಸಬೇಕು .ಅದರಲ್ಲಿ ಮೊದಲನೆಯದು ನಿಂಬೆಹಣ್ಣು .ಈ ನಿಂಬೆಹಣ್ಣನ್ನು ರಾತ್ರಿ ಈ ರೀತಿ ಉಪಯೋಗಿಸುವುದರಿಂದ ನಿಮಗೆ ಯಾವುದೇ ತೊಂದರೆ ಇಲ್ಲದೇ ನಿದ್ದೆ ಬರುತ್ತದೆ .ಹಾಗಾದ್ರೆ ಅದನ್ನು ಹೇಗೆ ಉಪಯೋಗಿಸಬೇಕು ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇನೆ

ಮನುಷ್ಯನಿಗೆ ಅತಿ ಮುಖ್ಯವಾದದ್ದು ಅಂತ ಹೇಳಬಹುದು ಈ ಒಂದು ನಿದ್ರೆ. ನಿದ್ರೆ ಮಾಡಿದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ ಕೇವಲ ಮೂರ್ನಾಲ್ಕು ದಿನ ನಿದ್ರೆಗೆಟ್ಟಿದರೆ ಸಾಕು ಮನುಷ್ಯನ ಆರೋಗ್ಯ ಅನಾರೋಗ್ಯಕ್ಕೆ ಒಳಗಾಗುತ್ತದೆ ಆದ ಕಾರಣ ಪ್ರತಿ ದಿನ ಎಂಟು ಗಂಟೆಗಳ ಕಾಲ ನಿದ್ರಿಸುವುದು ಅತ್ಯವಶ್ಯಕವಾಗಿರುತ್ತದೆ ಅಷ್ಟೇ ಅಲ್ಲದೇ ಯಾರೂ ಎಂಟು ಗಂಟೆಗಳ ಕಾಲಕ್ಕಿಂತ ಕಡಿಮೆ ನಿದ್ರಿಸುತ್ತಾರೆ ಅಂಥವರಿಗೆ ಮಾನಸಿಕವಾಗಿ ಯಾವುದಾದರೂ ಒಂದು ಸಮಸ್ಯೆಗಳು ಮುಂದಿನ ದಿನಗಳಲ್ಲಿ ಕಾಡುವ ಸಾಧ್ಯತೆಗಳು ಕೂಡ ಇರುತ್ತದೆ. ಆದ ಕಾರಣ ಮನುಷ್ಯನಿಗೆ ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಪೌಷ್ಟಿಕ ಉಳ್ಳ ಆಹಾರ ಎಷ್ಟು ಅವಶ್ಯಕತೆಯೊ ಹಾಗೆ ಒಳ್ಳೆಯ ನಿದ್ರೆ ಕೂಡ ಅಷ್ಟೇ ಅವಶ್ಯಕವಾಗಿರುತ್ತದೆ.

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ ಅದೇನೆಂದರೆ ಅರ್ಲಿ ಟು ಬೆಡ್ ಅರ್ಲಿ ಟು ರೈಸ್ ಅಂತ. ಇದರ ಅರ್ಥವೇನು ಅಂದರೆ ಬೇಗ ಮಲಗಬೇಕು ಮತ್ತು ಬೇಗ ಎದ್ದೇಳಬೇಕು ಅಂತ. ಈ ರೀತಿ ನಾವು ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳುವುದರಿಂದ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ಹಾಗೆ ಎರಡನೆಯ ಲಾಭ ಅಂದರೆ ನಮ್ಮ ದೇಹ ಆ ದಿನ ಪೂರ್ತಿ ಲವಲವಿಕೆಯಿಂದ ಇರಲು ಈ ಒಂದು ಪದ್ಧತಿ ಈ ಒಂದು ರೂಢಿ ನಮಗೆ ಹೆಚ್ಚು ಸಹಕಾರಿಯಾಗಿರುತ್ತದೆ ಅಂತ ಹೇಳಬಹುದಾಗಿದೆ. ಆದ ಕಾರಣ ಉತ್ತಮ ಆರೋಗ್ಯಕ್ಕಾಗಿ ನಮಗೆ ಎಂಟು ಗಂಟೆಗಳ ಕಾಲ ನಿದ್ರೆ ಅವಶ್ಯಕವಾಗಿರುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ನಿಂಬೆ ಹಣ್ಣಿನ ಹೋಳಿಗೆ ನಾಲ್ಕು ಲವಂಗವನ್ನು ಚುಚ್ಚಿ ನಮ್ಮ ಪಕ್ಕಾ ಇರಿಸಿಕೊಂಡು ಮಲಗುವುದರಿಂದ ಆಗುವ ಲಾಭಗಳು ಏನು ಅಂದರೆ ನಮಗೆ ಉತ್ತಮವಾದ ನಿದ್ರೆ ಬರುತ್ತದೆ ಅಷ್ಟೇ ಅಲ್ಲದೆ ಸೊಳ್ಳೆ ನೊಣ ಅಥವಾ ಯಾವುದೇ ಕ್ರಿಮಿ ಕೀಟಗಳಿಂದ ನಮ್ಮ ನಿದ್ರೆ ಹಾಳಾಗಬಹುದು ಅಂತಹ ಒಂದು ಅಡೆತಡೆಗಳನ್ನು ನಿವಾರಣೆ ಮಾಡುವಂತಹ ಶಕ್ತಿ ಈ ನಿಂಬೆ ಹಣ್ಣಿನಲ್ಲಿ ಮತ್ತು ಲಂಗದಲ್ಲಿ ಇದೆ ಈ ರೀತಿ ನಾವು ಮಲಗುವ ಮುನ್ನ ನಿಂಬೆಹಣ್ಣಿಗೆ ಲವಂಗವನ್ನು ಚುಚ್ಚಿ ಮಲಗುವುದರಿಂದ ,

ಅದರ ಒಂದು ಸುವಾಸನೆ ಅಂದರೆ ನಿಂಬೇಹಣ್ಣಿನ ರಸದಲ್ಲಿ ಲವಂಗದ ಅಂಶ ಒಂದು ಪ್ರಕ್ರಿಯೆ ಗೊಂಡು ಅದರ ಒಂದು ಸುವಾಸನೆ ಕೋಣೆ ತುಂಬಾ ಹರಡುತ್ತದೆ ಇದರಿಂದ ನಮಗೆ ನಿದ್ರೆ ಚೆನ್ನಾಗಿ ಬರುತ್ತದೆ ಅಷ್ಟೇ ಅಲ್ಲದೆ ನಿದ್ರಾಹೀನತೆ ದೂರವಾಗುತ್ತದೆ ಇನ್ನು ಸೊಳ್ಳೆಗಳು ನೊಣಗಳ ಕಾಟ ಇರುವುದಿಲ್ಲ ಇನ್ನು ಅನೇಕ ಕ್ರಿಮಿ ಕೀಟಗಳು ಕೂಡ ಈ ಒಂದು ಪ್ರಕ್ರಿಯೆಯಿಂದ ನಾಶವಾಗುತ್ತದೆ.ನೈಸರ್ಗಿಕವಾದ ರೂಮ್ ಫ್ರೆಶ್ನರ್ ಅಂತ ಹೇಳಬಹುದು ಈ ನಿಂಬೆಹಣ್ಣು ಮತ್ತು ಲವಂಗ. ಎಷ್ಟೋ ಜನರು ದುಬಾರಿ ಹಣವನ್ನು ನೀಡಿ ರೂಮ್ ಫ್ರೆಶ್ನರ್ ಗಳನ್ನು ತಂದಿರುತ್ತಾರೆ.

ಅದರ ವಾಸನೆಯನ್ನು ತೆಗೆದುಕೊಂಡರೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗಬಹುದು. ಆದ ಕಾರಣ ಈ ರೀತಿ ನೈಸರ್ಗಿಕವಾದ ರೂಂ ಫ್ರೆಶನರ್ ಅನ್ನು ಇಡಿ. ಇದು ಮಕ್ಕಳ ಆರೋಗ್ಯಕ್ಕೂ ಕೂಡ ಒಳ್ಳೆಯ ಪರಿಣಾಮ ಬೀರುತ್ತದೆ ಮತ್ತು ರೂಮ್ ಅನ್ನು ಯಾವಾಗಲೂ ಫ್ರೆಶ್ನೆಸ್ ಯಿಂದ ಇಟ್ಟಿರಲು ಸಹಕರಿಸುತ್ತದೆ. ಈ ದಿನದ ಈ ಒಂದು ಪುಟ್ಟ ಮಾಹಿತಿ ಇದಿಷ್ಟು ನಿಮಗೆ ಮಾಹಿತಿ ಇಷ್ಟವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *