Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದ್ರು ಮಲಗುವ ಮುನ್ನ ಬೆಳ್ಳುಳ್ಳಿಯನ್ನು ತಿಂದು ಮಲಗಿದರೆ ಏನಾಗುತ್ತೆ ಗೊತ್ತಾ …ಬಹಳಷ್ಟು ಜನರಿಗೆ ಇದು ಗೊತ್ತಿಲ್ಲ !!!!!

ನಮಸ್ಕಾರ ಸ್ನೇಹಿತರೆ, ಬೆಳ್ಳುಳ್ಳಿಯಿಂದ ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಗಳಿವೆ. ಈ ಬೆಳ್ಳುಳ್ಳಿಯನ್ನು ಅನಾದಿಕಾಲದಿಂದಲೂ ಉಪಯೋಗಿಸುತ್ತ ಬಂದಿದ್ದಾರೆ.

ಇದು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ನಮಗೆ ಅಡಿಗೆ ಮನೆಯಲ್ಲಿ ಕೂಡ ರುಚಿಯನ್ನು ಹೆಚ್ಚಿಸುತ್ತದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯು ನಮ್ಮ ದೇಹದಲ್ಲಿ ಹೆಚ್ಚಾಗುತ್ತದೆ.

ಅಷ್ಟೇ ಅಲ್ಲದೆ ಇದರಿಂದ ಹಲವಾರು ಪೋಷಕಾಂಶಗಳು ನಮಗೆ ದೊರೆಯುತ್ತವೆ. ಸತತವಾಗಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಮಗೆ ಯಾವುದೇ ರೋಗದ ಬರೆಯುವ ಕಾಡುವುದಿಲ್ಲ.

ಯಾವುದೇ ರೋಗವು ನಮ್ಮ ದೇಹಕ್ಕೆ ಬಂದರೂ ಕೂಡ ಅದೂ ತುಂಬಾ ದಿನ ಉಳಿಯುವುದಿಲ್ಲ. ಬೇಗನೆ ವಾಸಿಯಾಗುತ್ತದೆ ಇದಕ್ಕೆಲ್ಲಾ ಕಾರಣವೆಂದರೆ ಬೆಳ್ಳುಳ್ಳಿ.ಹೌದು ಸ್ನೇಹಿತರೆ ರಾತ್ರಿ ಮಲಗುವ ಬಂದ 10 ದಿನಗಳ ಕಾಲ ಬೆಳ್ಳುಳ್ಳಿಯನ್ನು ಸೇವಿಸಿದರೆ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂದು ಇಂದಿನ ಮಾಹಿತಿಯಲ್ಲಿ ನಾನು ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೀಗೆ ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಬೆಳ್ಳುಳ್ಳಿಯನ್ನು ಎಲ್ಲ ದೇಶಗಳಿಗೂ ಕೂಡ ಅಡುಗೆಯಲ್ಲಿ ಮತ್ತು ಇನ್ನಿತರ ಖಾದ್ಯಗಳಲ್ಲಿ ಬಳಸಲಾಗುತ್ತದೆ.

ಬೆಳ್ಳುಳ್ಳಿಯು ಊಟದಲ್ಲಿ ರುಚಿಯನ್ನು ಹೆಚ್ಚಿಸುವುದಲ್ಲದೆ ಔಷಧೀಯ ಗುಣವನ್ನು ಕೂಡ ಹೊಂದಿದೆ. ಇದರ ಸೇವನೆಯಿಂದ ದೇಹದಲ್ಲಿನ ಬಹಳಷ್ಟು ಕಾಯಿಲೆಗಳು ಮಂಗಮಾಯವಾಗುತ್ತವೆ.

ರಾತ್ರಿ ಹೊತ್ತು ಮಲಗುವ ಮುನ್ನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಲಾಭವಿದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ.

ಅಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ಬಹಳಷ್ಟು ಸತ್ವಗಳು ಕೂಡ ಅಡಗಿವೆ. ಬೆಳ್ಳುಳ್ಳಿಯನ್ನು ಸತತವಾಗಿ ನಾವು ಬಳಸಿದರೆ ಅಂದರೆ ಬೆಳ್ಳುಳ್ಳಿಯನ್ನು ಮಲಗುವಮುನ್ನ ತಿಂದು ಮಲಗಿದರೆ ನಮ್ಮ ದೇಹದಲ್ಲಿನ ಮೂರು ಕೋಶಗಳ ಆದ ವಾತ-ಪಿತ್ತ ಮತ್ತು ಕಫವನ್ನು ಸಮತೋಲನದಲ್ಲಿರಿಸುತ್ತದೆ.

ಮತ್ತು ನಮ್ಮ ದೇಹವು ರೋಗನಿರೋಧಕ ಶಕ್ತಿಯನ್ನು ಪಡೆಯುತ್ತದೆ. ಅದಲ್ಲದೆ ದೇಹದ ಇಮ್ಮುನ್ ಸಿಸ್ಟಮ್ ಕೂಡ ಹೆಚ್ಚಾಗಿರುತ್ತದೆ. ಇದರಲ್ಲಿ ಅತ್ಯದ್ಭುತವಾದ ಸತ್ವಗಳು ಇರುವುದರಿಂದ ಹೊಟ್ಟೆ ಕ್ಯಾನ್ಸರನ್ನು ತಡೆಯಬಹುದು.

ರಿಸರ್ಚ್ ನ ಪ್ರಕಾರ ಕ್ಯಾನ್ಸರ್ನ ರೋಗಕ್ಕೆ ಕಾರಣವಾದಂತಹ ರಾಡಿಕಲ್ಸ್ ಅನ್ನು ನಾಶ ಮಾಡುತ್ತದೆ ಬೆಳ್ಳುಳ್ಳಿ. ಇದರಿಂದ ಭವಿಷ್ಯದಲ್ಲಿ ಹೊಟ್ಟೆ ಕ್ಯಾನ್ಸರ್ಗೆ ಬಲಿಯಾಗುವ ಸಾಧ್ಯತೆಗಳು ಕಮ್ಮಿ ಆಗಿರುತ್ತವೆ.

ರಾತ್ರಿ ಹೊತ್ತು ತುಂಬಾ ಚಳಿಯಿಂದ ಕೂಡಿದ್ದರೆ ನೀವು ಮಲಗುವ ಮುನ್ನ ಎರಡು ಎಸಳು ಬೆಳ್ಳುಳ್ಳಿಯನ್ನು ತಿಂದರೆ ಸಾಕು ನಿಮ್ಮ ಶರೀರದ ಉಷ್ಣ ಜಾಸ್ತಿಯಾಗುತ್ತದೆ.

ಇದಕ್ಕೆ ಕಾರಣವೇನೆಂದರೆ ದೇಹದಲ್ಲಿ ಇರುವ ವಾಯುವನ್ನು ಬೆಳ್ಳುಳ್ಳಿ ಕಡಿಮೆ ಮಾಡಿ ದೇಹದಲ್ಲಿ ಉಷ್ಣತೆಯನ್ನು ಸೃಷ್ಟಿಸುತ್ತದೆ.ಬೆಳ್ಳುಳ್ಳಿಯ ರಸವನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಅಂದರೆ ರಕ್ತದಲ್ಲಿ ಸೇರುವಂತಹ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರಕ್ತ ಶುದ್ಧೀಕರಣ ಆಗುವುದಲ್ಲದೆ ಕಿವಿ ಹಾಗೂ ಕಾಲಿನಲ್ಲಿ ಫಂಗಲ್ ಇನ್ಫೆಕ್ಷನ್ ಆಗುವುದನ್ನು ತಡೆಗಟ್ಟುತ್ತದೆ. ಹಾಗಾಗಿ ಬೆಳ್ಳುಳ್ಳಿ ಬಹಳಷ್ಟು ಕಾಯಿಲೆಗಳಿಗೆ ರಾಮಬಾಣವಾಗಿದೆ.

ನೋಡಿದ್ರಲ್ಲ ಸ್ನೇಹಿತರೆ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಿ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *