Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಮಣ್ಣಿನ ಮಡಿಕೆಯಿಂದ ಹೀಗೆ ಮಾಡಿದ್ದೇ ಆದ್ರೆ ಅಷ್ಟಲಕ್ಷ್ಮಿಯರು ಒಟ್ಟಿಗೆ ಒಂದೇ ಬಾರಿ ನಿಮ್ಮ ಮನೆಗೆ ಬರುತ್ತಾರೆ!!!

ಜೀವನ ಅಂದ ಮೇಲೆ ಈ ಜೀವನದಲ್ಲಿ ಯಾರಿಗೆ ತಾನೇ ಸಮಸ್ಯೆಗಳು ತೊಂದರೆಗಳು ಇರುವುದಿಲ್ಲ ಹೇಳಿ, ಯಾರೇ ಆಗಲಿ ಒಂದಲ್ಲ ಒಂದು ಬಾರಿ ತಮ್ಮ ಜೀವನದಲ್ಲಿ ಹಣಕಾಸಿನ ತೊಂದರೆಗಳಾದಲ್ಲಿ ಅಥವಾ ಯಾವುದೇ ಬಗೆಯ ಸಮಸ್ಯೆಗಳನ್ನಾಗಿ ಎದುರಿಸಿರುತ್ತಾರೆ,

ಈ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದೆ ಒಂದು ದೊಡ್ಡ ತೊಂದರೆ ಆಗಿಬಿಟ್ಟಿರುತ್ತದೆ, ಆದ ಕಾರಣ ನಮಗೆ ಕಷ್ಟಗಳು ಬಂದಾಗ ಸಮಸ್ಯೆಗಳು ಬಂದಾಗ, ಅದಕ್ಕಾಗಿ ಪರಿಹಾರಗಳನ್ನು ಹುಡುಕುವುದನ್ನು ಬಿಟ್ಟು,

ಆ ಸಮಸ್ಯೆಗಳು ಬಂದು ಬಿಡ್ತಲ್ಲ ಇಷ್ಟೆಲ್ಲ ಕಷ್ಟಗಳು ನನ್ನ ಜೀವನದಲ್ಲಿ ಇದೆಯಲ್ಲ ಅಂತ ತಲೆಮೇಲೆ ಕೈಹೊತ್ತು ಕುಳಿತರೆ, ಆ ಸಮಸ್ಯೆ ಪರಿಹಾರವಾಗುವುದಿಲ್ಲ ಪರಿಹಾರವನ್ನು ಹುಡುಕಬೇಕು ಆ ನಂತರ ಆ ಪರಿಹಾರವನ್ನು ಮಾಡಲು ಮುಂದಾಗಬೇಕು.

ಇಂದಿನ ಮಾಹಿತಿಯಲ್ಲಿ ಜೀವನದಲ್ಲಿ ಎದುರಾಗುವಂತಹ ಆರ್ಥಿಕ ಬಿಕ್ಕಟ್ಟುಗಳಿಗೆ ಮತ್ತು ಹಣಕಾಸಿನ ತೊಂದರೆಗಳಿಗೆ, ಸಾಲಬಾಧೆ ಸಮಸ್ಯೆಗೆ ಇವೆಲ್ಲವನ್ನೂ ಪರಿಹರಿಸಿಕೊಳ್ಳುವುದಕ್ಕೆ ಸುಲಭವಾಗಿ ಮಾಡಬಹುದಾದಂತಹ ಒಂದು ಪರಿಹಾರವನ್ನು ನಿಮಗೆ ತಿಳಿಸಿಕೊಡುತ್ತೇನೆ,

ಇದನ್ನು ನೀವು ವಾರದಲ್ಲಿ ಒಂದು ದಿನ ಮಾಡಬೇಕಾಗುತ್ತದೆ, ಈ ರೀತಿ ನೀವು ಐದು ಬುಧವಾರಗಳು ಈ ಪರಿಹಾರವನ್ನು ಕೈಗೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಕ್ರಮೇಣವಾಗಿ ಸಾಲಬಾದೆ ಸಮಸ್ಯೆ ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ.

ನಮ್ಮ ಜೀವನದಲ್ಲಿ ಕಷ್ಟಗಳು ಬಂದರೆ ಅಲ್ವಾ ಹಣಕಾಸಿನ ತೊಂದರೆಗಳು ಆದರೆ ಅಲ್ವಾ ನಾವು ಸಾಲವನ್ನು ಮಾಡಲು ಮುಂದಾಗುವುದು ಆದರೆ ಈ ಸಾಲವನ್ನು ತೀರಿಸುವಾಗ ಅಥವಾ ಕೊಟ್ಟ ಹಣವನ್ನು ಕೇಳಿಕೊಂಡು ಯಾರಾದರೂ ಮನೆಯ ಬಾಗಿಲಿಗೆ ಬಂದರೆ ಅಂತಹ ಒಂದು ಗೋಲು ಆ ಸಂಕಟ ಹೇಳತೀರದು.

ಈ ಒಂದು ಪರಿಹಾರ ಇಂತಹ ಎಲ್ಲ ಸಮಸ್ಯೆಗಳಿಗೆ ನಿಮಗೆ ಪರಿಹಾರವನ್ನು ನೀಡುತ್ತದೆ, ಇದಕ್ಕಾಗಿ ನೀವು ಮಾಡಬೇಕಾಗಿರುವುದು ದೇವರ ಸಾಮಗ್ರಿಗಳನ್ನು ಮಾರುವಂತಹ ಅಂಗಡಿಗಳಲ್ಲಿ ಚಿಕ್ಕದಾದ ಮಡಿಕೆಗಳು ದೊರೆಯುತ್ತದೆ .

ಚಿಕ್ಕದು ಅಂದರೆ ಮಕ್ಕಳು ಆಟ ಆಡುವುದಕ್ಕೆ ಬಳಸುತ್ತಾರಲ್ಲ ಅಂತಹ ಗಾತ್ರದ ಮಡಿಕೆಗಳನ್ನು ಮನೆಗೆ ತಂದು ಇವತ್ತು ಪರಿಹಾರವನ್ನು ಮಾಡಬೇಕು ಈ ಮಡಿಕೆಗಳನ್ನು ಬುಧವಾರದ ಹಿಂದಿನ ದಿನ ಅಂದರೆ ಮಂಗಳವಾರದ ಸಂಜೆ ಸಮಯದಲ್ಲಿ ಮನೆಗೆ ತಂದು ಇಟ್ಟುಕೊಳ್ಳಬೇಕು.

ಬುಧವಾರ ಬೆಳಗ್ಗೆ ಸೂರ್ಯೋದಯವಾಗುವ ಸಮಯದಲ್ಲಿ ಮನೆಯಲ್ಲಿ ಪೂಜೆಯನ್ನು ಮಾಡಬೇಕು ಅನಂತರ ಈ ಪರಿಹಾರವನ್ನು ಮಾಡಬೇಕು ಈ ಪರಿಹಾರವನ್ನು ಮಾಡುವುದು ಹೇಗೆ ಅಂದರೆ ಹೆಸರು ಕಾಳುಗಳನ್ನು ತೆಗೆದುಕೊಂಡು ನೀವು ಮನೆಗೆ ತಂದ ಮಡಿಕೆಗಳಲ್ಲಿ.

ಅಂದರೆ ಎರಡು ಮಡಿಕೆಯಲ್ಲಿ ಈ ಹೆಸರು ಕಾಳುಗಳನ್ನು ತುಂಬಿಸಿ ಇಡಬೇಕು ಎಲ್ಲಿ ಅಂದರೆ ದೇವರ ಕೋಣೆಯಲ್ಲಿ ಎಲ್ಲ ದೇವರ ಕೋಣೆಯ ಬಾಗಿಲಿನ ಬಳಿ ಈ ಮಡಿಕೆಗಳನ್ನು ಏರಿಸಬೇಕು ಯಾವುದೇ ಕಾರಣಕ್ಕೂ ದೇವರ ಪೀಠದಲ್ಲಿ ಅಥವಾ ದೇವರ ಬಳಿ ಈ ಮಡಿಕೆಯನ್ನು ಇರಿಸಬೇಡಿ.

ಈ ಮಡಿಕೆಗಳಿಗೆ ಧೂಪವನ್ನು ಹಾಕುವಾಗ ಸುಗಂಧ ದ್ರವ್ಯವನ್ನು ಬೆಳಗುವಾಗ ನಿಮ್ಮ ಕಷ್ಟಗಳನ್ನೆಲ್ಲ ಲಕ್ಷ್ಮೀದೇವಿಯ ಬಳಿ ಹೇಳಿಕೊಳ್ಳಬೇಕು ಈ ರೀತಿ ನಿಮ್ಮ ಕಷ್ಟಗಳನ್ನು ಗೊಂದಲಗಳನ್ನು ಎಲ್ಲಾ ಹೇಳಿಕೊಂಡ ಮೇಲೆ ಪೂಜೆ ಮುಗಿದ ಮೇಲೆ ಈ ಮಡಿಕೆಗಳನ್ನು ನಿಮ್ಮ ಮನೆಯ ಬಳಿ ಇರುವಂತಹ ನದಿ ಅಥವಾ ನೀರು ಹರಿಯುವಂತಹ ಜಾಗಕ್ಕೆ ತೆಗೆದುಕೊಂಡು ಹೋಗಿ

ಸೂರ್ಯದೇವನನ್ನು ನೆನೆಸಿಕೊಳ್ಳುತ್ತಾ ಸೂರ್ಯ ದೇವರಿಗೆ ನಮಸ್ಕರಿಸುತ್ತಾ, ಈ ಮಡಿಕೆಯನ್ನು ಮಡಿಕೆಯೊಳಗಿರುವ ಹೆಸರು ಕಾಳುಗಳನ್ನು ನೀರಿಗೆ ಅರ್ಪಿಸಬೇಕು, ಇದರಿಂದ ನಿಮ್ಮ ಕಷ್ಟಗಳು ಕೂಡ ನಿಮ್ಮ ಜೀವನದಿಂದ ಹರಿದು ಹೋಗುತ್ತದೆ.

ಈ ರೀತಿ ನೀವು ಐದು ಬುಧವಾರ ಮಾಡಬೇಕಾಗುತ್ತದೆ ಐದು ಬುಧವಾರವು ಮಾಡುವುದಕ್ಕೆ ಸಮಯವಿಲ್ಲ ಅನ್ನುವವರು ತಿಂಗಳಿನ ಮೊದಲನೆ ಬುಧವಾರದಂದು ಈ ಪರಿಹಾರವನ್ನು ಮಾಡಬೇಕು.

ಈ ಪರಿಹಾರದ ಕೊನೆಯಲ್ಲಿ ಸೂರ್ಯದೇವನನ್ನು ನಮಸ್ಕರಿಸುವಾಗ ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಇವನ್ನೆಲ್ಲ ನಿವಾರಿಸು ತಂದೆ ಎಂದು ಸೂರ್ಯದೇವನ ಬಳಿ ಕೇಳಿಕೊಳ್ಳಬೇಕಾಗುತ್ತದೆ. ಈ ಪರಿಹಾರವೂ ನಿಮಗೆ ನಿಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಸಹಕಾರಿಯಾಗಿರುತ್ತದೆ.

Leave a Reply

Your email address will not be published. Required fields are marked *