Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಮಂಗಳವಾರದ ದಿನ ಈ ಒಂದು ವಸ್ತು ಮತ್ತು ಈ ಒಂದು ಕಾಯಿಯನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಪೂಜೆ ಮಾಡಿದ್ರೆ ಸಾಕು ನಿಮಗೆ ಗೊತ್ತಿಲ್ಲದೇ ನೀವು ಕೋಟ್ಯಧಿಪತಿಗಳಾಗುತ್ತೀರಾ …!!!

ಮಂಗಳವಾರದ ದಿನ ಈ ಒಂದು ಗಿಡದ ಬೇರು ಅಥವಾ ಕಾಯಿಯನ್ನು ತಂದು ಮನೆಯಲ್ಲಿ ಪೂಜಿಸಿದರೆ ನೀವು ಕೋಟ್ಯಾಧಿಪತಿ ಆಗಬಹುದು.ಹಾಯ್ ಸ್ನೇಹಿತರೆ ಈಗಿನ ಕಾಲದಲ್ಲಿ ಮೊಟ್ಟಮೊದಲಾಗಿ ಕಾಡುತ್ತಿರುವ ಸಮಸ್ಯೆ ಏನೆಂದರೆ ಆರೋಗ್ಯದ ಸಮಸ್ಯೆ ಮತ್ತು ಹಣಕಾಸಿನ ಸಮಸ್ಯೆ. ಆದರೆ ಆರೋಗ್ಯದ ಸಮಸ್ಯೆಗಳು ಬಂದರೆ ಮೊದಲು ಹಣಕಾಸು ಬೇಕಾಗುತ್ತದೆ ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆರೋಗ್ಯ ಇಲ್ಲದಿದ್ದರೆ ಹಣ ಬೇಕು ಹಣ ಇದ್ದರೂ ಆರೋಗ್ಯ ಬೇಕು ಆದರೆ ಮುಖ್ಯವಾದದ್ದು ಆರೋಗ್ಯ. ಯಾರು ಪ್ರತಿನಿತ್ಯ ಆರೋಗ್ಯವಾಗಿ ದುಡಿದು ಊಟ ಮಾಡಿ ನೆಮ್ಮದಿಯಿಂದ ಮಲಗುತ್ತಾರೆ ಅವರು ಅತಿಯಾದ ದೊಡ್ಡ ಶ್ರೀಮಂತರು. ಹಣಕಾಸಿನ ತೊಂದರೆಗಳು ಮನೆಯಲ್ಲಿದ್ದರೆ ಜೀವನವನ್ನು ನಡೆಸುವುದು ಕಷ್ಟವಾಗುತ್ತದೆ.

ಸಮಾಜದಲ್ಲಿ ಬದುಕುತ್ತಿರುವ ನಾವು ಬೇರೆಯವರನ್ನು ನೋಡಿ ಕುಗ್ಗುತ್ತೆವೆ. ಬೇರೆಯವರು ಏನಾದರೂ ತೆಗೆದುಕೊಂಡರೆ ನಮಗೂ ತೆಗೆದುಕೊಳ್ಳುವ ಹಾಗೆ ಆಗುತ್ತದೆ. ಹಾಗಂತ ಎಲ್ಲವನ್ನು ಬೇರೆಯವರನ್ನು ನೋಡಿ ತೆಗೆದುಕೊಳ್ಳಬೇಕು ಅವರಂತೆ ನಾವು ಇರಬೇಕು ಎಂದುಕೊಳ್ಳಬಾರದು. ನಮ್ಮ ಹಾಸಿಗೆ ಎಷ್ಟು ಇರುತ್ತದೆಯೋ ಅಷ್ಟು ನಾವು ಕಾಲುಚಾಚಿ ಕೊಳ್ಳಬೇಕು. ಪಡೆದುಕೊಳ್ಳುವ ಹಠ ಹಾಗೂ ಛಲ ಇರಬೇಕು ಆದರೆ ಮೋಸ ಮಾಡಿ ದುಡಿಯದೇ ಎಲ್ಲವೂ ಸಿಗಬೇಕು ಎಂದುಕೊಳ್ಳುವುದು ತಪ್ಪು. ಆದರೆ ಇನ್ನು ಕೆಲವೊಬ್ಬರಿಗೆ ಎಷ್ಟೇ ದುಡಿದರೂ ಮನೆಯಲ್ಲಿ ಹಣ ಉಳಿಯುವುದಿಲ್ಲ ದುಡಿಯುವುದಕ್ಕಿಂತ ಖರ್ಚಾಗುವುದು ಹೆಚ್ಚಾಗುತ್ತದೆ. ಆದರೆ ಕೆಲವೊಬ್ಬರಿಗೆ ಬೇಡಬೇಡವೆಂದರೂ ಮಹಾಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ.

ಸ್ನೇಹಿತರೆ ನನ್ನ ಪ್ರಕಾರ ಎಲ್ಲರ ಬಳಿ ಎಲ್ಲವೂ ಇರುವುದಿಲ್ಲ ಒಬ್ಬರಿಗೆ ಬೇಕಾದದ್ದು ಇನ್ನೊಬ್ಬರ ಬಳಿ ಇರುತ್ತದೆ ಇನ್ನೊಬ್ಬರಿಗೆ ಬೇಕಾಗಿರುವುದು ಮತ್ತೊಬ್ಬರ ಬಳಿ ಇರುತ್ತದೆ. ಮನುಷ್ಯನಿಗೆ ಎಷ್ಟೆಲ್ಲಾ ಇದ್ದರೂ ಇನ್ನೂ ಬೇಕೆನ್ನುವ ಆಸೆ ಮಾತ್ರ ತಪ್ಪುವುದಿಲ್ಲ. ಹಾಗಾದರೆ ಸ್ನೇಹಿತರೆ ಈಗ ನಾನು ಹೇಳುವ ಈ ಒಂದು ಪರಿಹಾರವನ್ನು ನೀವು ಮನೆಯಲ್ಲಿ ಮಾಡಿ ನೋಡಿ. ಇದಕ್ಕೆ ಹಣದ ಅವಶ್ಯಕತೆ ಇಲ್ಲ. ಪ್ರಕೃತಿ ನಮಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಅದರಲ್ಲೂ ಗಿಡಮರಗಳು ತುಂಬಾ ಸಹಕಾರಿಯಾಗಿವೆ. ಮಂಗಳವಾರದ ದಿನ ಉಮ್ಮತ್ತಿ ಕಾಯಿ ಅಥವಾ ಉಮ್ಮತ್ತಿ ಗಿಡದ ಬೇರು ಸಿಕ್ಕರೆ ಮನೆಗೆ ತೆಗೆದುಕೊಂಡು ಬರಬೇಕು. ಇದನ್ನು ದೇವರಕೋಣೆಯಲ್ಲಿ ಹಳದಿ ಬಟ್ಟೆಯ ಮೇಲೆ ಇಟ್ಟು ಪೂಜಿಸಬೇಕು.

ಈ ಒಂದು ಗಿಡದ ಬೇರು ಹಾಗೂ ಕಾಯಿ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದಿವೆ. ಇವು ಸಾಕಷ್ಟು ಲಾಭವನ್ನು ನಿಮಗೆ ತಂದುಕೊಡುತ್ತವೆ. ಈ ಒಂದು ಗಿಡದ ಬೇರು ಅಥವಾ ಕಾಯಿಯನ್ನು ಪ್ರತಿನಿತ್ಯ ಪೂಜಿಸಿ ನೀವು ಹಣ ಇಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಇದನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಕೂಡ ಇಟ್ಟುಕೊಳ್ಳಬಹುದು. ಇದನ್ನು ಪ್ರತಿನಿತ್ಯ ಪೂಜಿಸುತ್ತಾ ಬಂದರೆ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಪಡೆಯುತ್ತೀರಿ. ಹಣದ ಹರಿವು ಅಂದರೆ ಒಳಹರಿವು ಹೆಚ್ಚಾಗುತ್ತದೆ. ಮನೆಯಲ್ಲಿ ಕಾರಣವಾಗಿ ಖರ್ಚು ಕಡಿಮೆಯಾಗುತ್ತದೆ. ಸ್ನೇಹಿತರೆ ಉಳಿತಾಯ ಎಂದರೆ ಕೇವಲ ಹಣವನ್ನು ತೆಗೆದಿಡುವುದು ಎಂದಲ್ಲ. ಹಣವನ್ನು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಉಪಯೋಗಿಸಿ ಉಳಿದದ್ದನ್ನು ಕೂಡಿಡಬೇಕು.

ಈಗಿನ ಕಾಲದಲ್ಲಿ ಯಾವ ಸಮಯದಲ್ಲಿ ಹಣ ಬೇಕಾಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ ಕಷ್ಟಕಾಲದಲ್ಲಿ ಹಣ ಬೇಕೆಂದರೆ ನಾವು ಹಣವನ್ನು ಕೂಡಿ ಇಟ್ಟುಕೊಂಡಿರಬೇಕು. ನೀವು ಉಳಿತಾಯ ಮಾಡಿದ ಹಣ ನಿಮಗೆ ಒಂದಲ್ಲ ಒಂದು ಬಾರಿ ಉಪಯೋಗ ಆಗೆ ಆಗುತ್ತದೆ. ಈ ಒಂದು ಪರಿಹಾರವನ್ನು ಮಾಡಿದ ಮೇಲೆ ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಬದಲಾಗುತ್ತದೆ ಅಂದರೆ ಒಳಹರಿವು ಹೆಚ್ಚಾಗಿ ದುಡ್ಡಿನ ಹೊರಹರಿವು ಕಡಿಮೆ ಆಗುತ್ತದೆ. ಇತರೆ ಇಂತಹ ಉಪಾಯಗಳನ್ನು ನೀವು ನಿಮ್ಮ ಮನೆಯಲ್ಲಿ ಮಾಡಿನೋಡಿ ಹಾಗೂ ಇತರರಿಗೂ ತಿಳಿಸಿ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ